ಒಂದು ಗಝಲ್

ಒಂದು ಗಝಲ್

ಕವನ

ಅವನು ಬೆಂಕಿ ಹಚ್ಚುವನೇ, ನಂದಿಸಿ ಮೆರೆಯು

ಇವನು ಹೊಟ್ಟೆ ಉರಿಯುವನೇ, ಬಾಧಿಸಿ ಮೆರೆಯು

 

ಕೆಲಸವೇ ಇಲ್ಲದ ಬಲು ಸೋಮಾರಿಗೆ ಏನೆನ್ನಲಿ

ಅವನು ಮುತ್ತುಗಳ ಕೊಡುವನೇ,ಸಂಧಿಸಿ ಮೆರೆಯು

 

ಗತ್ತಿರುವವನ ನಡೆಗೆ ಎಂದಿಗೂ ಮರುಗುತ್ತಾ ಇರು

ಇವನು ಹುಳಿ ಹಿಂಡುವನೇ, ಸಾಧಿಸಿ ಮೆರೆಯು

 

ಹಣವಿಲ್ಲದೆ ಒದ್ದಾಡುವವನ ಎಂದಿಗೂ ಗಮನಿಸು

ಅವನು ಕಲಿಕೆಲಿ ಮುಂದಿರುವನೇ, ಓದಿಸಿ ಮೆರೆಯು

 

ಚಿತ್ತವಿಡಿದು ಹೀಗೆಯೇ ಗರ್ಜಿಸಿದರೆ ಏನು ಫಲ ಈಶ

ಇವನು ವಂಚನೆ ಮೂಲದವನೇ, ಬಂಧಿಸಿ ಮೆರೆಯು

 

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್