ನಾನಿರೋದೆ ಹೀಗೆ !

ನಾನಿರೋದೆ ಹೀಗೆ !

ದಿನದ ಜಂಜಾಟ ಮುಗಿಸಿ , ಸುಮ್ಮನೆ ಕುಳಿತಾಗ ನೆನಪಾಯ್ತು
ಇಲ್ಲಿ ತನಕ ಅಂದುಕೊಂಡಿದ್ದರಲ್ಲಿ ದಕ್ಕಿದ್ದೆಷ್ಟೋ ಮಿಕ್ಕಿದ್ದೆಷ್ಟೋ ...
ಅದೇನೇ ಆಗಲಿ ಧೃಡ ಮನಸ್ಸು ನನ್ನದೆಂದು ಹೊಗಳಿಕೊಂಡಾಯ್ತು
ಮತ್ತೆ ಬೆಳಗಾಗುವವರೆಗೆ ಸದ್ದಿಲ್ಲದೇ ಬಿಕ್ಕಿದ್ಯಾಕೋ...?!

ನಾಳೆಯ ದಾರಿಯಲ್ಲಿದೆ ಅನೇಕ ಕಲ್ಲು ಮುಳ್ಳು
ಅದೆಲ್ಲ ಜಯಿಸಬೇಕು ಬದುಕಲ್ಲ ನಿಂತ ನೀರು,
ಹೀಗೆಲ್ಲ ಅಂದರೆ ತತ್ವಜ್ಞಾನಿ ಯಾಕಾದೆ ಅಂದುಬಿಟ್ಟರಲ್ಲ(!)?
ನಾ  ತತ್ವಜ್ಞಾನಿಯಲ್ಲ,ಅಲ್ಪ ಜ್ಞಾನಿ , ತಿಳಿಯದು ನಂಗದೆಲ್ಲಾ
ಆದರೆ ಅಲ್ಪದರಲ್ಲೇ ಇರುವುದಂತೆ ಅಲ್ಲೋಲ ಕಲ್ಲೋಲಗಳೆಲ್ಲಾ!

ಏನೂ ಮಾಡಲಾಗದ ಮನ ಬಯಸೋದು ಮಾತ್ರ ಸಾವಿರಾರು
ಭಾವುಕತೆಯೊಂದೆ ಬದುಕಲ್ಲ, ಅದಕ್ಕೆ ಇರಬೇಕು ಸಿಕ್ಕಿದ್ದು ಚೂರುಪಾರು.
ಕಣ್ತೆರೆದು ಶೂನ್ಯ ನೋಡುತ್ತಿದ್ದೆ
ಕವಿ ಹಾಡುತಿದ್ದ, ಇರುವುದೆಲ್ಲವ ಬಿಟ್ಟು ಇರದಿದುದರೆಡೆಗೆ ತುಡಿಯುವುದೇ ಜೀವನ !
ಪುನಃ ಹಾಗೆ ಕಣ್ಮುಚ್ಚಿಕೊಂಡೆ...
ಬಾನಾಚೆಗಿನ ನನ್ನ ಮಹಲಿನ ಬಾಗಿಲೆಲ್ಲಕ್ಕೂ ಬರೀ ನಕ್ಷತ್ರಗಳದ್ದೆ ತೋರಣ !!

ಯಾರು ಏನೆಂದರೂ  ನಾವು ಇರೋದೇ ಹೀಗೆ
ಭೂಲೋಕದಲ್ಲಿ ವಾಸಿಸಲು ನಾಲಾಯಕ್ಕು ಅಂತ  ಯಾರಂದರೂ...!
ಬಹುಶಃ ಖುಷಿ ಕೊಡುತ್ತೆ ಕೆಂಬಣ್ಣದ ಸಾವು ಕೂಡ  ನನಗೆ
ಬದಲಾಗದ ಇವಳ್ಯಾಕೆ ಹೀಗೆ ಅಂತ ಯಾರೆಷ್ಟು   ತಲೆಕೆಡಿಸಿಕೊಂಡರೂ..!!!

Rating
No votes yet

Comments