ಸ್ಟೇಟಸ್ ಕತೆಗಳು (ಭಾಗ ೨೦೬) - ವಂಶಪಾರಂಪರ್ಯ

ಸ್ಟೇಟಸ್ ಕತೆಗಳು (ಭಾಗ ೨೦೬) - ವಂಶಪಾರಂಪರ್ಯ

ಅವರೆಲ್ಲಾ ಆಗಾಗ ಜೊತೆ ಸೇರುತ್ತಾರೆ. ಈ ಆಗಾಗ ಇದೆಯಲ್ಲ ಇದು ಭಾನುವಾರದ ಸಂಜೆ ನಾಲ್ಕರಿಂದ ಆರರ ಸಮಯ. ಯಾಕೆಂದರೆ ಆ ದಿನ ಮಧ್ಯಾಹ್ನದ ನಂತರ ಅವರ ಸ್ವಂತ ಉದ್ಯೋಗಗಳಿಗೆ ರಜೆಯಾದ್ದರಿಂದ. ಎಲ್ಲರೂ ಸಮಕಾಲೀನರೇ, ಜೊತೆಗೆ ಶಾಲೆಗೆ ಹೋದವರು. ಒಂದೆರಡು ವರ್ಷಗಳ ಹೆಚ್ಚು ಕಡಿಮೆ ಬಿಟ್ಟರೆ ಬೇರೆ ಏನು ವ್ಯತ್ಯಾಸ ಇಲ್ಲ. ತಲೆಗೆ ಹತ್ತುವಷ್ಟು ಓದಿ ಅಪ್ಪನ ಕೆಲಸ ಮುಂದುವರೆಸಿದವರು. ಒಬ್ಬನದು ತರಕಾರಿ ಅಂಗಡಿ, ಇನ್ನೊಬ್ಬನದು ದಿನಸಿ, ಇನ್ನೊಬ್ಬನದು ಬೇಕರಿ, ಬಟ್ಟೆಯಂಗಡಿ, ಇಸ್ತ್ರಿ, ಕಬ್ಬಿಣ, ಮರ, ಟೈಲರ್ ಹೀಗೆ ಸಾಗುತ್ತದೆ. ಅವರವರ ಅಪ್ಪನಿಗೆ ಬಂದದ್ದು ಇವರಿಗೆ ಬಳಿಗೆ ಬಂದು ನಿಂತಿದೆ. ಹೀಗೆ ಆಗುವವರೆಗೆ ನಡೆಸಿ ಈಗ ಯೋಚಿಸುತ್ತಿದ್ದಾರೆ ಮುಂದೇನು ಅಂತ ? ನಿಂತು ದುಡಿಯೋಕೆ ದೇಹ ಒಪ್ಪುತ್ತಾ ಇಲ್ಲ. ಮಗನಿಗೆ ಮುಂದುವರಿಸಲು ಮರ್ಯಾದೆ? ಹೊರಗಡೆ  ನಾಲ್ಕು ಕಾಸಿಗೆ ದುಡಿಯುತ್ತಾನೆ. ಇಲ್ಲಿ ಸಾವಿರ ಸಿಕ್ಕರೂ ಅದು ಪ್ರತಿಷ್ಠೆಗೆ ಕುಂದು. ಅದನ್ನೇ ದಿನವೂ ಸಿಕ್ಕಾಗ ಇಲ್ಲಿ ಮಾತನಾಡುತ್ತಾರೆ." ನಮ್ಮ ಉದ್ಯಮವನ್ನು ಯಾರು ಮುಂದುವರೆಸುತ್ತಾರೆ. ಕೆಲಸ ಹೀಗೆ ನಿಂತುಬಿಟ್ಟರೆ, ಇದೇ ಕೆಲಸನ ಬೇರೆ ಊರಿನ ಇನ್ಯಾರು ಮುಂದುವರಿಸುತ್ತಾರೆ. ನಮ್ಮ ಮಕ್ಕಳು ಬೇರೆ ಊರಿನ ಬೀದಿಯಲ್ಲಿ ನಿಲ್ಲುವಂತೆ ಆಗುತ್ತದೆ. ಇದನ್ನ ಶಾಲೆಯಲ್ಲಿ ಹೇಳಿಕೊಡೋಕೆ ಆಗಲ್ವಾ?." 

ಸೂರ್ಯ ಇವರ ಖಾರ ಮಾತಿಗೆ ನೀರು ಕುಡಿಯೋಕೆ ಸಮುದ್ರಕ್ಕೆ ಇಳಿದ. ಉಪ್ಪಾಗಿದ್ರೂ ಪರವಾಗಿಲ್ಲ ಅಂತ. ಇದು ಇನ್ಯಾರಿಗೂ ನಾಟಬೇಕೋ ಗೊತ್ತಾಗುತ್ತಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ