" ಹೊಸತು "

" ಹೊಸತು "

ಕವನ
ಬಂದೆ ಬರುವಳು ಚೆಲುವೆ
ಬಳಿಗೆ ಒಲವ ಒರತೆ ಹೊತ್ತು
ಕಾಯುತಿರು ಗೆಳೆಯ ನೀ ಹಾಂಗ
ತುಸು ತಾಳ್ಮೆಯಿತ್ತು.
ಬಿಗಿದಪ್ಪುವಳು ಅವಳು 
ನಿನ್ನ ಅವಡುಗಚ್ಚಿ,
ಮಾತಾಡು ಅವಳ ಜೋಡಿ
ನೀ ಮನಸಬಿಚ್ಚಿ;ಅವಳ ಪ್ರೀತಿ ಮೆಚ್ಚಿ !
ಕಾಲ ಕುಳಿತಿಲ್ಲ ಗೆಳೆಯ ನಿನ್ಹಾಂಗ
ನಿನ್ನೆಗಳ ಚಿಂತೆ ಹೊತ್ತು,
ಮುನ್ನೆಡೆಯೋ ಮೈದಡವಿ
ನಿನ್ನ ನಿನ್ನೆಗಳ ಮರೆತು;ಇಲ್ಲಿ ಅನುದಿನವು ಹೊಸತು !!