ಕೆಳಗೆ ಕೊಟ್ಟಿರುವ ಈ ಪ್ರಾಣಿ/ಪಕ್ಷಿಗಳನ್ನು ಗುರುತಿಸಿರಿ.
ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್]
ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು.
ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ ಇಂಗ್ಲೀಶ್ ಪದವನ್ನೋ ಇಲ್ಲಾ ಒಂದು ಫೋಟೋ ಚಿತ್ರವನ್ನೋ ಕೊಡಿರಿ.
ಕೋತಿಗಳಲ್ಲಿ ಜಾತಿ:
ಶಿಂಗಳೀಕ, ಕರ್ಕೋಡಗ
ಕೋತಿ, ಮಂಗ, ಕೋಡಗ
ಮೂಸು, ಮುಸವ, ಮುಸುಕು
ಕೊಂದಮುಸುಕು, ಕೊಂಡಮುಸವ
ನಳ, ಅಡವಿಮನುಷ್ಯ, ಕಾಡುಪಾಪ
ಹುಲಿಜಾತಿ:
ಹುಲಿ, ಹೆಬ್ಬುಲಿ, ಕಿರಬ, ಇಬ್ಬಂದಿ, ದೊಡ್ಡ ಇಬ್ಬ;
ಹುಲಿಬೆಕ್ಕು, ಬೊಟ್ಟಿನಬೆಕ್ಕು, ಕಾಡು ಬೆಕ್ಕು;
ಚಿರತೆ, ಶಿವಂಗಿ, ಚಿರಚ;
ಪುನಗಿನ ಬೆಕ್ಕು, ಜವಾಜಿ ಬೆಕ್ಕು, ಕೀರ ಬೆಕ್ಕು, ಕಬ್ಬು ಬೆಕ್ಕು;
ಮುಂಗಲಿ, ಮುಂಗಸಿ, ಕೀರ;
ಕಿರುಬ, ಕತ್ತೆಕಿರುಬ;
ತೋಳ, ನರಿ, ಬಳ್ಳು, ಗುಳ್ಳೆನರಿ;
ಸೀಳುನಾಯಿ, ಕೆಂಪುನರಿ, ಚನ್ನಂಗಿನರಿ;
ನೀರ್’ನಾಯಿ
ಕರಡಿ
ತೊಗಲ್’ಬಾವಲಿ, ತೋಲೇ ಹಕ್ಕಿ;
ಕಣ್’ಕಪಟ
ಗುಬ್ಬಿಲಾಯಿ
ಹಾರುವಬೆಕ್ಕು
ಅಳಿಲು, ಕೆಂದಳಿಲು, ಉಡುವೆ;
ಇಲಿ, ಬಿಲ ಇಲಿ, ಕೆಂಪು ಇಲಿ;
ಸುಂಡಿಲಿ, ಸೊಂಡಿಲಿ
ಮೂಗಿಲಿ;
ಚಿಟ್ಟಿಲಿ, ಬೈಳ್ ಇಲಿ, ಕಲ್ ಇಲಿ;
ತೋಡ, ಹೆಗ್ಗಣ, ಗೋಲಂದಿ;
ಮುಳ್ಳಹಂದಿ, ಎಡು, ಎಯ್ಯ;
ಮೊಲ, ಕುಂದಿಲಿ;
ಆನೆ
ಕಾಡುಕೋಣ, ಕಾಟೆ;
ಕಾಡಾಟು, ಕಾಡು ಕುದರೆ;
ಚಿಗರಿಹುಲ್ಲೆ, ಕೊಂಡಗುರಿ, ಶಂಕಹುಲ್ಲೆ;
ಕಾಡುಕುರಿ;
ಕಡವೆ, ಕಡ;
ಸಾಗರ, ಡುಪ್ಪಿ;
ಕೂರುಪಂದಿ;
ಕಾಡುಹಂದಿ, ಜಿಪ್ಪು ಹಂದಿ;
ಮೊಸಳೆ;
ಆಮೆ, ಹಾಲಾಮೆ, ಮುಂಕಿ ಆಮೆ, ತಾಬಿಲೆ;
ಓತಿ (ಓರಿಕೇತ) ಹಲ್ಲಿ;ಊಸರವಳ್ಳಿ
ಹಲ್ಲಿ
ಹಾವರಾಣಿ;
ಗೋಸುಂಬೆ;
ದಾಸರಹಾವು, ಕೇರಮಂಡಲ, ಕೊಳಕುಮಂಡಲ;
ನೀರುಹಾವು (ಒಳ್ಳೆ)
ಹಸುರುಹಾವು
ಹಸುರುನೂಲಿಗೆ, ಗೋಧಿನಾಗರ;
ಕಲ್ಲು ಹಾವು, ಜಡೆನಾಗರ;
ಕಪ್ಪೆ;
ಮೀನು:
ಮರವೆ, ಚೇಳು, ವೋಲೆ;
ಗೊದಳೆ, ಬಾಳೆ, ಗೆರಲು;
ಕರೀಮೀನು, ಗಿಡಪಕ್ಕೆ, ಕೊರವ;
ಮರಪಕ್ಕೆ, ಅರುಳಿ;
ಹುರವಿನ ಮರಳು, ಕಂಚಿನ ಮರಲು;
ಬಿಳೀಕೊರವ, ಮರಕೊರವ, ಬಾಳು;
ಬೇಲಿಕೊರವ;
ಜಿಗಣಿ, ಜೇಡ, ಚೇಳು;
ಕಜ್ಜಿಹುಳ, ಉಣ್ಣೆ;
ಬಂದಿಬಸವ ಜರಿ;
ಹೇನು, ತಗಣಿ;
ಮಿಂಚುಹುಳ;
ಅರುಗ;
ಜಿರಲೆ cockroach, ಜಿಲ್ಲೆ (ಝಲ್ಲಣ) cricket
ಪತಂಗ, ಮಿಡಿತೆ, ಟೊಪ್ಪು;
ತೂನಿಹುಳ;
ಗೆದ್ದಲು;
ಚಿಕಟ;
ಗುಂಗಾಡು, ಸೊಳ್ಳೆ, ನೊಣ, ಚಿಟ್ಟೆ, ಕಪಟೆ, ಪಾತ್ರಗಿತ್ತಿ;
ಸೀತಾದೇವಿ ಹುಳ, ಗೊಲ್ಲಿಭಾಮಾ;
ನುಸಿ, ರೇಷ್ಮೆ ಹುಳ, ಇರುವೆ;
ಕನಜ, ಜೇನು, ಜೀರಂಗಿ(ಜೀರುಂಡೆ);
ದುಂಬಿ, ಹಸುರು ದುಂಬಿ, ತುಡವೆ, ತೊರಿಗ;
ಹಕ್ಕಿಗಳು:
ಕೋಳಿ, ಕಾಗೆ, ಗುಬ್ಬಿ, ಕುಕ್ಕಲಿ, ಮೈನ, ಮರಕುಟುಕ;
ಕೋಗಿಲೆ, ಗಿಳಿ, ಹದ್ದು, ದೇಗೆ;
ಗೂಬೆ, ಗೂಗೆ, ಬಕ, ಕೊಕ್ಕರೆ;
ಬಾತು, ಪಾರಿವಾಲ, ನವಿಲು;