ಸೇತುವೆ.

ಸೇತುವೆ.

ಕವನ

 ಎರಡು ಹಗಲು

ಗಳ ನಡುವೆ

ಇರುಳಿನದೊಂದು ಸೇತುವೆ

ಎರಡು ಇರುಳು

ಗಳ ನಡುವೆ

ಹಗಲಿನದೊಂದು ಸೇತುವೆ;

ಹಗಲ ಸೇತುವೆಯಲಿ ದುಡಿದು

ದಣಿದು

ನಡೆದು

ಸೇರುವೆವು ಇರುಳ ದಡಕೆ

ವಿಶ್ರಮಿಸಿ ಅಲ್ಲಿ ಮತ್ತೆ ನಡೆವೆವು

ಹಗಲ ಸೇತುವೆ ಕಡೆಗೆ

ಎರಡು ಸೇತುವೆಗಳ ನಡುವೆ

ಸಾಗುತಿಹುದೆಮ್ಮ ಬದುಕಿನ 

ನಾವೆ

ತೇಲಲಿ

ಮುಳುಗಲಿ

ಹೊಣೆ

ನಾವೇ!

--------------ಕು.ಸ.ಮಧುಸೂದನ್.

 

Comments