ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಪಟಿಕ ಎಸ್ಟೇಟ್ -1

ಮಲೆನಾಡ ಊರು ಸಕಲೇಶಪುರ ಎಲ್ಲೆಲ್ಲು ಹಚ್ಚಹಸಿರು ಎಸ್ಟೇಟು, ಹಕ್ಕಿಗಳ ಕಲರವ ಸಾಲು ಸಾಲು ಮರಗಳು, ಸುಗಂಧ ಬೀರುವ ಹೂಗಳು ಒಟ್ಟಿನಲ್ಲಿ ಭೂತಾಯಿ ಮೈದುಂಬಿ ನಲಿಯುತ್ತಿದ್ದಳು, ಸ್ಪಟಿಕ ಎಸ್ಟೇಟ್ ಸುತ್ತ ಮುತ್ತ ಚಿರಪರಿಚಿತವಾದ ಹೆಸರು ಸುಮಾರು ಇನ್ನೂರು ಎಕರೆ ಜಾಗದ ಸ್ಥಳ ಟೀ ಬೆಳೆ ಬೆಳೆದಿದ್ದರು ಮಧ್ಯ ಮದ್ಯ ಮೆಣಸು, ಏಲಕ್ಕಿ ಮುಂತಾದವುಗಳನ್ನು ಬೆಳದಿದ್ದರು, ಅವರ ಯಾವ ಬೆ

ಕ್ಯಾತೆ ಪೆಸಿಫಿಕ್ಕಿನ ಹೆಡ್‍ಮಿಸ್ಸುಗಳು

ನಿಸಾರ್ ಅಹಮದ್‍ರವರ ಕ್ಷಮೆ ಕೋರಿ ನನ್ನ ಈ ಕವನವನ್ನು ಪ್ರಸ್ತುತಪಡಿಸುತ್ತಿದ್ದೇನೆ. ನನ್ನ ಈ ಹಾಡು ನಿಸಾರ್ ಅಹಮದ್‍ರವರ "ಬೆಣ್ಣೆ ಕದ್ದ" ಧಾಟಿಯಲ್ಲಿದೆ. ನನ್ನ ಶೀರ್ಷಿಕೆಯಲ್ಲಿನ ಹೆಡ್‍ಮಿಸ್ಸುಗಳು ಕ್ಯಾತೇ ಪೆಸಿಫಿಕ್‍ನ ಗಗನ ಸಖಿಯರು. ಇನ್ನು ಮುಂದೆ ನನ್ನ ಕವನ ...ಇಲ್ಲ ಹಾಡು.
ವಿಮಾನ ಏರಿದಳಮ್ಮ, ಲಾಸ್ಯ
ವಿಮಾನ ಏರಿದಳಮ್ಮ
ವಿಮಾನ ಏರಿ, ಕಿವಿ ನೋವಾಗಿ,

ಕಾಣೆಯಾದವರ ಬಗ್ಗೆ ವರದಿ !!

ಕೆಲ ವಾರಗಳಿಂದ ಕೆಲ ಸಂಪದಿಗರು ಕಾಣೆಯಾಗಿದ್ದಾರೆ. ಅವರ ಲೇಖನಗಳು ಪ್ರತಿಕ್ರಿಯೆಗಳು ಕಂಡುಬರುತ್ತಿಲ್ಲ.
ಬೇಜಾರಾಗಿ ಹೊರನಡೆದರೋ, ಐ ಡಿ ಯನ್ನು ಬದಲಿಸಿಕೊಂಡಿದ್ದಾರೋ, ಸುಮ್ಮನೆ ದೂರದಿಂದ ನಿಂತು ಸಂಪದವನ್ನು ವೀಕ್ಷಿಸುತ್ತಿದ್ದಾರೋ, ತಮ್ಮ ಕೆಲಸಗಳಲ್ಲಿ ಅತ್ಯಂತ ವ್ಯಸ್ತರಾಗಿದ್ದಾರೋ ತಿಳಿಯದು. ಇವರು ತಮ್ಮ ಇರವನ್ನು ತಿಳಿಸಬೇಕಾಗಿ ವಿನಂತಿ.

ನಾನಿರುವೆ………..ಕೊನೆಯ ಭಾಗ

ಭಯಗೊ೦ಡರೂ ತೋರಗೊಡದೆ,"ಹಾಯ್" ಅ೦ದ
"ಬಾ ಒಳಗೆ" ಎ೦ದಷ್ಟೆ ಹೇಳಿದಳು
"ಅಪ್ದರಾ ನಾನು ನೇರ ವಿಷಯಕ್ಕೆ ಬರ್ತೀನಿ,ನನ್ನ ತಪ್ಪನ್ನ ಒಪ್ಕೊತೀನಿ ಆದ್ರೆ ಅದು ನಿನ್ನ ಬಲವ೦ತದಿ೦ದ ಆಯ್ತು ,ನಾನು ಸ್ವಲ್ಪ ಎಚ್ಚರಿಕೆಯಿ೦ದ ಇರ್ಬೇಕಾಗಿತ್ತು ಮೈ ಮರೆತೆ ನಿಜ,ಆದ್ರೆ ನಿನ್ನ ಬುದ್ಧಿ ಎಲ್ಲಿ ಹೋಗಿತ್ತು"
"ಯಾವುದರ ಬಗ್ಗೆ ಮಾತಾಡ್ತಾ ಇದೀಯಾ , ನಿಶ್ಚಿ೦ತ್.ಅದೆಲ್ಲಾ ಮರೆತು ಬಿಡು ಆಯ್ತಾ"

ಇದು 'ಯಾಂತ್ರಿಕ ಪ್ರೀತಿ'ಯಲ್ಲ!

ಶಿವಮೊಗ್ಗದಲ್ಲಿ ಇಕ್ಬಾಲ್ ಅಹಮದ್ ಎಂಬ ರೈಲ್ವೆ ಮೆಕಾನಿಕ್‌ಗೆ ಶಿವಮೊಗ್ಗ-ತಾಳಗುಪ್ಪ ಮಾರ್ಗದ ಪುಟಾಣಿ ರೈಲೆಂದರೆ ಅದೇನೋ ಅಕ್ಕರೆ.( ಅದೆಷ್ಟು ಪುಟಾಣಿ ಎಂದರೆ ಕೇವಲ 52 ಸೀಟಿನದು. ಅದಕ್ಕೆ ಟ್ರೈನ್ ಕಾರ್ ಎಂದೇ ಕರೆಯುವುದು.) ಹೊರಗಡೆ ಆಟವಾಡಿ ಗಾಯ ಮಾಡಿಕೊಂಡು ಬಂದ ಪುಟ್ಟ ಮಗುವನ್ನು ಸುಶ್ರೂಷೆ ಮಾಡುವಂತೆ ಆ ರೈಲನ್ನು ಆರೈಕೆ ಮಾಡುತ್ತಿದ್ದರು. ತಾವಿಲ್ಲದಿದ್ದಾಗ ಇತರ ಕೆಲಸಗಾರರು ಕುಡಿದು ಗಾಡಿಯನ್ನು ಮುಟ್ಟಿದರೆ ಇವರು ಕಿಡಿಕಿಡಿ. ಅದೇ ಆತಂಕದಲ್ಲಿ ಕೆಲಸಕ್ಕೆ ಎಂದೂ ರಜೆ ತೆಗೆದುಕೊಳ್ಳುತ್ತಿರಲಿಲ್ಲ. ಅದರ ಚಾಲಕನಿಗೂ ಇವರದೇ ತರಬೇತಿ. ಒಮ್ಮೆ ಅನಂತಪುರದ ಬಳಿ ೧೫ ದಿನಗಟ್ಟಲೇ ಕೆಟ್ಟುನಿಂತಾಗ, ಗಾಡಿ ಬಿಟ್ಟಿರಲಾರದೇ ಹಳಿ ಸರಿ ಇಲ್ಲದಿದ್ದರೂ ಸಾಹಸ ಮಾಡಿ ಶಿವಮೊಗ್ಗಕ್ಕೆ ತಂದಿದ್ದಿದೆ. ಆದರೆ ಇತ್ತೀಚೆಗೆ ತಾಳಗುಪ್ಪ ಮಾರ್ಗ ಬ್ರಾಡ್‌ಗೇಜ್‌ಗೆ ಬದಲಾಗುತ್ತಿದ್ದಂತೆ ಈ ರೈಲು ಮ್ಯೂಸಿಯಂ ಸೇರಿತು. ಮಗುವನ್ನು ಹಾಸ್ಟೆಲ್‌ಗೆ ಬಿಟ್ಟುಬಂದ ತಾಯಿಯಂತೆ ಇವರು ಕೊರಗಿದರು. ಈಗಲೂ ವಾರಕೊಮ್ಮೆಯೋ, ಹದಿನೈದು ದಿನಕ್ಕೊಮ್ಮೆಯೋ ನಂಜನಗೂಡಿನಲ್ಲಿರುವ ರೈಲ್ವೇ ಮ್ಯೂಸಿಯಂಗೆ ಗಾಡಿಯನ್ನು ನೋಡಲೆಂದೇ ಹೋಗುತ್ತಾರೆ. ಸ್ವಲ್ಪ ದೂರ ಚಲಾಯಿಸಿ, ಸರಿಯಾಗಿದೆ ಎಂದು ಸ್ಪಷ್ಟಪಡಿಸಿಕೊಂಡು ಮರಳುತ್ತಾರೆ, ಮತ್ತೆ ಅಲ್ಲಿಗೆ ಹೋಗುವ ದಿನಾಂಕ ನಿಗದಿ ಪಡಿಸಿಕೊಂಡೇ.

ನೀವು ಕೇಳದಿರಿ - 4 (ಸಿನಿಮಾ ಸ್ಪೆಷಲ್)

* ’ಹೊಡಿಮಗ’ ಈಗ ’ಹ್ಯಾಟ್ರಿಕ್ ಹೊಡಿಮಗ’. ಅದರ ಡೈರೆಕ್ಟರ್?

- ’ಟ್ರಿಕ್ ಡೈರೆಕ್ಟರ್’.

+++

* ಗಣೇಶ ’ಗೋಲ್ಡನ್ ಸ್ಟಾರ್’. ಅಂಬರೀಷ್?

- ’ಓಲ್ಡನ್ ಸ್ಟಾರ್’.

+++

* ಚುನಾವಣೆ ವೇಳೆ ಒಂದಷ್ಟು ದಿನ ಅಂಬಿ ತನ್ನ ಪಕ್ಷದ ವಿರುದ್ಧವೇ (ಅನಧಿಕೃತವಾಗಿ) ಬಂಡೆದ್ದದ್ದು ಯಾಕೆ?

- ತಾನು ’ರೆಬೆಲ್ ಸ್ಟಾರ್’ ಎಂಬುದು ಇದ್ದಕ್ಕಿದ್ದಂತೆ ನೆನಪಾಗಿರಬೇಕು!

+++

ಪ್ರಧಾನಿ ಪ್ರಸಂಗ

(’ಎಷ್ಟೊಂದು ಪ್ರಧಾನಿಗಳು!’ ಎಂಬ ನನ್ನ ಲಘುಬರಹಕ್ಕೆ ಈ ಜಾಲತಾಣದಲ್ಲಿ ಸ್ನೇಹಿತ ಶ್ರೀವತ್ಸ ಜೋಶಿ ಮತ್ತು ಸೋದರಿ ಶಾಮಲ ವ್ಯಕ್ತಪಡಿಸಿರುವ ಪ್ರತಿಕ್ರಿಯೆಯಿಂದ ಸ್ಫೂರ್ತಿ ಹೊಂದಿ ನಾನು ಈ ಕೆಳಗಿನ ಮೂರು ಛಂದೋಬದ್ಧ ಚುಟುಕಗಳನ್ನು ದಿಢೀರನೆ ಹೊಸೆದೆ! ಮುಂದಿನ ಪ್ರಧಾನಿ ಯಾವ ಪಕ್ಷದ ಯಾವ ವ್ಯಕ್ತಿ ಆದರೆ ಹೇಗೆ ಎಂದು ಹೀಗೇ ಸುಮ್ಮನೆ.

ಮಾತು ಎನ್ನುವ ಒಂದೇ ಒಡವೆ



ಹೊಳೆವ ಕಡಗಗಳು ಚಂದಿರನ ಹೊಳಪಿರುವ ಹಾರಗಳು
ಸ್ನಾನವು ಪೂಸಿರುವ ಲೇಪಗಳು ಮುಡಿದಿರುವ ಹೂವುಗಳು
ಇವು ಅಲ್ಲ ಒಡವೆಗಳು! ನಿನಗಿರಲು ನಲ್ನುಡಿಯ ನಾಲಿಗೆಯು
ಮಾತಿನೊಡವೆಯ ಮುಂದುಳಿದೊಡವೆಗಳು ಸೊರಗುವುವು

ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಮಳೆಯ ಮರೆಯಲ್ಲಿ

ಮಳೆರಾಯನ ಆಟ ನೋಡ್ಲಿಕ್ಕೆಂದು ಹೊರಟ ನಾನು ಕಂಡದ್ದು ಮಬ್ಬಾದ ಬಾನು. ಅಲ್ಲೇ ಅಡಗಿದ್ದ ಸಣ್ಣಗಿನ ನೀರ ದನಿ ಅದರೊಡನೆ ಸುಂದರ ನೀರ ತರಂಗಗಳು. ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕ ಈ ಚಿತ್ರಣ ಕಂಡು ನನ್ನ ಮನಸ್ಸಿನಲ್ಲಿ ಏಳುತ್ತಿದೆ ಎನೋ ಒಂಥರಾ ತಳಮಳ. ಒಂದರ ಮೇಲೊಂದರಂತೆ ಬೀಳುತ್ತಿದ್ದ ಹನಿಗಳಿಂದಾದ ಆ ಕಂಪನ ಕಂಡು ಎಂಥದೋ ಒಂಥರಾ ವಿದ್ಯುತ್ ಸಂಚಾರ.