ಓಶೋ ಹೇಳಿದ ಕಥೆಗಳು

ಓಶೋ ಹೇಳಿದ ಕಥೆಗಳು

ಅರ್ಥ ಮಾಡಿಕೊಳ್ಳುವುದು ಹೇಗೆ?

ವ್ಯಕ್ತಿ ತನ್ನೊಳಗಿರುವ ಹೀನತೆ ಮತ್ತು ಅಸಹಾಯಕೆಯನ್ನು ವಿಸರ್ಜಿಸುವುದೇ ಮಹಾವೀರನನ್ನು ಅರ್ಥಮಾಡಿಕೊಳ್ಳುವ ದಿಕ್ಕಿನಲ್ಲಿ ಇಡಬಹುದಾದ ಪ್ರಥಮ ಹೆಜ್ಜೆ. ಆತ ಯಾವುದೇ ಸಹಾಯ, ಕಾಲ್ಪನಿಕ ಆಸರೆಯನ್ನು ನೀಡಲು ಇಷ್ಟಪಡುವುದಿಲ್ಲ. ವ್ಯಕ್ತಿ ತನ್ನೊಳಗಿರುವ ಹೀನತೆ ಮತ್ತು ಅಸಹಾಯಕೆಯನ್ನು ವಿಸರ್ಜಿಸುವುದೇ ಮಹಾವೀರನನ್ನು ಅರ್ಥಮಾಡಿಕೊಳ್ಳುವ ದಿಕ್ಕಿನಲ್ಲಿ ಇಡಬಹುದಾದ ಪ್ರಥಮ ಹೆಜ್ಜೆ. ಆತ ಯಾವುದೇ ಸಹಾಯ, ಕಾಲ್ಪನಿಕ ಆಸರೆಯನ್ನು ನೀಡಲು ಇಷ್ಟಪಡುವುದಿಲ್ಲ.

ಆತನ ಹತ್ತಿರದ ಶಿಷ್ಯನಾಗಿದ್ದ ಗೌತಮನ ವಿಚಾರ ನನ್ನ ನೆನಪಿಗೆ ಬರುತ್ತಿದೆ. ಗೌತಮನ ನಂತರ ಬಂದ ಎಷ್ಟೊ ವ್ಯಕ್ತಿಗಳು ಮುಕ್ತರಾಗಿ ಸಮಾಧಿ ಸ್ಥಿತಿಯನ್ನು ಹೊಂದಿದರೂ ಗೌತಮನಿಗೆ ಯಾವುದೂ ಲಭ್ಯವಾಗಿರಲಿಲ್ಲ. ಮಹಾವೀರನೂ ಸಹ ಗೌತಮನನ್ನು ಕುರಿತು ತುಂಬಾ ಸಮಯವಾಗಿದೆ. ಸಾಕಷ್ಟು ಜ್ಞಾನ-ವಿಚಾರಗಳನ್ನು ತಿಳಿಯುವುದರಲ್ಲೇ ಸಮಯ ವ್ಯರ್ಥವಾಗುತ್ತಿದೆ, ಇನ್ನೂ ನಿನ್ನಲ್ಲಿ ಸ್ವಯಂನ ಪ್ರಜ್ಞೆ ಉದಯಿಸಿಲ್ಲ, ಸ್ವಲ್ಪ ಅರ್ಥ ಮಾಡಿಕೋ, ಗೌತಮ ಹೇಳುತ್ತಿದ್ದ ನಾನು ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುವೆನು. ಯಾವ ತೊಂದರೆ ನನ್ನನ್ನು ತಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ.

ಸ್ವಲ್ಪ ಕಾಲದ ನಂತರ ಮಹಾವೀರನ ಮಹಾಪರಿನಿರ್ವಾಣವಾಯಿತು. ಗೌತಮ ಇನ್ನೂ ಮುಕ್ತನಾಗಿರಲಿಲ್ಲ. ಹಾಗೇ ಇದ್ದ. ಮಹಾವೀರ ದೇಹತ್ಯಾಗ ಮಾಡಿದ ದಿನ ಗೌತಮ ಸಮೀಪದ ಒಂದು ಹಳ್ಳಿಯಲ್ಲಿ ಹೋಗುತ್ತಿದ್ದ. ಆತ ಹೋಗುತ್ತಿರುವಾಗಲೇ ಸಂದೇಶವಾಹಕನೊಬ್ಬ ಮಹಾವೀರ ದೇಹತ್ಯಾಗ ಮಾಡಿದ ಸಂದೇಶ ತಿಳಿಸಿದ. ಗೌತಮ ಅಲ್ಲಿಯೇ ಅಳಲಾರಂಭಿಸಿದ. ಆತ, ಇನ್ನು ನನ್ನ ಗತಿ ಏನು? ಎಂದು ರೋದಿಸಲಾರಂಭಿಸಿದ. ಭಗವಾನನು ಇರುವಾಗಲೇ ನನಗೆ ಸಮಾಧಿ ಮತ್ತು ಸತ್ಯ ಲಭ್ಯವಾಗಲಿಲ್ಲ.
ಭಗವಾನನ ನೆರಳಿನಲ್ಲಿ ಇರುವಾಗಲೂ ನನ್ನ ಅಂತಃಶಕ್ತಿ ಜಾಗೃತವಾಗಲೇ ಇಲ್ಲ. ಅದರ ಅನುಭವ ಆಗಲೇ ಇಲ್ಲ. ಭಗವಾನನ ಇರುವಿಕೆಯಲ್ಲೇ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಸಾಧ್ಯವಾಗಲಿಲ್ಲ. ಇನ್ನು ನನ್ನ ಸ್ಥಿತಿ ಏನಾಗುವುದು. ನಾನು ಮುಳುಗಿ ಹೋದೆ. ಅಂತಿಮ ಸಮಯದಲ್ಲಾದರೂ ಭಗವಾನರು ನನ್ನ ಸ್ಮರಣೆ ಮಾಡಿಕೊಂಡರೇ? ನನಗಾಗಿ ಯಾವುದಾದರೂ ಸ್ವರ್ಣ ಸೂತ್ರವನ್ನು ಕೊಟ್ಟಿದ್ದಾರೆಯೇ? ಎಂದು ಕೇಳಿದ. ಆ ಸಂದೇಶವಾಹಕ ಹೇಳಿದ. ಮಹಾವೀರರು ಇದನ್ನು ಹೇಳಿದರು.
ಗೌತಮನಿಗೆ ಹೇಳು. ನೀನು ಪೂರ್ಣವಾಗಿ ನದಿಯನ್ನು ದಾಟಿರುವೆ. ಆದರೂ ಏಕೆ ದಡವನ್ನು ಹಿಡಿದುಕೊಂಡಿರುವೆ. ನೀನು ಎಲ್ಲವನ್ನೂ ಪಡೆದಿರುವೆ. ಈಗ ಮಹಾವೀರನನ್ನು ಹಿಡಿದುಕೊಂಡು ಏಕೆ ನಿಂತಿರುವೆ? ಅವನನ್ನು ಬಿಟ್ಟುಬಿಡು. ಈ ಮಾತನ್ನು ನಾನು ಇಲ್ಲಿ ಯಾರು ಮಹಾವೀರನನ್ನು ತೀವ್ರವಾಗಿ ಪ್ರೇಮಿಸುತ್ತಿರುವರೋ, ಆದರಿಸುತ್ತಿರುವರೋ, ಭಗವಂತನೆಂದು ಭಾವಿಸಿ ಪೂಜಿಸುತ್ತಿರುವರೋ ಅವರಿಗೆ ಹೇಳಲು ಬಯಸುತ್ತೇನೆ.

ಇದೊಂದು ಅದ್ಭುತವಾದ ಕ್ರಾಂತಿಕಾರಕವಾದ ಮಾತು. ಮಹಾವೀರ ಗೌತಮನಿಗೆ ತನ್ನನ್ನೂ ಬಿಡುವಂತೆ ಹೇಳುತ್ತಾನೆ. ತನ್ನನ್ನೂ ಹಿಡಿದುಕೊಳ್ಳಬೇಡ. ನಾನು ನಿನ್ನಿಂದ ಹೊರಗೇ ಇರುವೆ. ನಾನು ನಿನ್ನ ಪಾಲಿಗೆ ಅನ್ಯನಾಗಿರುವೆ. ನಾನು ನಿನ್ನ ಆತ್ಮವಾಗಿಲ್ಲ ಸಂಸಾರವೂ ಹೊರಗಿನದು. ತೀರ್ಥಂಕರರೂ ಹೊರಗಿನವರು. ಹೊರಗಿನ ಯಾವುದನ್ನೂ ಹಿಡಿದುಕೊಳ್ಳಬೇಡ. ಹೊರಗಿನದೆಲ್ಲವನ್ನೂ ಬಿಟ್ಟು ಬಿಡು. ಹೊರಗಿನ ಯಾವುದನ್ನೂ ಹಿಡಿದುಕೊಂಡಿರದ ಸ್ಥಿತಿಯಲ್ಲಿ ಒಳಗಿರುವುದು ಎಚ್ಚರಗೊಳ್ಳುವುದು. ಅದರ ದರ್ಶನ ಆಗುವುದು. ಹೊರಗಿನ ವಸ್ತುಗಳನ್ನು ಹಿಡಿದುಕೊಂಡಿರುವ ಕಾರಣದಿಂದ ಅದು ಕಾಣುತ್ತಿಲ್ಲ. ಯಾರು ಹೊರಗಿನ ವಸ್ತುಗಳಿಂದ ದೂರವಾಗುವನೋ, ಮುಕ್ತನಾಗುವನೋ ಆತನಿಗೆ ಮಾತ್ರ ಅದರ ಅನುಭೂತಿಯಾಗಲು ಸಾಧ್ಯ. ಇದೊಂದು ಕ್ರಾಂತಿಕಾರಿಯಾದ ಮಾತು. ಯಾವ ಶಾಸ್ತ್ರವೂ, ಸಾಮಾನ್ಯವಾಗಿ ಯಾವ ಗುರುವೂ ತನ್ನನ್ನೂ ಬಿಡು ಎಂದು ಹೇಳುವುದಿಲ್ಲ.

***

ವಿಭಿನ್ನತೆ

ಬೆಳ್ಳಂಬೆಳಗ್ಗೆ ಸ್ವರ್ಗದ ಬಾಗಿಲಲ್ಲಿ ಏಕಕಾಲಕ್ಕೆ ಮೂರು ಜನರು ನಿಂತಿದ್ದನ್ನು ನೋಡಿದ ಸ್ವರ್ಗದ ದ್ವಾರಪಾಲಕನಿಗೆ ಅಚ್ಚರಿಯಾಯಿತು. ಆ ಸಮಯದಲ್ಲಿ ಜನ ಬರುವುದೇ ಕಡಿಮೆ, ಅಂಥಾದ್ದರಲ್ಲಿ ಮೂವರು?

ಆತ ಮೊದಲನೆಯವನನ್ನು ಕೇಳಿದ: ‘ನೀನು ಹೇಗೆ ಬಂದೆ?’ ಆತನೆಂದ ನಾನು ದೂರದ ಪ್ರಯಾಣವೊಂದನ್ನು ಮುಗಿಸಿ ಮನೆಗೆ ಬಂದಿದ್ದೆ. ಕೋಣೆಯಲ್ಲಿ ಪುರುಷನೊಬ್ಬನ ಕೋಟು  ಮೊಳೆಯಲ್ಲಿ ನೇತಾಡುತ್ತಿತ್ತು. ಶೂ ಕೂಡ ಕಾಣಿಸಿತು. ನನ್ನ ಪತ್ನಿ ಮಂಚದ ಮೇಲೆ ಯಾವುದೋ ಸರಸದ ಉದ್ವೇಗದಲ್ಲಿದ್ದಳು. ನನಗೆ ಅನುಮಾನ ಬಂದು ಆ ಪುರುಷನಿಗಾಗಿ ಮನೆಯಿಡೀ ಹುಡುಕಾಡಿದೆ. ಸಿಟ್ಟು ನೆತ್ತಿಗೇರಿತು. ಮನೆಯ ಟಿವಿಯನ್ನು ನೆಲಕ್ಕೆಸೆದೆ. ಫ್ರಿಡ್ಜನ್ನು ಕಿಟಿಕಿಯಾಚೆಗೆ ಎಸೆದೆ. ಕೋಪ ತಣಿಯಲಿಲ್ಲ. ಡ್ರಾಯರ್ ನಲ್ಲಿದ್ದ ಪಿಸ್ತೂಲಿನಿಂದ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡೆ.

ದ್ವಾರಪಾಲಕ ಎರಡನೆಯವನ್ನು ಕೇಳಿದ, ‘ನೀನು ಹೇಗೆ ಬಂದೆ?’ ಆತನೆಂದ, ನಾನು ನನ್ನ ಪ್ರೇಯಸಿಯ ಜೊತೆಗೆ ಸರಸದಲ್ಲಿ ತೊಡಗಿದ್ದೆ. ಅಚಾನಕ್ಕಾಗಿ ಆಕೆ ‘ನನ್ನ ಗಂಡ’ ಎಂದು ಚೀರಿದಳು. ನಾನು ಎದುರಿಗಿದ್ದ ಫ್ರಿಡ್ಜಿನೊಳಗೆ ತೂರಿಕೊಂಡೆ. ಆದರೆ ಸ್ವಲ್ಪ ಹೊತ್ತಿನಲ್ಲಿ ಒಬ್ಬಾತ ಕೂಗಾಡುತ್ತಾ ಫ್ರಿಡ್ಜನ್ನು ಎತ್ತಿಕೊಂಡು ಹೊರಗೆ ಎಸೆದ ಹಾಗಾಯಿತು. ಅಷ್ಟೇ ನನಗೆ ತಿಳಿದದ್ದು. ನಾನೀಗ ಇಲ್ಲಿದ್ದೇನೆ.

ದ್ವಾರಪಾಲಕನಿಗೆ ಕುತೂಹಲವಾಯಿತು. ಮೂರನೆಯವನ ಬಳಿ ಬಂದು ಕೇಳಿದ, ‘ನೀನು ಹೇಗೆ ಬಂದೆ?’ ಆತನೆಂದ, ನಾನು ನನ್ನ ಪಾಡಿಗೆ ಬಸ್ಸಿನ ತಂಗುದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ಅಚಾನಕ್ಕಾಗಿ ನನ್ನ ತಲೆ ಮೇಲೆ ಫ್ರಿಡ್ಜು ಬಿತ್ತು, ನಾನೀಗ ಇಲ್ಲಿದ್ದೇನೆ…!

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ