|| ಹೊಳ್ಳಿ ನೊಡು ಇನ್ನೊಂದು ಸಾರ್ತಿ ||
ಕವನ
|| ಹೊಳ್ಳಿ ನೊಡು ಇನ್ನೊಂದು ಸಾರ್ತಿ ||
ನನ್ನ ನಿನ್ನ ಮನಸು ಒಂದ ಆಯಿತ ಗೇಳತಿ |
ನಿ ಸುಮ್ಮನ್ಯಾಕ ಕುಂತ ಅಳತಿ |
ನೋಡಬ್ಯಾಡ ನನ್ನ ಮೊತಿ |
ಬೆಳಗಬ್ಯಾಡ ಮಂಗಳಾರತಿ ||
ನಿನ್ನ ತಾಯಿ ಆದಳು ನನಗ ಅತ್ತಿ |
ನಿನ್ನ ಸಲುವಾಗಿ ಆಗ್ಯಾರ ಉದಬತ್ತಿ |
ಅವರ ಮನಸು ಯಾವಾಗು ಹತ್ತಿ |
ನಿಜ ಹೇಳತೇನ ಮನಸಿಗಿ ವತ್ತಿ |
ನನ್ನ ನಿನ್ನ ನಡುವೆ ಬರಬಾರದು ಯಾವತ್ತು ಜಾತಿ |
ಬಂದರೆ ಅದು ಆದೇತು ಬ್ರಾಹ್ಮಣರು ನುಂಗಿದಂಗೆ ತತ್ತಿ |
ಜೀವ ಇಟ್ಟಿನಿ ನಿನ್ನಮ್ಯಾಲ ಜಾಸ್ತಿ |
ನಾ ನಿನ್ನ ಮಾವ ಪೈಲವಾನ ಜಂಗಿಕುಸ್ತಿ ||
ನಿನ್ನ ನೋಡಿದಾಗ ನನ್ನ ಮನಸು ಸ್ಪೂರ್ತಿ |
ಬಂದಂಗ ದೊಡ್ಡದೊಂದು ಕೀರ್ತಿ |
ನಮಗ ಬ್ಯಾಡ ವರದಕ್ಷಿಣೆ ಜಾಸ್ತಿ |
ನಿ ಸಿಕ್ಕರೆ ಸಾಕು ನಮಗೆ ಅಂತಿ |
ನಾ ನಿನ್ನ ತೊಳನೋಳಗ ಇದ್ದರ ಏನಂತಿ |
ಬೆಂಕಿ ಹಚ್ಚು ಈ ಲೋಕ ಪೂರ್ತಿ |
ನನ್ನ ಮನಸ್ಸು ಹೃದಯನಿಂದೆ ಭರ್ತಿ |
ನಿ ಹೊಳ್ಳಿ ನೋಡು ಮತ್ತೊಂದು ಸರ್ತಿ ||