-----: ಹುಚ್ಚ ಮನಸ :-------
ಕವನ
ಹೋಗು ಅಂದ್ರು ಹೋಗಂಗಿಲ್ಲ
ಬಾ ಅಂದ್ರು ಬರಂಗಿಲ್ಲ
ಅಲ್ಲೇ ನಿಂತ ನಗತೆತಿ ಈ ಹುಚ್ಚ ಮನಸ
ನಿಲ್ಲ ಅಂದ್ರು ನಿಲ್ಲಂಗಿಲ್ಲ
ಕೂಡ ಅಂದ್ರು ಕುಡಂಗಿಲ್ಲ
ಅಲ್ಲೇ ಹೋಗಿ ಮಕ್ಕೊಂಡೆತಿ ಈ ಹುಚ್ಚ ಮನಸ
ಬೇಕ ಅಂದ್ರು ಕೇಳಂಗಿಲ್ಲ
ಬ್ಯಾಡ ಅಂದ್ರು ಬಿಡಂಗಿಲ್ಲ
ಅಲ್ಲೇ ಹೋಗಿ ಕುಣಿತೆತಿ ಈ ಹುಚ್ಚ ಮನಸ
ಸಾಯಿತೆನ ಅಂದ್ರು ಸಾಯಂಗಿಲ್ಲ
ಬದಕ್ತೆನ್ ಅಂದ್ರು ಬದಕಂಗಿಲ್ಲ
ನಡಕ ನಿಂತ ವದ್ದ್ಯಾಡತೆತಿ ಈ ಹುಚ್ಚ ಮನಸ
ಕಲಿತೆನಿ ಅಂದ್ರು ಕಲಸಂಗಿಲ್ಲ
ವಲ್ಲ್ಯ ಅಂದ್ರು ವಲ್ಯಂಗಿಲ್ಲ
ಏನಾರ ಮಾಡತೆತಿ ಈ ಹುಚ್ಚ ಮನಸ
ಚೊಲೋ ಆದ್ರು ಕುಶಿ ಇಲ್ಲಾ
ಕೆಟ್ಟ ಆದ್ರು ದುಃಖ ಇಲ್ಲಾ
ತಿಳದಲ್ಲಿ ಹಾರಿ ಹೊಂಟತಿ ಈ ಹುಚ್ಚ ಮನಸ
ರಾಘವ
ಸ್ಪೂರ್ತಿ:ಕಠಿಣ ಕವಿ(ವೆಮೋ)