ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

‘ಪೋಲಿ ಕಿಟ್ಟಿ’ ಯಾದ ಸರಳೆ ಸಿಳ್ಳಾರ

ಸುಮಾರು ಹತ್ತು ವರ್ಷದ ಹಿಂದೆ ನಾನು ಕುದುರೆಮುಖದ ಹತ್ತಿರದ ಸಂಸೆ ಶಾಲೆಯಲ್ಲಿ ಶಿಕ್ಷಕನಾಗಿದ್ದ ಸಂದರ್ಭದಲ್ಲಿ ವನ್ಯಜೀವಿ ಸಪ್ತಾಹದ ಕಾರಣಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಚಿತರಾಗಿದ್ದರು. ಹಾಗೆ ಪರಿಚಿತರಾದ ಫಾರೆಸ್ಟ್‌ ಗಾರ್ಡ್‌ ರಾಮಚಂದ್ರ ಹುಲಿ ಗಣತಿ ನಡೀಲಿಕ್ಕಿದೆ, ನೀವು ಸ್ವಯಂಸೇವಕರಾಗಿ ಸೇರಲು ಅವಕಾಶ ಇದೆ ಎಂದರು. ತಕ್ಷಣ ನನ್ನ ಹೆಸರನ್ನು ನೋಂದಾಯಿಸಿಕೊಂಡು ಸೇರಿಬಿಟ್ಟೆ.

Image

ಸ್ವಾತಂತ್ರ್ಯ ಹೋರಾಟಕ್ಕೆ ಹೆಸರಾದ ವಿದುರಾಶ್ವತ್ಥ

ಅಶ್ವತ್ಥವೃಕ್ಷ, ನಾಗರಕಲ್ಲುಗಳು ಹಾಗೂ ಪಿನಾಕಿನಿ ನದಿಯಿಂದ ಹೆಸರಾಗಿರುವ ವಿದುರಾಶ್ವತ್ಥ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ. ವಿಧುರ ಈ ಅಶ್ವತ್ಥ ವೃಕ್ಷ ನೆಟ್ಟನೆಂಬ ಪ್ರತೀತಿ ಇದ್ದು, ಇಲ್ಲಿ ನಾಗರಕಲ್ಲು ಹಾಕಿಸುವ ಹರಕೆ ಬಹುದಿನಗಳಿಂದ ರೂಢಿಯಲ್ಲಿದೆ. ವಿದುರಾಶ್ವತ್ಥ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸ್ಥಾನ ಪಡೆದು ಕೊಂಡಿದೆ.

Image

ಊಟದ ಬಳಿಕ ಬಡೆಸೋಂಪು ಸೇವಿಸಿ

ನೋಡಲು ಜೀರಿಗೆಯನ್ನು ಹೋಲುವ ಸೋಂಪು ಅಥವಾ ಬಡೆಸೋಂಪು ಎನ್ನುವ ಈ ಪುಟ್ಟದಾದ ವಸ್ತು ಆರೋಗ್ಯಕ್ಕೆ ಬಹಳ ಉಪಕಾರಿ. ನೀವು ಹೋಟೇಲ್ ಗಳಿಗೆ ಊಟ-ಉಪಹಾರಕ್ಕೆ ಹೋದಾಗ ಕೊನೆಯಲ್ಲಿ ಬಿಲ್ ಕೊಡುವಾಗ ಅದರ ಜೊತೆ ಬಡೆಸೋಂಪು ಕೊಡುವ ಪದ್ಧತಿ ಇದೆ. ಕೆಲವೆಡೆ ಬಡೆಸೋಂಪನ್ನು ಹುರಿದು ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ತಿನ್ನಲು ಇನ್ನಷ್ಟು ಚೆನ್ನಾಗಿರುವಂತೆ ನೋಡಿಕೊಳ್ಳುತ್ತಾರೆ.

Image

ಕವಿರಾಜ್ ಮಾರ್ಗದಲ್ಲಿ…

ಪುಸ್ತಕದ ಲೇಖಕ/ಕವಿಯ ಹೆಸರು
ಕವಿರಾಜ್
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ : ೨೦೨೫

ಹೆಸರಿಗೆ ತಕ್ಕಂತೆ ಕವಿಯಾಗಿರುವ ‘ಕವಿರಾಜ್’ ಅವರ ಸಿನೆಮಾ ಸಾಹಿತ್ಯದ ೨೫ ವರ್ಷಗಳ ಪಯಣದ ಆಗು ಹೋಗುಗಳನ್ನು ಅವರೇ ತಮ್ಮದೇ ಆದ ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಮುನ್ನುಡಿ, ಬೆನ್ನುಡಿಯ ಹಂಗೇ ಬೇಡ ಎನ್ನುತ್ತಿದ್ದ ಕವಿರಾಜ್ ಕೊನೆಗೆ ತಮ್ಮ ವೃತ್ತಿ ಜೀವನದ ಮೊದಲ ಸಂದರ್ಶನ ಮಾಡಿದ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರಿಂದ ಮುನ್ನುಡಿ ಬರೆಯಿಸಿಕೊಂಡಿದ್ದಾರೆ.

ನೀರಿನ ಗುಣಲಕ್ಷಣದಂತೆ ಮನುಷ್ಯ ಸಂಬಂಧಗಳ ಸ್ಥಿತಿಸ್ಥಾಪಕತ್ವ

ಹೌದು, ಮನುಷ್ಯ ಸಂಬಂಧಗಳು ಸಹ ಪರಿಸ್ಥಿತಿ ಗುಣಲಕ್ಷಣಗಳನ್ನು ಅವಲಂಬಿಸಿ ನೀರಿನಂತೆ ತನ್ನ ಸ್ಥಾನವನ್ನು ತಾನೇ ಕಂಡುಕೊಳ್ಳುತ್ತವೆ.

Image

ಸ್ಟೇಟಸ್ ಕತೆಗಳು (ಭಾಗ ೧೨೮೧) - ಪ್ರಯತ್ನ

ಸ್ಪರ್ಧೆಗೆ ತಯಾರಿಯಾಗಿತ್ತು. ಗೆಲುವು ಸಿಗುವ ನಂಬಿಕೆ ಇತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರದರ್ಶನವನ್ನು ಮುಗಿಸಿದ ಕೂಡಲೇ ತಾವು ಮಾಡಿರುವ ಹಲವು ತಪ್ಪುಗಳ ಅರ್ಥವಾಯಿತು. ಉಳಿದ ತಂಡಗಳ ಪ್ರದರ್ಶನಗಳನ್ನ ಕಂಡವರಿಗೆ ಗೆಲುವು ನಮ್ಮದಲ್ಲ ಅಂತ ಅನಿಸ್ತು. ಹಾಗಾಗಿ ಗೆಲುವಿನ ಆಸೆಯನ್ನೇ ಬಿಟ್ಟು ಸುಮ್ಮನೆ ಇದ್ದುಬಿಟ್ಟಿದ್ದರು.

Image

ನುಗ್ಗೆ ಸೊಪ್ಪಿನ ಚಿತ್ರಾನ್ನ

Image

ನುಗ್ಗೆ ಸೊಪ್ಪು, ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ, ಒಣಮೆಣಸು, ನೆಲಕಡಲೆ, ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಹುರಿದು ಅರಸಿನ, ಕರಿಬೇವು, ರುಬ್ಬಿದ ಮಿಶ್ರಣ ಹಾಕಿ ಫ್ರೈ ಮಾಡಿ. ನಂತರ ಅನ್ನ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಿಂಬೆರಸ ಹಾಕಿ ಮಗುಚಿ ಕೆಳಗಿಳಿಸಿ.

ಬೇಕಿರುವ ಸಾಮಗ್ರಿ

ಬೆಳ್ತಿಗೆ ಅನ್ನ ೨ ಕಪ್, ನುಗ್ಗೆ ಸೊಪ್ಪು ೧/೨ ಕಪ್, ತೆಂಗಿನ ತುರಿ ೧/೨ ಕಪ್, ಈರುಳ್ಳಿ ೧, ಹಸಿಮೆಣಸಿನಕಾಯಿ ೩, ಒಣಮೆಣಸು ೨, ಸಾಸಿವೆ ೧ ಚಮಚ, ಅರಸಿನ ಪುಡಿ ೧/೨ ಚಮಚ, ಎಣ್ಣೆ ೪ ಚಮಚ, ನೆಲಗಡಲೆ ೨ ಚಮಚ, ಕರಿಬೇವು ೨ ಎಸಳು, ನಿಂಬೆರಸ ೧ ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಸವಾಲುಗಳು

“ಭಾರತದಲ್ಲಿ ಶೇಕಡಾ ಐವರು ಪೋಷಕರಲ್ಲಿ ಒಬ್ಬರು ಮಕ್ಕಳನ್ನು ಬೆಳೆಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ” - ಸಿ.ಬಿ.ಎಸ್.ಇ  ಸಮೀಕ್ಷೆಯ ವರದಿ.

Image