ನಾನಿರೋದೆ ಹೀಗೆ !
ದಿನದ ಜಂಜಾಟ ಮುಗಿಸಿ , ಸುಮ್ಮನೆ ಕುಳಿತಾಗ ನೆನಪಾಯ್ತು
ಇಲ್ಲಿ ತನಕ ಅಂದುಕೊಂಡಿದ್ದರಲ್ಲಿ ದಕ್ಕಿದ್ದೆಷ್ಟೋ ಮಿಕ್ಕಿದ್ದೆಷ್ಟೋ ...
ಅದೇನೇ ಆಗಲಿ ಧೃಡ ಮನಸ್ಸು ನನ್ನದೆಂದು ಹೊಗಳಿಕೊಂಡಾಯ್ತು
ಮತ್ತೆ ಬೆಳಗಾಗುವವರೆಗೆ ಸದ್ದಿಲ್ಲದೇ ಬಿಕ್ಕಿದ್ಯಾಕೋ...?!
ನಾಳೆಯ ದಾರಿಯಲ್ಲಿದೆ ಅನೇಕ ಕಲ್ಲು ಮುಳ್ಳು
ಅದೆಲ್ಲ ಜಯಿಸಬೇಕು ಬದುಕಲ್ಲ ನಿಂತ ನೀರು,
ಹೀಗೆಲ್ಲ ಅಂದರೆ ತತ್ವಜ್ಞಾನಿ ಯಾಕಾದೆ ಅಂದುಬಿಟ್ಟರಲ್ಲ(!)?
ನಾ ತತ್ವಜ್ಞಾನಿಯಲ್ಲ,ಅಲ್ಪ ಜ್ಞಾನಿ , ತಿಳಿಯದು ನಂಗದೆಲ್ಲಾ
ಆದರೆ ಅಲ್ಪದರಲ್ಲೇ ಇರುವುದಂತೆ ಅಲ್ಲೋಲ ಕಲ್ಲೋಲಗಳೆಲ್ಲಾ!
ಏನೂ ಮಾಡಲಾಗದ ಮನ ಬಯಸೋದು ಮಾತ್ರ ಸಾವಿರಾರು
ಭಾವುಕತೆಯೊಂದೆ ಬದುಕಲ್ಲ, ಅದಕ್ಕೆ ಇರಬೇಕು ಸಿಕ್ಕಿದ್ದು ಚೂರುಪಾರು.
- Read more about ನಾನಿರೋದೆ ಹೀಗೆ !
- 18 comments
- Log in or register to post comments