ಸ್ಟೇಟಸ್ ಕತೆಗಳು (ಭಾಗ ೬೩೯) - ಕುಣಿತ
ಪ್ರವಾಸ ಹೊರಟಾಗಿತ್ತು ಅದ್ಭುತವಾದ ಪಯಣವೊಂದು ಆರಂಭವಾಗಿತ್ತು. ಪ್ರತಿಯೊಬ್ಬರ ಮನಸ್ಸಿಗೆ ಇಷ್ಟವಾಗಿರುವ ಸ್ಥಳಗಳ ಕಡೆಗೆ ಪಯಣ. ಆ ಪಯಣದಲ್ಲಿ ಹೊರಟ ಪ್ರತಿಯೊಬ್ಬರಿಗೂ ತಲುಪುವ ಜಾಗದ ಬಗ್ಗೆ ನಿಶ್ಚಯವಿತ್ತು. ಆದರೆ ಪಯಣದ ಸಾಗುವ ದಾರಿಯಲ್ಲಿ ತಲುಪುವ ದಾರಿಯ ಬಗ್ಗೆ ವಿಪರೀತವಾಗಿ ಯೋಚಿಸದೆ ಪಯಣವನ್ನ ನೆನಪಿನ ಪಟಲದಲ್ಲಿ ಉಳಿಸಿಕೊಳ್ಳುವ ಹಾಗೆ ಸಂಭ್ರಮಿಸುತಿದ್ದರು ಆ ಪಯಣದಲ್ಲಿ ಎಲ್ಲರೂ ಸಂಭ್ರಮದಿಂದ ಕುಣಿಯುವ ಕಾರಣಕ್ಕೋಸ್ಕರ ಆತ ಹಾಡುಗಳನ್ನು ತನ್ನ ಮೊಬೈಲ್ ನಲ್ಲಿ ಹಾಕುತ್ತಿದ್ದಾನೆ. ಇಡೀ ಪಯಣದಲ್ಲಿ ಎಲ್ಲ ಪ್ರಯಾಣಿಕರು ಸಂಭ್ರಮದಿಂದ ಕುಣಿಯಬೇಕು ಎಂಬುದು ಆತನ ಆಸೆ ಆತ ಪಯಣಿಗರ ಇಚ್ಛೆಗೆ ಅನುಗುಣವಾಗಿ ಹಾಡುಗಳನ್ನು ಒಂದಾದ ಮೇಲೆ ಒಂದರಂತೆ ಹಾಕುತ್ತಲೇ ಇದ್ದಾನೆ. ಪಯಣದಲ್ಲಿ ಆತನಿಗೆ ಒಂದು ಹೆಜ್ಜೆ ಕುಣಿಯುವುದ್ದಕ್ಕೆ ಸಾಧ್ಯವಾಗಲಿಲ್ಲ. ಆದರೆ ಒಂದಷ್ಟು ಜನರ ಮನಸ್ಸನ್ನು ಅರ್ಥೈಸಿಕೊಂಡು ಒಪ್ಪಿಗೆಯಾಗುವ ಹಾಡುಗಳನ್ನ ಹಾಕಿ ಕುಣಿಸಿದ್ದಾನೆ. ಭಗವಂತನೂ ಹಾಗೆ ...ಅವನೂ ಕುಣಿಸುತ್ತಾನೆ ನಮ್ಮಿಷ್ಟದ ಅವನಿಷ್ಟದ ಬದುಕಿನ ಹಾಡುಗಳನ್ನ ಹಾಕಿ. , ಕುಣಿಯುವುದು ಮಾತ್ರ ನಮ್ಮ ಕೆಲಸ... ನಿರಾಕಾರನ ಆಟಕ್ಕೆ ಹೆಜ್ಜೆ ಜೋಡಿಸಬೇಕು.. ಹಾಡು ನಮ್ಮದೋ ಭಗವಂತನದೋ ಗೊತ್ತಿಲ್ಲ... ಒಟ್ಟಿನಲ್ಲಿ ಕುಣಿಯಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ