ಹೆಣ್ಣಿನ ಆಧುನೀಕತೆ, ನೈತಿಕತೆ, ಸಂಸ್ಕೃತಿ, ಸ್ವಾತಂತ್ರ್ಯ

ಹೆಣ್ಣಿನ ಆಧುನೀಕತೆ, ನೈತಿಕತೆ, ಸಂಸ್ಕೃತಿ, ಸ್ವಾತಂತ್ರ್ಯ

ಬರಹ

ಇತ್ತೀಚಿಗೆ ನೈತಿಕತೆಯ ಪ್ರಶ್ನೆ ಮೂಡುತ್ತಿದೆ
ನೈತಿಕತೆಯ ನೈತಿಕತೆಯನ್ನೇ ಪ್ರಶ್ನಿಸಿಸಲಾಗುತ್ತಿದೆ
ಸಂಸ್ಕೃತಿಯ ಬಗ್ಗೆ ಭಾಷಣಾ ಬಿಗಿಯುವರ ನಡುವಲ್ಲಿಯೇ ಸಂಸ್ಕೃತಿಯ ಮೂಲ ಅರ್ಥವನ್ನೇ ಬುಡ ಸಮೇತ ಕಿತ್ತು ಹಾಕುವವರ ದಂಡೂ ಹೆಚಾಗುತ್ತಿದೆ.
ನೈತಿಕತೆ ಮತ್ತು ಸಂಸ್ಕೃತಿ ಎರೆಡಕ್ಕೂ ಅಂಥ ಅವಿನಾಭಾವ ಸಂಬಂಧವೇನಿಲ್ಲವಾದರೂ, ನಮ್ಮ ಭಾರತೀಯ ಸಂಸ್ಕೃತಿ ನೈತಿಕತೆಯೊಂದಿಗೆ ತಳಕು
ಹಾಕಿಕೊಂಡಿರುವುದನ್ನು ಅಲ್ಲಗೆಳೆಯುವಂತಿಲ್ಲ.
ಇತ್ತೀಚಿಗೆ, ಪಬ್‌ಗೆ ಹೋದ ಹುಡುಗಿಯರು ಮತ್ತು ಅವರನ್ನು ಥಳಿಸಿದ ರಾಮಸೇನೆಯವರು ಪ್ರಚಾರದಲ್ಲಿದ್ದಾರೆ. ಹುಡುಗಿಯರು ಪಬ್‌ಗೆ ಹೋಗುವುದು ಹೊಸದೇನಲ್ಲ
ನಾವು ಹಳೇ ಚಲನ ಚಿತ್ರಗಳನ್ನು ನೋಡಿದರೆ ಪಬ್ ಡಿಸ್ಕೋ ಥೆಕ್‌ಗಳಲ್ಲಿ ಹುಡುಗಿಯರು ಹೆಂಗಸರು ಕಾಣಸಿಗುತ್ತಾರೆ.
ಹಾಗಾಗಿ ಆಧುನೀಕತೆಯನ್ನ ದೂರುವಂತಿಲ್ಲ. .
ಆಧುನೀಕತೆ ಎಂಬುದು ಹೆಣ್ನಿಗೆ ಸ್ವಾತಂತ್ರ್ಯದ ಸುಖ ಕೊಟ್ಟಿತು.
ಅಲ್ಲಿಯವರೆಗೆ ಗಂಡಸಿನ ಅಡಿಯಾಳಾಗಿಯೇ ಬಾಳುತ್ತಿದ್ದ ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿತು. ಅದನ್ನು ಮನ: ಪೂರ್ವಕವಾಗಿಯೇ ಸ್ವೀಕರಿಸಿದ ಹೆಣ್ಣು ತುಸು
ಹೆಚ್ಚೇ ಎನಿಸುವಷ್ಟು ಸಂಯಮ ಮೀರುತ್ತಿದ್ದಾಳೆ. ಸಂಯಮ ಮೀರಿದರೆ ಏನು ಗಂಡಸು ಮೀರುವುದಿಲ್ಲವೇ ಎಂಬ ಪ್ರಶ್ನೆಯೂ ಇದೆ. ಆದರೆ ಸಂಯಮ ಮೀರಿದರೆ
ಅದರ ಪ್ರತಿಫಲವನ್ನು ಅವಳೇ ಉಣ್ಣಬೇಕಾಗುತ್ತದೆ. ಹೆಣ್ಣು ಗಂಡು ಒಂದೇ , ಅವರಿಗೇಕೆ ನೀತಿ ನಿಯಮ ಎನ್ನುವ ಮಾತು ಬರೀ ಬ್ಲಾಗಲ್ಲಿ. ಲೇಖನದಲ್ಲಿ ಕಾಣುತ್ತದೆಯೇ ಹೊರತು
ಸಮಾಜದಲ್ಲಿ ಕಾಣುತ್ತಿಲ್ಲ.
ಈಗಲೂ ಒಂಟಿಯಾಗಿ ಹೆಣ್ಣೊಂದು ರಾತ್ರಿ ಎಂಟರ ಮೇಲೆ ರಸ್ತೆಯ ಮೇಲೆ ನಡೆದರೆ, ಅವಳನ್ನು ಭೋಗಕ್ಕೆ ಹೇಗೆ ಉಪಯೋಗಿಸಬಹುದೆಂದುದಲ್ಲಿ ಮಂಡಿಗೆ ಹಾಕುವ ಜೊತೆಯಲ್ಲಿ ಇನ್ನೇನು ನುಂಗಿಯೇ ಬಿಡುತ್ತೇವೆಂದು ಕಾದು ನಿಂತಿರುವ ಗಂಡಸರು ಖಂಡಿತಾ ಕಾಣುತ್ತಾರೆ.
ಇಲ್ಲ ಎನ್ನುವವರು ಒಂದು ಒಂಟಿಯಾಗಿ ಓಡಾಡಿಲ್ಲ ಅಥವ ಸುಳ್ಳು ಹೇಳಿ ಸ್ವಯ್ಂ ತೃಪ್ತಿ ಹೊಂದುತ್ತಿದ್ದರೆಂದು ಭಾವಿಸಬೇಕಿದೆ.
ಅಷ್ಟೇಕೆ ನೆಟ್‌ನಲ್ಲಿ ಒಂದು ಐಡಿ ಹೆಣ್ಣಿನ ಹೆಸರಾಗಿ ಕಂಡರೆ ಅದನ್ನು ತಮ್ಮ ಕಡೆಗೆ ಸೆಳೆಯುವ ಮನಸ್ಥಿತಿಯ ಗಂಡಸರೂ ಇದ್ದಾರೆ. ಆನ್ಲೈನ್‌ನಲ್ಲಿಯೇ ಹೆಣ್ಣನ್ನು ತಮ್ಮವಳನ್ನಾಗಿ ಮಾಡಿಕೊಂಡು ಹೊಂದುವ ಸುಖಕ್ಕೆ ಕಾಯುವ ಆತ್ಮ ರತಿ ಗಂಡಸರೂ ಕಡಿಮೆ ಇಲ್ಲ.
ಎಲ್ಲಿಯವರೆಗೆ ಹೆಣ್ಣಿನ ಈ ಸ್ಥಿತಿ ಬದಲಾಯಿಸುವುದಿಲ್ಲವೂ ಅಲ್ಲಿಯವರೆಗೆ ಹೆಣ್ಣು ಸ್ಬಾತಂತ್ರ್ಯಳಾಗಲು ಸಾಧ್ಯವಿಲ್ಲ.
ಪಬ್‌ಗೆ ಹೋದ ಮಾತ್ರಕ್ಕೆ ಹೆಣ್ಣಿನ ಸ್ಬಾತಂತ್ರಕ್ಕೆ ರೆಕ್ಕೆಯಾಗಲಿ ಅವರನ್ನು ತಡೆದರೆಂಬ ಕಾರಣಕ್ಕೆ ಹರಣವಾಗಲಿ ಸಾಧ್ಯವಿಲ್ಲ.
ನೈತಿಕತೆಯ ಮೂಲವೂ ಹೆಣ್ಣೆ ಆಗಿರುವುದು ದುರಂತ
ಗಂಡಸು ತಾನೆಷ್ಟು ಬಾರಿ ಬೇರೊಬ್ಬಳ ತೆಕ್ಕೆಯಲ್ಲಿ ಮಲಗಿದ್ದರೂ ಪರವಾಗಿಲ್ಲ. ತಾನು ಮದುವೆಯಾಗಿರುವವಳು ಮಾತ್ರ ಫ್ರೆಶ್ ಆಗಿರಬೇಕೆಂದು ಬಯಸುತ್ತಾನೆ. ಹಾಗಾಗಿ ನೈತಿಕತೆಯ ಮೂಲವು ಹೆಣ್ಣಿನ ನಡತೆಯನ್ನೇ ಆವಲಂಬಿಸಿದೆ.
ರೇಖೆಯನ್ನು ದಾಟಿ ಹೋದ ಹೆಣ್ಣಿಗೆ ತಾತ್ಕಾಲಿಕ ಆಸರೆ ಸಿಗಬಹುದಾದರೂ ಅದು ಶಾಶ್ವತವಾಗಿರುವ ಸಂಭವ ತುಂಬಾ ಕಡಿಮೆ. ಆದರೆ "exemptions are not the examples"
ಈ ಆಕರ್ಷಣೆಯ ಜಗತ್ತಿನಲ್ಲಿ ಹೆಣ್ಣು ತನ್ನ ಬಾಳಿಗೆ ಧಕ್ಕೆಯಾಗದಂತೆ ಹೆಜ್ಜೆ ಇಡಬೇಕಾಗುವುದು ಬಹಳ .
ಸ್ವಾತಂತ್ರ್ಯ ಎನ್ನುವುದು ಹೆಣ್ಣಿಗೆ ಜನ್ಮ ಸಿದ್ದ ಹಕ್ಕಾಗಿದ್ದರೂ ಅದರ ಸಮರ್ಪಕ ಬಳಕೆಯಿಂದ ಅವಳ ಬಾಳು ಸ್ವರ್ಗವಾಗದಿದ್ದರೂ ನರಕವಂತೂ ಖಂಡಿತಾ ಆಗುವುದಿಲ್ಲ.
ಆದರೆ ಅತೀ ಸ್ಬಾತಂತ್ರ ಎಂದರೆ(ಪಬ್‌ಗೆ ಹೋಗುವುದು. ರಾತ್ರಿವೇಳೆ ಕುಡಿದು ಅಪರಿಚಿತ ಗಂಡಸರ ಬಳಿಯಲ್ಲಿ ಕಳೆಯುವುದು, ಬಾಳನ್ನು ಎಂಜಾಯ ಮಾಡುವ ನೆಪದಲ್ಲಿ ನೈತಿಕತೆಯ ರೇಖೆ ದಾಟುವುದು ಇತ್ಯಾದಿ)
ಮೊದಲಲ್ಲಿ ಸ್ವ್ಬರ್ಗವನ್ನು ತೋರಿದರೂ ಭವಿಷ್ಯ ಖಂಡಿತಾ ನರಕಕ್ಕಿಂತ ನರಕವಾಗಿರುತ್ತವೆ.
ಬಡತನಕ್ಕೂ ನೈತಿಕತೆಗೂ ಸಂಬಂಧವಿಲ್ಲ.
ಅದರಲ್ಲೂ ಈಗಿನ ಉದ್ಯೋಗ ಕ್ರಾಂತಿಯ ಕಾಲದಲ್ಲಿ ಹೆಣ್ಣಿಗೆ ಕೆಲಸವೆಂಬುದು ಗಗನ ಕುಸುಮವಾಗಿಲ್ಲ
ಹಾಗೆ ನೋಡಿದರೆ ಪುರುಷರಿಗಿಂತ ಹೆಣ್ಣಿಗೆ ಈಗ ಬೇಗ ಕೆಲಸ ಸಿಗುತ್ತದೆ
ಎಂತಹುದೇ ಬಡತನವಿದ್ದರೂ ಅದನ್ನು ನಿವಾರಿಸಿಕೊಳ್ಳಲು ಕೆಲಸ ಸಿಗಿತ್ತದೆ
ಇಂತಹುದೇ ಎಂದಿಲ್ಲವಾದರೂ ಎಂತಹದ್ದೋ ಒಂದು ಸಿಗುತ್ತದೆ
ಯಾರ ಆಸೆಗೋ ಬಲಿಯಾಗಿ ಆಫೀಸರ್ ಆಗುವುದಕ್ಕಿಂತ ಸಿಕ್ಕ ಕೆಲಸಕ್ಕೆ ತಲೆ ಬಾಗಿ ಶ್ರದ್ದೆಯಿಂದ ಮಾಡಿದರೆ ಯಶಸ್ಸು ಖಂಡಿತಾ
ಹೆಣ್ಣಿನ ಬಲಹೀನತೆಯನ್ನು ದುರುಪಯೋಗಗೊಳಿಸುವಂತಹ ಪುರುಷರ ಜೊತೆ ಜೊತೆಯೇ ಹೆಣ್ಣಿನ ಹೆಣ್ತನಕ್ಕಲ್ಲದೆ ಅವಳ ಬುದ್ದಿಗೆ, ಚಾಕಚಕ್ಯತೆಗೆ ಬೆಲೆ ಕೊಡುವ ಸಹೃದಯ ಗಂಡಸರು ಇದ್ದಾರೆ.
ಹೆಣ್ಣು ಬಡತನ ಮುಂದಿಟ್ಟುಕೊಂಡು ಗಂಡಸರು ಶೋಷ್ಗಿಸುತ್ತಾರೆ ಎಂಬುದನ್ನು ಅವಳ ನೈತಿಕ ಅಧೋಗತಿಗೆ ಕೊಡುವ ಕಾರಣವಾಗಿರಬಾರದುಯ
ಉಡುಪಿನ ಸಂಹಿತೆಯ ಬಗ್ಗೆಯೂ ಹೆಂಗಸರೇ ತಮ್ಮ ಸ್ವಾತಂತ್ರ್ಯ ಹರಣವಾಯ್ತು ಎಂದು ಹಲುಬುವುದನ್ನು ನೋಡಿದ್ದೇನೆ.
ಇನ್ನೂ ನಮ್ಮ ದೇಶದಲ್ಲಿ ಅರೆ ನಗ್ನ ತನಕ್ಕೆ ಸಮಾಜದಿಂದ ಪರವಾನಗಿ ನೀಡಿಲ್ಲ. ಒಬ್ಬ ಹೆಣ್ನು ಮಂಡಿ ಮೇಲೆ ಮಿಡಿ ಧರಿಸಿಕೊಂಡು ಬಂದರೆ ನೋಡುವ ಕಣ್ಣುಗಳಲ್ಲಿ ಸಾವಿರಾರು ಅರ್ಥಗಳಿರುತ್ತವೆ
ಅಂತಹ ಉದ್ದಾತ್ತ ಸ್ಥಿತಿ ನಿರ್ಮಾಣಾವಾಗಬೇಕಾದರೆ ಇನ್ನೂ ತುಂಬಾ ವರ್ಷಗಳಾಗಬೇಕು. ಅಷ್ಟ್ಕಕ್ಕೂ ಹೆಣ್ಣಿನ ಸೌಂದರ್ಯ ಊಹೆಯೊಳಗೆ ಇದ್ದರೆ ಚೆಂದ. ಅವಳು ದೇಹ ಪ್ರದರ್ಶನ ಮಾಡಿದಷ್ಟು ಜನರ ಕುತೂಹಲವನ್ನು ಕಳೆದುಕೊಳ್ಳುತ್ತಾಳೆ
ಕೇವಲ ಚೆಂದ ಕಾಣಬೇಕು ಎಂದರೆ ಮೈ ತುಂಬಾ ಅಲ್ಲದಿದ್ದರೂ ಮಂಡಿಯ ಸುತ್ತುವರಿದ ಹೊಕ್ಕಳು ಕಾಣಿಸದ ಎಷ್ಟೋ ಉಡುಪುಗಳಲ್ಲಿ ಆಕೆ ಇನ್ನೂ ಚೆಂದವಾಗಿ ಕಾಣುತ್ತಾಳೆ.
ಅದೇಕೆ ದೇಹ ಪ್ರದರ್ಶನಮಾಡಿ ಗಮನ ಗಿಟ್ಟಿಸಿಕೊಳ್ಳುವ ಗೀಳು
ಅಥವ ಅದೂ ಆಧುನೀಕತೆ ಎನ್ನುವುದಾದರೆ, ಪಾಶ್ಚಾತ್ಯೆ ದೇಶಗಳಲ್ಲಿ ಹೆಣ್ಣಿನ ಎದೆ ಭಾಗ ತೋರಿಸುವುದು ಅಫೆನ್ಸ್ ಅಲ್ಲ. ಹಾಗೇಕೆ ಮಾಡಬಾರದು. ಅರೆ ನಗ್ನರಾಗಿ ಹೋಗುವುದು ಗಂಡಸಿನ ಆಸಕ್ತಿ ಕೆರಳಿಸುವುದಕ್ಕೆ ಎನ್ನುವುದು ಸ್ಪಷ್ಟ

ಯುವತಿಯರೇ ಇದೇನೋ ಅಜ್ಜಿಯ ಮಾತೆಂದು ಭಾವಿಸದಿರಿ. ನಾನು ಅಜ್ಜಿ ಅಲ್ಲ. ಅಥವ ಅಜ್ಜಿಯ ಮಾತು ಒಳ್ಳೆಯದಿದ್ದರೆ ಕೇಳಬಾರದೆಂದೂಇಲ್ಲ
ನಿಮ್ಮ ಸ್ಬಾತಂತ್ರ್ಯ ನಿಮ್ಮ ಕೈನಲ್ಲಿದೆ, ಹಾಗೆಯೇ ನಿಮ್ಮ ಬಾಳು ಸಹಾ, ಅದನ್ನು ಒಪ್ಪವಾಗಿರಿಸಿಕೊಂಡು, ಚಂದ ಮಾಡಿಕೊಳ್ಳುವುದೋ ಅಥವ ಕ್ಷಣಿಕ ಸುಖ, ಲೋಭ, ಆಧುನೀಕತೆ , ನಾಗರೀಕತೆ, ಮುಂದುವರಿದವರು ಎಂಬ ಮುಖವಾಡದ ಆಕರ್ಷಣೆಯ ಸುಳಿಗೆ ಸಿಲುಕಿ ಹಾಳು ಮಾಡಿಕೊಳ್ಳುವುದೋ ನೀವೆ ನಿರ್ಧರಿಸಬೇಕು.
ಹಾಗೆಯೆ ಪುರುಷರು
ಹೆಣ್ಣಿನ ಸ್ವಾತಂತ್ರ್ಯ ಅವಳ ಕೈನಲ್ಲಿ ಇದ್ದರೂ ಅದನ್ನು ಬಳಸುವ ಮಟ್ಟ ನಿಮ್ಮಿಂದ ಹೆಚ್ಚಾಗಬೇಕು
ಹೆಣ್ಣಿಗೆ ಸ್ವಾತಂತ್ರ ಇದೆ, ಅವಳು ಪಬ್‌ಗೆ , ಅಪರಾತ್ರಿಯಲ್ಲಿ ಹೋಗಬಹುದು ಕನಿಷ್ಟ ಬಟ್ಟೆ ಧರಿಸುವುದು ಅವಳ ಹಕ್ಕು ಎನ್ನುವುದೂ ನಿಮ್ಮ ವಾದವಾಗಿದ್ದರೆ ಹೆಣ್ಣಿಗೆ ರಕ್ಷೆ ಕೊಡಿ, ನಿಮ್ಮ ಗೆಳೆಯರ , ವಾರಿಗೆಯವರ, ಇತರ ಪುರುಷರ ಮನ:ಪರಿವರ್ತನೆ ಮಾಡಲು ಸಾಧ್ಯವೆ ಯೋಚಿಸಿ,ಆದಲ್ಲಿ ಅದನ್ನು ಕಾರ್ಯಗತಗೊಳಿಸಿ
ಇಲ್ಲವಾದಲ್ಲಿ ದಯವಿಟ್ಟು ಇಲ್ಲದ ಸತ್ಯವ ಹೇಳುತ್ತಾ ಹೆಣ್ಣನ್ನು ರೊಚ್ಚಿಗೆಬ್ಬಿಸಿ ಅವಳ ಬಾಳನ್ನು ಹಾಳು ಗೆಡವದಿರಿ.
ಇದು ನನ್ನ ಪ್ರಾರ್ಥನೆ