ನೀತಿ ಕಥೆ, ಸಣ್ಣ ಕಥೆಗಳು, ಬೋ.ಕು.ವಿ,2025, ನನ್ನ ಬರಹ

ಒಂದು ಕಾಡಿನಲ್ಲಿ ಎರಡು ಮೊಲಗಳು ತುಂಬಾ ದಿನಗಳಿಂದ ಆಕಸ್ಮಿಕವಾಗಿ ಸಿಕ್ಕಿ ಸ್ನೇಹಿತರಾಗಿದ್ದವು. ಅದರಲ್ಲಿ ಒಂದು ಮೊಲ ಗಾತ್ರದಲ್ಲಿ ಸ್ವಲ್ಪ ಚಿಕ್ಕದಿತ್ತು(ಶುಜಿ) ಇನ್ನೊಂದು ಮೊಲ ಸ್ವಲ್ಪ ಮೊಲದ ಆಕಾರದಲ್ಲಿ ವಿಶೇಷವಾಗಿ ವಿಚಿತ್ರವಾಗಿ ಇತ್ತು(ಬಿಜಿ).  ಶುಜಿಗೆ ಬಿಜಿಯ ಮಾತು ನಡಿಗೆ ಪ್ರೀತಿ ,ಆರೈಕೆ ಎಲ್ಲವನ್ನು ಕಂಡು ಇಬ್ಬರು ಒಟ್ಟಿಗೆ ಬದುಕಬೇಕೆಂಬ ಆಸೆಯಿಂದ ಮದುವೆಯಾಗಿದ್ದರು.

ಒಂದು ದಿನ  ಶುಜಿ ಸಂಜೆ ಆದ ತಕ್ಷಣ ತಾನು ಎಷ್ಟು ಸುಂದರಿ ಅಂತ ಬಿಜಿ ಬಾಯಲ್ಲಿ ಕೇಳ್ಬೇಕು ಅಂತ  ಬರೋವರೆಗೂ ಕಾಯ್ತಾ ಇತ್ತು ಕೆಲಸದ ತಾಪತ್ರಯ ವಿಲ್ಲ ಮಳೆಗಾಲ ಬೇಗ ಮನೆಗೆ ಬರುತ್ತದೆ ಎಂದು. ಬಿಜಿ ತುಂಬಾ ಲೇಟ್ ಗಿ ಬಂದು ಗೆಳೆಯರೊಂದಿಗೆ ಊಟ ಆಗಿದೆ ಎಂದು ಮಲಗಿತು. ಸುಸ್ತಾಗಿರಬಹುದೇ ನೋ ಎಂದು ಶುಜಿ ಸುಮ್ಮನಾಯಿತು. ನಾಳೆ ಬೆಳಿಗ್ಗೆ ಎದ್ದಾಗ ಎಂದಿನಂತೆ ಬಿಜಿ ತುಂಬಾ ಲೇಟ್ ಗೆ ಎದ್ದು ಬಿರಬಿರನೆ ಹೊರಟಿದ್ದಾಯ್ತು , ಶುಜಿ  ಹೀಗೆ ಕಾಯ್ತಾ ಇದ್ದೆ ನೀವು ಲೇಟ್ ಗೆ ಬಂದ್ರಿ ಮತ್ತೆ ನಿಮ್ ಬಾಡಿ ಲೀ ರಕ್ತ ಇತ್ತು ಆದ್ರೆ ಗಾಯವಾಗಿರಲಿಲ್ಲ್ಲ ಅಂತ ಕೇಳಿತು , ಅದ ನನ್ ಗೆಳೆಯನಿಗೆ ಅವಘಡ ಆಯ್ತು ಗೊತ್ತಾಗ್ಲಿಲ್ಲ ಅನ್ಸುತ್ತೆ ನಿನಗೆ ಅಲ್ಲಿ ಎಲ್ಲೋ ಗಾಯವಾಗಿರಬೇಕು. ಆದ್ರೆ ನೀವು ಮುಟ್ಟಿದಾಗ ತೆಗಿಬೇಡ ಇನ್ನೂ ಸ್ವಲ್ಪ ದಿನ ಹೀಗೆ ಇರ್ಲಿ ಅಂತ ಕನವರಿಸ್ತಾ ಇದ್ರಿ ಹಾಗೆ ನರಿ ರಕ್ತದ ವಾಸನೆ ಬರ್ತಾ ಇತ್ತು ಎಂದು ಕೇಳಿದ್ಳು, ಬರಿ ತಪ್ಪು ಕಂಡು ಹಿಡಿಯೋದೆ ನಿಂದು ಅಂತ ಜೋರು ಮಾಡಿ ಬಿಜಿ ಹೊರಡ್ತು. ಶುಜಿಗೆ  ಬಿಜಿ ಯಾಕ್ ಹೀಗೆ ಹಾಗಿದಾನೆ , ಮದುವೆಯ ಹೊಸದರಲ್ಲಿ ತುಂಬಾ ಕೇರ್ ಮಾಡ್ತಾ ಇದ್ದ , ಒಳ್ಳೆ ಪ್ರವಚನ ನೀಡೊ ತರಹ ಯಾವಾಗ್ಲೂ ನರಿಗಳಿಂದ ಹೇಗೆ ತಪ್ಪಿಸ್ಕೋಬೇಕು ಅಂದ್ರೆ ನಾವ್ ಹೇಗೆ ಇರ್ಬೇಕು ಅಂತೆಲ್ಲ ಹೇಳುತ್ತಿದ್ದ , ಇದನ್ನು ಕಂಡು ಎಷ್ಟು ಜ್ಞಾನ ಇದೆ ಎಂದು ಕುಶಿಯಾಗ್ತಿದ್ದೆ. ಏನೋ ಅವರ ಗೆಳೆಯರ ಸಮಸ್ಯೆಗೆ ತಾನು ಕೈಜೋಡಿಸಿರೋದ್ರಿಂದ  ಏನು ತರೋದಿಕ್ಕೆ ಆಗ್ತಾ ಇಲ್ಲ ಅಂತ ಹೇಳಿದ್ದಕ್ಕೆ ಎಲ್ಲಾ ತಾನೆ ಹೊರಗೆ ಹೋಗಿ ತಂದು ಬಿಜಿ ಗೆ ಇಡ್ತಾ ಇತ್ತು  , ಆದ್ರೆ ಜೊತೆಗೆ ಮಾತ್ರ ಊಟಕ್ಕೆ ಬರ್ತಿರ್ಲಿಲ್ಲ,ನೀನು ಮಲಗು ನಾನ್ ಆಮೇಲೆ ತಿಂತೀನಿ ಅಂತ ಜಾಸ್ತಿ ಹೇಳ್ತ ಇತ್ತು , ವಿಶೇಷ ದ್ರಾಕ್ಷಿ ಏನಾದ್ರೂ ಇದ್ದಾಗ ಮಾತ್ರ ಇಲ್ಲ ಉಷಾರಿಲ್ದೆ ಇದ್ದಾಗ ಅಥವಾ ತನ್ನ ಗೆಳೆಯರು ಏನೋ ವಿಷಯಕ್ಕೆ ಮೋಸ ಮಾಡಿದ್ರು ಅಂತ ಬೆಳಿಗ್ಗೆ ಇಂದ ಮನೆಯಲ್ಲೇ ಇದ್ದಾಗ ಮಾತ್ರ ರಾತ್ರಿ ಊಟ ಒಟ್ಟಿಗೆ ಮಾಡ್ತಾ ಇದ್ದದು, ಶುಜಿ ಇಂತ ದಿನಗಳಲ್ಲಿ ಬಿಜಿಗೆ ಇಷ್ಟವಾಗಿದ್ದೆ ತಂದು ಕೊಡ್ತಾ ಇದ್ಲು ಹಾಗಾಗಿ ಕುಷಿ ಇಂದ ಮನೇಲೆ ಇರ್ತ ಇದ್ರು. ಮತ್ತದೇ ಬಾಕಿ ದಿನಗಳಲ್ಲಿಅದೇ ರಾಗ ಅದೇ ಹಾಡು.

ಹೀಗೊಂದು ದಿನ ನಾನೇ ಮನೆಗೆ ಊಟ ತರ್ತೀನಿ ಇವತ್ತು ನೀನು ರೆಸ್ಟ್ ಮಾಡು ಅಂತ ಹೇಳಿತು , ಬೆಟ್ಟ ಇಷ್ಟ ಅಲ್ವಾ ಹತ್ರ ಹೋಗೋಣ್ವ ಅಂತ ಕೇಳ್ತು , ಕುಶಿಯಾದ  ಶುಜಿ  ಒಪ್ಪಿತು. ನಾನ್ ಬೇಡ ನಿನ್ ಗೆಳರಿಗೆ ಹೇಳು ಮಾತಾಡಿಸ್ಕೊಂಡು ಬಾ ಅಂತ ಹೇಳಿತು ಸರಿ ಒಳ್ಳೇದಾಯ್ತು ಅಂತ ತನ್ನ ಹಳೇ ಬಳಗ ಹುಡುಕಿ ಕೊಂಡು ಹೋಯ್ತು, ಅಲ್ಲಿ ಫ್ರೆಂಡ್ಸ್ ಮೀಟ್ ಆಗಿ  ಶುಜಿ ಕುಶಿಗೆ ಪಾರವೇ ಇಲ್ಲ ಯಾಕಂದ್ರೆ ತನ್ನ ಗಂಡ ಬೆಟ್ಟದತ್ರ  ಭಯ ಇಲ್ದೇ  ಹೋಗೋಕೆ ಹೇಳಿದ್ದು  ನೆನೆದು , ನಂತರ ತನ್ನ ಫ್ರೆಂಡ್ಸ್ ಮೀಟ್ ಆಗಿ ವಾಪಸ್ಬಂತು , ಬಂದ ತಕ್ಷಣ ಬಿಜಿ ಮಲಗಿತ್ತು ಊಟಕ್ಕೆ ಏನು ಇರಲಿಲ್ಲ ,  ಬಲು ಜೋರಾಗಿ ನಾನ್ ಹಸಿವಿಂದ ಇದ್ದೀನಿ ನನ್ನ ಬಗ್ಗೆ ನಿನಗೆ ಕಾಳಜಿ ಇಲ್ಲ ಇಷ್ಟೊತ್ತು ಬೇಕಾ ಮನೆಗೆ ಬರೋದಿಕ್ಕೆ  ಶುಜಿ ಗೆ  ಬೇಜಾರಾಯ್ತು, ಇವನೇ  ಅಲ್ವಾ ಹೇಳಿದ್ದು ಯಾಕೆ ಆಡ್ತಾ ಇದ್ದಾನೇ  ಅಂತ ಗೊತ್ತಾಗ್ಲಿಲ್ಲ ಇದು ಮೊದಲನೇ ಸಲ ಅಲ್ಲ ಏನು ಅರ್ಥ ಆಗ್ದೇ, ನೀವೇ ಅಲ್ವಾ ಕಳಿಸಿದ್ದು ಅಂದ ತಕ್ಶಣ "ನನಗಂತೂ ಹೊಸವಾಗಿದೆ ನಾನು ಆಚೆ ಹೋಗ್ತೀನಿ" ಅಂತ ಜೋರಾಗಿ ಓಡಿ ಹೋದ, "ಯಾಕೆ ನಾನು ಬೇಗ ಮಾಡ್ತೀನಿ ಬನ್ನಿ ನೀವೇ ಹೇಳಿದ್ದಕ್ಕೆ ಹೋಗಿದ್ದು"  ಅಂತ ಅಳುತ್ತಾ ಶುಜಿ ಹೇಳುವಾಗ ತಡೆದ ಬಿಜಿ "ನಾನು ನಿನ್ನನ್ನು ಜಾಸ್ತಿ ಪ್ರೀತಿಸ್ತೀನಲ್ಲ ಅದಕ್ಕೆ ಎಷ್ಟೋ ಮನೆಯಲ್ಲಿ ಎಲ್ಲೂ ಕಳಿಸೋದೇ ಇಲ್ಲ ಗೊತ್ತಾ" ಅಂತಲ್ಲ ಜೋರಾಗಿ ಬೈ ದು ಮನೆಯಿಂದ ಆಚೆ ಹೋಯ್ತು. ಮತ್ತೆ ಸಂಜೆ ಬಂದು ನನಗೆ ಊಟ ಬೇಡ ನಾನು ಹೊಟ್ಟೆ ತುಂಬಿದೆ ಅಂತ ಹೇಳಿ ಗೊರಕೆ ಹೊಡೆಯುತ್ತಾ ಮಲ್ಕೊಂತು. ಇವಳು ಊಟ ಮಾಡೋದಿಕ್ಕೆ ಅಂತ ಹೋದ್ರುನು ಬಿಡದೆ ಬೇಗ ಮಲಕ್ಕೋ ಯಾವಾಗ್ಲೂ ಹೀಗೆ ನೀನು ಇಷ್ಟೊತ್ತು ಮಲಗೋದು ಅಂತ ಬೈತಾ ಬೈತಾ ನಿದ್ರೆ ಮಾಡ್ತಾ, ಗೊರ್ಕಿ ಶಬ್ದದಲ್ಲೇ ತುಂಬಾ ಚೆನ್ನಾಗಿ ಹೊಟ್ಟೆ ತುಂಬಾ ಊಟ ಮಾಡ್ಕೊಂಡು ಬಂದಿದೆ ಬಿಜಿ ಅಂತ  ಶುಜಿಗೆ  ಗೊತ್ತಾಯ್ತು.

ಹಾಗೆ ಮಾರನೇ ದಿನಾಲೂ ಏನೋ ಸಣ್ಣ ವಿಷಯಕ್ಕೆ ಅಥವಾ ಕೇಳಿದ್ ತಕ್ಷಣ ನೀರಿಲ್ಲ,ಗೆಳಯ ಹತ್ರ ಎಲ್ಲ ಸರಿಹೋದ್ರೆ ನೀನು ಮನೇಲಿ ಇರಬಹುದು ನಾನು ಎಲ್ಲ ತರ್ತೀನಿ ಅಲ್ವಾ ಅಂತ ನೆಪ ಮಾಡಿಕೊಂಡು ಹೋಗಿ ಸಂಜೆ ವಾಪಸ್ ಬಂತು ಹೊಟ್ಟೆ ತುಂಬಿಸಿಕೊಂಡು. ಶುಜಿ "ನಿಮಗೆ ವಿಷಯ ಗೊತ್ತಾಯ್ತ ನಾನು ಮೊನ್ನೆ ಹೋಗಿದ್ನಲ್ಲ ಆ ಬೆಟ್ಟದ ಹತ್ರ ನರಿ ಕಾಟ ಜಾಸ್ತಿ ಅಗಿದ್ಯಂತೆ"  ನಿದಾನವಾಗಿ ಹೇಳ್ತ ಇದ್ಲು , ಅಷ್ಟ್ರಲ್ಲಿ ಬಿಜಿ "ಸರಿ ಅದೆಲ್ಲ ನಂಗ್ಯಾಕೆ ನೀನು ಯಾರೋ ಹೇಳಿದ್ದು ಹೇಳ್ಬೇಡ ನೀನು ಹೋಗಿದ್ಯಲ್ಲ ಏನಾದ್ರೂ ಹಾಗೆ ಅನ್ನಿಸ್ತಾ"  ಅಂತ ಕೋಪದಲ್ಲಿ ನೋಡಿ  "ನೋಡು ನಾನ್ ನಿನ್ನ ಅಲ್ಲಿ ಕಳ್ಸಿದ್ದು ಅದ್ಕೆ ಅಂತ ಅನುಮಾನ ನಿನಗೆ " ಅಂತ ಟೀಕಿಸ್ತಾ ಮಲಗೋಕೆ ಸಿದ್ಧವಾಯ್ತು . ಶುಜಿ ಉತ್ತರಿಸುತ್ತಾ " ಹೋಗೋಕೆ ಹೋಗ್ಬೇಡ ಅಂತ ಅಷ್ಟೇ ಹೇಳಿದ್ದು , ನೀನು ಮುಂಚೆ ಕಳ್ಸಿದ್ದು ಒಳ್ಳೆದಾಯ್ತು ಇವತ್ತು ನೆನ್ನೆ ಹೋಗಿದ್ರೆ ಕಷ್ಟ ಆಗೋದು , ಎಷ್ಟೋ ವರ್ಷಗಳಿಂದ ತುಂಬಾ ನಿಗೂಢ ಜಾಗ ಆಗಿತ್ತು ಮೊಲಗಳಿಗೆ ,ಯಾವುದೇ ನರಿಗೂ ತಿಳಿಯೋದಿಕ್ಕೆ ಆಗ್ತಾ ಇರ್ಲಿಲ್ಲ ಹೇಗೆ ಗೊತ್ತಾಯ್ತು ಅನ್ನೋದೇ ಗೊತ್ತಾಗ್ತಿಲ್ಲ ಅಂತ " ಗೊಣಗುತ್ತಾ ಯೋಚಿಸ್ತಾ ಇತ್ತು . ನಿನಗೆ ಮೊದಲೇ ಸಂಶಯ ಬರ್ಲೆ ಬೇಕು ಬಿಡು , ಮಲಗೋಕೆ ಬಿಡು ಮತ್ತೆ ಈ ವಿಚಾರ ಹೇಳ್ಬೇಡ ಅಂತ ಹೇಳಿ ಮಲಗಿದ ಒಂದೇ ನಿಮಿಷಕ್ಕೆ ನಿದ್ರೆಗೆ ಜಾರಿತು ಬಿಜಿ.

ಒಂದು ದಿನ ವಿಚಿತ್ರ ಅನ್ಸಿದ್ದು ತೋಳಗಳು ಕೂಗ್ತಾ ಇದ್ದಾಗ ಎರಡು ನಿಮಿಷದಲ್ಲಿ ಬರ್ತೀನಿ ಅಂತ ಹೋಗಿದ್ದ ಬಿಜಿ ಮೂರ್ ನಾಲಕ್ ಗಂಟೆ ಆದ್ರು ಬರ್ಲಿಲ್ಲ ಯಾಕೋ ಸರಿ ಅನಿಸುತ್ತಿಲ್ಲ ಇನ್ನೊಂದಿನ ತೋಳ ಹೋಗಿದ್ದಾಗ ಬಿಜಿ ಹೋದ  ತಕ್ಷಣ ತುಂಬಾ ಭಯದಿಂದನೆ ಹಿಂದೇನೆ ಹೋಯ್ತು ಬಿಜಿ ತೋಳದ್ ಜೊತೆ ಸ್ವಲ್ಪ ದೂರದಲ್ಲಿ ನಿಂತು ಮಾತಾಡ್ತಾ ಇದ್ದಿದ್ದನ್ನು ನೋಡ್ತು, ಶುಜಿಗೆ ಏನೋ ತಪ್ಪೂ ಅನ್ನುಸ್ತಿದ್ದಿದ್ದು ಏನ್  ಆಗ್ತಾ ಇದೆ ಅಂತ ಗೊತ್ತಾಗ್ದೆ  ಇರ್ಲಿ ಬಿಡು ಮನೆಗೆ ಬಂದಾಗ ಕೇಳೋಣ ಅಂತ ವಾಪಸ್ ಬಂತು ಬಿಜಿ ಮನೆಗೆ ಬಂದಾಗ "ಯಾಕೆ? ಎಲ್ಲೋಗಿದ್ರಿ ಅಂತ ಎಲ್ಲಾ ಕೇಳುದ್ರೆ" ನಿನಗೆ ಯಾಕೆ ಅಂತ ಜೋರಾಗಿ ಶುರು ಮಾಡಿದ್ದ ಬಿಜಿ ಜೋರಾಗಿ ತೇಗಿ ನಿನಗೆ ತುಂಬಾ ಸಂಶಯ ನಂಗೆ ಅದಕ್ಕೆ ನಿನ್ನ  ಕಂಡ್ರೆ ಇಷ್ಟ ಆಗಲ್ಲ ಅಂತಲ್ಲ ಬೈದು ಮಲಗ್ತು, ನಾನ್ವಿ ಆಕ್ದೆ ಬಂದಾಗ ನೋಡಿದೆ ಬಿಜಿ ಮಾತಾಡ್ತಿದ್ದುಅಂತ  ಹೇಳಿದ್ರು ಅದು ನಿನ್ನ ಭ್ರಮೆ ಪ್ರೂಫ್ ತೋರ್ಸು ಅಂತ ಹೇಳಿ ಮಲಗಿತು. ನಿಜ ತಾಳ್ಮೆ ಹಾಳಾಗ್ತಾ ಬಂತು, ಯಾಕೆ ಇಷ್ಟೊಂದು ಸುಳ್ಳು ವಿಷಯ ಅಂತಾನೆ ಅರ್ಥ ಆಗ್ತಿರ್ಲಿಲ್ಲ ಒಂದಿನ ಹೀಗೆ ಕಾಯ್ದುಕೊಂಡು ತಿಂಗಳುಗಟ್ಟಲೆ ಯಾವುದೇ ನರಿ ಕೂಗ್ದೆಯಿದ್ದ ಕಾರಣ ಸುಮ್ನೆ ಮರ್ತ್ಬಿಟ್ಟಿತ್ತು, ಬಿಜಿನು  ಚೆನ್ನಾಗಿ ಮಾತಾಡಿಸ್ಕೊಂಡು ಎಲ್ಲಾದನ್ನು ಸ್ವಲ್ಪ ಹೆಲ್ಪ್ ಮಾಡಿಕೊಂಡು ಸಹಾಯ ಮಾಡಿಕೊಂಡು ಚೆನ್ನಾಗೆ ಇದ್ದ ಮತ್ತೆ ಒಂದಿಸ ನೀನ್ಯಾಕೆ ಇತ್ತೀಚಿಗೆ ಎಲ್ಲೂ ಹೋಗ್ತಾನೆ ಇಲ್ಲ ನನ್ ಫ್ರೆಂಡ್ ಒಬ್ಬ ಒಂದು ಕ್ಯಾರೆಟ್ ಹೊಲ ಎಲ್ಲ ನೋಡಿದನಂತೆ ಹೋಗೋಣ್ವಾ ಅಂತ ಕೇಳ್ದ ಶುಜಿಗೆ ಏನೋ ಇದೆ ಅನ್ನಿಸಿದ್ರೂ ತಪ್ಪು ತಿಳಿಬಾರ್ದು ಅಂತ ಮಾತಾಡದೆ ಹೊಯ್ತು , ಅಲ್ಲೆಲ್ಲ ತಿರುಗಿ ಚೆನ್ನಾಗಿ ತಿಂದು ಇಡೀ ದಿನ ಖುಷಿಯಾಗಿದ್ದರು. ತೋಳ ಬಂತು ಅನ್ಸುತ್ತೆ ಅಂತ  ಭಯಪಟ್ಟು ಬಿಜಿ ಬೇಗ ಹೋಗೋಣ ನಡಿ ಮನೆಗೆ ಅಂತ ತುಂಬಾ ಅರ್ಜೆಂಟ್ ಮಾಡಿ ಹೊರಟ್ರು . ಮನೆ ಹತ್ರ ಬಂದಾಗ ನಾನು ಬರ್ತೀನಿ ಏನು ಮಲಗಿರು ಅಂತ ಕಳಿಸ್ತು. ಬಿಜಿ ಬುದ್ದಿವಂತ ಹೇಗೆ ತಪ್ಪಿಸಿಕೊಳ್ಳೋದು ಅಂತ ಹೇಳಿಕೊಟ್ಟವನು ಇಷ್ಟೊಂದು ಎದ್ರಲ್ವಲ್ಲ ಅದರಲ್ಲೂ ಯಾಕೆ ಇಷ್ಟು ಅರ್ಜೆಂಟ್ ಆಗಿ ಕಳ್ಸಿದ್ದು ನನ್ನ ಅಂತಲ್ಲ ತಾಳ್ಮೆಯನ್ನ ಹಾಳ್ ಮಾಡ್ಕೊಂಡಿದ್ದ ಶುಜಿ ಸರಿ ಅಂತ ಹೇಳಿ ಅಲ್ಲೇ ಮರದ ಹತ್ರ ನಿಂತ್ಕೊಂಡು ಮತ್ತೆ ಬಿಜಿನಾ ಫಾಲೋ ಮಾಡ್ತು ಅಲ್ಲಿ ಇನ್ನೊಂದು ತೋಳ ಹತ್ರ ಮಾತಾಡ್ತಾ ನಿಂತಿದ್ದನ್ನ ನೋಡ್ತು ಇವತ್ತು ಮನಸ್ಸು ಬಾರಾವಾಗಿತ್ತು ಹಾಗೆ ಬಿಡಲೇಬಾರದು ಇದು ತುಂಬಾ ಸಲ ಪ್ರೂಫ್ ಕೇಳು ಅಂತೆಲ್ಲ ಬ್ಲಾಕ್ ಮೇಲ್ ಮಾಡಿದ್ದು ಅಂತ ಕಂಫಾರ್ಮ್ ಆಯ್ತು ಸರಿ ಅಂತ ಹೇಳಿ ಹತ್ರ ಹೋಗಿ ಜೋರಾಗಿ ಬೈದು ಮತ್ತೆ ಮನೆಗೆ ಬಂತು,  ಶುಜಿಗೆ ತೋಳದತ್ರ ಅಷ್ಟೊಂದು ಏನಿತ್ತು ಏನಿರಬಹುದು ಅನ್ನೋ ಕುತೂಹಲಕ್ಕಿಂತ ಸುಳ್ಳೇ ಹೇಳ್ತಾ ಇದ್ದಾನೆ ದಿನ ಅನ್ನೋ ತಲೆನೋವು ಜಾಸ್ತಿಯಾಗಿ ಕಿರ್ಚಿ ಬೈದು ಬಂದಾಗಿತ್ತು ತದೇ ಐದು ನಿಮಿಷದಲ್ಲಿ ಬಿಜಿ ಮನೆಗೆ ಬಂತು ಏನು ಹಾಗೆ ಇಲ್ಲ ಅನ್ನೋತರ ತುಂಬಾ ಮುದ್ದು ಮಾಡೋದಿಕ್ಕೆ ಶುರು ಮಾಡ್ತು  ಶುಜಿ  ಹತ್ತು ಹತ್ತು ಕಣ್ಣೆಲ್ಲ ಊದಿತ್ತು ಬಿಜಿ ನಾನು ಆ ನರೀನ ತುಂಬಾ ಉಪಾಯದಿಂದ ಓಡಿಸುವುದಕ್ಕೆ ಪ್ರಯತ್ನ ಮಾಡ್ತಾ ಇದ್ದೆ ನೀನು ಬಂದಿದ್ದು ಒಳ್ಳೇದೇ ಆಯ್ತು ನೀನು ಕಿರಚಿದಕ್ಕೆ ಇಷ್ಟೊಂದು ಸ್ಟ್ರಾಂಗ್ ಇರ್ತಾರೆ ಅಂತಾನೋ ಗೊತ್ತಾಗಿರುತ್ತೆ ನಾನು ತುಂಬಾ ಪ್ಲಾನ್ ಮಾಡಿ ಕಳಿಸೋದಿಕ್ಕೆ ತಯಾರು ಮಾಡಿದ್ದೆ. ಏನು ಸಬೂಬು  ಕೊಟ್ಟರು ಒಪ್ಪಲಾರದ ಸ್ಥಿತಿಯಲ್ಲಿತ್ತು ಶುಜಿ ,ಸರಿ ಹೇಗೂ ಬದುಕಬೇಕು ಅಂತ ಸುಮ್ಮನೆ ಏನು ಮಾತನಾಡದೆ ಮಲಗಿದ್ರೆ  ನಿದ್ರೆ ಬರ್ತಾ ಇಲ್ಲ ಬಿಜಿ ಮಾತ್ರ ಇಡೀ ವನ ಕೇಳೋ ಹಾಗೆ ಗೊರಕೆ. ದಿನ ರಾತ್ರಿ ಇದೇ ರೀತಿ ಎಲ್ಲ ಬಿಜಿ ಇಚ್ಛೆಯಂತೆ ಆಗ್ಬೇಕು ಆದ್ರೆ ಹೇಳೋದು ಎಲ್ಲ ಶುಜಿ ತರಹನೇ ನಡಿಯುತ್ತೆ ಅಂತ .

ಆದರೆ ಹೀಗೊಂದು ರಾಮನವಮಿಯ ದಿನ ರಾಮನ ಪುಣ್ಯಭೂಮಿಯಲ್ಲಿ ರಾಮ ಜನ್ಮ ಸ್ಥಳದಲ್ಲಿ ಹುಟ್ಟಿದ್ದಕ್ಕಾಗಿ ಕೆಟ್ಟವರಿಗೆ ಶಿಕ್ಷೆ ಆಗೋದು ಬೇರೆ ವಿಷಯ ಆದ್ರೆ ಸೃಜನರಿಗೆ ಅರಿವು ಮೂಡಿಸೋಕೆ ಅಂತಾನೆ ಇರೋದು ನಮ್ಮರಾಮ ಕೊನೆ ಪಕ್ಷ ಒಳ್ಳೆಯವರಿಗೆ ಮತ್ತೊಬ್ಬರಿಗೆ ಸಹಾಯ ಮಾಡಲು ಅವಕಾಶ ಸಿಗದೇ ಇದ್ರು, ಕೆಟ್ಟದ್ದಂತೂ ಮಾಡೋದಿಕ್ಕೆ ಬಿಡೋದಿಲ್ಲ ಅದರಿಂದ ಪುಣ್ಯ ಫಲ ಈ ಜನ್ಮದಲ್ಲಿ ಪಡ್ಕೋಣೋ ಅವಕಾಶ ಕೊಡ್ತಾನೇ ರಾಮ ಅಂತದ್ರಲ್ಲಿ ದುರ್ಜನರಿಂದ ಮೋಸ ಹೋಗದೆ ಇರೋದಕ್ಕೆ ಒಳ್ಳೆ ಕಾರ್ಯರೂಪ ಮಾಡಿ ಅರಿವು ಮೂಡಿಸುತ್ತಾನೆ.

ಎಲ್ಲರೂ ರಾಮನವಮಿ ಭಜನೆ ಅಂತ ಅಂತಿದ್ರೆ ಬಿಜಿ ಮಾತ್ರ ಏನೋ ತುಂಬಾ ದೊಡ್ಡ ಕೆಲಸ ಇರೋತರ ಹೋಗ್ತಾ ಇದ್ದ ಆದರೆ ಈ ವರ್ಷ ಎಲ್ಲೂ ಹೋಗೋದಿಲ್ಲ ರಾಮನ ಬಜಿಸ್ತೀನಿ  ಅಂತ ಹೇಳಿದ್ದ. ವಿಜಿಕೆ ಎಲ್ಲಿಲ್ಲದ ಖುಷಿ ಬೆಳಿಗ್ಗೆ ಎದ್ದು ಎಲ್ಲಾ ತಯಾರಿ ನಡೀತಾ ಇತ್ತು ಹೂವಗಳನ್ನು ತರುತ್ತೇನೆ ಎಂದು ಹೋಗಿದ್ದ ಬಿಜಿ ಸ್ವಲ್ಪ ರಕ್ತದ ಕಲೆಗಳೊಂದಿಗೆ ವಾಪಸ್ ಬಂದಿದ್ದ. ಮಂತ್ರ ಮುಗ್ಧಳಾದ ವಿಜಿ, ಎಲ್ಲಾದನ್ನು ನೆನಪಿಸಿಕೊಳ್ಳುವುದಕ್ಕೆ ಶುರು ಮಾಡಲು ಪ್ರತಿ ಸಲ ನನ್ನನ್ನು ಚೆನ್ನಾಗಿ ಮಾತನಾಡಿಸಿದ ಮಾರನೇ ದಿನ ತುಂಬಾ ಜಗಳ ಮಾಡುತ್ತಾರೆ, ನಂತರ ಜಗಳ ಮಾಡಿಕೊಂಡಿದ್ದನ್ನು ಜಾಸ್ತಿ ರಕ್ತದ ಕಲೆ ಇದ್ದರೂ ಪೆಟ್ಟಾಗಿದ್ದಂತೆ ನಟಿಸುತ್ತಾರೆ ಆದರೆ ಗಾಯಗಳೇ ಇರುವುದಿಲ್ಲ ಯಾವಾಗ ಜಾಸ್ತಿ ಹೊತ್ತು ಅಥವಾ ಈ ರಕ್ತದ ಕಲೆ ಅಥವಾ ನೋವಾದಂತೆ ಸುಸ್ತಾದಂತೆ ನಟಿಸಿದಾಗ ಎಲ್ಲೋ ನನ್ನ ಗೆಳೆಯರ ಅಥವಾ ಬಳಗದ ಸಾವಿನ ಸುದ್ದಿ ಕೇಳ್ತಾ ಇದ್ದೀನಿ ಅದರಲ್ಲೂ ಇತ್ತೀಚೆಗೆ ಕೇಳಿದ ಒಂದು ವಿಚಿತ್ರ ಘಟನೆ ಅಂದರೆ ತೋಳಗಳು ನಾಲ್ಕರಿಂದ ಐದು ಒಟ್ಟಿಗೆ ಮೊಲಗಳನ್ನು ತಿಂದವಂತೆ, ಅದರಲ್ಲಿ ಒಂದು ತೋಳ ಸ್ವಲ್ಪ ಬಿಳಿಯ ಬಾಲದಂತೆ ಕಂಡಿತಂತೆ ಇದು ಎಲ್ಲೋ ಮಿಸ್ ಆಗ್ತಿದೆ ಅನ್ನೋ ಅನುಭವ ಬಿಜಿಗೆ ಬಂತು ಸರಿ ನಾನು ಮಾತನಾಡುವುದನ್ನು ಈಗಾಗಲೇ ಬೇರೆ ಅರ್ಥದಲ್ಲಿ ನಿಭಾಯಿಸಿ ನನ್ನನ್ನೇ ದೂರು ಮಾಡುವ ಕೌಶಲ್ಯ ಬಿಜಿಗೆ ಇದೆ ಅನ್ನೋ ಅರಿವು ಆಗಲೇ ಮೂಡಿತ್ತು ಹಾಗಾಗಿ ಇನ್ನು ಮಾತನಾಡುವುದಿಲ್ಲ ಎಂದು ಸುಮ್ಮನಾದಳು. ಹಾಗೆ ಸ್ವಲ್ಪ ಹೊತ್ತು ಕಳೆದ ನಂತರ ಇನ್ನೊಂದು ವಿಚಾರ ನೆನೆದಳು ಬಿಜಿ ಯಾವಾಗಲೂ ನನ್ನನ್ನು ಬೇಜಾರು ಮಾಡಿಸಿದಾಗ ಅವರಿಗೆ ಏನೋ ಒಂದು ದುರ್ಘಟನೆ ಅಥವಾ ನೋವು ಆಗುತ್ತೆ ಅಂತ ಹೇಳ್ತಾ ಇದ್ದಿದ್ದು ನೆನಪಾಯ್ತು ಅದು ಕೆಲವೊಂದು ಸಲ ಆಗಿತ್ತು ಕೂಡ. ಶುಜಿ ಮೊದಲ ಮೊದಲೆಲ್ಲಾ ನಾನು ತುಂಬಾ ನಿಷ್ಠಾವಂತ ಅಲ್ಲವಾ ಅದಕ್ಕೆ ನನ್ನ ನೋಯಿಸಿದ್ರೆ ಹೀಗೆ ಆಗಬೇಕು ನಿಮಗೆ ಅಂತಲ್ಲ ತಮಾಷೆ ಮಾಡಿ ನಕ್ ಬಿಡ್ತಿತ್ತು ಆದರೆ ಕಾಲಕ್ರಮೇಣ ಇಲ್ಲ ನಿಮಗೆ ನನ್ನ ಬೆಳಗ್ಗೆ ನೋವಿಸೋದ್ರಲ್ಲಿ ಇವತ್ತು ನಿಮಗೆ ನೋಡಿ ಏನಾದರೂ ಒಂದು ಪ್ರಾಬ್ಲಮ್ ಆಗುತ್ತೆ ಅಂತಲ್ಲ ಶಾಪ ಹಾಕು ಮಟ್ಟಿಗೆ ಬದಲಾವಣೆ ಆಗಿತ್ತು.

ಇದಾದ ನಂತರ ಬಿಜಿಯನ್ನು ಕುರಿತು 'ಯಾಕೆ ಏನು ದೊಡ್ಡ ಪ್ಲಾನ್' ಅಂತ ಕೇಳ್ತು  ಹಾಗೇನಿಲ್ಲ ಏನ್ ಮಾತಾಡ್ತಾ ಇದ್ದೀಯಾ ನಿನಗೆ ಹಬ್ಬ ಮಾಡು ಅಂತ ಅಂದಿದ್ದೆ ತಪ್ಪಾಯ್ತ ಶುರುವಾಯ್ತಾ ನಿಂದು ಅಂತ ಕೇಳ್ದ ಸರಿ ಯಾಕೋ ಮನಸ್ಸು ಬೇಜಾರ್ ಅನಿಸ್ತಾ ಇದೆ ಏನೋ ತಪ್ಪಾಗಬಹುದು ಹುಷಾರಾಗಿರಿ ಅಂತ ವಿಜಿ ಬಿಜಿಗೆ ಹೇಳ್ತು ಅವಾಗ ಖುಷಿಯಿಂದ ನೀನಿರುವಾಗ ನನಗೆ ಏನು ಆಗಲ್ಲ ಬಿಡು ಅಂತ ಹೇಳಿ ಸುಮ್ನೆ ಆಯ್ತು.  ಕೆಟ್ಟ ಯೋಚನೆ ಮಾಡಬಾರದು ಅಂತ  ಶುಜಿನು  ಸುಮ್ನಾಗ್ ಬಿಡ್ತು .

ಅವತ್ ಸಂಜೆ  ತುಂಬಾ ಧೂಳು ಎದ್ದೇಳೋ ತರ ಬೆಟ್ಟದ ಮೇಲೆ ಕಾಣಿಸ್ತು ಹಾಗೆ ಸ್ವಲ್ಪ ಹೊತ್ತು ನೋಡ್ತಾ ಇದ್ರೆ ಏನು ತೊಂದರೆ ಆಗಿದೆ ಅಥವಾ ಏನೋ ನಡಿತಾ ಇದೆ ಅನ್ನೋದು ಗೊತ್ತಾಗಿದೆ ವಿನಹ ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ ಅದು ಯಾವುದೇ ನರಿಯ ಅಥವಾ ಬೇರೆ ಪ್ರಾಣಿಗಳ ಸುಳಿವಲ್ಲ ಅನ್ಸಿದ್ರಿಂದ ಇವು ಬೆಟ್ಟದ ಕೆಳಗೆ ಇದ್ದಿದ್ರಿಂದ ಸುಮ್ಮನಾದ್ರು ಸ್ವಲ್ಪ ಹೊತ್ತಲ್ಲೇ ತೋಳಗಳು ತುಂಬಾ ಜೋರಾಗಿ ಕಿರ್ಚಿದ್ದು ಕೇಳಿಸ್ತಾ ಇತ್ತು . ಹಾಗೆ ಆ ಟಕಟಕ ಶಬ್ದ ಮಾಡಿಕೊಂಡು ಬರ್ತಾ ಇದ್ದ ಕುದುರೆಗಳು ಬೆಟ್ಟದಿಂದ ಕೆಳಗಿದ್ದಿದ್ದು ಗೊತ್ತಾಯ್ತು ವಿಚಿತ್ರ ಅನ್ಸುದ್ರೆ ಇವರು ನಾವೇ ಯಾವತ್ತು ನೋಡದೆ ಇರೋ ವಿಚಿತ್ರವೇಶ ದಾರಿಗಳು ಕುದುರೆ ಮೇಲೆ ಏರಿ ಬರ್ತಾ ಇದ್ರು, ಅವರು ಎಲ್ಲರೂ ಕಾಣಿಸಿದ  ತಕ್ಷಣ  ಮೊಲಗಳಿಗೆ ಒಂದೇ ರೀತಿ ಭಯ ಆಗಿ ಸಂಧಿಯಲ್ಲೆಲ್ಲಾ ಸೇರಿಕೊಂಡವು , ಆದರೆ ಏನು ಶಬ್ದ ಆದಂಗೆ ಕೇಳಿಸ್ತು, ಏನೋ ವಸ್ತು ಜೋರಾಗಿ ಕೆಳಗೆ ಬಿದ್ದ ತರಹ ನರಳೋ  ತರಹ , ನಂತರ  ಮೌನ ಆವರಿಸಿತು ಸ್ವಲ್ಪ ಹೊತ್ತು ಆದ್ಮೇಲೆ ಮೊಲಗಳೆಲ್ಲ ಹೊರಗೆ ಬಂದು ನೋಡುದ್ರೆ ಆಶ್ಚರ್ಯ ಒಂದು ಕಾಯುತ್ತಿತ್ತು ಕುದುರೆಗಳ ಮೇಲೆ ನರಿಗಳು ಹೋಗಿದ್ದು ಗೊತ್ತಾಗಿತ್ತು ಇಲ್ಲಿ ಮೊಲದ ಬಾಯಲ್ಲಿ ಇನ್ನೊಂದು ಮೊಲ ಇದ್ದಂತೆ ಇರೋ ಹಾಗೆ ಬಿದ್ದಿತ್ತು ಎಲ್ಲದಕ್ಕೂ ಆಶ್ಚರ್ಯ ಅನ್ನಿಸಿ ಹತ್ತಿರ ಹೋಗಿ ಬದುಕ್ಸೋದಿಕ್ಕೆ ಪ್ರಯತ್ನ ಮಾಡುವಾಗ ಒಂದು ಮೊಲ ಇನ್ನೊಂದು ಮೂಲದ ಬಾಯಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿತ್ತು ಆದರೆ ಕಚ್ಚಿದ್ದ ಮೊಲ ವಿಚಿತ್ರವಾಗಿತ್ತು ಮತ್ತು ವಿಪರೀತ ಗಾಯವಾಗಿತ್ತು ಬಾಯಿ ಮಾತ್ರ ಬೆಳ್ಳಗಿದ್ದಾರೆ ಬಾಲ ಮತ್ತು ಅರ್ಧ ದೇಹ ನರಿಯ ರೀತಿ ಕಾಣಿಸುತ್ತಿತ್ತು ,ಶುಜಿಗೆ ಸಮಯ ಹಿಡಿಯಲಿಲ್ಲ ಇದು ಬಿಜಿನೆ ಅಂತ ಕಂಡುಹಿಡಿಯುವುದಕ್ಕೆ ದಿಗ್ಬ್ರಮೆಯಾಗಿ ಬಿಜಿ ಹತ್ರ ಹೋಗಿ ಪೂರ್ತಿ ಹೊರಳಾಡಿಸಿ ಬಾಯಲ್ಲಿದ್ದ ಮೊಲ ಬಿಡಿಸಿ ಉಳಿಸಿದ್ದಾಗಿತ್ತು ಆದರೆ ವಿಜಿಯ ಮನಸ್ಸು ತಗ್ದವಾಗಿತ್ತು ಯಾಕೆಂದರೆ ಎಲ್ಲಾ ಅನುಮಾನಗಳಿಗೂ ಉತ್ತರ ಸಿಕ್ಕಿತ್ತು. ಶುಜಿ ಸುಮ್ಮನೆ ಕೂತು ಬಾಯಲ್ಲಿ ಸಿಕ್ಕಿದ ಮೊಲವನ್ನು ನೋಡುತ್ತಿದ್ದರೆ ಎಲ್ಲರೂ  ಶುಜಿ  ಕಡೆ ತಿರುಗಿ ಪಾಪ ಶುಜಿ ಗೆ  ಗೊತ್ತೇ ಆಗಲಿಲ್ಲ ಬಿಜಿ ಎಷ್ಟು ಸಲ ಶುಜಿ ಉಪಯೋಗಿಸಿಕೊಂಡು ಮೊಲಗಳ ದಂಡುಗಳ ಜಾಗ  ತಿಳಿದುಕೊಂಡು ತಿಂದುಬಿಟ್ಟ , ಹೌದಲ್ವಾ ಬಿಳಿ ಬಣ್ಣದ ಸ್ವಲ್ಪ ಬಿಳಿ ಬಣ್ಣದ ತೋಳ ಎಂದಲ್ಲ ಅಂದಿದ್ದು ಇವನೇ ಇರಬೇಕು ಜಾಸ್ತಿ ದಿನಕ್ಕೆ ಒಂದು ಬಿಜಿ ಮನೆಗೆ ಬರ್ತಾ ಇದ್ದಾಗ ಹೊಟ್ಟೆ ಬರ್ತಿಯಾಗಿ ನಡೆಯುತ್ತಿದ್ದ ಬಂಗಿಯೇ ಬದಲು ಅಂತೆಲ್ಲ ಮಾತನಾಡಿಕೊಂಡಾಗ  ಶುಜಿ  ಬಂದು ಭರ್ತಿಯಾಗಿ ಬಂದು ಗೊರಕೆ ಹೊಡೆಯುತ್ತಾ ನನಗೆ ಚಿತ್ರ ಹಿಂಸೆ ಕೊಟ್ಟಿದ್ದೆಲ್ಲ ನೆನೆಸಿಕೊಂಡು ನನ್ನ ಎಷ್ಟು ಬಲಿಪಶು ಮಾಡಿದ್ದಾನೆ ಅರ್ಥವಾಗಿದ್ದರೂ ಹೇಳಿದಾಗ ಒಪ್ಪಲೇ ಇಲ್ಲ ಅದಕ್ಕೆ ಬದಲಾಗಿ ಯಾವಾಗಲೂ ತಾನೇ ಸರಿ ಅಂತ ಅಥವಾ ನೀನು ಸರಿ ಇಲ್ಲ ಎಂಬ ವಾದ ವಿವಾದಗಳೊಂದಿಗೆ ಮುಗಿಯುತ್ತಿತ್ತು ಜಗಳ.

ಕೊನೆಗೆ ಶುಜಿ ನಗುತ್ತ ಅದು ಅವನ ತಪ್ಪಲ್ಲ ಅದು ಮೂಲತಃ ನರಿ ಅದರ ಬುದ್ಧಿಯನ್ನು ಅದು ಮಾಡಿದುದಷ್ಟೇ ಅದರ ಮೇಲೆ ಮೊಲದ ವೇಷದ ವೇಷವಾಗಿತ್ತು ನಂಬಿದ ನಾನೇ ಮೂರ್ಖ, ಇಂದು ಅರಿವಾಗಿದೆ ರಾಮನಿಗೆ ಒಳ್ಳೆಯ ರೀತಿಯಲ್ಲಿ ಅರಿವು ಮಾಡಿಸಿದ್ದಕ್ಕೆ  ವರ್ಷಾನುಗಟ್ಟಲೆ ಈ ರೀತಿ ಬದುಕಲಿಲ್ಲವಲ್ಲ ಬಚಾವ್ ಮಾಡಿದ್ದಕ್ಕಾಗಿ ಧನ್ಯವಾದ ಹೇಳಿತು ಕಣ್ತುಂಬಿ.

ನರಿಗಳ ಬೇಟೆಗೆ ಬಂದವರು ಬಿಜಿಗೆ  ಮೊಲ ಬೇಟೆಯಾಗುವಾಗಲೇ ಮೂಗಿನ ಮೇಲೆ ಮತ್ತು ಕಾಲಿಗೆ ಈಟಿ ಬೀಸಿದ್ದರಿಂದ ಕಚ್ಚಿದ್ದ ಮೊಲ ಹಾಗೆ ಬಾಯಲ್ಲಿಟ್ಟು ಅದನ್ನ ಹಿಡಿದ ಮಾನವರು ಬೆಟ್ಟದ  ಕೆಳಗೆ ಬರುವಾಗ ಮೊಲ ಬಿಡಿಸಲು ಮತ್ತು ಈಟಿ ತೆಗೆಯಲು ನೋಡಿ ವಿಚಿತ್ರ ಪ್ರಾಣಿ ಎಂದು ಬಿಸಾಡಿದ್ದರು.

ಇತ್ತ ಬಿಜಿ ಮೇಲೆ ಎಲ್ಲರಿಗು ಕೋಪವಿದ್ದರೂ ಅದರ ಪರಿಸ್ಥಿತಿ ನೋಡಿ ಮೊಲಗಳ ದಂಡು ಸಹೃದಯವರು ಕೆಡುಕರಾಗಲಿಲ್ಲ , ಸ್ವಲ್ಪ ದಿನ ತಿನಿಸುಗಳ್ಳನ್ನು ಒದಗಿಸಿ ಕೊಟ್ಟರು ನಂತರ ಬಿಜಿ ಕುಂಟುತ್ತಾ ಶುಜಿ ಜೊತೆ ಹೋಗಿ ತರಕಾರಿಗಳನ್ನು ಹಣ್ಣುಗಳನ್ನು ತಂದು ತಿನ್ನುತ್ತಾ ಬದುಕಿತು. ಮೂಗು ಮತ್ತು ದವಡೆಗೆ ಈಟಿ ತಾಕಿದ್ದರಿಂದ ಬೇಟೆ ಕನಸಾಗಿತ್ತು ಹೆಚ್ಚಾಗಿ ಕರ್ಮದ ಫಲ ಮತ್ತು ಶುಜಿ ಸ್ನೇಹದ ಸಹವಾಸ ತನ್ನನ್ನು ಇಷ್ಟಾದರೂ ಬದುಕಿಸಿದೆ ಎಂಬ ಅರಿವಾಗಿತ್ತು.

"ಮುಗ್ದತೆಯನ್ನು ದುರುಪಯೋಗಕ್ಕೆ ಬಳಸಿಕೊಂಡರೆ ಸಹಜ ಕರುಣೆಯನ್ನು ನಾಚಿಕೆಯಿಂದ  ಅನುಭವಿಸಬೇಕಾಗುತ್ತದೆ. ಇದಕ್ಕಿಂತ ಹೀನಾಯ ಜನುಮ ಇನ್ನೊಂದಿಲ್ಲ" .

ಬಿಜಿಗೆ ತನ್ನ ತಪ್ಪಿನ ಅರಿವಾಯಿತು. ಎಲ್ಲವನ್ನೂ ಕಳೆದುಕೊಂಡ ಮೇಲೆ ಮಾತ್ರ ಒಬ್ಬ ಜೀವಿಗೆ ನಿಜವಾದ ಬದಲಾವಣೆ ಸಾಧ್ಯವಿರುತ್ತದೆ ಎಂಬ ಕಲಿಕೆಯೊಂದನ್ನು ಅದು ಪಡೆದಿತ್ತು. ಆದರೆ ಕೆಲವು ತಪ್ಪುಗಳಿಗೆ ಕ್ಷಮೆ ಸಿಗಲಿಲ್ಲ.

ಶುಜಿ ಇನ್ನು ಮುಂದೆ ಕಾಡಿನಲ್ಲಿ ಮೂಕವಾಗಿಲ್ಲ, ಅದರ ಕಥೆ ಇನ್ನು ಹಲವಾರು ಮೊಲರಿಗೆ, ಪ್ರಾಣಿಗಳಿಗೆ ಎಚ್ಚರಿಕೆಯಾಗಿದೆ. ಮೋಸದ ಮುಖವಾಡ ಧರಿಸಿರುವವರಿಂದ ಎಚ್ಚರಿಕೆಯಿಂದ ಇರಬೇಕೆಂಬ ಅರಿವು ಈಗ ಕಾಡಿನ ಎಲ್ಲವನ್ನೂ ಸುತ್ತಿ ಬಂದಿದೆ.

ಚಿತ್ರ ಕೃಪೆ :ಚಾಟ್ ಜಿಪಿಟಿ