ಹೂವು ಮತ್ತು ದಾರ

ಹೂವು ಮತ್ತು ದಾರ

ಬರಹ

'ಒಂದು, ಎರಡು, ಮೂರು
ಮಳ ಮೂರು , ಕೊಡಿ ಆರು' .
'ಹೂ ಹೂವಿಗೆ ಇಷ್ಟೊಂದು ಅಂತರ,
ಮೂರಕ್ಕೆ ಆರು ಹೆಚ್ಚಾಯಿತು'
'ನಿಜ, ಅಂತರ !, ಆದರೆ ಹೂವಿಗಲ್ಲ,
ನನಗೆ ನಿಮಗೆ' ಮುಖ ಪೆಚ್ಚಾಯಿತು.
'ಹೂ ಹೂವಿಗೂ ದೂರ,ಅದನು
ಬೆಸೆಯಲೊಂದು ದಾರ
ಹೂದಾರಕೆ ಏನಿದೆ ನಂಟು
ಬಿಡಿಸಲಾಗದ ಬ್ರಹ್ಮ ಗಂಟು',
'ಮಾತು ಹೆಚ್ಚಾಯಿತು
ಮೂರು ಐದಕ್ಕದರೆ ಸರಿ'
'ಇಲ್ಲ ಸ್ವಾಮಿ,ಹೂ ಕೆಜಿಗೆ ನೂರು,
ಒಟ್ಟಾಗಿ ಬಂದರೆ ಮಳ ಹದಿನಾರು,
ಗಿಟ್ಟುವುದೇ, ಉಳಿವುದೇ ಸೂರು,
ಮೃದು ಹೂಗಳಿಗೆ
ಸತ್ಯದ ಬಂಧ ಕಟ್ಟಿದ್ದೇನೆ.
ಹೂ ದೂರಾದರೂ ಸತ್ಯ,ನಿಜ
ಶಿವ ಮೆಚ್ಚುವನು ಸತ್ಯ'
'ಸರಿ ಸರಿ ಮತ್ತೆ ಮಾತಾಯಿತು'
'ಸಿಟ್ಟಾಗದಿರಿ ಸ್ವಾಮಿ
ಹೂವಿನರ್ಥ ಶುಭ
ಮೃದು,ಉಸಿರು,ಒಲವು,ಸ್ನೇಹ
ಹೂ, ದಾರ ಮುಖ್ಯ ದೂರವಲ್ಲ.