ಸಾಹಿತ್ಯ ಪರಿಷತ್ತಿಗೆ ಸರಕಾರದ ಹಂಗು

ಸಾಹಿತ್ಯ ಪರಿಷತ್ತಿಗೆ ಸರಕಾರದ ಹಂಗು

        ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕವಾಗಿ ಸರಕಾರದ ಮೇಲಿನ ಪರಾವಲಂಬನೆ ಇರಬಾರದು ಎಂದೊಬ್ಬರು ಸಾರ್ವತ್ರಿಕ ಅಭಿಪ್ರಾಯ ಬರೆದಿದ್ದಾರೆ. ಹೌದು! ಇದು ಆತ್ಮಮರ‍್ಯಾದೆಯ ಕೆಚ್ಚು! ಈ ಕರೆಯ ಸಕಾರಾತ್ಮಕ, ನಕಾರಾತ್ಮಕ ಸಮರ್ಥನೆ ಬಗ್ಗೆ ಆಲೋಚಿಸಿದೆ. “ಸರಕಾರ ಯಾರದ್ದು? ಕನ್ನಡಿಗರದ್ದು ತಾನೇ? ಕನ್ನಡದ ಕೆಲಸಕ್ಕೆ ಕೊಟ್ಟರೇನು ಗಂಟುಹೋಗುವುದು?” ಎಂದು ಉತ್ಸಾಹಿಗಳು ಜಗ್ಗಿಸಿ ಕೇಳಿದ್ದು ನೆನಪಾಯಿತು. ಇದು ಸರಿ. ಆದರೆ ಈಗ ಸರಕಾರವೆನ್ನುವುದೇ ರಾಜಕೀಯದವರ ಪಾಳೇಗಾರಿಕೆಯಾಗಿ ಕೂತಿದೆ. ರಾಜಕೀಯವೆಂದರೇ ಸಂಕುಚಿತ ಸ್ವಾರ‍್ಥದ ಛಿದ್ರೀಕರಣ. ಆ ಮಂದಿಗೆ ಸಂಸ್ಕೃತಿ-ಸಭ್ಯತೆಗಳ ಗಂಧವೂ ಇರುವುದಿಲ್ಲ; ಗಾಳಿಯೂ ಇರುವುದಿಲ್ಲ. ಕನ್ನಡದ ಸಮಗ್ರತೆ ಮತ್ತು ಗಟ್ಟಿತನಕ್ಕಿಂತಾ ಹೆಚ್ಚಾಗಿ ಇವರ ಒಳುದ್ದೇಶ, ಇತರರನ್ನು ಚುಚ್ಚಿ, ಇರಿದು, ಛಿದ್ರಗೊಳಿಸುವ ಕೈದುವಾಗಿಯೇ ಕನ್ನಡವನ್ನೂ ಹಿಡಿಯುವುದಾಗಿರುವ ಸಧ್ಯತೆಯಿರುತ್ತದೆ! ಈ Negative ಬೇಡ. ಬೇಕಾದ Positive ಅಂಶವೆಂದರೆ, ಇಂಥಾ ಸಂಸ್ಥೆಗಳು ಅನುದಾನದ ಗಾಳಕ್ಕೆ ಬೀಳದೆ ನಿರಂಕುಶವಾಗಿದ್ದರೆ, ಸರಕಾರವೆಂಬ ಮದ್ದಾನೆ, ಕನ್ನಡ-ಸಂಸ್ಕೃತಿಗಳ ವಿಚಾರದಲ್ಲಿ ಹಾದಿ ತಪ್ಪದಂತೆ ತಾನೇ ಅಂಕುಶವಾಗುವುದು ಸಾಧ್ಯವಾಗುತ್ತದೆ! ರಾಜಕೀಯೇತರವಾಗಿ ಕನ್ನಡದ ಕೆಚ್ಚುಳ್ಳ ಸಭ್ಯ ಉದಾರಿಗಳು ಈ ಮೂಗುದಾರ ಹಿಡಿಯಲು ಮುಂದಾಗುವುದು ಆತ್ಮಸಮ್ಮಾನದ ಲಕ್ಷಣವಾದೀತು!  

Rating
No votes yet

Comments