ಹನಿಗಳ ಬಲೆ !
ಕವನ
ಬಲೆ
ಈ ಜೀವನವೆಂದರೆ
ನಮಗೆ ನಾವೇ
ಹೆಣೆದುಕೊಂಡ
ಜೇಡರ ಬಲೆ...
ಕರ್ತೃವಿಗೇ
ಹೊರಗೆ ಬರಲು
ದಾರಿ ಕಾಣದ
ನಿಗೂಢ ಸೆಲೆ!
***
ಭ್ರಮೆಯ ಮನ!
ಇರುವುದೆಲ್ಲವ
ಬಿಟ್ಟು
ಇರದುದರೆಡೆಗೆ
ತುಡಿವುದೆ
ಜೀವನ....
ಇಲ್ಲದಿರುವುದನು
ವೈಭವೀಕರಿಸಿ
ಭ್ರಮೆಯನುಂಟು
ಮಾಡುತಿಹುದೇ
ಈ ಮನ!
***
ಸಾಮರಸ್ಯ
ಇಲ್ಲಿ
ಬಿಗುಮಾನದಿಂದ-
ಸೋತವರು
ಬಹಳ...
ಗೆದ್ದು
ಬೀಗಿದವರು
ವಿರಳ...
ಸಾಮರಸ್ಯವೇ
ಎಲ್ಲದಕೂ
ಸರಳ!
***
ಸಾತ್ವಿಕ/ಉಗ್ರ
ತಾತ್ವಿಕ
ಕೋಪದ
ಸಾತ್ವಿಕ
ಮನಗಳು
ಸರಳತೆಯಲಿ
ನಿಂತು
ಜಗದಾ
ಒಳಿತಿಗೆ
ಶ್ರಮಿಸುತಿವೆ....
ಉಗ್ರರ
ಮನಗಳು
ವಿಕೃತ
ಮನದಲಿ
ಕುಣಿ ಕುಣಿದಾಡಿ
ಜಗವಾ
ಬೆಂಕಿಯ
ಕೂಪಕೆ
ತಳ್ಳುತಿವೆ!
***
ಋಣ ಭಾರ
ಇಹದಲಿ
ಋಣಭಾರವ
ಹೊತ್ತು ನಾ
ಚಲಿಸಲಾರೆ...
ಇಲ್ಲೆನೆಗೆ
ಈ ಹೊರೆಯನಿಳಿಸಿ
ಜೀವಿಸುವ
ಶಕ್ತಿಯನು
ನೀಡೆನೆಗೆ
ಗುರುವೇ
ಹೇ ದೇವಾ!
-ಕೆ ನಟರಾಜ್, ಬೆಂಗಳೂರು
ಚಿತ್ರ್