ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೊಳಕೆ ಬರಿಸಿದ ಹೆಸರುಕಾಳನ್ನು ದಿನವೂ ತಿನ್ನಿ !

ಮೊಳಕೆ ಬರಿಸಿದ ಧಾನ್ಯಗಳು ಬಹಳ ಆರೋಗ್ಯದಾಯಕವೂ, ಸ್ವಾದಿಷ್ಟವೂ ಆಗಿರುತ್ತದೆ. ಮೊಳಕೆ ಬರಿಸಿದ ಕಾಳುಗಳ ಉಪಯೋಗಗಳು ಅಷ್ಟಿಷ್ಟಲ್ಲ. ಅದರಲ್ಲೂ ಬಹಳ ಪೋಷಕಾಂಶಗಳನ್ನು ಹೊಂದಿರುವ ಹೆಸರು ಕಾಳನ್ನು ಮೊಳಕೆ ಬರಿಸಿ ಸೇವಿಸಿದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗುತ್ತದೆ. ಮೊಳಕೆ ಬರಿಸಿದ ಹೆಸರು ಕಾಳಿನ ಉಪಯೋಗ ಒಂದೆರಡಲ್ಲ. 

Image

ಪಡಿತರ ವಿತರಣ ವ್ಯವಸ್ಥೆಯ ಸಮಸ್ಯೆ ಶೀಘ್ರ ಬಗೆಹರಿಯಲಿ

ರಾಜ್ಯದ ಪಡಿತರದಾರರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ವಿತರಣೆಗಾಗಿ ಕೆಲವು ತಿಂಗಳ ಹಿಂದೆಯಷ್ಟೇ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತ್ತು. ಈ ಮೂಲಕ ತಾಂತ್ರಿಕ ಸಮಸ್ಯೆಗಳು ನಿವಾರಣೆಯಾಗಿ ಪಡಿತರದಾರರಿಗೆ ಕ್ಲಪ್ತ ಸಮಯಕ್ಕೆ ಸಮರ್ಪಕವಾಗಿ ಪಡಿತರ ವಿತರಣೆಯಾಗಲಿವೆ ಎಂಬ ನಿರೀಕ್ಷೆ ಈಗ ಮತ್ತೆ ಹುಸಿಯಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೧೬)- ಆತ್ಮ ಸಾಕ್ಷಿ

ಮನೆಯೊಳಗೆ ಪ್ರವೇಶವಾಗಲು ಸಾಧ್ಯವಾಗ್ತಾ ಇಲ್ಲ. ಬಾಗಿಲಲ್ಲೇ ತಡೆ ಹಿಡಿದು ನಿಲ್ಲಿಸಿ ಬಿಟ್ಟಿದ್ದಾರೆ. ಎದುರಿಗೆ ನಿಂತವರು ಯಾರೋ ವ್ಯಕ್ತಿಗಳಲ್ಲ. ಆತ್ಮಸಾಕ್ಷಿಯೇ ಮುಂದೆ ನಿಂತು ಪ್ರಶ್ನೆಗಳ ಪಟ್ಟಿಯನ್ನು ತಯಾರು ಮಾಡ್ತಾ ಇದೆ. ಎಲ್ಲರಿಗೂ ಹೇಳುವ ನೀನು ಹೇಗಿದ್ದೀಯಾ? ಗಡಿಯಾರದ ಮುಳ್ಳು ಒಂದು ಕ್ಷಣವೂ ಬಿಡದೆ ನಿರಂತರವಾಗಿ ತಿರುಗುತ್ತಿದ್ದರೂ ಸಹ ನೀನು ಹಾಗೆ ಒಂದು ಕಡೆ ನಿಂತಿದ್ದೀಯಾ ತಾನೇ?

Image

ಜೀವನವನ್ನು ರಸಮಯಗೊಳಿಸುವುದು !

ನಾವು ಈ ದಿನ ಹೇಗೆ ಬದುಕಿದರೆ ಜೀವನ ರಸಮಯವಾಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಮಹರ್ಷಿ ಇದರ ಬಗ್ಗೆ ಸುಂದರವಾಗಿ ಹೇಳಿದ್ದಾನೆ. ಯೋಗದ ಅಷ್ಟಾಂಗಗಳಲ್ಲಿ ಎರಡು ಅಂಗಗಳನ್ನು ನೋಡಿದ್ದೇವೆ. ಅವು ಯಮ ಮತ್ತು ನಿಯಮ. ಇವೆರಡೂ ಬಹಳ ಮಹತ್ವದ ಅಂಗಗಳು. ಇವೆರಡನ್ನು ಅನುಸರಿಸಿದರೆ, ಈ ವಿಶಾಲ ಜಗತ್ತಿನಲ್ಲಿ ಕಷ್ಟ ನಷ್ಟಗಳು ಇದ್ದರೂ ಕೂಡ ಸಮಾಧಾನದಿಂದ ಬದುಕಬಲ್ಲೆವು.

Image

ಮಸಾಲಾ ಪಾಪಡ್

Image

ಹಪ್ಪಳಗಳಿಗೆ ಸ್ವಲ್ಪ ಎಣ್ಣೆ ಸವರಿ ಕಾವಲಿಯ ಮೇಲೆ ಹಾಕಿ ತೆಗೆಯಿರಿ. ತಣಿದ ಹಪ್ಪಳಗಳ ಮೇಲೆ ಕ್ರಮವಾಗಿ ಈರುಳ್ಳಿ, ಹಸಿ ಮೆಣಸಿನಕಾಯಿ, ಟೊಮೆಟೊ, ದಪ್ಪ ಮೆಣಸಿನಕಾಯಿ, ಕ್ಯಾರೆಟ್ ಗಳನ್ನು ಸಮನಾಗಿ ಹರಡಿ. ನಂತರ ಮೆಣಸಿನ ಹುಡಿ, ಜೀರಿಗೆ ಹುಡಿ, ಗರಮ್ ಮಸಾಲೆಗಳನ್ನು ಸಮನಾಗಿ ಉದುರಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮಸಾಲಾ ಪಾಪಡ್ ತಯಾರು.

ಬೇಕಿರುವ ಸಾಮಗ್ರಿ

ಅಗಲವಾದ ಹಪ್ಪಳಗಳು - ೫, ಕತ್ತರಿಸಿದ ಈರುಳ್ಳಿ - ಅರ್ಧ ಕಪ್, ಕತ್ತರಿಸಿದ ಟೊಮೆಟೋ - ಕಾಲು ಕಪ್, ಕತ್ತರಿಸಿದ ದಪ್ಪ ಮೆಣಸಿನ ಕಾಯಿ - ಕಾಲು ಕಪ್, ಕತ್ತರಿಸಿದ ಕ್ಯಾರೆಟ್ - ಕಾಲು ಕಪ್, ಕತ್ತರಿಸಿದ ಹಸಿ ಮೆಣಸಿನಕಾಯಿ - ೮ ತುಂಡುಗಳು, ಜೀರಿಗೆ ಹುಡಿ - ೨ ಚಮಚ, ಗರಮ್ ಮಸಾಲೆ ಹುಡಿ - ೧ ಚಮಚ, ಮೆಣಸಿನ ಹುಡಿ - ಅರ್ಧ ಚಮಚ, ಎಣ್ಣೆ - ೩ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೪ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಇದು ತಿರುಕನ ಕನಸಲ್ಲ…!

ನೊಂದವರ ನೋವ ನೋಯದವರೆತ್ತ ಬಲ್ಲರೋ, ಇಲ್ಲದವರ ನೋವನ್ನು ಅರಿಯಲಾಗದ ಸಾಹಿತ್ಯ, ಉಳ್ಳವರ ಕ್ರೌರ್ಯವನ್ನು ಖಂಡಿಸಲಾಗದ ಬರಹ, ಶೋಷಿತರ ಧ್ವನಿಯನ್ನು ಎತ್ತಿಹಿಡಿಯಲಾಗದ ಲೇಖನ, ಶೋಷಕರ ದೌರ್ಜನ್ಯ ಟೀಕಿಸಲಾಗದ ಪ್ರಬಂಧ, ಸಮಾನತೆಯನ್ನು ಮೂಡಿಸಲಾಗದ ಚರ್ಚೆ, ಅಮಾನವೀಯತೆಯನ್ನು ದಿಕ್ಕರಿಸಲಾಗದ ಕವಿತೆ, ಪರಿಸರ ನಾಶವನ್ನು ತಡೆಯಲಾಗದ ಕಥೆ, ಭ್ರಷ್ಟತೆಯನ್ನು ಹೋಗಲಾಡಿಸಲಾಗದ ಅಂಕಣಗಳು, ಸಂಬಂಧಗ

Image