ಹೊನ್ನಕಾಂತಿ
ಕವನ
ಹೊನ್ನ ಕಾಂತಿ
ತುಂಬಿ ಇರಲು
ಕೂಸಿನಂದ ಹೆಚ್ಚಿತು
ತನುವು ಹೊಳೆಯೆ
ಚೆಲುವಿನಿಂದ
ಕಣ್ಣ ರಶ್ಮಿ ಮಿಂಚಿತು
ಹೆತ್ತ ಅಮ್ಮ
ಅಪ್ಪನನ್ನು
ನಮಿಸಿ ನಿತ್ಯ ಬದುಕುತ
ಬಂಧುಗಳಲಿ
ಪ್ರೀತಿಯಿಂದ
ಎರಡು ಮಾತ ಆಡುತ
ಸಹನೆ ಇರಲು
ಊರ ಮಂದಿ
ಇವಳ ಜೊತೆಗೆ ನಲಿಯಲು
ಆಟ ಪಾಠ
ನಡುವೆ ಬೆಳೆದು
ಮನೆಯ ರಶ್ಮಿ ಬೆಳಗಲು
ಹೆಣ್ಣು ಹುಡುಗಿ
ದೇವಿಯಂತೆ
ಎನುತ ಮಂದಿ ಎಲ್ಲರು
ಸವಿಯ ಪ್ರೇಮ
ಇರಲು ಸಹನೆ
ಮದುವೆ ಮಾಡಿ ಕೊಟ್ಟರು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
