ಒಂದು ಅಲ್ಲಗಳೆತ (ಡಿಸ್‍ಕ್ಲೈಮರ್)!

ಒಂದು ಅಲ್ಲಗಳೆತ (ಡಿಸ್‍ಕ್ಲೈಮರ್)!



ನನ್ನ ಬರಹ
ಪ್ರತಿಕ್ರಿಯೆಗಳೆಲ್ಲಾ
ಪೂರ್ವಗ್ರಹ ಪೀಡಿತವಲ್ಲ,
ನನ್ನ ಮನದ ಅನಿಸಿಕೆಗಳು,
ವಸ್ತುನಿಷ್ಟ ಅಭಿಪ್ರಾಯಗಳೇ
ಸದಾ ತುಂಬಿಹುದು ಅಲ್ಲೆಲ್ಲಾ;

ನನ್ನ ಬರಹ
ಪ್ರತಿಕ್ರಿಯೆಗಳಿಂದ
ಬೇಸತ್ತು, ರೋಸಿಕೊಂಡು,
ರೇಜಿಗೆ ಅನಿಸಿಕೊಂಡು,
ತಮ್ಮ ಮೈಪರಚಿಕೊಂಡು,
ತಲೆಗಳನ್ನು ಕೆರೆದುಕೊಂಡು,
ರಕ್ತಸಿಕ್ತವಾದರೆ ಒಂದೊಮ್ಮೆ,
ನನ್ನ ಓದುಗ ಮಂದಿ,
ಮಾಡಬೇಡಿ ನನ್ನನ್ನು ಬಂಧಿ;

ಮನಸ್ಸು, ವಿಕೃತವಾಗಿ,
ಮಾಡಿದರೆ ಆತ್ಮಹತ್ಯೆಯ
ವೃಥಾ ದುರಾಲೋಚನೆ,
ನಾನು ಜವಾಬ್ದಾರನಲ್ಲ,
ನಿಜವಾಗಿ ನನ್ನ ಮೇಲೆ
ಬರದೇನೂ ಆಪಾದನೆ!
***********
ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments