ಸ್ಟೇಟಸ್ ಕತೆಗಳು (ಭಾಗ ೧೧೪೭)- ಅವರಾಗಬೇಕು
ಅಪ್ಪ ಹೇಳಿದ್ರು ಇನ್ನೊಬ್ಬರ ಜಾಗದಲ್ಲಿ ನಿಂತು ಯೋಚಿಸು ಆಗ ಮಾತ್ರ ನಿನಗೆ ನಿಜವಾದ ಸ್ಥಿತಿ ಅರ್ಥವಾಗುತ್ತೆ.
ಇಲ್ಲಪ್ಪ ಹಾಗೇನಿಲ್ಲ ನಾವು ನಮ್ಮ ನೆಲೆಯಲ್ಲಿ ಯೋಚಿಸಿದ್ರು ಪರಿಹಾರ ಸಿಗುತ್ತೆ. ನಾವು ಅವರಾಗಬೇಕೆಂದೇನಿಲ್ಲ..
ಹೀಗೆ ವಾದ ಮುಂದುವರೆದಿತ್ತು.
ಒಂದಿನ ಮನೆಯಲ್ಲಿ ಕಳೆ ಕತ್ತರಿಸುವುದಿತ್ತು, ಕೆಲಸದವರು ಸಿಗದೆ ನಾನೇ ಮಾಡಬೇಕಾಗಿ ಬಂತು. ಇಡೀ ದಿನದ ದುಡಿಮೆ ಸುಸ್ತು, ದೇಹ ದಂಡನೆ ಆವಾಗ ಅರ್ಥವಾಯಿತು ದುಡಿಮೆಯ ಕಷ್ಟವೇನು ಅಂತ. ನಾವು ಇನ್ನೊಬ್ಬರಿಗೆ ಉಪದೇಶ ಮಾಡೋ ಮೊದಲು ನಾವಲ್ಲಿ ನಿಂತು ಯೋಚಿಸಲೇಬೇಕು. ಅರ್ಥವಾಯಿತು ನನಗೆ… ಈಗ ಇನ್ನೊಬ್ಬರಿಗೆ ಉಪದೇಶ ಮಾಡೋ ಯೋಚಿಸುತ್ತೇನೆ ನಾನು ಅವನಾಗುತ್ತೇನೆ ಮತ್ತೆ ಮಾತನಾಡುತ್ತೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ