ವ್ಯಾಮೋಹಾ, ಕಲಹಾ, ಸಮ್ಮೋಹಾ!!!!

ವ್ಯಾಮೋಹಾ, ಕಲಹಾ, ಸಮ್ಮೋಹಾ!!!!

ಬರಹ

ಸಂಜೆ ರವಿಯು ನಗು ನಗುತ ಕೆಂಪಾಗಿ


ಜಾರಿ ಜಾರಿ ಇರುಳ ಮಡಿಲಿಗೆ ಸೇರುವ ಹೊತ್ತು


ಅದೆಂಥದೋ ರವಿಗೆ ರಾತ್ರಿಯ ವ್ಯಾಮೋಹಾ!!


 


ಅದೇ ಇರುಳಿನಲಿ ಮನದ ಮೋಡಗಳು ಕಪ್ಪಾಗಿ


ಒಡಲಾಳದ ಮಾತುಗಳು ಒಡೆದು ಘರ್ಷಣೆಯಾಗಿ


ಪ್ರಕೃತಿ-ಪುರುಷನ ಪಾಲಾಯಿತು ಕಲಹಾ!!


 


ಕಗ್ಗತ್ತಲ ನಡುವೆ ತಾಳಲಾರದೆ ವೇದನೆ


ಕೆಂಡ ಕೋಪದ ಮನ ಮನಗಳೆರಡು ಕೊಸರಾಡಿ


ಕೊನೆಗೊಮ್ಮೆ ಕರಗಿ ನೀರಾಗಿ ಮತ್ತೆ ಈರ್ವರ ಸಮ್ಮೋಹಾ!!


 


ಯುಗ ಯುಗಗಳು ಉರುಳಿ ಜನ್ಮ ಜನ್ಮಗಳು ಕಳೆದು


ಸವಿನೆನೆಹುಗಳೆಲ್ಲ ಮರೆಯಾಗಿ ಹೋದರೂ


ಜರುಗುತಿರುವುದು ವ್ಯಾಮೋಹಾ, ಕಲಹಾ, ಸಮ್ಮೋಹಾ!!!


 


ಪ್ರತಿ..........