ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪುಸ್ತಕನಿಧಿ- 25. ಮಹಾಭಾರತದ ಸಭಾಪರ್ವದೊಳಗಿನ ರಹಸ್ಯಗಳು- ಗಳಗನಾಥ .

ಈ ಪುಸ್ತಕದಿಂದ ನಾನು ಮಾಡಿಕೊಂಡ ಕೆಲವು ಟಿಪ್ಪಣಿಗಳು ಇಲ್ಲಿವೆ.

ಬ್ಲಾಗ್ ವರ್ಗಗಳು

ಮತ್ತೊಂದು ರೂಪದಲ್ಲಿ ವರದಕ್ಷಿಣೆ ಭೂತ…

ಶ್ರೀ ಅತುಲ್ ಸುಭಾಶ್ ಎಂಬ ಟೆಕ್ಕಿಯೊಬ್ಬ ಒಂದು ರೀತಿಯಲ್ಲಿ ಕ್ರಮಬದ್ಧವಾಗಿ, ಪೂರ್ವ ತಯಾರಿಯೊಂದಿಗೆ, ತನ್ನೆಲ್ಲ ಅಸಹಾಯಕತೆಯನ್ನು ಬರೆದಿಟ್ಟು, ಮಹಿಳಾ ದೌರ್ಜನ್ಯದ ಬಗ್ಗೆ ಅಮೆರಿಕ ಅಧ್ಯಕ್ಷರಿಂದ, ಭಾರತದ ನ್ಯಾಯಮೂರ್ತಿಗಳವರೆಗೆ, ಎಲ್ಲರಿಗೂ ಇಮೇಲ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದು ರಾಷ್ಟ್ರ ವ್ಯಾಪಿ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಸಹ ಈ ಬಗ್ಗೆ ವಿವರಣೆ ಕೇಳಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೭೧) - ಒಮ್ಮೆ ಯೋಚಿಸಿ

ಪತ್ರಿಕೆಗಳಲ್ಲಿ ದೊಡ್ಡದಾಗಿ ಸುದ್ದಿಯಾಗಿದೆ, ಕಾಡಿನಲ್ಲಿ ಬಿಳಿ ಹುಲಿಗಳು ಇನ್ನು ಕೇವಲ ಎರಡೇ ಉಳಿದಿವೆ. ನಾವು ಅವುಗಳನ್ನ ರಕ್ಷಿಸಬೇಕು, ಅದಕ್ಕಾಗಿ ಹೋರಾಟಗಳಾದವು, ಜಾಗೃತಿಯ ಸಂದೇಶದ ರಥಗಳನ್ನ ಎಳೆಯಲಾಯಿತು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಾಷಣಗಳಾದವು ಡಾಕ್ಯುಮೆಂಟರಿ ಚಲನಚಿತ್ರಗಳಾದವು, ಆದರೆ ಇದ್ಯಾವುದೂ ಕೂಡ ಉಳಿದಿರುವ ಆ ಹುಲಿಗೆ ತಿಳಿದೇ ಇಲ್ಲ.

Image

ಗುಜ್ಜೆ ಮಂತೆ ಮೇಲಾರ

Image

ಸಣ್ಣಗೆ ಕತ್ತರಿಸಿದ ಗುಜ್ಜೆ ಹೋಳನ್ನು ಉಪ್ಪು, ಮೆಣಸಿನ ಹುಡಿಯೊಂದಿಗೆ ನೀರು ಹಾಕಿ ಚೆನ್ನಾಗಿ ಬೇಯಿಸಬೇಕು. ಬೆಂದ ಭಾಗಕ್ಕೆ ನುಣ್ಣಗೆ ಬೀಸಿದ ಹಸಿಕಾಯಿಯನ್ನು ಸೇರಿಸಿ ಕುದಿಸಬೇಕು. ಸಣ್ಣಗೆ ಕುದಿಯಲಾರಂಬಿಸಿದಾಗ ಹುಳಿನೀರು ಸೇರಿಸಿ ಕುದಿಸಬೇಕು. ತುಪ್ಪ, ಮೆಂತೆ, ಸಾಸಿವೆ, ಒಣಮೆಣಸು ಹಾಕಿ ಒಗ್ಗರಣೆ ಕೊಡಬೇಕು. ಮೆಂತೆ ಮೇಲಾರ ಸಿದ್ದ.

ಬೇಕಿರುವ ಸಾಮಗ್ರಿ

ಗುಜ್ಜೆ (ಎಳೆ ಹಲಸಿನ ಕಾಯಿ) ಸಣ್ಣಗೆ ಕತ್ತರಿಸಿದ್ದು ,೪ ಕಪ್, ಹಸಿ ತೆಂಗಿನಕಾಯಿ ೧, ೧/೨ ಚಮಚ ಮೆಣಸಿನ ಹುಡಿ, ಹುಣಸೆ ರಸ ೨ ಚಮಚ, ಸಾಸಿವೆ ೧ ಚಮಚ, ಒಣಮೆಣಸು ೧, ತುಪ್ಪ ೧ ಚಮಚ, ಮೆಂತೆ ೧ ಚಮಚ.

ಗುಕೇಶ್ ಗೆಲುವು ಭಾರತದ ಪಾಲಿಗೆ ಸುವರ್ಣ ವರ್ಷ

ಭಾರತದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ದೊಮ್ಮರಾಜು ಅವರು ೧೮ ವರ್ಷ ವಯಸ್ಸಿನಲ್ಲೇ ವಿಶ್ವ ಚೆಸ್ ಚಾಂಪಿಯನ್ ಪಟ್ಟಕ್ಕೆ ಏರಿ ಇತಿಹಾಸ ಸೃಷ್ಟಿಸಿದ್ದಾರೆ. ಅತಿ ಕಿರಿಯ ವಿಶ್ವ ಚಾಂಪಿಯನ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಕ್ರಿಕೆಟ್ ಜನಪ್ರಿಯವಾಗಿರುವ ದೇಶದಲ್ಲಿ ಚೆಸ್ ಕ್ರಾಂತಿಗೆ ನಾಂದಿ ಹಾಡಿದ ವಿಶ್ವನಾಥನ್ ಆನಂದ್ ಈ ಹಿಂದೆ ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು.

Image