ಬಾಗ ಎರಡು: ವೈದೀಕ ......
ಮುಂದುವರೆದಿದೆ ಸ್ನಾನದಮನೆ ಸೇರಿದ ನಾರಾಯಣರ ಕೈಕಾಲುಗಳು ನಡಗುತ್ತಿದ್ದವು ಮಚ್ಚು ಮುಟ್ಟಲು ಹೋಗಬಾರದಿತ್ತು ಅನ್ನಿಸಿತು, ವಿನಾಯಕರು ತನ್ನನ್ನೆ ಹೇಗೆ ನೋಡುತ್ತಿದ್ದರು ಎಂದು ನೆನೆದಾಗ ಅವರ ಮನಸ್ಸು ಬಿರುಗಾಳಿಯಲ್ಲಿ ಸಿಕ್ಕಿಧ ತರಗೆಲೆಯಾಯ್ತು. ಕಾಲದಲ್ಲಿ ಹಿಂದೆ ಸರಿದು ನಡೆದು ಹೋದ ಘಟನೆಗಳ ನೆನಪುಗಳು ಅವರನ್ನು ಆವರಿಸಿಧವು. ನಾರಾಯಣ ಬಟ್ಟರ ನಿಜವಾದ ಹೆಸರು ಕೆಂಪುತಿಮ್ಮಯ್ಯ , ಸಾಮನ್ಯ ತನ್ನವರಂತೆ ಕಪ್ಪಗೆ ಇರದೆ ಕೆಂಪು , ಕೆಂಪಗಿದ್ದ ಕಾರಣಕ್ಕೊ, ಇಲ್ಲ ಕೋಪ ಬಂದಗ ಮುಖವೆಲ್ಲ ಕೆಂಪು ತಿರುಗುವುಧಕ್ಕೊ ತಿಮ್ಮಯ್ಯ ಹೆಸರಿನ ಹಿಂದೆ ಕೆಂಪು ಸೇರಿಕೊಂಡು ಕೆಂಪು ತಿಮ್ಮಯ್ಯ ಎಂದಾಗಿತ್ತು. ತನ್ನವರಲ್ಲೆ ಅತಿ ಬುದ್ದಿವಂತನಾಗಿದ್ದ ತಿಮ್ಮಯ್ಯನ ಜೀವನದಲ್ಲಿ ಶೀಘ್ರಕೋಪ , ದುಡುಕುಬುದ್ದಿ ಸದಾ ಅವನಿಗೆ ತೊಂದರೆ ಕೊಡುತ್ತಿದ್ದವು. ವಿವಾಹವಾಗಿ ತುಮಕೂರಿನ ಶೆಟ್ಟಿಹಳ್ಳಿಯಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿಧ್ಧ ಅವನಿಗೆ ಸರಕಾರಿ ಕೆಲಸವು ಇಧ್ಧು ಯಾವುದೆ ಕೊರತೆಯು ಇರಲಿಲ್ಲ. ಅವರ ಮನೆಯ ಪಕ್ಕದ ಮನೆಯನ್ನು ಹೊಸದಾಗಿ ಬೆಂಗಳೂರಿನ ಕೃಷ್ಣಸ್ವಾಮಿ ಎಂಬ ವ್ಯಕ್ತಿಯೊಬ್ಬರು ಕೊಂಡುಕೊಂಡಿದ್ದರು. ಗೃಹಪ್ರವೇಶವನ್ನು ಅದ್ದೂರಿಯಾಗೆ ಮಾಡಿದ್ದರು. ಗೃಹಪ್ರವೇಶಕ್ಕೆ ಪಕ್ಕಧಮನೆಯ ಕೆಂಪುತಿಮ್ಮಯ್ಯನು ಹೋಗಿ ಊಟ ಮಾಡಿ ಬಂದ್ದಿದ್ದ. ಗೃಹಪ್ರವೇಶದ ನೆಂಟರೆಲ್ಲ ಹೊರಟನಂಟರ ಎರಡು ದಿನದಲ್ಲೆ ಹೊರಗಿನ ಕಾಂಪೋಂಡ್ ಗೋಡೆ ಹಾಕಿಸಲು ಪ್ರಾರಂಬಿಸಿದರು. ತರಕಾರಿ ತರಲು ಕೈಯಲ್ಲಿ ಚೀಲ ಹಿಡಿದು ಮನೆಯಿಂದ ಹೊರಬಂದು ತಿಮ್ಮಯ್ಯನಿಗೆ ಪಕ್ಕದಧಮನೆಯವರು ಕಾಂಪೋಂಡ್ ಗೋಡೆ ಹಾಕಿಸುತ್ತಿರುವದನ್ನು ಕಂಡು ಹತ್ತಿರ ಬಂದು ನೋಡಿದ. ಗಮನಿಸಿದರೆ ಗೋಡೆಯು ತನ್ನ ಜಾಗದಲ್ಲಿ ಬರುತ್ತಿರುವುದು ಕಾಣಿಸಿತು. ಅದನ್ನು ಕಂಡು , ಕೃಷ್ಣಸ್ವಾಮಿ ಕಡೆಗೆ ತಿರುಗಿ ವಿಷಯ ತಿಳಿಸಿದ. ಆದರೆ ಅವರು ಕೇಳಿಸಲೆ ಇಲ್ಲ ಎನ್ನುವಂತೆ ನಟಿಸುತ್ತ ಕೆಲಸದವರಿಗೆ ಸೂಚನೆ ಕೊಡುತ್ತಿದ್ದರು. ತಿಮ್ಮಯ್ಯ ಮತ್ತೊಮ್ಮೆ ಅವರ ಗೋಡೆ ತನ್ನ ಜಾಗದಲ್ಲಿ ಬರುತ್ತಿಧೆ ಎಂದು ಸ್ವಲ್ಪ ಏರುಧ್ವನಿಯಲ್ಲಿಯೆ ತಿಳಿಸಿದ. ಆದರೆ ಇವನ ಜೊತೆ ಸಮದಾನವಾಗಿ ಮಾತನಾಡುವ ಬದಲು ಕೃಷ್ಣಸ್ವಾಮಿಯವರು , ಗೋಡೆ ತನ್ನ ಜಾಗದಲ್ಲೆ ಸರಿಯಾಗಿ ಇದೆ , ಸಲ್ಲದ ತರಲೆ ತೆಗೆಯುವುಧು ಬೇಡ ಎಂದು ಇವನಿಗೆ ನಿರ್ಲಕ್ಷ್ಯ ತುಂಬಿದ ಧ್ವನಿಯಲ್ಲಿ ಉತ್ತರ ಕೊಟ್ಟರು. ಆಗ ಇಬ್ಬರ ನಡುವೆ ವಾದವಿವಾದಗಳು ಪ್ರಾರಂಬವಾದವು . ಕೆಲಸದವರು ತಮ್ಮ ಕೆಲಸನಿಲ್ಲಿಸಿ ಇವರ ಕಡೆ ನೋಡಲು ನಿಂತರು. ತಿಮ್ಮಯ್ಯನ ಹೆಂದತಿ ಜಯಮ್ಮ ಹಾಗು ಕೃಷ್ಣಸ್ವಾಮಿಯ ಹೆಂಡತಿ ಶಾರದ ಇಬ್ಬರು ಮನೆಯಿಂದ ಹೊರಬಂದು ತಮ್ಮ ಗಂಡಂದಿರ ಜಗಳ ನಿಲ್ಲಿಸಲು ಪ್ರಯತ್ನಪಟ್ಟರು. ಆದರೆ ಇಬ್ಬರು ಶೀಘ್ರ ಕೋಪಿಗಳು , ಅವರ ಅಹಂಕಾರಗಳು ಅವರನ್ನು ಜಗಳ ನಿಲ್ಲಿಸಲು ಬಿಡಲಿಲ್ಲ. ಜಗಳ ತಾರಕ್ಕಕ್ಕೇರಿದಂತೆ ಕೋಪತಡೆಯದ ತಿಮ್ಮಯ್ಯ ಹತ್ತಿರವೆ ಇದ್ದ ಕೆಲಸದವರ ಮಚ್ಚು ಕೈಗೆತ್ತಿಕೊಂಡು, ಕೃಷ್ಣಸ್ವಾಮಿ ಯನ್ನು ಕೊಚ್ಚಿಹಾಕುವದಾಗಿ ಕೂಗಿಕೊಂಡ, ತಿಮ್ಮಯ್ಯನ ಕೈಯಲ್ಲಿ ಮಚ್ಚು ನೋಡಿದ ಕೃಷ್ಣಸ್ವಾಮಿಯ ಕಣ್ಣಲ್ಲಿ ಕ್ಷಣಕಾಲ ಹೆದರಿಕೆ ಕಾಣಿಸಿತು . ಆದರೆ ಮರುಕ್ಷಣವೆ ಅವನ ಎದುರಿಗೆ ನಿಂತು ತಾನು ಈ ಬೆದರಿಕೆಗೆಲ್ಲ ಬೆಲೆ ಕೊಡಲ್ಲ, ಧೈರ್ಯವಿಧ್ಧಲ್ಲಿ ಹೊಡೆ ಎಂದು ಸವಾಲು ಹಾಕಿದ. ಕೋಪ ತಡೆಯದ ತಿಮ್ಮಯ್ಯ ಕೈಯಲ್ಲಿದ್ದ ಮಚ್ಚನ್ನು ಅವನ ಹೆಗಲಿನ ಕಡೆಗೆ ಬೀಸಿದ, ಮತ್ತು ಒಂದು ಏಟು , ಸುತ್ತಲಿನವರು ತಡೆಯುವದರಲ್ಲಿ ಕೃಷ್ಣಸ್ವಾಮಿ ತಲೆಕಡಿದು ಸತ್ತು ಬಿದ್ದಿದ್ದ, ಕೊಲೆ ನಡೆದು ಹೋಗಿತ್ತು. ಸುತ್ತಲಿನ ಜನ ತನ್ನ ಕಡೆಗೆ ಹೆದರಿಕೆಯಿಂದ ನೋಡುವುದನ್ನು ಕಂಡು ತಿಮ್ಮಯ್ಯ ತನ್ನ ಕೈಕಡೆಗೆ ನೋಡಿಕೊಂಡ ನಿಧಾನವಾಗಿ ಕೋಪದ ಜಾಗದಲ್ಲಿ ಹೆದರಿಕೆ ತುಂಬಿಕೊಂಡಿತು. ತಾನು ಮಾಡಿರುವ ತಪ್ಪಿನ ಪರಿಣಾಮವೇನಾಗಬಹುದು ಎಂದು ಹೊಳೆಯಿತು. ತಕ್ಷಣ ಬಲಕೈಯಲ್ಲಿದ್ದ ಮಚ್ಚಿನ ಸಹಿತ ತಾನು ಪೋಲಿಸ ಸ್ಟೇಷನ್ನಿಗೆ ಹೋಗುತ್ತಿರುವದಾಗಿ ಘೋಷಿಸಿ ವೇಗವಾಗಿ ಅಲ್ಲಿಂದ ಹೊರಟ. ಸ್ವಲ್ಪದೂರ ಬರುವುದರಲ್ಲಿ ತಾನು ಪೋಲಿಸರಲ್ಲಿ ಶರಣಾದರೆ ಪರಿಣಾಮವೇನು ಎನ್ನುವುದು ಹೊಳೆಯಿತು. ಗಲ್ಲು ಶಿಕ್ಷೆ ಅತವ ಕಡೆಯಪಕ್ಷ ಜೀವನಪೂರ್ತಿ ಸೆರೆಮನೆವಾಸ. ಹೆದರಿಕೆಯಾಯಿತು , ದಾರಿಯಲ್ಲಿ ಸಿಕ್ಕ ಗಿಡಮರಗಳ ಮಧ್ಯೆ ಮಚ್ಚನ್ನು ಎಸೆದ, ಮುಖ್ಯರಸ್ತೆಯನ್ನು ಬಿಟ್ಟು , ಕಾಲು ದಾರಿಯಲ್ಲಿ ನಡೆಯುತ್ತ ರೈಲ್ವೆಸ್ಟೇಷನ ಹಿಂಭಾಗಕ್ಕೆ ಬಂದ. ಅವನಿಗೆ ಸಹಾಯ ಮಾಡಲೋ ಎನ್ನುವಂತೆ ಬೆಂಗಳೂರಿನ ಕಡೆಗೆ ಹೋಗುವ ರೈಲುಗಾಡಿಯೊಂದು ಬಂದಿತು. ಟಿಕೆಟ್ ಪಡೆಯಲು ಹೆದರಿದ ಅವನು ಹಾಗೆಯೆ ಹತ್ತಿದ. ತನ್ನನ್ನು ಯಾರಾದರು ಗಮನಿಸುತ್ತಿಲ್ಲ ಎಂದು ತಿಳಿಧಾಗ ಸ್ವಲ್ಪ ಧೈರ್ಯತಾಳಿದ , ಮಲ್ಲೇಶ್ವರ ಬರುವವರೆಗು ಯಾರ ಗಮನ ಸೆಳೆಯದಂತೆ ಕುಳಿತ್ತಿದ್ದು, ಮಲ್ಲೇಶ್ವರದಲ್ಲಿ ಕೆಳಗೆ ಇಳಿದ. ಹೊರಗೆ ಎಲ್ಲಿ ಹೋಗಬೇಕೆಂದು ತಿಳಿಯಲ್ಲಿಲ್ಲ, ಕತ್ತಲಾಗುತ್ತ ಬರುತ್ತಿತ್ತು. ರಾತ್ರಿ ಅಲ್ಲೆ ಉಳಿಯುವುದಾಗಿ ನಿರ್ಧರಿಸಿದ , ತರಕಾರಿಗೆಂದು ಮನೆಯಿಂದ ಹೊರಟಾಗ ಇದ್ದ ಕೈಚೀಲ , ಜೇಬಿನಲ್ಲಿ ಇಪ್ಪತ್ತು ರೂಪಯಿ ಬಿಟ್ಟರೆ ಹತ್ತಿರ ಏನು ಇರಲ್ಲಿಲ್ಲ. ಹತ್ತಿರದಲ್ಲೆ ಇದ್ದ ತಳ್ಳುವಗಾಡಿಯ ಬಳಿ ಸ್ವಲ್ಪ ತಿಂಡಿ ತಿಂದು ನಿಲ್ಧಾಣದಲ್ಲೆ ಮಲಗಿದ. ಬೆಳಗ್ಗೆ ಬೇಗನೆ ಎಚ್ಚರವಾಯಿತು ತನ್ನ ಪರಿಸ್ಠಿಥಿ ನೆನಪಿಗೆ ಬಂದು ಯಾವ ದಾರಿಯು ತೋರಲ್ಲಿಲ್ಲ ತನಗೆ ಸಹಾಯ ಮಾಡಬಲ್ಲವರು ಯಾರು ಇಲ್ಲ ಅನ್ನಿಸಿತು. ಹತ್ತಿರದಲ್ಲೆ ನಲ್ಲಿಯಲ್ಲಿ ಮುಖ ತೊಳೆದು ಕಾಫಿ ಕುಡಿದ. ತನ್ನ ಹತ್ತಿರ ಆರು, ಏಳು ರೂಪಾಯಿ ಬಿಟ್ಟರೆ ಮತ್ತೇನು ಉಳಿದಿಲ್ಲ, ಯಾವ ದಾರಿ ಸಮಯವೆಷ್ಟು ಯಾವುದನ್ನು ಗಮನಿಸಲ್ಲಿಲ್ಲ. ನಡೆಯುತ್ತ ಮಲ್ಲೇಶ್ವರಧ ವೈಧೀಕ ಧರ್ಮ ಶಾಲೆಯ ಹತ್ತಿರ ತಲುಪಿ ಒಂದು ಮರದ ಕೆಳಗೆ ವಿಶ್ರಾಂತಿಗಾಗಿ ಕುಳಿತ. ಅದೆ ಸಮಯಕ್ಕೆ ವಿನಾಯಕ ಜೋಯಿಸರು ಹೊರಗೆ ಬಂದರು, ಆದಿನ ಅವರು ಒಂದು ಸಮಸ್ಯೆಗೆ ಸಿಕ್ಕಿದ್ದರು. ಅವರ ಪರಿಚಯದ ವ್ಯಕ್ತಿಯೊಬ್ಬರು ಕಡೆ ಗಳಿಗೆಯಲ್ಲಿ ಬಂದು, ತಮ್ಮ ತಂದೆಯ ವೈಧೀಕವನ್ನು ನಡೆಸಿಕೊಡಲು ಕೇಳಿದ್ದರು, ಅವರ ಮನೆಯಲ್ಲಿಯ ತೊಂದರೆಯಿಂದ ಕಡೆಯ ಗಳಿಗೆಯಲ್ಲಿ ಇಲ್ಲಿ ಬಂದಿದ್ದರು. ಪುರೋಹಿತರು ಸಿದ್ದವಿದ್ದು ಒಬ್ಬ ಬ್ರಾಹ್ಮಣರ ಅವಶ್ಯಕತೆ ಇದ್ದು. ಕೈಚೀಲ ಹಿಡಿದು ಮರದ ಕೆಳಗೆ ಕುಳಿತ್ತಿದ್ದ ತಿಮ್ಮಯ್ಯನನ್ನು ಕಂಡರು. ಅವನನ್ನು ಯಾರೊ ಬ್ರಾಃಮಣನೆಂದು ಬಗೆದು, ಒಂದು ವೈಧೀಕವಿರುವದರಿಂದ ಬ್ರಾಃಮಣಾರ್ತಕ್ಕೆ ಬರಲು ಸಾಧ್ಯವೆ ಎಂದು ಇವನನ್ನು ಕೇಳಿದರು. ತಿಮ್ಮಯ್ಯನು ಇದೇನು ಎಂದು ಯೋಚಿಸುತ್ತ ತನಗೆ ಅಭ್ಯಾಸವಿಲ್ಲವೆಂದು ತಿಳಿಸಿದ. ವಿನಾಯಕರು ಪರವಾಗಿಲ್ಲ ಬನ್ನಿ ಹೇಗೋ ಒಂದು ದಿನ ಸರಿಮಾಡೋಣ ಎಂದು ಅವನನ್ನು ಒಳಗೆ ಕರೆದೋಯ್ಧು ಸ್ನಾನ ಮಾಡಲು ಜಾಗ ತೋರಿಸಿದರು. ಕೆಂಪಯ್ಯನು ಇದೇನು ತನ್ನ ಪರಿಸ್ಠಿಥಿ ಎಂದು ಬೆರಗಾಗುತ್ತ ಚಿಂತಿಸಿದ. ತನ್ನನ್ನು ಇವರು ಬ್ರಾಃಮಣ ಎಂದು ತಿಳಿದಿದ್ದಾರೆ, ತಾನೀಗ ಅಲ್ಲ ಅನ್ನುವದಕ್ಕಿಂತ ಮೌನವಾಗಿದ್ದರೆ ತನಗೆ ಅನುಕೂಲ ಎಂದರಿತ. ಆದರೆ ತಾನು ಜನಿವಾರ ದರಿಸಿಲ್ಲ , ಅವರಿಗೆ ಅನುಮಾನ ಬರಬಹುದು ಅನ್ನಿಸಿ ಅಲ್ಲೆ ಸ್ನಾನದ ಮನೆಯಲ್ಲಿ ಯಾರೊ ಬಿಟ್ಟು ಹೋಗಿದ್ದ ಜನಿವಾರ ದರಿಸಿದ. ಸ್ನಾನ ಮುಗಿಸಿ ಹೊರಬಂದಾಗ ವಿನಾಯಕರು ಅವನನ್ನು ತಿಥಿ ನದೆಯುತಿದ್ದ ಜಾಗಕ್ಕೆ ಕರೆದೋಯ್ಧರು. ನಡುವೆ ಇವನ ಹೆಸರೇನು ಎಂದು ಕೇಳಿದರು. ಇವನು ನಿಧಾನವಾಗಿ ನಾರಾಯಣ ಎಂದ. ಅದಕ್ಕೆ ನಾರಾಯಣ ಭಟ್ಟರ ಎನ್ನುವಾಗ ಹೌದು ಎನ್ನುವಂತೆ ತಲೆ ಹಾಕಿದ. ಹಾಗಾಗಿ ನಾರಾಯಣ ಭಟ್ಟಾ ಎನ್ನುವ ಹೆಸರು ನಂತರ ಸ್ಠಿರವಾಯಿತು.ವಿನಾಯಕರು ಒಂಟಿಯಾಗಿ ವಾಸವಾಗಿದ್ದರು, ಹಾಗಾಗಿ ಇವನನ್ನು ಜೊತೆಯಾಗಿರಲು ಕರೆದರು, ಅದು ಅವನಿಗು ಅನುಕೂಲವಾಗಿ ಕಾಣಿಸಿ ಒಪ್ಪಿಕೊಂಡ. ನಿಧಾನವಾಗಿ ಅವರನ್ನು ನೋಡುತ್ತ ತನ್ನ ನಡೆ ನುಡಿಗಳನ್ನು ಬ್ರಾಃಮಣರಂತೆ ತಿದ್ದಿಕೊಂಡ . ಸಂಧ್ಯಾವಂದನೆಯಂತ ಸರಳ ಕರ್ಮಗಳನ್ನು ಕ್ರಿಯಾಸಮೇತವಾಗಿ ಅಭ್ಯಾಸಮಾಡಿಕೊಂಡ. ಎಲ್ಲ ನೆನೆಪುಗಳು ಅವನಲ್ಲಿ ಹಾದು ಹೋಗುತ್ತಿರುವಾಗ ಹೊರಗೆ ವಿನಾಯಕರು ಜೋರಾಗಿ ಕೂಗುತ್ತಿದ್ದರು. "ನಾರಾಯಣರೆ ಬೇಗ ಸ್ನಾನ ಮುಗಿಸಿ ಬನ್ನಿ, ಎಲ್ಲ ಕಾಯುತ್ತಿದ್ದಾರೆ" . ತನ್ನ ಮೈಮರೆವಿಗೆ ಶಪಿಸಿಕೊಳ್ಳುತ್ತ ನಾರಾಯಣರು ಬೇಗ ಸ್ನಾನ ಮುಗಿಸಿ, ತುಂಡು ಪಂಚೆ ಸುತ್ತಿ ಹೊರಬಂದರು. ಎಲ್ಲರು ತನ್ನನ್ನೆ ಕಾಯುತ್ತಿದ್ದಾರೆ. ಬೇಗ ಬಿಳಿಪಂಚೆ ಉಟ್ಟು, ಸಿಧ್ಧವಾಗಿ ತಿಥಿ ನಡೆಯುತ್ತಿದ್ದ ನಡುವಿಗೆ ಬಂದು ಕುಳಿತರು. ಪುರೋಹಿತರು ಆಗಲೆ ಅಗ್ನಿಕಾರ್ಯ ಪ್ರಾರಂಬಿಸಿಧ್ಧರು ನಾರಾಯಣರು ಯೋಚಿಸುತ್ತಿದ್ದರು, ಈ ಬ್ರಾಃಮಣರ ಆಚರಣೆಗಳು ಎಷ್ಟು ನಿಜವೋ ಕಲ್ಪಿತವೋ ತಿಳಿಯದು ಆದರೆ ತನ್ನಲ್ಲಿ ಒಮ್ಮೊಮ್ಮೆ ಹೆದರಿಕೆ ಹುಟ್ಟಿಸುತ್ತದೆ. ತಾನು ಈ ಜಾಗಕ್ಕೆ ಅರ್ಹ ವ್ಯಕ್ತಿಯಲ್ಲ ಎಂದು ತನಗೆ ತಿಳಿದಿದೆ. ತನ್ನ ಈ ಸುಳ್ಳು ಪಾತ್ರದಿಂದ ತಾನು ಮುಂದೆ ಏನು ಅನುಭವಿಸಬೇಕೊ ತಿಳಿಯದು. ಇದರಿಂದ ಆದಷ್ಟು ಬೇಗ ತಪ್ಪಿಸಿಕೊಳ್ಳಬೇಕು, ಪೋಲಿಸರಿಗು ಈಗ ತನ್ನ ಮನೆಯ ಮೇಲೆ ಗಮನ ಕಡಿಮೆಯಾಗಿದೆ. ತುಮಕೂರಿನಲ್ಲಿರುವ ತನ್ನ ಆಸ್ಥಿಯನ್ನೆಲ್ಲ ತನ್ನ ಹೆಂಡತಿ ಸಹಾಯದಿಂದ ಮಾರಾಟ ಮಾಡಿಸಿ, ಬೆಂಗಳೂರಿನಲ್ಲಿ ಈಗಿರುವ ಹೆಸರಿನಲ್ಲಿಯೆ ನೆಲಸಿಬಿಡಬೇಕು .ಹೋಮದ ಹೊಗೆಯಲ್ಲಿಯೆ ಸುತ್ತಲು ಗಮನಿಸಿದರು, ಗೋಡೆಯಪಕ್ಕ ಮಣೆಯಿತ್ತು ಅದರ ಮೇಲೆ ತಿಥಿ ನಡೆಯುತ್ತಿರುವ ವ್ಯಕ್ತಿಯ ಫೋಟವನ್ನಿಟ್ಟು ಹೂವಿನಹಾರ ಹಾಕಿದ್ದರು. ಮತ್ತೊಮ್ಮೆ ಗಮನಿಸಿದರು ಫೋಟಧಲ್ಲಿರುವ ವ್ಯಕ್ತಿ ಪರಿಚಿತ ಮುಖದಂತೆ ಕಾಣುತ್ತಿದೆಯಲ್ಲ , ಯಾರೀತ ?? ... ತಟ್ಟನೆ ಹೊಳೆಯಿತು.. ಕೃಷ್ಣಸ್ವಾಮಿ , ತನ್ನಿಂದ ತುಮಕೂರಿನಲ್ಲಿ ಕೊಲೆಯಾದ ವ್ಯಕ್ತಿ, ಯಾರ ಕೊಲೆ ಮಾಡಿ ತಾನು ತಲೆಮರೆಸಿಕೊಂಡು ಬಾಳುತಿರುವೆನೊ ಅದೆ ವ್ಯಕ್ತಿಯ ವೈಧೀಕಕ್ಕೆ ತಾನು ಬ್ರಾಃಮಣನಾಗಿ ಬಂದು ಕುಳಿತಿದ್ದೀನಿ, ನಾರಾಯಣರಿಗೆ ಕೈಕಾಲುಗಳಲ್ಲಿ ನಡುಕ ಕಾಣಿಸಿಕೊಂಡಿತು. ಮೈಯೆಲ್ಲ ಬೆವರಲು ತೋಡಗಿತು. ತನ್ನ ಗುರುತು ಇಲ್ಲಿ ಯಾರಿಗು ದೊರೆಯಲ್ಲಿಲ್ಲವೆ ? ಕಡೆಯ ಪಕ್ಷ ಕೃಷ್ಣಸ್ವಾಮಿಯ ಹೆಂಡತಿ ಶಾರದ ಸಹ ತನ್ನ ಪತ್ತೆ ಹಚ್ಚಲ್ಲಿಲ್ಲವೆ? . ಒಳಗೆ ನಡುಗಿದರು ನಾರಾಯಣ ಭಟ್ಟರು. ಮುಂದಿನ ಭಾಗದಲ್ಲಿ ಮುಕ್ತಾಯ >>