ಭಲೇ ಅದ್ರಷ್ಟ !!! ಭಾಗ - ೪
- Read more about ಭಲೇ ಅದ್ರಷ್ಟ !!! ಭಾಗ - ೪
- 2 comments
- Log in or register to post comments
ನಿಂಗನ ಚಾ ಅಂಗಡೀಲಿ ಎಲ್ಲಾ ಕುಂತಿದ್ವಿ, ಗೌಡಪ್ಪ ಬಂದೋನೆ, ಲೇ ಸುಬ್ಬ ಬಹಳ ಬೇಜಾರಾಗೈತೆ, ಏನ್ ಮಾಡ್ ಬೇಕಲಾ ಅಂದ. ಒಂದು ಹತ್ತು ಕಿತಾ ಅಲ್ಲಿಂದ ಇಲ್ಲಿಗೆ ಓಡಾಡಿ ಅಂದ ಸುಬ್ಬ. ಎರಡು ರವಂಡ್ ಹೊಡೆದು ಮೂರನೆ ರವಂಡ್ ಹೊಡೆಯೋ ಅಟೊತ್ತಿಗೆ ಗೌಡಪ್ಪ ದಪ್ ಅಂತಾ ಬಿದ್ದ. ಮಗಾ ನಿಂಗ ಪಾತ್ರೆ ಉಜ್ಜಿದ್ದ ಹುಣಸೆಹಣ್ಣು ಅಲ್ಲಿ ಒಗೆದಿದ್ದ. ಸರಿ ಬಂದು ಪಕ್ಕದಾಗೆ ಕುಂತ. ನೋಡಲಾ ಹಳ್ಯಾಗೆ ಕಾರ್ಯಕ್ರಮ ಮಾಡದೇ ಸಾನೇ ದಿನಾ ಆಯ್ತು. ಒಂದು ಕೆಲಸ ಮಾಡುವ "ಸಂಪದ ಸಮ್ಮಿಲನ" ಮಾಡಿದ್ರೆ ಹೆಂಗಲಾ ಅಂದ. ಅದಕ್ಕೇನಂತೆ ಇವತ್ತು ರಾತ್ರಿನೇ ಮಾಡುವಾ. ಲೇ ಅದು ಬೆಳದಿಂಗಳು ಊಟ ಅಲ್ಲಾ ಕಲಾ. ಕಂಪೂಟರ್ನಾಗೆ ಕೋಮಲಾ ಬರೀತಾನಲ್ಲಾ ಅದ್ರಾಗೆ ಇರೋರುನ್ನೆಲ್ಲಾ ಕರೆಸಿ ಒಂದು ಕಾರ್ಯಕ್ರಮ ಮಾಡುವಾ ಅಂದೋನೆ, ಏನಲಾ ಕೋಮಲ್ ಅಂದ.
ಸಂಜೆ ರವಿಯು ನಗು ನಗುತ ಕೆಂಪಾಗಿ
ಜಾರಿ ಜಾರಿ ಇರುಳ ಮಡಿಲಿಗೆ ಸೇರುವ ಹೊತ್ತು
ಅದೆಂಥದೋ ರವಿಗೆ ರಾತ್ರಿಯ ವ್ಯಾಮೋಹಾ!!
ಅದೇ ಇರುಳಿನಲಿ ಮನದ ಮೋಡಗಳು ಕಪ್ಪಾಗಿ
ಒಡಲಾಳದ ಮಾತುಗಳು ಒಡೆದು ಘರ್ಷಣೆಯಾಗಿ
ಪ್ರಕೃತಿ-ಪುರುಷನ ಪಾಲಾಯಿತು ಕಲಹಾ!!
ಕಗ್ಗತ್ತಲ ನಡುವೆ ತಾಳಲಾರದೆ ವೇದನೆ
ಕೆಂಡ ಕೋಪದ ಮನ ಮನಗಳೆರಡು ಕೊಸರಾಡಿ
ಕೊನೆಗೊಮ್ಮೆ ಕರಗಿ ನೀರಾಗಿ ಮತ್ತೆ ಈರ್ವರ ಸಮ್ಮೋಹಾ!!
ಯುಗ ಯುಗಗಳು ಉರುಳಿ ಜನ್ಮ ಜನ್ಮಗಳು ಕಳೆದು
ಸವಿನೆನೆಹುಗಳೆಲ್ಲ ಮರೆಯಾಗಿ ಹೋದರೂ
ಬೆಳಿಗ್ಗೆ ಬೇಗನೆ ಎದ್ದು, ಬಚ್ಚಲ ಮನೆಗೆ ಹಲ್ಲು ಉಜ್ಜಲು ಹೋದೆ. ನನಗಿಂತಲೂ ಬೇಗನೆ ಎದ್ದು ಚಿಕ್ಕ ಚಿಕ್ಕ ನೊರ್ಜಗಳು(ನೊಣಗಳು) ನನ್ನ ಟೂತ್ ಬ್ರಶ್ ನಿಂದ ಹಲ್ಲು ಉಜ್ಜುತ್ತಿದ್ದವು. ಈ ನೊರ್ಜಗಳಿಗೆ ನನ್ನ ಬ್ರಶ್ ಅಂದರೆ ಎಷ್ಟು ಪ್ರೀತಿ. ನನ್ನ ಬ್ರಶ್ ಬಳೀನೆ ಇಟ್ಟಿರುವ ನನ್ನ ಮಗನ ಮತ್ತು ಮಡದಿಯ ಬ್ರಶ್ ಬಿಟ್ಟು ನನ್ನ ಬ್ರಶ್ ಮೇಲೆ ಯಾಕೆ? ಕಣ್ಣು ಎಂದು ಮನಸಿನಲ್ಲೇ ಬೈದು ಬ್ರಶ್ ತೊಳೆದು ಹಲ್ಲು ಉಜ್ಜಿ ಬಂದೆ. ನನ್ನ ಮಡದಿ ಆಗಲೇ ಎದ್ದು ಸ್ನಾನ ಮುಗಿಸಿ ಶ್ರೀರಾಮ ರಕ್ಷಾ ಹೇಳುತ್ತಿದ್ದಳು. ನಾನೇ ಹೋಗಿ ಕಾಫೀ ಮಾಡಲು ಇಟ್ಟು ಪಡಸಾಲೆಗೆ ಬಂದು ಕುಳಿತೆ. ಅಷ್ಟರಲ್ಲಿ ನನ್ನ ಮಡದಿ ತನ್ನ ಎಲ್ಲ ಮಂತ್ರಗಳನ್ನು ಮುಗಿಸಿ ಬಂದು ನನಗೆ ಮಂಗಳಾರತಿ ಮಾಡಲು ಶುರು ಮಾಡಿದಳು.
ನನ್ನ ಬರಹ
ಪ್ರತಿಕ್ರಿಯೆಗಳೆಲ್ಲಾ
ಪೂರ್ವಗ್ರಹ ಪೀಡಿತವಲ್ಲ,
ನನ್ನ ಮನದ ಅನಿಸಿಕೆಗಳು,
ವಸ್ತುನಿಷ್ಟ ಅಭಿಪ್ರಾಯಗಳೇ
ಸದಾ ತುಂಬಿಹುದು ಅಲ್ಲೆಲ್ಲಾ;
ನನ್ನ ಬರಹ
ಪ್ರತಿಕ್ರಿಯೆಗಳಿಂದ
ಬೇಸತ್ತು, ರೋಸಿಕೊಂಡು,
ರೇಜಿಗೆ ಅನಿಸಿಕೊಂಡು,
ತಮ್ಮ ಮೈಪರಚಿಕೊಂಡು,
ತಲೆಗಳನ್ನು ಕೆರೆದುಕೊಂಡು,
ರಕ್ತಸಿಕ್ತವಾದರೆ ಒಂದೊಮ್ಮೆ,
ನನ್ನ ಓದುಗ ಮಂದಿ,
ಮಾಡಬೇಡಿ ನನ್ನನ್ನು ಬಂಧಿ;
ಮನಸ್ಸು, ವಿಕೃತವಾಗಿ,
ಮಾಡಿದರೆ ಆತ್ಮಹತ್ಯೆಯ
ವೃಥಾ ದುರಾಲೋಚನೆ,
ನಾನು ಜವಾಬ್ದಾರನಲ್ಲ,
ನಿಜವಾಗಿ ನನ್ನ ಮೇಲೆ
ಬರದೇನೂ ಆಪಾದನೆ!
***********
ಆತ್ರಾಡಿ ಸುರೇಶ ಹೆಗ್ಡೆ
ನಿನ್ನ ಪ್ರತಿ ನಗುವ
ಹಿಂದೊಂದು
ಕಾರಣವಿದೆ ಎಂದು
ತಿಳಿದಿದ್ದು
ನಿನ್ನ ನೋಡುತ
ನಾ ಚರಂಡಿ ಒಳಗೆ
ಬಿದ್ದಾಗಲೇ
"ಅದೃಷ್ಟವಂತ !!! " ಈ ಶಬ್ದ ಕೇಳುತ್ತಿದ್ದಂತೆ ಮನಸ್ಸಲ್ಲಿ ಏನೋ ಒಂದು ಪ್ರಶ್ನಾತೀತ ನೋಟ ಪ್ರಾರಂಭವಾಯಿತು."ಅದೃಷ್ಟ"ನನ್ನನ್ನು ಇನ್ನು ಯಾವ ಯಾವ ಶೂಲಕ್ಕೆ ಗುರಿಮಾಡುವುದೋ ?ಯಾವ ವಿನೋದ ಕೊಡುವುದೋ ? ಎಂಬ ಎಲ್ಲ ವಿಚಾರಗಳು ತಲೆಯಲ್ಲಿ ಸವಾರಿ ಮಾಡಲಾರಂಬಿಸಿತು.
ಅಯೋಧ್ಯಾ ವಿವಾದ ಕುರಿತಂತೆ, ಸೆ. 24ರ ಸಂಯುಕ್ತ ಕರ್ನಾಟಕ ತಲೆಮಾರುಗಳ ತಳಮಳದ ಪೂರ್ವಾಪರ ಎಂಬ ಇತಿವೃತ್ತ ಪ್ರಕಟಿಸಿದೆ. ಇದರಲ್ಲಿ ಸಮಗ್ರತೆ ಕಾಣಿಸುತ್ತದೆ. ಇದನ್ನು ಧ್ವನಿಪೂರ್ಣವಾಗಿ, ವರ್ತಮಾನದ ಮೇಲೆ ಇತಿಹಾಸದ ಸವಾರಿ ಎಂದು ಕರೆಯಲಾಗಿದೆ. “ದೇಶದಲ್ಲಿ ಭಯೋತ್ಪದಕರೂ ಮಾವೋವಾದಿಗಳೂ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿರುವ ನಡುವೆ ಈ ಸಮಸ್ಯೆಯನ್ನೂ ಉಳಿಸಿಕೊಳ್ಳುವುದು ಅರ್ಥಹೀನ” ಎಂದು ಅದೇ ಸಂಪಾದಕೀಯದಲ್ಲೇ “ವಿವೇಕ”ವನ್ನೂ ಹೇಳಲಾಗಿದೆ.
ಈ ವಿವಾದ ಕೊನೆಗೊಂಡರೆ ಸಾಕು ಎಂದು ಅಯೋಧ್ಯಾವಾಸಿಗಳ ಹಪಾಹಪಿಯಂತೆ. ಅದು ಅರ್ಥವಾಗುವಂಥದು. ಆದರೆ ಬೆಂದ ಮನೆಯ ಗಳ ಹಿರಿದುಕೊಳ್ಳುವ ರಾಜಕೀಯದವರು ಎರಡೂ ಬದಿಯ ಅಜ್ಞಾನಿ ಜನರನ್ನು ಹುಚ್ಚೆಬ್ಬಿಸಿ, ವಿವಾದವನ್ನು ಯಶಸ್ವಿಯಾಗಿ ನಿರಂತರ ಬಂಡವಾಳ ಮಾಡಿಕೊಳ್ಳುತ್ತಿದ್ದಾರಲ್ಲಾ, ಸಮಸ್ಯೆ ಬಗೆಹರಿದೀತು ಹೇಗೆ? (ಅಜ್ಞಾನಿಗಳ ಸಂಖ್ಯೆ ಕಡಿಮೆಯಾಗಲಿ ಎಂದು ಆಶಿಸೋಣ!)
ಗೆಳೆಯರೆ!
ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ಭೂಕಂಪನವಾಯಿತು. ಅದರ ಪರಿಣಾಮ ನಮ್ಮ ದೇಶದ ಉತ್ತರಖಂಡ್ ರಾಜ್ಯದ ಮೇಲಾಗಿದೆ. ಉತ್ತರಖಂಡ್ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭೂಕುಸಿತವುಂಟಾಗಿದೆ. ಬಹುಪಾಲು ರಸ್ತೆಗಳು ಮುಚ್ಚಿಹೋಗಿವೆ. ಜೊತೆಗೆ ನಿರಂತರ ವರ್ಷಧಾರೆಯ ಕಾರಣ ಬದುಕು ಅಸ್ತವ್ಯಸ್ತವಾಗಿದೆ.
ಚಾರ್ಧಾಮ್ ಯಾತ್ರೆಗೆ ಹೊರಟ ಯಾತ್ರಿಕರು ಮಾರ್ಗದ ವಿವಿಧ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡು ಮುಂದಕ್ಕೂ ಹೋಗಲಾಗದೆ, ಹಿಂದಕ್ಕೂ ಬರಲಾಗದೇ ನಡುವೆ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿನ ಏಜೀಸ್ ಆಫೀಸಿನಿಂದ ೫೨ ಜನರು ಉತ್ತರಕಾಶಿಯಲ್ಲಿ ನಮ್ಮ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಈಗಷ್ಟೇ ಶ್ರೀಮತಿ ನಾಗರತ್ನ ಅವರು ಸಹಾಯಕ್ಕಾಗಿ ನನಗೆ ಫೋನ್ ಮಾಡಿದರು. ನಾನು ಬೆಂಗಳೂರು ದೂರದರ್ಶನ, ಟಿವಿ=೯ ಹಾಗೂ ಸುವರ್ಣ ವಾಹಿನಿಯಲ್ಲಿರುವ ಕೆಲವು ಗೆಳೆಯರಿಗೆ ಮಾಹಿತಿಯನ್ನು ನೀಡಿ ಶ್ರೀಮತಿ ನಾಗರತ್ನ ಅವರ ಫೋನ್ ನಂಬರ್ ನೀಡಿದ್ದೇನೆ. ಈ ಬಗ್ಗೆ ಜನರ ಗಮನವನ್ನು ಹಾಗೂ ಸರ್ಕಾರದ ಗಮನವನ್ನು ಸೆಳೆಯುವಂತೆ ಪ್ರಾರ್ಥಿಸಿದ್ದೇನೆ.