ಒಂದಿಷ್ಟು ಹನಿಗಳು…

ಒಂದಿಷ್ಟು ಹನಿಗಳು…

ಕವನ

ಮಚ್ಚು ಹಿಡಿದು ರೀಲ್ಸ್ 

ಓ ನಟರೇ-

ಅಭಿಮಾನಿಗಳಿಗೆ

ನೀವೇನು

ಸಂದೇಶ

ನೀಡುತ್ತಿರುವಿರಿ

ಎಂಬುದನರಿಯಿರಿ...

 

ನಿಮ್ಮ

ತೆವಲುಗಳನೇ

ಬಿಂಬಿಸಲು

ಹೋದರೆ-

ಪೋಲಿಸ್ ಠಾಣೆ

ಎಂಬುದ ಮರೆಯದಿರಿ!

***

ಹನಿ ಟ್ರ್ಯಾಪ್ 

ಜಾರ್ಖಂಡ್

ನಿವಾಸಿಯಿಂದ-

ಸುಪ್ರೀಂ

ಕೋರ್ಟ್

ತಲುಪಿದ

ಹನಿಟ್ರ್ಯಾಪ್... ಭಳಿರೆ...

 

ಕನ್ನಡ ನಾಡಿನಲ್ಲಿ

ಹನಿ ಹನಿಯಾಗಿ ಹುಟ್ಟಿ

ನದಿಯಾಗಿ ಹರಿದು

ರಾಜ್ಯಗಳ ದಾಟಿ

ಸುಪ್ರೀಂ ಸಾಗರವ

ತಲುಪಿತೇ... ಭಾಪ್ರೆ....?

***

ಉರುಳಿದ ಸಿಡಿ ಗಂಡು....

ಕಡೆಗೂ

ಯತ್ನಾಳ

ಪ್ರಯತ್ನಗಳು

ವಿಫಲ;

ಉಚ್ಛಾಟನೆ-

ಅಧ್ಯಕ್ಷರು ನಿರುಮ್ಮಳ...

 

ನಿಷ್ಠುರವಾದಿ

ಬಯಲ ಸೀಮೆ ಗಂಡು

ನೇಪಥ್ಯಕ್ಕೆ...

ಬಿಜೆಪಿಯಲ್ಲಿ

ಉರುಳಿದ

ಮತ್ತೊಂದು ದಾಳ!

***

ಸಂಸಾರ ರಥ 

ಮದುವೆ

ಎಂಬುದು-

ಗಂಡಿನ

ಮೂಗಿಗೆ

ಬಿಗಿಯುವ

ಮೂಗುದಾರ...

 

ಹೆಣ್ಣಿನ 

ಕೈಯಿಗೆ

ದೊರೆಯುವ-

ಚಾವಟಿ

ಜೊತೆಗೆ

ಲಗಾಮುದಾರ!

***

ಭವಾಬ್ಧಿ 

ಮರಳಿ ಮರಳಿ

ಬರುತಿಹುದು

ಮತ್ತದೇ ಯುಗಾದಿ-

ಸ್ವಾಗತವು ನಿನಗೆ

ಓ ಹೊಸ ಮನ್ವಂತರದ

ಪ್ರವಾದಿ...

 

ವಯಸೆನಿತು

ಕಳೆದರೂ

ಮತ್ತದೇ ಅಲೆಗಳ

ಪ್ರವಾಹಕೆ ಸಿಲುಕಿ

ದಾಟಲಾಗಲಿಲ್ಲ

ಈ ಭವಾಬ್ಧಿ!

***

ಪರಮ ಸುಖಿಗಳ್...

ಆಸ್ತಿ ಗಳಿಸುವಲ್ಲಿ

ರಾಜಕಾರಣಿಗಳು...

ಹಣ ಮಾಡುವಲ್ಲಿ

ಶ್ರೀಮಂತರು...

ಹೆಸರಿಗಾಗಿ ಸೆಲೆಬ್ರಿಟಿಗಳು-

ನಿಜ ಸುಖ ವಂಚಿತರ್...

 

ಅಂದಂದಿಗೆ

ಶ್ರಮಿಸಿ ಉಣ್ಣುವ

ಶ್ರಮಿಕ...

ಹೊಲದಲ್ಲಿ ಕಷ್ಟಪಟ್ಟು

ದುಡಿದುಣ್ಣುವ ರೈತ-

ಈ ಜಗದ ಪರಮ ಸುಖಿಗಳ್!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್