ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಂತ್ಯವೆಂಬ ಆರಂಭ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೦

ಅಂತ್ಯವೆಂಬ ಆರಂಭ

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೦

(೧೨೧)

"ಅದೇ ಹಾಡು ಕನಸಿನಲ್ಲಿ ಮತ್ತು ನನಸಿನಲ್ಲಿ. ಆದರೆ ಒಂದು ನಿಜದ ವ್ಯತ್ಯಾಸವಾಗದ ಕಾಲದಲ್ಲಿ. ಮತ್ತೊಂದು ಹೇಗೆ ಬೇಕಾದರೂ ಮಾರ್ಪಾಡುಗೊಳ್ಳುವ ಕನಸಿನಲ್ಲಿ. ಹೇಗೆ ಸಾಧ್ಯವಿದು?"

11 ಗಂಟೆಯ ಕಡೆಯ ಬಸ್ಸು

ಅವು  ೨೦೦೦ ನೇ ಇಸವಿಯ ದಿನಗಳು, ಎಲ್ಲಾ ಕಡೆ ಮಿಲೇನಿಯಂ ಸೆಲೆಬ್ರೇಶನ್, ಅಂದಿನ ಯುವಕರಿಗಂತೂ ಎರಡು ಶತಮಾನದ  ಬದಲಾವಣೆಗೆ ಸಾಕ್ಷಿಯಾದ ಉತ್ಸಾಹ. ಎಲ್ಲಿ ನೋಡಿದರು ಮಿಲೇನಿಯಂ ಗ್ರೀಟಿಂಗ್ಸ್ , ಮಿಲೇನಿಯಂ ಅಂಗಡಿ, ಅದು ಇದು ಎಲ್ಲದರಲ್ಲೂ ಮಿಲೇನಿಯಂ ಅನಿವಾರ್ಯವೇನೋ ಎಂಬಂತೆ ಸೇರಿಕೊಂಡು ಬಿಟ್ಟಿತ್ತು. ಈ ಮಿಲೇನಿಯಂ ಜ್ವರ ಕನ್ನಡ ರಾಜ್ಯೋತ್ಸವವನ್ನು ಬಿಟ್ಟಿರಲಿಲ್ಲ, ನವೆಂಬರ್ ತಿಂಗಳು ಯಾವ ಗಲ್ಲಿಯಲ್ಲಿ ನೋಡಿದರು ರಾಜ್ಯೋತ್ಸವಗಳು.

ಭಂಡರೋ, ಷಂಡರೋ, ಫಂಡ್‌ ಲೂಟಿಕೋರರೋ? ಯಾರು ಹಿತವರು ನಿನಗೆ ಈ ಮೂವರೊಳಗೆ?!

ಸಂಸತ್ತಿನ ಇಡೀ ಚಳಿಗಾಲದ ಅದವೇಶನವೇ ಹಗರಣಕ್ಕೆ ಬಲಿಯಾಗುತ್ತಿದೆ. ನಾವೇ ಆರಿಸಿ ಕಳಿಸಿದ ಹೀರೊಗಳ ಧೈರ‍್ಯ-ಸಾಹಸವಿದೆಂದು ಕಾಲರ್ ಮೇಲೆತ್ತಿಕೊಂಡು ಹೆಮ್ಮೆಪಡಬೇಕಷ್ಟೇ!


ಹಗರಣಗಳನ್ನು ಹುಟ್ಟಿಸುವಲ್ಲಿ, ಅದನ್ನು ನಿಭಾಯಿಸುವಲ್ಲಿ ಬಲಪಂಥದ ಭಾಜಪವೂ ಅಷ್ಟೆ, ಎಡಪಂಥದ ಕಮ್ಯುನಿಸ್ಟೂ ಅಷ್ಟೆ, ಅಂತರಾಳದ ಕಾಂಗೆಸ್ಸೂ ಅಷ್ಟೆ - ಎಲ್ಲರ ಮನೆಯ ದೋಸೆಯೂ ತೂತೇ! ಈ ಯಾರ ಮನೆಯ ದೋಸೆಯ ಹಂಗೂ ಬೇಡ; ಬಿಟ್ಟುಬಿಡಿ. ನಮ್ಮದೇ ದೋಸೆ ಹೊಯ್ದುಕೊಳ್ಳೋಣವೆಂದರೂ ದೇಶದ ಮನೆಯ ಕಾವಲಿಯನ್ನೇ ತತಾತೂತು ಮಾಡಿಟ್ಟಿದ್ದಾರಲ್ಲಾ, ಇದಕ್ಕೇನನ್ನೋಣ?!

'ರಾಜೀವ ದೀಕ್ಷಿತ'ರು ಎಂಬ ತತ್ವದೊಂದಿಗೆ...


ಚಿತ್ರ:Biography of Rajiv Dixit

ನವೆಂಬರ್ ೩೦ ಬೆಳಗ್ಗೆ ಸ್ವದೇಶಿ ಚಳುವಳಿಯ ರಾಜೀವ ದೀಕ್ಷಿತರು ತೀರಿಕೊಂಡರು ಎಂಬ ಸಂದೇಶ ತಲುಪಿದಾಗ ಅವಾಕ್ಕಾದೆ, ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸಿದೆ. ಆದರೆ ಕೊನೆಗೆ ಅದು ಖಚಿತವಾದಾಗ ಆವರಿಸಿದ್ದು ಒಂದು ನಿಸ್ಸಹಾಯಕ ಭಾವ

ಚುರ್ಮುರಿ - ೧೧

೩೩) ಅವಳು ಲಂಗ ದಾವಣಿ ಹಾಕಿಕೊಂಡು ಹೈ ಹೀಲ್ಡ್ ಸ್ಲಿಪ್ಪರ್ ಹಾಕಿಕೊಂಡಿದ್ದಳು. ೩೪) ಅವರಿಬ್ಬರೂ ಕನ್ನಡ ಚಿತ್ರ ನೋಡುವುದಕ್ಕೆ ಹೋಗಿದ್ದರು, ಇಬ್ಬರೂ ಕನ್ನಡಿಗರೇ, ಆದರೆ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು. ೩೫) ಮದುವೆಯಾಗುವುದಕ್ಕೆ ಮೊದಲು ಅವನು ನವರಂಗ್ ಚಿತ್ರಮಂದಿರದಲ್ಲಿ ೫೦ ರೂ ಕೊಟ್ಟು ಸಿನೆಮಾ ನೋಡುತ್ತಿದ್ದ, ಮದುವೆಯಾದ ಮೇಲೆ ಮಂತ್ರಿ ಮಾಲ್ನಲ್ಲಿರುವ ಐನಾಕ್ಸ್ ಚಿತ್ರಮಂದಿರದಲ್ಲಿ ೫೦೦ ರೂ ಕೊಟ್ಟು ನೋಡುತ್ತಿದ್ದಾನೆ. ೩೬) ಅವನು ಕಾರಿನಲ್ಲಿ ತಲೆಗೆ ಕ್ಯಾಪ್ (ತಲೆಯಲ್ಲಿ ಕೂದಲಿದ್ದರೂ) ಹಾಕಿಕೊಂಡಿದ್ದನು. ೩೭) ಪಲ್ಲವಿ ಚಿತ್ರಮಂದಿರದ ಹತ್ತಿರ ಇರುವ ಬಸ್ ನಿಲ್ದಾಣದ ಬೋರ್ಡ್ ಕನ್ನಡದಲ್ಲಿ ಪಲ್ಲವಿ ಚಿತ್ರಮಂದಿರ ತೋರಿಸುತ್ತಿದ್ದರೆ, ಚಿತ್ರಮಂದಿರದ ಒಳಗೆ ಕನ್ನಡದ ಸದ್ದೇ ಇರಲಿಲ್ಲ.

ರಾಜೀವ್ ದೀಕ್ಷಿತರ ಶ್ರದ್ಧಾಂಜಲಿ ಸಭೆ.

 "ಶರಣರ ಬದುಕನ್ನು ಮರಣದಲ್ಲಿ ನೋಡು" ಎಂದು ಹಿರಿಯರು ಹೇಳಿದ್ದಾರೆ.

 

 ರಾಷ್ಟ್ರೀಯ ಯುವ ಸಂತ ರಾಜೀವ್ ದೀಕ್ಷಿತರ ಶ್ರದ್ಧಾಂಜಲಿ ಸಭೆಯನ್ನು ಇದೇ ಭಾನುವಾರ ಬೆಳಿಗ್ಗೆ 11.30 ಕ್ಕೆ ಹಮ್ಮಿಕೊಳ್ಳಲಾಗಿದೆ.

 

ಸ್ಥಳ: ಸೃಷ್ಟಿ ವೆಂಚರ್ಸ್

ಪುಳಿಯೋಗರೆ ಪಾಯಿಂಟ್ ಮೇಲೆ

 ಬಸವನಗುಡಿ

ಬೆಂಗಳೂರು.

 

 ಕರ್ನಾಟಕದ ಎಲ್ಲ ಕಾರ್ಯಕರ್ತರು ಸಭೆಗೆ ಆಗಮಿಸಲಿದ್ದಾರೆ.

 

 ಅಗಲಿದ ಮಹಾನ್ ನಾಯಕನಿಗೆ ಎರಡು ಹನಿ ಕಂಬನಿ ಮಿಡಿಯೋಣ

ಕೆಳಗೆ ಕೊಟ್ಟಿರುವ ಈ ಪ್ರಾಣಿ/ಪಕ್ಷಿಗಳನ್ನು ಗುರುತಿಸಿರಿ.

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] 


 


ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. 


ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ ಇಂಗ್ಲೀಶ್ ಪದವನ್ನೋ ಇಲ್ಲಾ ಒಂದು ಫೋಟೋ ಚಿತ್ರವನ್ನೋ ಕೊಡಿರಿ.


 


 


ಕೋತಿಗಳಲ್ಲಿ ಜಾತಿ: 


ಶಿಂಗಳೀಕ, ಕರ್ಕೋಡಗ


ಕೋತಿ, ಮಂಗ, ಕೋಡಗ


ಮೂಸು, ಮುಸವ, ಮುಸುಕು


ಕೊಂದಮುಸುಕು, ಕೊಂಡಮುಸವ

ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ಗುರುತಿಸಿರಿ.

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] 


 


ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. 


ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ ಇಂಗ್ಲೀಶ್ ಪದವನ್ನೋ ಇಲ್ಲಾ ಒಂದು ಫೋಟೋ ಚಿತ್ರವನ್ನೋ ಕೊಡಿರಿ.


 


ಕನ್ನಡ ಪದಗಳು:


ತಾವರೆ 


ಕಮಲ


ಗಸಗಸೆ


ಸಾಸಿವೆ


ರಂಗುಮಾಲೆ