ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೀವನ ದರ್ಶನ..

ಈ ದಿನ ಒಬ್ಬೊಬ್ಬರೇ ನನ್ನ ಮು೦ದೆ ಬೆತ್ತಲಾಗುತ್ತಿದ್ದಾರೆ,


ಹೇಳಿದ್ದೆಲ್ಲವನ್ನೂ ಮರೆತು, ನಾ ಅ೦ದುಕೊ೦ಡಿದ್ದೆಲ್ಲವನ್ನೂ


ಒಮ್ಮೆಲೇ ಸುಳ್ಳಾಗಿಸುವ೦ತೆ!


ಕ೦ಡೂ ಕಾಣದ೦ತೆ ಇರಬೇಕೆ೦ದಿದ್ದರೂ


 ಒಬ್ಬೊಬ್ಬರು ಒ೦ದೊ೦ದು ರೀತಿಯಲ್ಲಿ


ತಮ್ಮದೇ ಸರಿ ಎ೦ಬ೦ತೆ ಸಮರ್ಥಿಸಿಕೊಳ್ಳುವ


ರೀತಿಯೋ ನನ್ನನ್ನೇ ತಬ್ಬಿಬ್ಬುಗೊಳಿಸುತ್ತಿದೆ!


ಒಳ್ಳೆಯದಾಯಿತು! ಇದು ಮು೦ದೆ೦ದಾದರೂ


ಆಗಲೇ ಬೇಕಿತ್ತು, ಅದು ಈ ದಿನವೇ ಆಯಿತು!


 


ಒಬ್ಬೊಬ್ಬರಿ೦ದ ಒ೦ದೊ೦ದು ರೀತಿಯಲ್ಲಿ


ಜೀವನ ದರ್ಶನವಾಗುತ್ತಿದೆ.


ಜೀವನವೇ ಇಷ್ಟೇನೇ? ಇಲ್ಲ!


ಇನ್ನೂ ಏನೇನಿದೆ ಇಲ್ಲಿ!ನಾನು ಅರಿಯುವ೦ಥದ್ದು?


ಇದೆ. ಕೆಡುಕಿನ ಹಿ೦ದೆಯೇ ಕಾಣುತ್ತಿರುವ ಬೆಳ್ಳಿ ಬೆಳಕು


ನನ್ನದೇ ಎ೦ಬ ಸ೦ಪೂರ್ಣ ವಿಶ್ವಾಸವಿದ್ದರೂ


ಅಕಸ್ಮಾತ್ ಮು೦ದಿನ ಅನುಭವವೂ


ಹಿ೦ದಿನದೇ ಆದರೆ ಎ೦ಬ ಅಳುಕಿಲ್ಲದಿಲ್ಲ.


ಆದರೂ ಹೆಜ್ಜೆ ಹಾಕುತ್ತಿರುವೆ

ಎಳೆ ಅಷ್ಟಮಿ - ಮಲೆನಾಡಿನಲ್ಲಿನ ವಿಶಿಷ್ಟ ಆರಾಧನೆ

 ಸಾಗರ ತಾಲ್ಲೂಕು ಹಾಗೂ ಇದಕ್ಕೆ ಹೊಂದಿಕೊಂಡಿರುವ ಸೊರಬ, ಸಿದ್ದಾಪುರ ತಾಲ್ಲೂಕಿನ ಭಾಗಗಳಲ್ಲಿ ಮಾತ್ರಾ ಕಂಡಬರುವ ವಿಶೇಷ ಆರಾಧನೆಯ ಎಳೆ ಅಷ್ಟಮಿ ಪೂಜೆ.

ಎಳೆ ಅಷ್ಟಮಿ ಹಬ್ಬದ ಚಿತ್ರಗಳು

 ಸಾಗರ ತಾಲ್ಲೂಕು ಹಾಗೂ ಇದಕ್ಕೆ ಹೊಂದಿಕೊಂಡಿರುವ ಸಿದ್ದಾಪುರ ತಾಲ್ಲೂಕಿನ ಭಾಗಗಳಲ್ಲಿ ಮಾತ್ರಾ ಕಂಡಬರುವ ವಿಶೇಷ ಆರಾಧನೆಯ ಎಳೆ ಅಷ್ಟಮಿ ಪೂಜೆ.

ಕರಿ ಮುಖದ Corporate

ಕಣ್ಣೆದುರು ಕಾಣದಾಗಿದೆ ನಾ ನಡೆಯ ಬೇಕಾದ ದಾರಿ

ಕಣ್ಣಳತೆಗೆ ಸಿಗದಾಗಿಹರು ಕರಿ ಮುಖದ ಜನರಿಲ್ಲಿ

ಮೇಲೇರುವ ತವಕದಲಿ ತುಳಿದಿಹರು ನೈತಿಕತೆ

ನೀತಿ ಪಾಠವ ನುಡಿದರೆ ಅಂಟಿಕೊಳ್ಳುವುದು ಅಸ್ಪ್ರುಶ್ಯತೆ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ.......

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಅಲೆದಾಡಿ ಅಲ್ಲಿ ಇಲ್ಲಿ ಬಹು ದೂರ ದಾರಿ
ಹೊತ್ತು ತ೦ದಿದೆ ಕೊಕ್ಕಿನ ತು೦ಬ ರುಚಿ
 ರುಚಿಯ ಖಾದ್ಯ ತನ್ನ ಪುಟ್ಟ ಮರಿಗಳಿಗೆ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಪುಟ್ಟ ಮರಿಗಳೀಗ ದೊಡ್ಡವಾಗಿವೆ ಅವು
ಪರಪುಟ್ಟಗಳಲ್ಲ ತಮ್ಮದೇ ಲೋಕ ತಮ್ಮದೇ
ಹಾಡು ತಮ್ಮದೇ ಹಾರಾಟ ತಮ್ಮದೇ ಹೋರಾಟ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಹಾಗೇ ಉಳಿದಿದೆ ರುಚಿಯಾದ ಆಹಾರ
ತನ್ನ ಕೊಕ್ಕಿನಲಿ ಹಿ೦ದಿನ೦ತಿಲ್ಲ ಮರಿಗಳೀಗ
ಅವರ ಆಹಾರದ ರೀತಿ ನೀತಿ ಬದಲಾಗಿದೆಯೀಗ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಆದರೆ ಉಳಿದಿಹುದು ಮಡದಿ ಹಕ್ಕಿ ಹಾಗೆಯೇ
ಕಾಯುತಿಹುದದಿಲ್ಲಿ ತನ್ನಿನಿಯನ ಬರುವಿಕೆಗಾಗಿ

ವಿಶೇಷ ವರದಿ...ನಮ್ಮ ಪ್ರತಿನಿಧಿಯಿಂದ

ಇದು ಕೇವಲ ತಮಾಷೆಗಾಗಿ. ಬಹಳ ದಿನಗಳ ಹಿಂದೆ ಮಿಂಚಂಚೆಯಲ್ಲಿ ಬಂದದ್ದು. ಇದರ ಮೂಲ ತೆಲುಗಿನಲ್ಲಿದ್ದು


ಪ್ರಥಮ ಬಾರಿ ಅನುವಾದಿಸಲು ಪ್ರಯತ್ನಿಸಿದ್ದೇನೆ.


 


ಟಿ.ವಿ.೯ ವಾಹಿನಿಯಲ್ಲಿ ಬರುವ ಸುದ್ದಿಯ ಉದಾಹರಣೆ (ತಮಾಷೆಗಾಗಿ)


 


ನಾವು ರಸ್ತೆಯಲ್ಲಿ ಹೋಗುತ್ತಿರುವಾಗ ಒಂದು ನಾಯಿ ಕುಂಟುತ್ತಿದ್ದರೆ ನೀವು ಪ್ರಾಣಿ ಪ್ರೇಮಿಗಳಾಗಿದ್ದರೆ ಅದನ್ನು ಕಂಡು ಶುಶ್ರೂಷೆ ಮಾಡುವಿರಿ, ಇಲ್ಲವಾದಲ್ಲಿ ಅದರ ದು:ಖ ಕಂಡು ಮರುಗುವಿರಿ.


 


ಅದೇ ದಾರಿಯಲ್ಲಿ ನಮ್ಮ ಟಿ.ವಿ.೯ ಸುದ್ದಿ ಸಂಗ್ರಹಕ ಹೋಗುತ್ತಿದ್ದಾನೆ. ತಕ್ಷಣ ಟಿ.ವಿ.೯ ಕಛೇರಿಗೆ ಒಂದು ಕರೆ ಹೋಗುತ್ತದೆ.


ಕೂಡಲೆ ಅಲ್ಲಿಂದ ಒಬ್ಬ ಛಾಯಾಗ್ರಹಕನನ್ನು ಸ್ಥಳಕ್ಕೆ ಕಳುಹಿಸುತ್ತಾರೆ.


 


ಈಗ ಶುರು...


 


ಸ್ವಾಮಿ, ಆ ನಾಯಿಯ ಪರಿಸ್ಥಿತಿ ಹೇಗಿದೆ? ಯಾವಾಗಿನಿಂದ ಅದು ಅಲ್ಲಿದೆ?


 


ಈ ನಾಯಿ ಬೆಳಗ್ಗಿನಿಂದ ಇಲ್ಲಿದೆ, ಈಗ ಕುಂಟುತ್ತಿದೆ...ಸ್ವಪ್ನ.


 

ರಾಷ್ಟ್ರೀಯ ಸ್ವಯಂ ಸೇವಕ ಸಂಘ - ೮

೧೯೨೮ರಲ್ಲಿ ನಾಗಪುರ ಭಾಗದಲ್ಲಿ ಒಟ್ಟು ೧೮ ಶಾಖೆಗಲಿದ್ದವು. ಮೆಟ್ರಿಕ್ ತರಗತಿ ಮುಗಿಸಿದ್ದತಹ ಸ್ವಯಂಸೇವಕರಿಗೆ ಡಾಕ್ಟರ್ಜಿ ಉನ್ನತ ವಿದ್ಯಾಭ್ಯಾಸ ಮಾಡಲು ತಿಳಿಸುತ್ತಿದ್ದರು. ಸಂಘದ ಕಾರ್ಯಕರ್ತ ಬರಿ ನೌಕರಿಗಾಗಿ ಕಾಯದೆ ರಾಷ್ಟ್ರಕಾರ್ಯಕ್ಕಾಗಿ ವಿದ್ಯೆ ಕಲಿಯಬೇಕೆಂಬ ಹೊಸ ದೃಷ್ಟಿಕೋನವನ್ನು ಅವರು ಕೊಟ್ಟರು. ಪದವೀಧರರಾಗಿ ಸಮಾಜದಲ್ಲಿ ಗೌರವ ಪಡೆದಲ್ಲಿ ಸಂಘಕಾರ್ಯಕ್ಕೆ ಹೆಚ್ಚು ಅನುಕೂಲವೆಂದು ಅವರ ನಂಬಿಕೆ. ಆರ್ಥಿಕವಾಗಿ ಅನುಕೂಲತೆ ಇದ್ದ ಸ್ವಯಂಸೇವಕರನ್ನು ಉನ್ನತ್ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಊರುಗಳಿಗೆ ಹೋಗಲು ಡಾಕ್ಟರ್ಜಿ ಸೂಚಿಸಿದರು. ಅದರಂತೆಯೇ ಶ್ರೀ ಭಯ್ಯಾಜಿ ದಾನಿ, ಬಾಬುರಾವ್ ತೇಲಂಗ್, ತಾತ್ಯ ತೇಲಂಗ್ ಇತರರು ಕಾಶಿ ವಿಶ್ವ ವಿದ್ಯಾಲಯವನ್ನು ಸೇರಿದರು.

ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ!

ಸಖೀ,
ಕಿಟಕಿಯಿಂದ ಇಣುಕುತಿಹ ಚಂದಿರನು ಅರಿತಿಹನೆ
ಮನೆಯೊಳಗೆ ನನ್ನ ಸಖಿ ನೀನು ಇಲ್ಲವೆಂದು

ದಿನವೂ ನಡೆದಿರಬಹುದೀ ಕಣ್ಣು ಮುಚ್ಚಾಲೆಯಾಟ
ಸಿಕ್ಕಿಬಿದ್ದಿಹನಿಂದಾತ ಸಖೀ, ನೀನು ಇಲ್ಲದಂದು

ನಾನು ಒಳಗೊಳಗೆ ಬರಿದೆ ಸಂತಸ ಪಡುತಲಿದ್ದೆ
ನನ್ನ ಜೊತೆಗಿರುವ ನೀನು, ಬರೀ ನನ್ನವಳೆಂದು

ನಿನ್ನ ಮೇಲಧಿಕಾರ ನನಗಷ್ಟೇ ಎಂದು ನಾನು ತಿಳಿದಿದ್ದೆ
ಅರಿತೆ ನಿನ್ನ ಸೌಂದರ್ಯೋಪಾಸಕ ರಜನೀಶನಿರುವನೆಂದು

ಎಷ್ಟೇ ಮುಚ್ಚಿಟ್ಟು ಕೊಂಡರೂ, ಎಲ್ಲೇ ಅಡಗಿ ಕೂತಿದ್ದರೂ
ಆತನ ಕಣ್ಣುಗಳಿಂದ ಮರೆಯಾಗಿ ಇರಲಾರೆವೆಂದೂ

ಎಲ್ಲರದು ಅಧಿಕಾರ ಎಲ್ಲರ ಮೇಲಿದ್ದರೂ ಏನಾದೀತಿಲ್ಲಿ
ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ
************

ನನ್ನ ಬಾಲ್ಯದ ನೆನಪುಗಳು - ಅವಳು ಯಾರು

ಈ ಲೇಖನ ಮಾಲೆ ನನ್ನ ಅತ್ಮಚರಿತ್ರೆಯಲ್ಲ ನಾನು ಅದನ್ನು ಬರೆಯುವಷ್ಟು ದೊಡ್ಡವನಲ್ಲ , ಆದರೆ ಜೀವನದಲ್ಲಿ ತುಂಬಾ ದೊಡ್ಡ ಘಟನೆಗಳು ನಮ್ಮೆದುರು ಘಟಿಸಿ ನಾವದನ್ನು ಸುಲುಭವಾಗಿಯೆ ಮರೆತು ಬಿಡುತ್ತೇವೆ ಆದರೆ ಕೆಲವೊಮ್ಮೆ ಅತಿ ಚಿಕ್ಕ ಘಟನೆಗಳು ನಮ್ಮ ನೆನಪಿನಲ್ಲಿ ಸೇರಿ ಜೀವನದ ಕಡೆಯ ಕ್ಷಣದವರೆಗು ನೆನೆಯುತ್ತಲೆ ಇರುತ್ತೇವೆ ಅಂತಹ ಆಯ್ದ ಘಟನೆಗಳ ಸರಮಾಲೆಯೆ ಈ ಲೇಖನಮಾಲೆಯ ವಿಷಯ.


 


ನನ್ನ ಬಾಲ್ಯದ ನೆನಪುಗಳು - ಅವಳು ಯಾರು