ಸಿದ್ಧಾರ್ಥ - ಬುದ್ಧ

ಸಿದ್ಧಾರ್ಥ - ಬುದ್ಧ

ಕವನ

ಸಿದ್ಧಾರ್ಥ - ಬುದ್ಧ


ಅರಮನೆಯ ಸುಖೋಪಭೋಗ
ಇರಲು ಬುದ್ಧನಾದೆ
ವಿಶ್ವಪ್ರೇಮ ಶಾಂತಿಧಾಮ
ಹಿಂಸೆ ತೊರೆಯಿರೆಂದೆ

ರಾಜನಾಗಿ ಶಾಸನದಲಿ
ತರಲು ಶಕ್ಯವಿತ್ತು
ಆದರೇಕೊ ಮನಸು ಮಾತ್ರ
ಕಾವಿಯಲ್ಲಿ ಇತ್ತು
ಬುದ್ಧ ನಿನ್ನ ಸಾಧನೆಗಳ
ನಾ ವರ್ಣಿಸಲಾರೆ
ಅತಿ ಪವಿತ್ರವೆನಿಸುವಂತ
ನಿನ್ನ ಪ್ರೇಮಧಾರೆ

ನೀನು ಬಯಸಿದಂತ ಪ್ರೇಮ
ಇಂದು ಧರೆಯೊ
ಳಿಲ್ಲ
ಎಲ್ಲಾ ಕೃತಕ ಎಲ್ಲಾ ಕ್ಷಣಿಕ
ಸತ್ಯವೆಂಬುದಿಲ್ಲ
ದೀರ್ಘಕಾಲ ತಪವಗೈದು
ಜಗಕೆ ನುಡಿದೆ ನೀನು
 ಫಲವು ದೊರೆಯದೆಂದ ಮೇಲೆ
ನುಡಿದ ಮರ್ಮವೇನು ?

ಅಪ್ರಬುದ್ಧರೆಲ್ಲೆಡೆಯೊಳು 
ಭೌದ್ಧರೆಂಬರಿಲ್ಲ
ಬುದ್ಧ ನಿನ್ನ ದೇವರೆಂದು
ಪೂಜೆ ಗೈವರಲ್ಲ
ಮತ್ತೆ ಜಗದಿ ಜನಿಸಲೊಮ್ಮೆ
ಬುದ್ಧನಾಗಬೇಡ
ಪ್ರಬುದ್ಧ ರಾಜ ರಾಜನಾಗಿ
ದಂಡ ಹಿಡಿದು ನೋಡ


                                                                                                                              


                                                                                    -  ಸದಾನಂದ

Comments