ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?

ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?

ಬರಹ

ಇದೇನಿದು ಹೊಸದೇನೋ ಬಂತಲ್ಲ ವಿಷಯ ಅಂತ ಅಂದ್ರಾ? ಇದು ಹೊಸದೇನಲ್ಲ. ವೈಜ್ಞಾನಿಕ ಕ್ಷೇತ್ರದಲ್ಲಿ ಲಿನಕ್ಸ್ ಅನ್ನ ಉಪಯೋಗಿಸೋದು ಪ್ರಪಂಚದಾದ್ಯಂತ ಬಹು ವರ್ಷಗಳಿಂದ ನೆಡೆಯುತ್ತಲೇ ಬಂದಿದೆ.ಈಗಿನ ಸರದಿ ವಿಶ್ವದ ಮಹಾ ಭೌತಶಾಸ್ತ್ರ ಪ್ರಯೋಗ ನೆಡೆಸುತ್ತಿರುವ CERN (ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್) ನದು. ಈ ಸಂಸ್ಥೆ ತನ್ನ  LHC ಕ್ರಿಯಾವರ್ಧಕದ ಅಂಕಿಅಂಶಗಳ ಲೆಕ್ಕಾಚಾರಕ್ಕೆ ಬಳಸುತ್ತಿರುವ ಕಂಪ್ಯೂಟರಿನಲ್ಲಿನ  ಆಪರೇಟಿಂಗ್ ಸಿಸ್ಟಂ ಯಾವುದು ಗೊತ್ತಾ?

ಕಂಪ್ಯೂಟರ್ ಸೆಂಟರಿನ ಸರ್ವರ್ ಗಳು. (Maximilien Brice; Claudia Marcelloni, © CERN)

ಹೌದು ಸಾರ್! ಲಿನಕ್ಸ್. ಸೈನ್ಟಿಫಿಕ್ ಲಿನಕ್ಸ್(SL) ನ ಬೆನ್ನೆಲು ಭಾಗಿರುವ CERN, ಅದನ್ನ LHC ಪ್ರಯೋಗಕ್ಕೆಂದೇ ಪರಿವರ್ತಿಸಿ ಸೆರ್ನ್ ವಿ.ಎಮ್ (CernVM) ಅನ್ನೋ ಲಿನಕ್ಸ್ ಅನ್ನ ತಯಾರಿಸಿ ಕೊಂಡಿದೆ. ಇದು LCG ಅಂದರೆ LHC ಗ್ರಿಡ್ ಕಂಪ್ಯೂಟರ್ (೪೦೦೦೦ ಸಿ.ಪಿಯು ಗಳನ್ನ ಕ್ರೂಡೀಕರಿಸಿ ಮಾಡಿರುವ ಬೃಹತ್ ಸೂಪರ್ ಕಂಪ್ಯೂಟರ್)ನ ಆಪರೇಟಿಂಗ್ ಸಿಸ್ಟಂ ಆಗಿ ಇಂದು ಬಳಕೆಯಾಗುತ್ತಿದೆ. 

ಕಂಪ್ಯೂಟರ್ ವರ್ಚುಯಲೈಸೇಷನ್ ತಂತ್ರಜ್ಞಾನವನ್ನ ನೀಡುವ ವಿಎಮ್ವೇರ್ (VMWare) ಕಂಪೆನಿ, CERN ಭೌತಶಾಸ್ತ್ರಜ್ಞರಿಗೆ ಈ ಬೃಹತ್ ಪಯೋಗದ ಅಂಕಿಅಂಶಗಳ ಲೆಕ್ಕಾಚಾರಕ್ಕೆ ತನ್ನ VMWare Fusion ತಂತ್ರಾಂಶವನ್ನ ನೀಡಿದೆ. ಇದು ಲಿನಕ್ಸ್ ತಂತ್ರಾಂಶದ ಕೋಡನ್ನು ತನ್ನ VMWare Fusion ನಿಂದ ನೆಡೆಯುವ ಕಂಪ್ಯೂಟರುಗಳ ಮೇಲೆ ನೆಡೆಸಲು ಅನುವು ಮಾಡಿಕೊಡ್ತಿದೆ. ಕಂಪ್ಯೂಟರಿನ ಶಕ್ತಿಯನ್ನ ಸಂಪೂರ್ಣವಾಗಿ ಉಪಯೋಗಿಸುವ ದಿಸೆಯಲ್ಲಿ ವರ್ಚುಯಲೈಸೇಷನ್ ಟೆಕ್ನಾಲಜಿ ತುಂಬಾ ಸಹಕಾರಿ. VMWare ನ ಪ್ರೆಸ್ ರಿಲೀಸ್ ಇಲ್ಲಿದೆ ನೋಡಿ.

ಯಾಕೆ ಲಿನಕ್ಸ್?

ತುಂಬಾ ಮುಖ್ಯವಾದ ಕಾರಣ, ವಿಂಡೋಸ್ ನ Blue Screen of Death ಅನ್ನೋ ಹೆದರಿಕೆ ಲಿನಕ್ಸ್ ಗೆ ಇಲ್ಲ. ಸೆಕ್ಯೂರಿಟಿ ಮತ್ತು ಪರ್ಫಾರ್ಮೆನ್ಸ್ ಮಟ್ಟಿಗಂತೂ ಲಿನಕ್ಸ್ ಗಟ್ಟಿಮುಟ್ಟು. 

ಲಿನಕ್ಸ್ ಹಬ್ಬಕ್ಕೆ ಬಂದು ಲಿನಕ್ಸ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಪಡೆಯೋದನ್ನ ಮರೀಬೇಡಿ.

ಈ ಲೇಖನದ ಇಂಗ್ಲೀಷ್ ಆವೃತ್ತಿ ಇಲ್ಲಿದೆ.