ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ: ಅದೊಂದು ಪರಿಹಾರವೇ ?

ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ: ಅದೊಂದು ಪರಿಹಾರವೇ ?

ಪ್ರಸ್ತುತ ದಿನಗಳಲ್ಲಿ, ಹದಿಹರೆಯದವರಲ್ಲಿ ಕಂಡು ಬರುವ ಸಾಮಾಜಿಕ ಜಾಲತಾಣಗಳ ವ್ಯಸನವು ಒಂದು ಜ್ವಲಂತ ಸಮಸ್ಯೆಯಾಗಿ ಮೂಡಿ ಬಂದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸಾಮಾಜಿಕ ಜಾಲತಾಣವನ್ನು ನಿರ್ಬಂಧಿಸುವುದು ಅಥವಾ ನಿಷೇಧಿಸುವುದು ಅಂದರೆ ಹುಲಿಗೆ ಹೆದರಿ ಹೊಳೆಗೆ ಹಾರಿದಂತೆ ಆಗುತ್ತದೆ!

ಸಾಮಾಜಿಕ ಮಾಧ್ಯಮ ಬಳಕೆಗೆ ಕನಿಷ್ಠ ವಯಸ್ಸಿನ ಕಾನೂನನ್ನು ಜಾರಿಗೊಳಿಸುವುದಾಗಿ ಆಸ್ಟ್ರೇಲಿಯಾ ಸರ್ಕಾರ ಪ್ರಕಟಿಸಿತು; ಆದರೆ, ಈ ಕಾನೂನು ಸಂಪೂರ್ಣವಾಗಿ ವಿಫಲಗೊಳ್ಳಲಿದೆ. ಹದಿಹರೆಯದವರಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ದುಶ್ಪ್ರಭಾವದ ಕುರಿತು ಕಳವಳವನ್ನು ಉಲ್ಲೇಖಿಸುತ್ತ, ಕ್ಯಾಂಬೆರ್ರಾ ಪ್ರಸ್ತಾವಿತ ನಿಷೇಧಕ್ಕಾಗಿ 14-16 ವರ್ಷಗಳ ವ್ಯಾಪ್ತಿಯನ್ನು ಪರಿಗಣಿಸುತ್ತಿದೆ. ಆದರೆ ಇಂತಹ ನಿಷೇಧಗಳು ವಿಫಲಗೊಳ್ಳುವುದು ಖಚಿತ!

ಹಾಗೆಯೇ, ಇಂತಹ ನೀತಿಗಳು ನಿರ್ಬಂಧಿತ ಚಟುವಟಿಕೆಗಳನ್ನು ಕಣ್ಮರೆಯಲ್ಲಿ ಮಾಡಲು ಪ್ರೇರಣೆ ನೀಡುತ್ತದೆ; ಬಹುಶಃ, ಅದು ಹೆಚ್ಚು ಹಾನಿಕಾರಕ ಪರಿಣಾಮಗಳನ್ನು ಬೀರಬಹುದು. ವಾಸ್ತವವಾಗಿ, ಆಸ್ಟ್ರೇಲಿಯಾದ ಇಂಟರ್ನೆಟ್ ನಿಯಂತ್ರಕ, eSafety Commissioner, 'ನಿರ್ಬಂಧ-ಆಧಾರಿತ ವಿಧಾನಗಳು' ಯುವಸಮೂಹವನ್ನು 'ಅನಿಯಂತ್ರಿತ ಕೆಲಸಗಳಿಗೆ' ತಳ್ಳಬಹುದು ಎಂದು ಎಚ್ಚರಿಸಿದ್ದಾರೆ.

ಒಂದು ನಾಣ್ಯದ ಎರಡು ಮುಖಗಳು : ಯುವಜನರಲ್ಲಿ ಕಂಡುಬರುವ ಅತಿಯಾದ ಸಾಮಾಜಿಕ ಮಾಧ್ಯಮಗಳ ಬಳಕೆಯು ಈಗ ಪ್ರಪಂಚದಾದ್ಯಂತದ ಕಾಳಜಿಯಾಗಿದೆ. ಜೂನ್‌ ತಿಂಗಳಿನಲ್ಲಿ, ಅಮೆರಿಕಾದ ಶಸ್ತ್ರಚಿಕಿತ್ಸಕ ಜನರಲ್ ಅವರು, ಹದಿಹರೆಯದವರ ಮಾನಸಿಕ ಆರೋಗ್ಯವನ್ನು ಸಾಮಾಜಿಕ ಜಾಲತಾಣ ಹಾನಿಗೊಳಿಸುತ್ತಿದೆ ಎಂದು ಒತ್ತಿ ಹೇಳುತ್ತಾ, ಅಂತಹ ಸಾಮಾಜಿಕ ವೇದಿಕೆಗಳ ಮೇಲೆ ಎಚ್ಚರಿಕೆಯ ಲೇಬಲ್‌ ಅನ್ನು ಪ್ರಕಟಿಸಬೇಕು ಎಂದು ಹೇಳಿದರು.

ಸ್ಮಾರ್ಟ್‌ಫೋನ್‌ ಗಳು ಸರ್ವವ್ಯಾಪಿಯಾದಾಗಿನಿಂದ ಅನೇಕ ದೇಶಗಳಲ್ಲಿ ವಿಶೇಷವಾಗಿ ಹದಿಹರೆಯದವರಲ್ಲಿ ಆತಂಕ ಮತ್ತು ಖಿನ್ನತೆ ಹೆಚ್ಚಿದೆ ಎಂಬುದು ಸತ್ಯವಾದರೂ, ಈ ಜ್ವಲಂತ ಸಮಸ್ಯೆಯನ್ನು ಪರಿಹರಿಸಲು ನಡೆದಿರುವ ಸಂಶೋಧನೆಗಳು ದುರಾದೃಷ್ಠವಾತ್ ಖಚಿತವಾದ ಪರಿಹಾರಗಳನ್ನು ಇನ್ನೂವರೆಗೆ ನೀಡುವಲ್ಲಿ ವಿಫಲಗೊಂಡಿವೆ. ಸಾಮಾಜಿಕ ಜಾಲತಾಣಗಳಿಂದ ಹದಿಹರೆಯದವರು ಬಹಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ; ಹಾಗಾಗಿ, ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನಿರ್ದಿಷ್ಟ ವಿಷಯಗಳಿಗೆ ಬಿಗಿಯಾದ ನಿಯಮಾವಳಿಗಳನ್ನು ಹಾಕಲು ಇದು ಹೆಚ್ಚು ಸಮಂಜಸವಾಗಿದೆ.

ವೇದಿಕೆಗಳ ಮೇಲೆ ವಿಧಿಸಿದ ಲಗಾಮುಗಳು : ಈಗಾಗಲೇ European Union, ತನ್ನ ಡಿಜಿಟಲ್ ಸೇವೆಗಳ ಕಾಯಿದೆಯ ಮೂಲಕ, ಇದೇ ದಿಕ್ಕಿನಲ್ಲಿ ತನ್ನ ಪ್ರಯತ್ನಗಳನ್ನು ಮುಂದುವರಿಯುತ್ತಿದೆ. ಮಕ್ಕಳನ್ನು ಸೆಳೆಯಲು ಅಲ್ಗಾರಿದಮಿಕ್ ಶಿಫಾರಸುಗಳ ಬಳಕೆಯು ಒಂದು ತಲೆ ನೋವಾಗಿ ಕಾಡುತ್ತಿದೆ. ಈ ವರ್ಷದ ಆರಂಭದಲ್ಲಿ, ನ್ಯೂಯಾರ್ಕ್ ದೇಶವು "ಸೇಫ್ ಫಾರ್ ಕಿಡ್ಸ್ ಆಕ್ಟ್" ಅನ್ನು ಅಂಗೀಕರಿಸಿತು; ಇದು ಸಾಮಾಜಿಕ ಮಾಧ್ಯಮ ಕಂಪನಿಗಳು ಅಪ್ರಾಪ್ತ ವಯಸ್ಕರನ್ನು ಅಂತಹ ವ್ಯಸನಕಾರಿ ಅಲ್ಗಾರಿದಮಿಕ್ ವಿಷಯಕ್ಕೆ ಒಡ್ಡಿಕೊಳ್ಳುವುದನ್ನು ನಿರ್ಬಂಧಿಸಿತು. ಆನ್‌ಲೈನ್ ದುಷ್ಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿಯುತ ವಿಷಯದ ಕುರಿತು, ಅಮೆರಿಕಾದ ಸೆನೆಟ್ ಮಕ್ಕಳ ಆನ್‌ಲೈನ್ ಸುರಕ್ಷತಾ ಕಾಯಿದೆಯನ್ನು ಅಂಗೀಕರಿಸಿದೆ.

ನಿಯಮಗಳ ಹೊರತಾಗಿಯೂ, ಸಾಮಾಜಿಕ ಮಾಧ್ಯಮ ಸಾಕ್ಷರತೆಯನ್ನು ಯುವಜನರು  ಹೇಗೆ ಉತ್ತೇಜಿಸುತ್ತಾರೆ?, ಅವರು ನಿರ್ಬಂಧಿಸುವ ನಿಯಮಗಳು, ಮತ್ತು ಹದಿಹರೆಯದವರಿಗೆ ಅವರು ಹೊಂದಿಸುವ ಉದಾಹರಣೆಗಳ ಕುರಿತು ಪೋಷಕರ ಮತ್ತು ಶಿಕ್ಷಕ ವೃಂದದವರ ಮೇಲೆ ಜವಾಬ್ದಾರಿಯೂ ಇದೆ. ಕೇವಲ ತಲೆಬುಡವಿಲ್ಲದ ನಿಷೇಧಗಳು ಪ್ರತಿಬಾರಿ ಸಾಮಾಜಿಕ ಸಮಸ್ಯೆಗಳಿಗೆ ಕೆಟ್ಟ ಪ್ರತಿಕ್ರಿಯೆಯಾಗಿದೆ!

- ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ