ಹನಿಗಳ ಸಮಯ

ಹನಿಗಳ ಸಮಯ

ಕವನ

ಸಮಯಸಿಂಧು 

ಕರ್ನಾಟಕ

ಬ್ರೇಕಿಂಗ್

ನ್ಯೂಸ್:

ಸಿದ್ದರಾಮಯ್ಯ ಕರೆ-

ಜಾತಿ-ಧರ್ಮಗಳಿಗೆ

ನೀವು ಒಳಗಾಗಬೇಡಿ...

 

ಹೌದೌದು-

ಈಗ ಆಗಲೇ ಬೇಡಿ;

ಎಲೆಕ್ಷನ್ ಟೈಮಲಿ

ಮಾತ್ರ

ಲೆಕ್ಕಾಚಾರ ಹಾಕಿ

ಓಟು ಗಿಟ್ಟಿಸಿ ಬಿಡಿ!

***

ದುರ್ಘಟನೆಗೆ ಮುನ್ನ.... 

ಹರಿಹರದಲಿ

ನಲವತ್ತೆಂಟು

ಶಾಲೆಗಳು

ಸಂಪೂರ್ಣ ಶಿಥಿಲ;

ವಿದ್ಯಾರ್ಥಿ-ಶಿಕ್ಷಕರು

ಭಯ ಆತಂಕದಲಿ...

 

ಉಸ್ತುವಾರಿ

ಮಂತ್ರಿಗಳೇ-

ದುರಂತ ಘಟನೆಗೆ

ಮೊಸಳೆ ಕಣ್ಣೀರು

ಸುರಿಸುವ ಮುನ್ನ-

ಬರಲಿದು ಚಿತ್ತದಲಿ!

***

ಪೊಲಿ-ಟ್ರಿಕ್ಸ್! 

ಅಮಿತ್ ಷಾ

ಭೇಟಿ

ವೇಳೆಯೇ

ಚೆನ್ನೈನಲ್ಲಿ

ವಿದ್ಯುತ್

ಕಡಿತ...

 

ಕರ್ನಾಟಕಕ್ಕೆ

ಬರಬೇಕಿತ್ತು

ನಿಮಗೆ

ಸಿಗುತಿತ್ತು

ವಿದ್ಯುತ್

ಉಚಿತ!

***

ಜೀವನ ಮಂತ್ರ... 

ಹಾರ್ಡ್ ವೇರ್

ಮತ್ತು

ಸಾಫ್ಟ್ ವೇರ್

ಜೊತೆಯಾದರೆ

ಕಂಪ್ಯೂಟರ್

ಯಂತ್ರ...

 

ದೃಢತೆ

ಮತ್ತು

ಕುಶಲತೆಯಿದ್ದರೆ

ಅದುವೇ

ಜೀವನ

ಮಂತ್ರ!

***

ಗ್ರಹಣ  

ಯಾವುದೂ

ಬಹುಕಾಲ

ನಡೆದುದನು

ನಾ ಕಾಣೆ;

ಕಳೆದುಕೊಳ್ಳದಿರಿ

ಹರುಷ....

 

ತಾಳ್ಮೆಯಿರಲಿ;

ಸಹನೆಯಿರಲಿ

ಸೂರ್ಯನಿಗೆ ಹಿಡಿವ

ಗ್ರಹಣವೂ

ಕೆಲವೇ

ನಿಮಿಷ!

***

ವಿರೋಧಾಭಾಸ! 

ಜೀವನ

ನರಕವಾಗಿರಲು

ಸ್ವರ್ಗದ

ಕನಸು!

ಹೇ ನೀನೆಂತಹ

ವಿಧಿಯೇ...?

 

ಅದೇ

ಸ್ವರ್ಗವಾಗಿರಲು

ನರಕದ

ಕನಸು!

ಓ ವಿಸ್ಮಯದ

ನಿಧಿಯೇ...!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್