ಸಂಯುಕ್ತ ಕರ್ನಾಟಕ ದಲ್ಲಿ “ತಲೆಮಾರುಗಳ ತಳಮಳ”

ಸಂಯುಕ್ತ ಕರ್ನಾಟಕ ದಲ್ಲಿ “ತಲೆಮಾರುಗಳ ತಳಮಳ”

Comments

ಬರಹ

 


        ಅಯೋಧ್ಯಾ ವಿವಾದ ಕುರಿತಂತೆ, ಸೆ. 24ರ  ಸಂಯುಕ್ತ ಕರ್ನಾಟಕ ತಲೆಮಾರುಗಳ ತಳಮಳದ ಪೂರ್ವಾಪರ  ಎಂಬ ಇತಿವೃತ್ತ ಪ್ರಕಟಿಸಿದೆ. ಇದರಲ್ಲಿ ಸಮಗ್ರತೆ ಕಾಣಿಸುತ್ತದೆ. ಇದನ್ನು ಧ್ವನಿಪೂರ್ಣವಾಗಿ, ವರ್ತಮಾನದ ಮೇಲೆ ಇತಿಹಾಸದ ಸವಾರಿ ಎಂದು ಕರೆಯಲಾಗಿದೆ. “ದೇಶದಲ್ಲಿ ಭಯೋತ್ಪದಕರೂ ಮಾವೋವಾದಿಗಳೂ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿರುವ ನಡುವೆ ಈ ಸಮಸ್ಯೆಯನ್ನೂ ಉಳಿಸಿಕೊಳ್ಳುವುದು ಅರ್ಥಹೀನ” ಎಂದು ಅದೇ ಸಂಪಾದಕೀಯದಲ್ಲೇ “ವಿವೇಕ”ವನ್ನೂ ಹೇಳಲಾಗಿದೆ.


        ಈ ವಿವಾದ ಕೊನೆಗೊಂಡರೆ ಸಾಕು ಎಂದು ಅಯೋಧ್ಯಾವಾಸಿಗಳ ಹಪಾಹಪಿಯಂತೆ. ಅದು ಅರ್ಥವಾಗುವಂಥದು. ಆದರೆ ಬೆಂದ ಮನೆಯ ಗಳ ಹಿರಿದುಕೊಳ್ಳುವ ರಾಜಕೀಯದವರು ಎರಡೂ ಬದಿಯ ಅಜ್ಞಾನಿ ಜನರನ್ನು ಹುಚ್ಚೆಬ್ಬಿಸಿ, ವಿವಾದವನ್ನು ಯಶಸ್ವಿಯಾಗಿ ನಿರಂತರ ಬಂಡವಾಳ ಮಾಡಿಕೊಳ್ಳುತ್ತಿದ್ದಾರಲ್ಲಾ, ಸಮಸ್ಯೆ ಬಗೆಹರಿದೀತು ಹೇಗೆ? (ಅಜ್ಞಾನಿಗಳ ಸಂಖ್ಯೆ ಕಡಿಮೆಯಾಗಲಿ ಎಂದು ಆಶಿಸೋಣ!)


        ಬಾಬರನೆಂಬ ರಾಜ ವಿಜಯದ ಉನ್ಮಾದದಿಂದ ಅಂದು ರಾಮಂದಿರವನ್ನು ನೆಲಸಮ ಮಾಡಿ ಮಸೀದಿ ಕಟ್ಟಿದ್ದಿರಬಹುದು. ಅದರಿಂದ ರಾಮಾಯಣದ ಮೌಲ್ಯಗಳೇನಾದರೂ ನಾಶವಾದವೇ? ಹಿಂದೂ ಜನ ರಾಮನನ್ನು ಸೋತವನೆಂದು ಹೀಗಳೆದು ವಿಮುಖರಾದರೇ? ಅವರ ರಾಮಭಕ್ತಿ ಮುಕ್ಕಾಯಿತೇ? ಹಿಂದುಗಳ ಹೃದಯದಲ್ಲಿ ಎಂದಿಗೂ ಇರುವ ಸಂಪ್ರೇರಕ ಶಕ್ತಿ, ರಾಮ. ಹಾಗೆಯೇ ಅಂದೆಂದೋ ಕಟ್ಟಿದ ಮಸೀದಿಯನ್ನು ಮುಂದೊಮ್ಮೆ ಕೆಡವಿ, ಬಾಬರನ ದುರಹಂಕಾರವನ್ನಡಗಿಸಿದಂತಾಯ್ತೇ?


ನಾವು ಗತವನ್ನು ಬಿಟ್ಟು ವರ್ತಮಾನಕ್ಕೆ ಬರೋಣ. ನಮ್ಮ ಅಂತರಂಗದಲ್ಲಿರುವ  ಶ್ರೀರಾಮಪ್ರೇರಣೆಯ ಬಾಹ್ಯ ಪರಿಣಾಮವಾಗಿ ದೇಶದಲ್ಲಿ ನಿಜವಾದ ಪ್ರಾಮಾಣಿಕ ಹಿಂದೂ ಬಹುಮತ ಸರಕಾರ ಅಧಿಕಾರಕ್ಕೆ ಬರುವಂತಾಗಲಿ. ಅಂತಹ ಜಾಣ್ಮೆ, ತಾಳ್ಮೆ, ಎಚ್ಚರವಂತಿಕೆಯ ಸಂಸ್ಕಾರ ಹಿಂದೂ ಹೃದಯಗಳಿಗೊದಗಲಿ. ಆ ರೀತಿಯ Authentic ಬಹುಮತ ಅಲ್ಪಸಂಖ್ಯಾತವನ್ನು ಎಂದಿಗೂ ತಿರಸ್ಕರಿಸುವುದು ಸಾಧ್ಯವೇ ಇಲ್ಲವೆನ್ನುವುದೂ, ಒಲೈಕೆ ರಾಜಕೀಯದಿಂದ ಈಗ ಸಿಕ್ಕುವುದು ನಿಜವಾದ ಮರ‍್ಯಾದೆ ಅಲ್ಲ ಎನ್ನುವುದೂ ನಮ್ಮ ಅಲ್ಪಸಂಖ್ಯಾತ ಬಾಧವರಿಗೆ ಅರ್ಥನವಾಗಲಿ. ಅಂತಹ “ದರ್ಶನ”ಕ್ಕೆ  ಕೊರ್ಟಿನ ಈ ಕಾಲಾವಕಾಶ ಸದ್ಬಳಕೆಯಗಲಿ!


      


ಆರ್. ಕೆ. ದಿವಾಕರ


ಕರೆ: ೯೪೪೮೦೪೭೫೫೯

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet