ಮಾತೆ ಇಲ್ಲದ ತುಟಿಗಳ ಮೇಲೆ ಮಾತಾದೆ ನೀನು

ಮಾತೆ ಇಲ್ಲದ ತುಟಿಗಳ ಮೇಲೆ ಮಾತಾದೆ ನೀನು

ಬರಹ

ತೆಲುಗು ಹಾಡೊಂದರ ಭಾವಾನುವಾದ ಮಾಡಲು ಪ್ರಯತ್ನಿಸಿದ್ದೇನೆ..


ಅಲ್ಲೂ ನೀನೆ ಇಲ್ಲೂ ನೀನೆ..


ಮನಸೆಲ್ಲಿ ನೋಡಿದರೂ ಅಲ್ಲೂ ನೀನೆ..


ಎಲ್ಲೇ ಹೋಗುತ್ತಿದ್ದರೂ ಏನೇ ಮಾಡುತ್ತಿದ್ದರೂ ಪ್ರತಿ ಜಾಗದಲ್ಲೂ ನೀನೆ..


ಅಲ್ಲೂ ನೀನೆ ಇಲ್ಲೂ ನೀನೆ..ಕಲರವ ಇದ್ದರು ಅದು ನೀನೆ..


ಮಾತೆ ಇಲ್ಲದ ತುಟಿಗಳ ಮೇಲೆ ಮಾತಾದೆ ನೀನು...


ಅಂದು ಇಂದು ಎಂದಾದರೂ...ನನ್ನ ಮಂದಹಾಸ ನಿನ್ನಿಂದಲೇ..


ತಿಳಿಯದ ಲೋಕದ ಸವಿಯ ರುಚಿ ತೋರಿಸಿದೆ...


ಪರಿಚಯವೆಲ್ಲ ನೆನಪೇನಾ...ಕ್ಷಣವಾದರೂ ನೆನಪಾಗುವುದಿಲ್ಲವೇ...


ಎದುರಲ್ಲಿದ್ದರೂ ನಿಜವೇ ಆದರೂ ಕನಸಾದೆಯಲ್ಲ...


ಬಣ್ಣ..ರೂಪವು ಇಲ್ಲವೇ ಇಲ್ಲದ ಪ್ರೇಮ..


ಸುತ್ತಲೂ ಶೂನ್ಯವಿದ್ದರು ನೀನೆ ಕಾಣುವೆ...


ದೂರ...ಹತ್ತಿರದ ವ್ಯತ್ಯಾಸ ನೋಡದ ಪ್ರೇಮ..


ನಿನ್ನ ಹಾಗೆ ಹತ್ತಿರ ಬಂದು ಮಾತಾಡಿಸುವುದು...

ನಿನ್ನ ಹೃದಯದ ಮೂಲೆಯಲ್ಲಿ ಹುದುಗಿರೋ ಪ್ರಾಣವಾಗಿ



ನೀನಿಲ್ಲದಿದ್ದರು ನೀನಿರುವೆ ಎಂದೆನಿಸುವುದು...


ಅಲ್ಲೂ ನೀನೆ ಇಲ್ಲೂ ನೀನೆ..


ಮನಸೆಲ್ಲಿ ನೋಡಿದರೂ ಅಲ್ಲೂ ನೀನೆ..


ನನಗೇ ತಿಳಿಯದ ಹಾಗೆ ನನ್ನೊಳಗೆ ನೀ ಮನೆ ಮಾಡಿದೆ...


ನಾನೇ ನೀನಾಗುವ ಹಾಗೆ ...ಪ್ರೇಮಾಂಕುರವ ಮಾಡಿದೆ..


ಒಂದು ಮಾತಾದರೂ ಹೇಳದೆ...ನಿನ್ನ ಪಾಡಿಗೆ ನೀ ಹೊರಟಿದೆ..


ನೋಡಿಯೂ ನೋಡದೆ ನನ್ನ ಒಬ್ಬಂಟಿ ಮಾಡಿದೆ..


ಏಕಾಂತ ವೇಳೆಯಲ್ಲಿ ಯಾವ ಕಾಂತಿಯೂ ಇಲ್ಲದೆ...


ಸ್ವಲ್ಪ ಕೂಡ ಕರುಣೆ ತೋರದೆ ದ್ವೇಷವೇತಕೆ..


ನಿನ್ನ ಸನಿಹವಿಲ್ಲದೆ ಮನಸು ಇರಲಾಗದು..


ನಿನ್ನ ಹೆಸರಿಲ್ಲದ ಪ್ರೇಮವನ್ನು ಊಹಿಸಲು ಸಾಧ್ಯವೇ...


ಅಲ್ಲೂ ನೀನೆ ಇಲ್ಲೂ ನೀನೆ..


ಮನಸೆಲ್ಲಿ ನೋಡಿದರೂ ಅಲ್ಲೂ ನೀನೆ..


ಎಲ್ಲೇ ಹೋಗುತ್ತಿದ್ದರೂ ಏನೇ ಮಾಡುತ್ತಿದ್ದರೂ ಪ್ರತಿ ಜಾಗದಲ್ಲೂ ನೀನೆ..


ಅಲ್ಲೂ ನೀನೆ ಇಲ್ಲೂ ನೀನೆ..ಕಲರವ ಇದ್ದರು ಅದು ನೀನೆ..

ಮಾತೆ ಇಲ್ಲದ ತುಟಿಗಳ ಮೇಲೆ ಮಾತಾದೆ ನೀನು



ಇದು ನನ್ನ ಐವತ್ತನೇ ಬರಹ..ಸಂಪದಕ್ಕೆ ಬರುವ ಮುಂಚೆ ಇಷ್ಟು ಬರೆಯಬಲ್ಲೆ ಎಂದು ನನಗೆ ಅರಿವೇ ಇರಲಿಲ್ಲ...ನಿಮ್ಮೆಲ್ಲರ ಪ್ರೋತ್ಸಾಹವೇ ನನಗೆ ಸ್ಫೂರ್ತಿ...ಮುಂದೆಯೂ ಹೀಗೆ ಇರಲಿ ಎಂದು ಆಶಿಸುತ್ತೇನೆ..


ಪ್ರತಿಯೊಬ್ಬರಿಗೂ ಧನ್ಯವಾದಗಳು..