ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಜಯ ದಶಮಿ - ಆಯುಧ ಪೂಜೆ - ದಸರಾ…

ಮೈಸೂರು ದಸರಾ -  ಮಹಿಷ ದಸರಾ - ಚಾಮುಂಡೇಶ್ವರಿ ದಸರಾ ಆಚರಣೆಗಿಂತ ಮನುಷ್ಯನ ಅಂತರಂಗದ ದಸರಾ ಆಚರಣೆ ಇಂದಿನ ಅನಿವಾರ್ಯತೆ ಆಗಿದೆ. ಅದಕ್ಕಾಗಿ… ವಿಜಯ ದಶಮಿ - ಆಯುಧ ಪೂಜೆ - ದಸರಾ.. ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತ.

Image

ಸ್ಟೇಟಸ್ ಕತೆಗಳು (ಭಾಗ ೧೧೦೬)- ಬದುಕು

ಬೇಗ ಬೇಗ ಬಸ್ಸು ಹತ್ತಿ ,ಏನು ನಮ್ಮ ಬಸ್ ಮಾತ್ರ ಇರೋದಾ? ಇದರ ನಂತರ ತುಂಬಾ ಬಸ್ಸುಗಳಿದ್ದಾವೆ. ಇದರ ನಂತರ ಬಸುಗಳಿದ್ದಾವೆ ಎಲ್ಲಿ ಮುಂದೆ ಹೋಗ್ರಿ ಅಲ್ಲೇ ಇಷ್ಟು ಹೊತ್ತು ಅಂತ ನಿಂತಿರಿ. ಮನೆಯಲ್ಲಿ ಕೆಲಸ ಇಲ್ಲ ಅಂತ ಬಸ್ಸಲ್ಲಿ ಬರ್ತಾರೆ"

Image

ತೊಂಡೆಕಾಯಿ ಸಂಡಿಗೆ

Image

ತೊಂಡೆಕಾಯಿಯನ್ನು ತೆಳ್ಳಗೆ ನಾಲ್ಕು ‌ತುಂಡು ಕತ್ತರಿಸಬೇಕು. ರಾತ್ರಿ ಕತ್ತರಿಸಿ ಮಜ್ಜಿಗೆ, ಉಪ್ಪು, ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ ಇಡಬೇಕು. ಬೆಳಿಗ್ಗೆ ತೊಂಡೆಕಾಯಿಯ ಹೋಳುಗಳನ್ನು ತೆಗೆದು (ಸ್ವಲ್ಪ ನೀರು ಎದ್ದಿರುತ್ತದೆ) ಒಣ ಹಾಳೆಯಲ್ಲಿ ಹಾಕಿ ಬಿಸಿಲಿನಲ್ಲಿ ಒಣಗಿಸಬೇಕು. ೬ ಒಳ್ಳೆಯ ಬಿಸಿಲು ಬೇಕಾಗುತ್ತದೆ.

ಬೇಕಿರುವ ಸಾಮಗ್ರಿ

೨೦ ಬೆಳೆದ ತೊಂಡೆಕಾಯಿ( ಹಣ್ಣಾಗಿರಬಾರದು),  ಹುಡಿಉಪ್ಪು ೨ ಚಮಚ, ಮೆಣಸಿನ ಪುಡಿ ೧ ಚಮಚ, ದಪ್ಪ ಮಜ್ಜಿಗೆ ೧/೨ ಸೌಟು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ... ಈ ವಾರವೂ ನವರಾತ್ರಿ ಹಬ್ಬದ ವಿಶೇಷವಾಗಿ ಶ್ರೀದೇವಿಯರ ದೇಗುಲದ ದರ್ಶನದಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆಯೋಣವೇ...?   

Image

ಜ್ಞಾನ ಫಕೀರ ಪ್ರೊ.ಎಂ. ಕರೀಮುದ್ದೀನ್

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಆನಂದ್ ಗೋಪಾಲ್
ಪ್ರಕಾಶಕರು
ಪ್ರೊ. ಎಂ. ಕರೀಮುದ್ದೀನ್ ಸ್ಮಾರಕ ಸಮಿತಿ, ಗಾಂಧಿ ಭವನ, ಮಂಡ್ಯ.
ಪುಸ್ತಕದ ಬೆಲೆ
ರೂ. ೯೦.೦೦, ಮುದ್ರಣ: ೨೦೨೪

ಕಥೆಗಾರ, ಉಪನ್ಯಾಸಕ ಡಾ. ಆನಂದ ಗೋಪಾಲ್ ಅವರು ಬರೆದ ‘ಜ್ಞಾನ ಫಕೀರ ಪ್ರೊ. ಎಂ ಕರೀಮುದ್ದೀನ್' ಎಂಬ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಟಿಪ್ಪು ಸುಲ್ತಾನ್ ವಂಶಸ್ತನಾಗಿದ್ದುಕೊಂಡು, ಸುಮಾರು ೬ ಭಾಷೆಯಲ್ಲಿ ಪಾಂಡಿತ್ಯವನ್ನು ಹೊಂದಿದ್ದು, ಖ್ಯಾತ ನಾಮ ಸಾಹಿತಿಗಳ ಸಾಂಗತ್ಯದಲ್ಲಿದ್ದೂ ಸರಳ, ಸಜ್ಜನಿಕೆಯಿಂದ ಜಾತ್ಯಾತೀತವಾಗಿ ಬದುಕಿದ ಕರೀಮುದ್ದೀನ್ ಅವರ ಪರಿಚಯ ಈ ಕೃತಿಯಲ್ಲಿ ಮಾಡಲಾಗಿದೆ.

ಸ್ಟೇಟಸ್ ಕತೆಗಳು (ಭಾಗ ೧೧೦೫)- ಆಲಾಪ

ನಾವು ಇಲ್ಲೇಕೆ ಬಂದಿದ್ದೇವೆ ಅನ್ನೋದು ಗೊತ್ತಿಲ್ಲ. ನಮ್ಮನ್ನ ಇವರು ಏನು ಮಾಡಬೇಕಂತ ಇದ್ದಾರೆ ಅನ್ನೋದು ಗೊತ್ತಿಲ್ಲ . ನಮ್ಮ ಬದುಕಿಗೆ ಯಾವ ರೀತಿ ಅರ್ಥವೂ ಸಿಕ್ತಾ ಇಲ್ಲ. ತಿನ್ನುವುದಕ್ಕೆ ಕುಡಿಯುವುದಕ್ಕೆ ಅಲ್ಲೇ ಇಡುತ್ತಾರೆ. ಹೆಚ್ಚು ದೂರ ಚಲಿಸುವಂತಿಲ್ಲ. ಅಲ್ಲೇ ಓಡಾಡ್ತಾ ಇರಬೇಕು. ಇದೊಂದು ತುಂಬಾ ಜನ ಸೇರುವ ಜಾಗ, ಬಂದವರೆಲ್ಲ ನಮ್ಮನ್ನ ನೋಡುತ್ತಾ ನೋಡುತ್ತಾ ಮುಂದುವರಿಯುತ್ತಿದ್ದಾರೆ. ನಮ್ಮ ಕುರಿತು ಏನೇನೋ ಮಾತನಾಡುತ್ತಿದ್ದಾರೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೬೯) - ಭಾರಂಗಿ ಗಿಡ

ನೀವು ಶಾಲೆಗೆ ಹೋಗುವಾಗ ಅಥವಾ ಗದ್ದೆ, ಗುಡ್ಡದ ಬದಿಗಳಲ್ಲಿ ಕಡು ನೀಲಿಯಿಂದ ಕಡು ನೇರಳೆ ವರ್ಣದ ಹೂಗೊಂಚಲೊಂದು ರಾರಾಜಿಸುತ್ತಿರುವುದನ್ನು ಎಂದಾದರೂ ಗಮನಿಸಿದ್ದೀರಾ...? ಮೊಂಡಾದ ಚತುರ್ಭುಜದ ಕಾಂಡದುದ್ದಕ್ಕೂ ಮೂರು ದಿಕ್ಕಿಗೆ ಮೂರು ಒಂದಿಷ್ಟು ದಪ್ಪನೆ ಒರಟಾದ ಅಂಡಾಕಾರದ ರೋಮರಹಿತ ಎಲೆಗಳು. 3 ರಿಂದ 8 ಇಂಚುಗಳಷ್ಟು ಉದ್ದ, 5 ರಿಂದ 6 ಸೆ.ಮೀ. ತೊಟ್ಟು ಗಟ್ಟಿಯಾಗಿರುವ ಎಲೆಗಳ ತುದಿ ಚೂಪಾಗಿರುತ್ತದೆ.

Image