ವೈರುಧ್ಯ
ಕವನ
ಒಳಗಿಳಿದು ಹುಡುಕುತಿರುವೆ
ಯಾರು ನಾನು ಎಂದು
ಹೊರಗೆ ನಿಂತು ಹೇಳುತಿರುವೆ
ಅವರ ಮಗ ಈ ಊರು ಆ ಕೆಲಸ ನಂದು
ನೀಲಾಗಸದ ವಿಸ್ತಾರದಲಿ ಬಿಂದುವಿನ ಬಿಂದು
ಅಸ್ತಿತ್ವಕ್ಕೂ ಕನಿಷ್ಠ ನನ್ನ ರೂಪ
ಅಹಂಕಾರದ ಮದಗಜವೇರಿ ಬಯಸಿಹೆ
ಆಳು ಕಾಳು ಮಂದಿ ಮಾಗಧರ ಜೈ ಘೋಷ
ಬಯಸಿದವರ ಬಳಸಿ ಬೇಡದವರ ತುಳಿದು
ಸಾಮ್ರಾಜ್ಯ ಕಟ್ಟಿ ನನ್ನ ಹಿಡಿತದಲ್ಲಿಡ ಬಯಸಿದೆ
ರಕ್ತ ಮಾಂಸ ತುಂಬಿರುವ ದೇಹದಲ್ಲಿಯ
ನನ್ನ ಮನಸನ್ನೇ ಕಟ್ಟಿಹಾಕದಾದೆ
ಏನಿದು ವೈರುಧ್ಯ? ಏನಿದು ನಿಘೂಡ ?
ಯಾಕೆ ಮನಸ್ಸಿಗಿಂಥ ವೈಧವ್ಯ ?
ಗಾಳಿ ಕಂಡವರಿಲ್ಲ ಆದರೂ ಪ್ರಮಾಣಿಕರಿಸಿದೆ ವಿಜ್ಞಾನ
ನಿರಾಕರಿಸಬಹುದೇ ವಿಜ್ಞಾನಕೆಟುಕದ ಅತೀ ಜ್ಞಾನ ?
ತಲೆಯಲಿ ಕಡಿವಾಣವಿಲ್ಲದ ಯೋಚನೆಗಳ ಆಕ್ರಮಣ
ತಲೆ ಹುಡುಕಲು ಹುಡುಕಾಡುತ್ತಿರುವೆ ಶಿರಸ್ತ್ರಾಣ ?
ತಂಗಾಳಿಯಲಿ ಬಿರುಗಾಳಿ ಭಯವು
ಬಿರುಗಾಳಿಯಲಿ ಶಾಂತಿಯ ಹುಡುಕಾಟವು !
ಗುರುಶಿಷ್ಯ ( ರಾಘವೇಂದ್ರ ರಾಮಚಂದ್ರ ಗುಡಿ )
Comments
ಉ: ವೈರುಧ್ಯ
In reply to ಉ: ವೈರುಧ್ಯ by partha1059
ಉ: ವೈರುಧ್ಯ
In reply to ಉ: ವೈರುಧ್ಯ by partha1059
ಉ: ವೈರುಧ್ಯ
In reply to ಉ: ವೈರುಧ್ಯ by partha1059
ಉ: ವೈರುಧ್ಯ
ಉ: ವೈರುಧ್ಯ
In reply to ಉ: ವೈರುಧ್ಯ by sathishnasa
ಉ: ವೈರುಧ್ಯ