ಗುಜ್ಜೆ ಮಂತೆ ಮೇಲಾರ
ಬೇಕಿರುವ ಸಾಮಗ್ರಿ
ಗುಜ್ಜೆ (ಎಳೆ ಹಲಸಿನ ಕಾಯಿ) ಸಣ್ಣಗೆ ಕತ್ತರಿಸಿದ್ದು ,೪ ಕಪ್, ಹಸಿ ತೆಂಗಿನಕಾಯಿ ೧, ೧/೨ ಚಮಚ ಮೆಣಸಿನ ಹುಡಿ, ಹುಣಸೆ ರಸ ೨ ಚಮಚ, ಸಾಸಿವೆ ೧ ಚಮಚ, ಒಣಮೆಣಸು ೧, ತುಪ್ಪ ೧ ಚಮಚ, ಮೆಂತೆ ೧ ಚಮಚ.
ತಯಾರಿಸುವ ವಿಧಾನ
ಸಣ್ಣಗೆ ಕತ್ತರಿಸಿದ ಗುಜ್ಜೆ ಹೋಳನ್ನು ಉಪ್ಪು, ಮೆಣಸಿನ ಹುಡಿಯೊಂದಿಗೆ ನೀರು ಹಾಕಿ ಚೆನ್ನಾಗಿ ಬೇಯಿಸಬೇಕು. ಬೆಂದ ಭಾಗಕ್ಕೆ ನುಣ್ಣಗೆ ಬೀಸಿದ ಹಸಿಕಾಯಿಯನ್ನು ಸೇರಿಸಿ ಕುದಿಸಬೇಕು. ಸಣ್ಣಗೆ ಕುದಿಯಲಾರಂಬಿಸಿದಾಗ ಹುಳಿನೀರು ಸೇರಿಸಿ ಕುದಿಸಬೇಕು. ತುಪ್ಪ, ಮೆಂತೆ, ಸಾಸಿವೆ, ಒಣಮೆಣಸು ಹಾಕಿ ಒಗ್ಗರಣೆ ಕೊಡಬೇಕು. ಮೆಂತೆ ಮೇಲಾರ ಸಿದ್ದ.
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ