ಭಲೇ ಅದ್ರಷ್ಟ !!! ಭಾಗ -೩

ಭಲೇ ಅದ್ರಷ್ಟ !!! ಭಾಗ -೩

"ಅದೃಷ್ಟವಂತ !!! " ಈ ಶಬ್ದ ಕೇಳುತ್ತಿದ್ದಂತೆ ಮನಸ್ಸಲ್ಲಿ ಏನೋ ಒಂದು ಪ್ರಶ್ನಾತೀತ ನೋಟ ಪ್ರಾರಂಭವಾಯಿತು."ಅದೃಷ್ಟ"ನನ್ನನ್ನು ಇನ್ನು ಯಾವ ಯಾವ ಶೂಲಕ್ಕೆ ಗುರಿಮಾಡುವುದೋ ?ಯಾವ ವಿನೋದ ಕೊಡುವುದೋ ? ಎಂಬ ಎಲ್ಲ ವಿಚಾರಗಳು ತಲೆಯಲ್ಲಿ ಸವಾರಿ ಮಾಡಲಾರಂಬಿಸಿತು.

ನಾನು ಅರವಿಂದ್ ಕುಂಬಳೆಯಲ್ಲಿ ಏಳನೇ ತರಗತಿಯವರೆ ಒಟ್ಟಿಗೆ ಓದಿದ್ದೆವು,ಬಳಿಕ ಬಾಳಿನ ದಾರಿಯ ಎರಡು ಕವಲಾಗಿ ಒಡೆದು ಹೋಗಿದ್ದೆವು, ಅದೇನೋ ಹೇಳ್ತಾರಲ್ಲ ಭೂಮಿ ಗುಂಡಗಿದೆ ,ಇಂದಲ್ಲ ನಾಳೆ  ಸಿಕ್ಕಲೇ ಬೇಕು, ಹಾಗೆ ೮ ವರುಷದ ಬಳಿಕ ನಾನೂ ಅರವಿಂದ್ ಅದೇ campus interview ನಲ್ಲಿ   ಭೇಟಿ  ಆಗಿದ್ವಿ.ಶಾಲಾದಿನಗಳಲ್ಲಿ ತುಂಬಾ ನಿಕಟದ ಗೆಳೆಯ ರಾಗಿದ್ವಿ, ಈಗ ಅದೃಷ್ಟ ನೋಡಿ ಮತ್ತೆ ಪುನಃ ಗೆಳೆಯರಾದ್ವಿ. ನಡುವಿನ ೮ ವರುಷದ ಮಾತುಗಳು ಹಲವಿದ್ದವು. ಹಿಂದಿನ ಸೀಟಿನಲ್ಲಿ ಕುಳಿತು ನಾವಿಬ್ಬರು ಮಾತನಾಡುತ್ತಾ ಕುಳಿತ್ತಿದ್ದರೆ, ಮುಂದಿನ ಸೀಟಿನಲ್ಲಿ ಕುಡ್ವಾ ಮಾರೆನೆ ದಿನದ ಸೆಮಿನಾರ್ ಗೆ ತಯಾರಿ ಮಾಡುತ್ತಿದ್ದ.

೧೨:೩೦ ಆಗುತ್ತಿದ್ದಂತೆ ಕುಡ್ವಾ "ಗುಡ್ ನೈಟ್ , ನಾನು ಮಲಗುತ್ತೇನೆ ... ನಿಮ್ಮ ಮಾತು ಹಿಡಿರಾತ್ರಿ ಮುಂದುವರಿಯುವಂತಿದೆ, ಮುಂದುವರಿಸಿ ..."ಎಂದು ತನ್ನ ಸೀಟ್ ಮೇಲಿನ ಲೈಟ್ ಆಫ್ ಮಾಡಿ ನಿದ್ದೆಗೆ ಜಾರಿದ.ನಮ್ಮ ಮಾತು ಹೀಗೆ ಮುಂದುವರಿಯುತ್ತಲೇ ಇತ್ತು, ಇಬ್ಬರು ಸೇರಿ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಿದ್ದೆವು.

ಇಬ್ಬರ ನಡುವಿನ ಆ ದಿನದ ಓದಿನ ನಡುವಿನ ಸ್ಪರ್ಧೆ, ಸಣ್ಣ ಕಾರಣಕ್ಕೆ ಜಗಳವಾಡಿ ಮಾತು ಮುರಿಸಿಕೊಂಡ ಗಳಿಗೆಗಳು, ಶಾಲೆಯ ಪಕ್ಕದ ಮನೆಯಲ್ಲಿನ ಬೋಗರಿ ಕೊಯ್ಯಲು ಹೋಗಿ ಸಿಕ್ಕಿ ಬಿದ್ದ ಕಥೆ, ಶಾಲೆಯಲ್ಲಿನ sister  ನಮ್ಮ ಬೆಗೆಗಿದ್ದ ಅಪಾರ ನಂಬಿಕೆ,ಎಲ್ಲಾ ನೆನಪಾಗುತ್ತಿದ್ದಂತೆ ಆ ಸಂಜೆ ಪಟ್ಟ ಎಲ್ಲಾ ಕಷ್ಟಗಳೆಲ್ಲವು ಮರೆಯಾಯಿತು.

ಅರವಿಂದ್ "ಬಳಿಕ ಶಾಲೆಗೇ ಹೋಗಿದ್ದಿಯ ?"
"ಹುಂ"
"ಯಾವಾಗ ?"
"ಸೆಕೆಂಡ್ ಯೀರ್ puc ಯಲ್ಲಿ ಇರಬೇಕಾದರೆ cet ಕೌನ್ಸಿಲಿಂಗ್ ಗಾಗಿ ಸ್ಟಡಿ ಸರ್ಟಿಫಿಕೇಟ್ ತಕ್ಕೊಳಲ್ಲಿಕ್ಕೆ ಹೋಗಿದ್ದಪ್ಪಾ ... ಆ ಬಳಿಕ ಹೋಗಿಲ್ಲ..."
"ನಾನು ಅಂದೇ ಲಾಸ್ಟ್ :("
"ಈಗ ಎಲ್ಲಾ ಹೊಸ ಟೀಚೆರ್ಸ್ , ಸಿಸ್ಟರ್ಸ್, ಮೇಷ್ಟ್ರು ... ನಮ್ಮ ಪರಿಚಯದ ಹಳೆ ೫-೬ ಮಂದಿ ಯಷ್ಟೇ ಇದ್ದಾರೆ ..."
"ಹುಂ, ಶಾಲೆಯ ಆ ದಿನದ ಬೇರೆ ಯಾರು ಗೆಳೆಯರು ಇನ್ನೂ ನಿನ್ನ ಕಾಂಟಾಕ್ಟ್ ನಲ್ಲಿ ಇದ್ದಾರ? "
"ಹುಂ, ರಾಘವೇಂದ್ರ ,ಉದಯ್ ನಮ್ಮ ಕಾಲೇಜ್ ನಲ್ಲೇ ಇಂಜಿನಿಯರಿಂಗ್ ಮುಗಿಸಿದರು "
"ಈಗ ಅವರು ಏನ್ ಮಾಡ್ತಾ ಇದ್ದಾರೆ?"
"ಈಗ ಊರಲ್ಲಿ ಇದ್ದಾರೆ, ಬರುವ ತಿಂಗಳು ಬೆಂಗಳೂರ್ ಗೆ ಹೋಗ್ತಾರಂತೆ, ಕೆಲಸ ಹುಡುಕುವ ಕೆಲಸ ಮಾಡಬೇಕಲ್ಲ ಅಂತಿದ್ದ ರಾಘು ನಿನ್ನೆ :( "
"ಇದರಲ್ಲಿ ನಾವು ಅದ್ರುಷ್ಟವಂತರಪ್ಪಾ.... ಕೆಲಸ ಹುಡುಕುವ ಕೆಲಸ ತಪ್ಪಿತು !!!"
ಪುನಃ ಮುಗುಳ್ನಗೆ ಅದೇ ಶಬ್ದ ಕೇಳಿದಾಗ :)


"ಅವರನ್ನು ಬಿಟ್ಟು?"
"ನಿನ್ನಂತವರು ೪-೫ ಮಂದಿ campus ದಿನ , ಮತ್ತೆ ಗೆಳೆಯರಾದರು, ಅಂದಿನಿಂದ ಮೊಬೈಲಿನಲ್ಲಿ ಮೆಸ್ಸೇಜ್ ಮಾಡ್ತಾರೆ...  ",ನಮ್ಮ ಕಾಲೇಜ್ ನಲ್ಲಿ ಪೂಲ್ campus ಆಗ್ತಿತ್ತು, ಅದರಿಂದ ಕಳೆದು ಹೋಗಿದ್ದ ಹಲವು ಫ್ರೆಂಡ್ಸ್ ಮತ್ತೆ ಸಿಗುವ ಅವಕಾಶ ಕಾಲೇಜ್ ಕಲ್ಪಿಸಿ ಕೊಟ್ಟಿತ್ತು.
"ಮತ್ತೆ ಆರ್ಕುಟ್ ನಲ್ಲಿ?"
"ಇದ್ದಾರೆ .. ಆರ್ಕುಟ್ ಗೆ ತುಂಬಾ ಥ್ಯಾಂಕ್ಸ್ ಹೇಳ್ಬೇಕಪ್ಪಾ ... ಅದೆಷ್ಟೋ ಮರೆತು ಹೋದ  ಮುಖಗಳನ್ನು ನೆನಪಿಸಿಕೊಟ್ಟಿದೆ.. "
"ನಾವು ಇಂಜಿನಿಯರಿಂಗ್ ಗೆ ಬಂದು ೪ ವರುಷ ಹಾಳುಮಾಡಿ ಕೊಂಡ್ವಿ... ತುಂಬಾ ಮಂದಿದ್ದು ಕಳೆದ ವರ್ಷವೇ ಓದು ಮುಗಿಸಿ ಕೆಲಸದಲ್ಲಿದ್ದಾರೆ .."
"ಹುಂ , ಕೆಲವರು ಓದು ಮುಗಿಸಿ ಕೆಲಸದಲ್ಲಿದ್ದಾರೆ.. ಹಲವರು ಓದು ನಿಲ್ಲಿಸಿ ಕೆಲಸ ದಲ್ಲಿದ್ದಾರೆ ... "
"ಉರಲ್ಲಿನ ಹೆಚ್ಚಿನ ಹುಡುಗರು ನಿನಗೆ ಇಂದೂ ಸಿಗ್ತಾ ಇರಬಹುದು ...ನಿನದಂತು ಪೇಟೆಯಲ್ಲಿಯೇ ಮನೆ ನೋಡು "
"ಹುಂ ,ತುಂಬಾ ಮಂದಿ ಅಂಗಡಿ ಕೆಲಸಕ್ಕೆ, ಗಾರೆ ಕೆಲಸಕ್ಕೆ ,ಗರೆಜ್ ಸೇರಿಕೊಂಡಿದ್ದಾರೆ .. ಪಾಪ ಹೊಟ್ಟೆ ಪಾಡು ನೋಡು ... ಆದರೆ ಸಿಕ್ಕಾಗ ಮಾತಾಡ್ತಾರೆ .. ಹಿಂದಿನ ದಿನಗಳನ್ನು ಮೆಲುಕು ಹಾಕ್ತಾರೆ ..."

ಹೀಗೆ ನಡೆಯುತ್ತಿತ್ತು ನಮ್ಮ ಮಾತು, ಬಸ್ಸು ಉಪ್ಪಿನಂಗಡಿ ತಲುಪಿತ್ತು.ಡ್ರೈವರ್ ಹೋಗೆ ಆಡಿಸಲು ಬಸ್ಸು ನಿಲ್ಲಿಸಿದ್ದರು, ನಾವಿಬ್ಬರು ಬಸ್ಸಿಂದ ಇಳಿದು ಫ್ರೆಶ್ ಆದೆವು.
ಹೊರಗೆ ಮಳೆನಿಂತ ಪ್ರಶಾಂತ ವಾತಾವರಣ,
ನಾನು "ಇಲ್ಲಿಗೆ ನಮ್ಮೆಲ್ಲಾ ದುರಾದೃಷ್ಟ ಕೊಚ್ಚಿ ಹೋಗಲಿ,ನಮ್ಮಲ್ಲಿ ಅದೃಷ್ಟದ ಕಳೆ ಮುಡಲಿ"
"ಹುಂ. ಇನ್ನು ಏನು ಪರೀಕ್ಷೆ ಬೇಡಪ್ಪ... ಸುಖವಾಗಿ ಬೆಂಗಳೂರು ತಲುಪಿದರೆ ಸಾಕು "
ಮತ್ತೆ ಬಸ್ ಹತ್ತಿ ಕುಳಿತು ಕೊಂಡೆವು, "ಸರಿಯಪ್ಪಾ ಇನ್ನು ಮಲಗುವ ತುಂಬಾ ಹೊತ್ತಾಯ್ತು "
"ಗುಡ್ ನೈಟ್ .. ಒಳ್ಳೆ ಕನಸೇ ಬಿಳ್ಲಿ... "ಅದೃಷ್ಟದ್ದು!!!" "
ಮತ್ತೆ ನಗೆ .

ಇಬ್ಬರು ಹಾಗೆ ನಿದ್ದೆಗೆ ಜಾರಿದೆವು, ಅರವಿಂದ್ ಗೆ ನಿದ್ದೆ ಹತ್ತಿತು. ನಾನು ಕನಸು ಕಾಣುತ್ತ ಇದ್ದೆ, ಮತ್ತೆ ೧೦-೨೦ ನಿಮಿಷ ಹೋಗಿರಬಹುದು, ಸರಿ ನಿದ್ದೆ ಬಂದಿರಲ್ಲಿಲ್ಲ,ಬಸ್ ಪುನಃ ಹೈವೇ ಬಿಟ್ಟು  ಬಳಿಯ ಆಲದಮರದ ಕೆಳಗೆ  ಹೋಗಲಾರಂಬಿಸಿತು... ನಾನೂ ಅದೃಷ್ಟ ಮತ್ತೆ ಪಗಡೆ ಎಸೆದಿದೆ ಎಂದು ಅಂದುಕೊಂಡೆ,
ಅನಿಸಿಕೆ ಸರಿಯಾಗಿಯೇ ಇತ್ತು !!!!
ಬಸ್ ಅಲ್ಲೇ ನಿಂತು ಬಿಟ್ಟಿತು :(
ಬ್ರೇಕ್ ಹಾಗುತ್ತಿದ್ದಂತೆ ಅರವಿಂದ್ "ಏನಾಯ್ತೋ? ಮತ್ತೆ ಎನಾದ್ರಾಯ್ತ?"
ಮತ್ತೆ ನಗೆ !!!!
ನಾನು "ನಾನು ನಿಂಗೆ ನಿದ್ದೆ ಬಂದಿದೆ ಅಂದ್ಕೊಂಡಿದ್ದೆ..."
"ಇಲ್ಲ ನಿದ್ದೆ ಆದರು ಹೇಗೆ ಬರುತ್ತೆ ... ನಾವು ಜೀವನದ ಇಂಥ ಮಜುಲಲ್ಲಿ ನಿಂತಿರುವಾಗ? ಅದೇನೇನೋ ಆಲೋಚನೆ ಬರುತಿತ್ತು "
"ನಂದು ಅದೇ ಕಥೆ !!! ಸರಿ ನೋಡಿ ಬಿಡೋಣ ಏನಾಯ್ತಂತ ...."
ಇಬ್ಬರು ಕೆಳಗಿಳಿದೆವು.೫-೬ ಮಂದಿ ಆಗಲೇ ಬಸ್ಸಿಂದ ಇಳಿದಿದ್ದರು . ಅವರಿಗೂ ನಿದ್ದೆ ಹತ್ತಿರಲಿಕ್ಕಿಲ್ಲ ...ಅವರು ನಮ್ಮಂತೆ ಅದೃಷ್ಟದೊಂದಿಗೆ ಆಡಿದವರಿರಬೇಕು !!!!
ಅವರಲ್ಲೊಬ್ಬ "ದಾದ ಅಂಡೆ ??"(ಏನಾಯ್ತು?)
ಡ್ರೈವರ್ "ಬುಸ್ಸದ ಬ್ರೇಕ್ ಆಯಿಲ್ ಲೀಕ್ ಅವೊಂದಿಥಂದ್ ತೊಜೊಡು ಬ್ರೇಕ್ ಥಾಗೊಂದಿಜ್ಜಿ "(ಬುಸ್ಸನ ಬ್ರೇಕ್ ಆಯಿಲ್ ಲೀಕ್ ಆಗ್ತಿತ್ತು ಇರಬೇಕು,ಈಗ ಬ್ರೇಕ್ ತಾಗ್ತಾ ಇಲ್ಲ !!!)
"ಇತ್ತೆ ದಾದಾ ಮಲ್ಪುನು ?"(ಈಗೇನು ಮಾಡುವುದು ?)
"ಘಾಟಿ ಅತ್ತೆ ,,, ರಿಸ್ಕ್ ದಾಯೆ ದೆಪ್ಪುನು ? ಅಂಚ ನಾನಲ ಈ ರೂಟ್ ಡ್  ೪ ಬಸ್ ಬರ್ರೆ ಉಂಡು, ಎಂತು ಅಡ್ಜಸ್ಟ್ ಮಳ್ತ್ಹೊದ್ ಪೋಯಿ ಬೆಂಗಳೂರ್ ಗ್ "
(ಘಾಟಿ ಅಲ್ಲ .. ರಿಸ್ಕ್ ಯಾಕೆ ? ಈ ರೂಟ್ ನಲ್ಲಿ ಇನ್ನು ನಮ್ಮ ೪ ಗಾಡಿ ಬರುವುದಿದೆ, ಹೇಗಾದರು ಅಡ್ಜಸ್ಟ್ ಮಾಡಿ ಬೆಂಗಳೂರ್ ಸೇರಿದರಾಯಿತು  :( )

ಇಬ್ಬರ ಮುಖದಲ್ಲಿ ಮತ್ತೆ ಮರೆಯಾದ ಹುರುಪು ಪುನಃ ಮುಡಲಾರಂಬಿಸಿತು.
ಇಬ್ಬರು ಬಸ್ ಹತ್ತುಕೊಂಡ್ವಿ, ನನ್ನನ್ನು ನೋಡುತಿದ್ದಂತೆ ನಿದ್ದೆಯಿಂದ ಎದ್ದ ಕುಡ್ವಾ "ಕಸ್ಸ್ ಜಲ್ಲೆ?"(ಏನಾಯ್ತು?)
"ಬಸ್ ಚೇಂಜ್ ಕೊರ್ಕ ಕೈ "(ಬಸ್ ಚೇಂಜ್ ಮಾಡಬೇಕಂತೆ )
ಬಸ್ಸಲ್ಲಿದ್ದ ಒಂದು ಕೇರ್ ಬ್ಯಾಗ್ ತಕೊಂಡು ಇಬ್ಬರೂ ಇಳಿದ್ವಿ. ಲುಗ್ಗೆಜ್ ನಲ್ಲಿದ್ದ ೬ ಪೇಟರ ಕೂಡ ಇಳಿಸಿ ಕೊಂಡ್ವಿ :)

ಮತ್ತೆ ಅದೇ ಕೆಲಸ ದಾರಿ ಕಾಯುವುದು!!!
 ಇಗಲಂತೂ ಮಳೆ ನಿಂತ ಪ್ರಶಾಂತ ವಾತಾವರಣ.ಮುವರು ಮಾತಾಡುತ್ತ ನಿಂತೆವು ಜೊತೆಯಲ್ಲಿ ಬಸ್ಸಲ್ಲಿದ್ದ ೩೫ -೪೦  .೧೦ ನಿಮಿಷ ಕಳೆಯುತ್ತಿದ್ದಂತೆ ಒಂದು ksrtc ಬಸ್ ಬಂತು ಅದು ಸಲ್ಪ ದೂರದಲ್ಲಿ ನಿಂತಿತು.ನಾವಿಬ್ಬರು ಅದನ್ನು ಹತ್ತುವ ಪ್ರಯತ್ನಕ್ಕೆ ಹೋಗಲಿಲ್ಲ ಇದ್ದದ್ದು ಅದರಲ್ಲಿ ಕೇವಲ ೬ ಮಂದಿಗೆ ಜಾಗ,ಇಲ್ಲಿ ನಾವಿರುವುದು ೪೫ ಮಂದಿ :(

ಕೈಯಲ್ಲಿ ಬ್ಯಾಗ್ಸ್ ಇಲ್ಲದ ೬ ಅದೃಷ್ಟವಂತರು ಆ ಬಸ್ ಹತ್ತಿದರು, ಅದರಲ್ಲಿ ನಮ್ಮ ಕುಡ್ವಾನೂ ಒಬ್ಬನಾಗಿದ್ದ.ನಮ್ಮಿಬ್ಬರಿಗೆ ಬೈ ಬೈ ಮಾಡುತ್ತ ಮುಂದಿನ ವೃತ್ತಿ ಜೀವನಕ್ಕೆ "ಆಲ್ ದಿ ಬೆಸ್ಟ್ " ಹೇಳಿದ
ನಾನು "ವೃತ್ತಿ ಜೀವನ ಇನ್ನು ಸ್ಟಾರ್ಟ್ ಅಗಿಲ್ಲಪ್ಪಾ.. ಏನಿದ್ದರು ಈ ಪ್ರಯಾಣಕ್ಕೆ  ಶುಭಕೋರು... " ಎಂದೆ.

ನಾವಂತು ನಮ್ಮ ೬ ಜೋಳಿಗೆಯ ಜೋಪಾಸನೆ ಯಲ್ಲಿದ್ದರೆ ಪಾಪ ಇಬ್ಬರಂತು ಬೆಂಗಳೂರಿಗೆ ೨ ಹಾಸಿಗೆಯನ್ನು ಕೊಂಡುಹೋಗುವ ಹುಮ್ಮಸ್ಸು ಮಾಡಿದ್ದರು , ಅದು ಈ ಮಳೆಗಾಲದಲ್ಲಿ :(
ಅವರಲ್ಲೊಬ್ಬ "ಮಳೆ ಬಾರಾ ದಿದ್ದರೆ ಸಾಕು ಇಲ್ಲಾಂದ್ರೆ ಈ ಹಾಸಿಗೆ ನೀರುಕುಡಿದು ಎಮ್ಮೆ ಅಂತೆ ಆಗಬಹುದು"
ಅವನಿಗೆ ಹುಂ ಗುಟ್ಟಿದ ಇನ್ನೊಬ್ಬ .
ಅವರಿಬ್ಬರ ಮಾತು ಕೇಳುತ್ತಿದ್ದಂತೆ ಮುಂದಿನ ಕ್ಷಣದಲ್ಲಿ ನಮ್ಮ ಅದೃಷ್ಟ ದೊಂದಿಗೆ ಏನಾಗುತ್ತದೆ ಎಂದು ತಿಳಿದೇ  ಹೋಗಿತ್ತು.
ಮತ್ತೇನು ಹೇಳುವುದು ಈ ದಿನ ಅಂತ ಪಾಠ ಕಳಿಸಿತ್ತು ನಮ್ಮಿಬ್ಬರಿಗೆ.
ಮುಂದಿನ ೫ ನಿಮಿಷದಲ್ಲಿ ಮತ್ತೊಂದು ಬಸ್ಸು ಬಂತು , ಅದರಲ್ಲಿ ಲುಗ್ಗೆಜ್ ನಮ್ಮಷ್ಟು ತಂದಿರದವರು  ಹತ್ತಿಕೊಂಡರು.

ಈಗ ಬರೇ ೧೫ ಮಂದಿ ಅದರಲ್ಲಿ ಒಂದು ೪ ಮಂದಿಯ ಪರಿವಾರ.ಒಂದು ಸಣ್ಣ ಮಗುವಿನನೊಂದಿಗೆ ಬಂದ ಗಂಡ ಹೆಂಡತಿ, ಹಾಸಿಗೆ ಹೊತ್ತ ೨ ನವಯುವಕರು, ಒಂದು ಇಳಿವಯಸ್ಸಿನ ದಂಪತಿಗಳು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಆಗ ತಾನೇ ನಿದ್ದೆಯಿಂದ ಎದ್ದ ೨ ಮಲಯಾಳಿ ಹುಡುಗಿಯರು, ಮತ್ತು ನಾವಿಬ್ಬರು !!! ಎಲ್ಲರು ಕಾಯುತ್ತಿದ್ದದ್ದು ಅದೇ ಕೊನೆಯ ಬಸ್ಸಿಗೆ.

ಈಗ ಬರುವ ಬಸ್ಸಲ್ಲಿ ಸೀಟ್ ಇಲ್ಲದಿದ್ದರೆ ಟಾಪ್ ನಲ್ಲಿ ಮಲಗಿಯಾದರೂ ಬೆಂಗಳೂರು ಸೇರಬೇಕಿತ್ತು .ಎಲ್ಲರು ಕೆಳಗಿದ್ದರು, ಕೇವಲ ರಿಟೈರ್ ಮಹಿಳೆ ಮತ್ತು ಮಗು ಬಸ್ಸಲ್ಲಿ ನಿದ್ರಿಸುತ್ತಿತ್ತು.
ನಾವಿಬ್ಬರು ಅಸಹಾಯಕ ಮುಖ ಹೊತ್ತು ನಿಂತಿದ್ದನ್ನು ನೋಡಿ ಡ್ರೈವರ್ ನಮ್ಮ ಪಕ್ಕಕ್ಕೆ ಬಂದರು.
"ದಾಲ ಪೋಡೋಡ್ಚಿ ಬಸ್ಸು ಬರು ನಾನಾ ೫ ನಿಮಿಷಡು, ಇತ್ತೇ ಕಾಲ್ ಮಲ್ದಿತ್ತೆ, ಅರುಣ್ ಪಂಡೆ ಬರೆ ೧೫ ಜನ ಉಪ್ಪುನು ಐಟ್ "(ಏನು ಹೆದರ ಬೇಡಿ , ಇನ್ನೈದು ನಿಮಿಷದಲ್ಲಿ ಬಸ್ ಬರ್ತದೆ ,ಇಗ್ತಾನೆ ಕಾಲ್ ಮಾಡಿದ್ದೆ, ಬರಿ ೧೫ ಜನರಿದ್ದಾರೆ ಅದರಲ್ಲಿ ಎಂದಿದ್ದ ಅರುಣ್)
ಹಾಸಿಗೆ ಹೊತ್ತವನಲ್ಲೊಬ್ಬ "ಅವ್ವು ಒಲ್ಥ ಬಸ್?"(ಇಲ್ಲಿನ ಬಸ್ ಅದು ?)
"ಕುಂದಾಪುರ ಡ್ಡ"(ಕುಂದಾಪುರ ದಿಂದ)

ಈ ಮಾತು ಕೇಳುತ್ತಿದ್ದಂತೆ ಎಲ್ಲರಿಗೆ ಒಮ್ಮೆಗೆ ಜೀವ ಬಂದಂತಾಯಿತು. ೨-೩ ನಿಮಿಷದಲ್ಲಿ ಇನ್ನೊಂದು ಮಳೆಯಲ್ಲಿ ನೆನೆದ ರಾಜಹಂಸ ನಮ್ಮತ್ತ ಮುಗುಳನಗುತ್ತ ಬರುತ್ತಿದ್ದಾಗ ಎಲ್ಲರು ತಮ್ಮತಮ್ಮ ಜೋಳಿಗೆ ಎತ್ತಿ ಅದರೆಡೆಗೆ ಧಾವಿಸಿದರು, ನಾವು ಅವರ ಹಿಂದೆ ನಡೆದೆವು .
ಕೊನೆಗೂ ಮಳೆ ಬರುವ ಮುಂಚೆ ಅವರ ಹಾಸಿಗೆ ಎಮ್ಮೆ ಆಗುವ ಮುಂಚೆ ಇನ್ನೊಂಧು ಬಸ್ಸ ಹತ್ತಿ ನಮ್ಮ ನಮ್ಮ ಸೀಟನ್ನು ಹುಡುಕಿಕೊಂಡಿದ್ದೆವು.
"ಅಬ್ಬ ನಮ್ಮ ಅದೃಷ್ಟ ಚೆನ್ನಾಗಿತ್ತು, ಮಳೆಬರುವ ಮುಂಚೆ ಎಲ್ಲಾ ಕೆಲಸ ಮುಗಿಸಿದೆವು  "ಎಂದ ನಮ್ಮ ಹಿಂದೆ ಕೊತ ಆ ತರುಣ;

ಬೇರೇನು ಜೋರಾಗಿ ನಕ್ಕು ಬಿಟ್ಟೆವು ಮುಂದಿನ ಸೀಟ್ನಲ್ಲಿ ಕುಳಿತ ನಾನೂ ಅರವಿಂದ್ :)

 

 

 

ಮುಂದಿನ ಭಾಗ http://sampada.net/blog/kamathkumble/24/09/2010/28078

Rating
No votes yet