ಸ್ಪಟಿಕ ಎಸ್ಟೇಟ್ -1

ಸ್ಪಟಿಕ ಎಸ್ಟೇಟ್ -1

ಮಲೆನಾಡ ಊರು ಸಕಲೇಶಪುರ ಎಲ್ಲೆಲ್ಲು ಹಚ್ಚಹಸಿರು ಎಸ್ಟೇಟು, ಹಕ್ಕಿಗಳ ಕಲರವ ಸಾಲು ಸಾಲು ಮರಗಳು, ಸುಗಂಧ ಬೀರುವ ಹೂಗಳು ಒಟ್ಟಿನಲ್ಲಿ ಭೂತಾಯಿ ಮೈದುಂಬಿ ನಲಿಯುತ್ತಿದ್ದಳು, ಸ್ಪಟಿಕ ಎಸ್ಟೇಟ್ ಸುತ್ತ ಮುತ್ತ ಚಿರಪರಿಚಿತವಾದ ಹೆಸರು ಸುಮಾರು ಇನ್ನೂರು ಎಕರೆ ಜಾಗದ ಸ್ಥಳ ಟೀ ಬೆಳೆ ಬೆಳೆದಿದ್ದರು ಮಧ್ಯ ಮದ್ಯ ಮೆಣಸು, ಏಲಕ್ಕಿ ಮುಂತಾದವುಗಳನ್ನು ಬೆಳದಿದ್ದರು, ಅವರ ಯಾವ ಬೆಳೆಗು ಭೂತಾಯಿ ಮೋಸ ಮಾಡಿರಲಿಲ್ಲ, ಎಸ್ಟೇಟ್ನಲ್ಲಿರುವ ಪ್ರತಿಯೊಂದು ಗಿಡವು ಆರೋಗ್ಯದಿಂದ ನಲಿಯುತಿದ್ದವು,ಒಟ್ಟಿನಲ್ಲಿ ಸ್ಪಟಿಕ ಎಸ್ಟೇಟ್ ಸ್ಪಟಿಕದಷ್ಟೆ ಶುಭ್ರವಾಗಿತ್ತು. ಮಧ್ಯ ಆಧುನಿಕ ರೀತಿಯ ಬಿಳಿಯ ಭವ್ಯವಾದ ಭಂಗಲೆ ಏಳೆಂಟು ಮೆಟ್ಟಿಲು ಹತ್ತಿ ಒಳ ಅಡಿ ಇಟ್ಟರೆ ಸಾಕಷ್ಟು ದೊಡ್ಡದೆನ್ನಬಹುದಾದ ಹಜಾರ, ಬಲಭಾಗದಲ್ಲಿ ಒಂದು ಗೆಸ್ಟ್ ರೂಮ್, ಹಜಾರದ ಪಕ್ಕದಲ್ಲಿ ದೇವರ ಮನೆ, ಎರಡು ರೂಮುಗಳು ಅಟ್ಯಾಚ್ ಬಾತ್ರೂಮ್ಗಳು, ಸಾಕಷ್ಟು ದೊಡ್ಡದಾದ ಅಡುಗೆ ಮನೆ, ಹಜಾರದ ಎಡಭಾಗದಿಂದ ಮೆಟ್ಟಿಲುಗಳನ್ನು ಹತ್ತಿಹೋದರೆ ಮಹಡಿಯ ಮೇಲೆ ಮೊರೂ ರೂಮುಗಳು ಪ್ರತಿಯೊಂದಕ್ಕು ಬಾಲ್ಕನಿಗಳು, ಬೆಲೆ ಬಾಳುವ ಕರ್ಟನ್ಗಳು, ಬೆಲೆ ಬಾಳುವ ರತ್ನ ಕಂಬಳಿಗಳು, ವಿದೇಶದಿಂದ ಆಮದು ಮಾಡಿಕೊಂಡ ಚಿತ್ರಟಗಳು, ದುಬಾರಿ ಸೊಫ಼ಾ ಸೆಟ್ಟುಗಳೂ, ದೊಡ್ದ ದೊಡ್ದ ಹೂದಾನಿಗಳು, ಹುಡಿಕಿದರು ಸಿಗದ ಧೂಳು ಒಟ್ಟಿನಲ್ಲಿ ವಿಶಾಲತೆ, ಸ್ವಚ್ಹತೆ, ಶ್ರೀಮಂತಿಕೆ ಎದ್ದುಕಾಣುತಿತ್ತು ಸ್ಪಟಿಕದಲ್ಲಿ ,ಪ್ರತಿಯೊಂದು ಭವಾನಿಯ ಇಛ್ಛೆಯಂತೆ ಬಂಗಲೆ ಸಿಂಗಾರಗೊಂಡಿತ್ತು. ಅದರ ವಾರಸುದಾರ ರಂಗನಾಥರಾಯರು ಎತ್ತರದ ನಿಲುವು ನಿಲುವಿಗೆ ತಕ್ಕಂತ ಗಾಂಭೀರ್ಯ ,ಮೈಕಟ್ಟು ,ಕೆಂಪು ಮೈ ಬಣ್ಣ, ದಟ್ಟವಾದ ಮೀಸೆ, ಯಾವಗಲು ಹಾಕುವ ಬಂಗಾರದ ಫ಼್ರೆರ‍ೇಮ್ ಇರುವ ಕನ್ನಡಕ, ತುಟಿಯಂಚಿನಲ್ಲಿ ಯಾವಗಲು ಮಾಸದ ನಗು, ಹತ್ತು ತಲೆಮಾರು ಕೂತು ತಿಂದರು ಮುಗಿಯದ ಆಸ್ತಿ, ಕೋಟ್ಯಾಧೀಶ್ವರರು. ಅಷ್ಟೆಲ್ಲ ಇದ್ರು ಸ್ವಲ್ಪನು ಅಹಂಕಾರ ಇಲ್ಲದ ಮನುಷ್ಯ ನಯ ವಿನಯೆತಯ ಮೈಗೂಡಿಸಿಕೊಂಡಿದ್ದರು. ಯಾರದರು ಕೈ ಎತ್ತಿ ಮುಗಿಯುವಂತ ಮನುಷ್ಯ ಸ್ಪಟಿಕದಲ್ಲಿ ಸುಮಾರು ನೂರರ ಮೇಲೆ ಆಳುಕಾಳುಗಳಿದ್ದರು ಎಲ್ಲರಿಗು ಅಚ್ಹುಮೆಚ್ಚು ರಂಗನಾಥರಾಯರು.ಎಲ್ಲರ ಕಷ್ಟ ಸುಖಗಳನ್ನು ವಿಚಾರಿಸುತ್ತಿದ್ದರು ಅದಕ್ಕೆ ತದ್ವಿರುದ್ದ ಅವರ ಹೆಂಡತಿ ಭ್ಹವಾನಿ ಅತಿ ಗತ್ತಿನ ಹೆಂಗಸು, ಹಾಲಿನಂತ ಬಿಳುಪಾದ ಮೈ ಬಣ್ಣ ಸುಮಾರು ೪೭ ಹರೆಯ ಆದರು ಮಾಸದ ರೂಪ, ಪತಿಯಂತೆ ಎತ್ತರದ ನಿಲುವು, ರೇಷ್ಮೆಯಂತ ಕೂದಲು, ಯಾವಗಲು ಉಡುವ ದುಬಾರಿ ಸೀರೆಗಳು, ಆಳುಕಾಳುಗಳ ಕಷ್ಟ ಸುಖ ಎಂದು ಕೇಳಿದವಳಲ್ಲ ಆದರೆ ಗಂಡನ ಧಾನ ಧರ್ಮಗಳಿಗೆ ಬೇಡವೆಂದವಳಲ್ಲ ರಾಯರು ಏನೆ ಮಾಡಿದರು ಅದು ಸರಿಯಾಗೆ ಇರುತ್ತದೆ ಎಂದು ಅರಿತವಳು ಒಂದು ರೀತಿಯ ಅಭಿಮಾನ ಕೂಡ ಗಂಡನ ಮೇಲೆ, ಯಾವಾಗಲು ಸ್ನೇಹಿತರು, ಪಾರ್ಟಿ ಎಂದು ತನ್ನದೆ ಪ್ರಪಂಚದಲ್ಲಿ ಇರುವಾಕೆ.ಗಂಡನ ಕಷ್ಟ ಸುಖ ಬೇಕು ಬೇಡಗಳನ್ನು ಯಾವತ್ತು ಕೇಳಿದವಳಲ್ಲ.ಆದರು ತುಂಬಾ ಶಿಸ್ತಿನ ಹೆಂಗಸು ಪ್ರತಿಯೊಂದರಲ್ಲು, ಪ್ರತಿಯೊಬ್ಬರಲ್ಲು ಅದನ್ನೆ ಬಯಸುವಾಕೆ. ಗಂಡ ಹೆಂಡತಿ ಭೇಟಿಯಾಗುತ್ತಿದ್ದಿದ್ದೆ ಬೆಳಗಿನ ಉಪಹಾರದ ಸಮಯದಲ್ಲಿ.
ಆ ಮನೆಯ ರಾಯರ ತಂದೆಯ ಕಾಲದಿಂದಲು ಅಡುಗೆಯ ಕೆಲಸ ಮಾಡಿಕೊಂಡಿದ್ದ ರಾಮಯ್ಯ, ಸುಮಾರು ಎಪ್ಪತ್ತರ ಹರೆಯ ಪ್ರತಿಯೊಬ್ಬರ ಬೇಕು ಬೇಡಗಳನ್ನು ಚೆನ್ನಾಗಿ ಬಲ್ಲವನಾಗಿದ್ದ, ಆ ಮನೆಯ ಒಬ್ಬ ಕೆಲಸಗಾರನಾಗಿರದೆ ಒಬ್ಬ ಸದಸ್ಯನಾಗಿದ್ದ ಸ್ಪಟಿಕದ ಪ್ರತಿಯೊಂದು ಆಗು ಹೋಗು ಗಳನ್ನು ಅರಿತಿದ್ದ ರಾಮಯ್ಯ.ರಾಯರಿಗು ಅಚ್ಹು ಮೆಚ್ಚು ರಾಮಯ್ಯನೆಂದರೆ.

ಬೆಳಗ್ಗೆ ಎಂಟರ ತಿಂಡಿಯ ಸಮಯ ಭವಾನಿ ಮೆಟ್ಟಿಲಿಳಿದು ಬಂದಳು, ಎಂದು ಸ್ನಾನ ಮಾಡದೆ ಕೆಳಗೆಳಿದವಳಲ್ಲ, ನೇರವಾಗಿ ಬಂದು ಡೈನಿಂಗ್ ಹಾಲ್ ಗೆ ಬಂದು ಕುಳಿತಳು.

ರ‍ಾಮಯ್ಯ ಬಿಸಿಬಿಸಿ ಹಬೆಯಾಡುವ ಇಡ್ಲಿ ಬಡಿಸಿದ ಸಾಂಬಾರು ಚಟ್ನಿಯ ಜೊತೆ. ನಾಲ್ಕರ ಮೇಲೆ ಎಂದು ತಿಂದವಳಲ್ಲ ಭವಾನಿ ಅಷ್ಟೊಂದು ಹೆಲ್ತ್ ಕಾನ್ಶಿಯಸ್

ಗುಡ್ ಮಾರ್ನಿಂಗ್.. ರಂಗನಾಥ!! ಗತ್ತಿನಿಂದಲೆ ಹೇಳಿದಳು ಭ್ಹವಾನಿ.( ರಂಗನಾಥ ಎಂದೆ ಕರೆದು ಅಭ್ಹ್ಯಾಸ) .

ವೆರಿ ಗುಡ್ ಮಾರ್ನಿಂಗ್ ಭ್ಹವಾನಿ ಮರುತ್ತರಿಸಿ ತಿಂಡಿ ತಿನ್ನುತ್ತಲೆ ಹಾಗೆ ಗಮನಿಸಿದರು ಹೆಂಡತಿಯನ್ನು, ಯಾಕೊ ಎಂದಿನಂತಿಲ್ಲ ಎನಿಸಿತು ರಾಯರಿಗೆ! ಮುಖದಲ್ಲಿ ಆಯಾಸ ಎದ್ದು ಕಾಣಿಸುತಿತ್ತು.
Any problem ಕೇಳಿದರು, nothing ನೆನ್ನೆ ಸ್ವಲ್ಪ ತೆಲೆ ನೋವಿತ್ತು ನಿದ್ದೆ ಸರಿಯಾಗ್ಲಿಲ್ಲ ಅದಕ್ಕೆ ಸ್ವಲ್ಪ ಆಯಾಸ ಹಾಗೆ ಹೇಳಿದರು ಅದು ಸುಳ್ಳು ಎಂದು ರಾಯರಿಗೆ ಗೊತ್ತು, ಇವತ್ತಿಗು ಅವಳು ಒಗಟಾಗೆ ಉಳಿದಿದ್ದಳು ರಾಯರಿಗೆ, ಇಷ್ಟು ವರ್ಷ ಸಂಸಾರದಲ್ಲಿ ಯಾವತ್ತು ರಾಯರು ಭವಾನಿಯನ್ನು ಎನನ್ನು, ಯಾವುದಕ್ಕು ಒತ್ತಾಯಿಸಿದವರಲ್ಲ, ಅವಳ ಸ್ವತಂತ್ರಕ್ಕೆ ಅಡ್ದಿ ಬಂದವರಲ್ಲ್ಲ, ಆದರು ಇತ್ತೀಚೆಗೆ ಏನನ್ನೊ ಕಳೆದು ಕೊಂಡಂತೆ ಇರುವುದನ್ನು ಗಮನಿಸಿದ್ದರು, ಅದಕ್ಕೆ ಕಾರಣವು ತಿಳಿಯದೆನಲ್ಲ ರಾಯರಿಗೆ, ಆದರೆ ತಾನಾಗಿ ತಂದು ಕೊಂಡ ನೋವು ಪುನಃ ಪುನಃ ಚರ್ಚಿಸಿ ಪ್ರಯೋಜನವಿಲ್ಲ ಎಂದು ಗೊತ್ತು, ಫ್ಹೋನ್ ರಿಂಗಾಯಿತು, ಕೈ ತೊಳೆದು ರಾಯರು ಎದ್ದರು.

ಭ್ಹವಾನಿಗೆ ತಿಂಡಿ ಸೇರಲಿಲ್ಲ, ಕೈ ತೊಳೆದು ಎದ್ದಳು. ರಾಮಯ್ಯನಿಗು ಕೂಡ ಅಮ್ಮನೋರು ಎಂದಿನಂತಿಲ್ಲ ಎನಿಸಿತು. ಅಯ್ಯೋ ಎಂದು ಮನಸ್ಸು ಮರುಗಿತು...... . ರಾಯರ ಕೈ ಹಿಡಿದು ಈ ಮನೆಗೆ ಕಾಲಿಟ್ಟ ದಿನದಿಂದ ಬಲ್ಲರು, ರಾಯರಿಗಿಂತ ಚೆನ್ನಾಗಿ ಅರಿತಿದ್ದರು ಕೂಡ, ಅವರ ಬೇಕು ಬೇಡಗಳನ್ನು ಚೆನ್ನಾಗಿ ತಿಳಿದಿದ್ದರು, ಇವರಾಗಿ ಒತ್ತಾಯದಿಂದ ಮಾತಾಡಿಸಿದರು ಅದಕ್ಕೆ ಒಂದೆರಡು ಪದಗಳಲ್ಲೆ ಉತ್ತರಿಸುತ್ತಿದ್ದಳು ಭವಾನಿ, ಪ್ರತಿಯೊಂದಕ್ಕು ಅವಳ ಕಣ್ಣುಗಳೆ ಉತ್ತರಿಸುತ್ತಿದ್ದವು, ಭವಾನಿ ಸ್ಪಟಿಕದಲ್ಲಿ ರಾಯರನ್ನು ಬಿಟ್ಟರೆ ಹೆಚ್ಚು ಆತ್ಮೀಯತೆಯಿಂದ ಮಾತನಾಡುವುದೆಂದರೆ ರಾಮಯ್ಯನ ಜೊತೆ ಮಾತ್ರ, ರಾಮಯ್ಯನನ್ನು ಕಂಡರೆ ಎನೋ ಒಂದು ರೀತಿಯ ಸಲುಗೆ ಭವಾನಿಗೆ. ಆದರು ಮನ ಬಿಚ್ಚಿ ಮಾತನಾಡಿದವಳಲ್ಲ.

ತಕ್ಷಣ ಶುಂಠಿ ಟೀ ಮಾಡಲು ಅಣಿಯಾದರು.

ಬಿಸಿ ಬಿಸಿ ತೆಲೆ ಸ್ನಾನ ಮಾಡಿ ಬಾಲ್ಕನಿಗೆ ಬಂದು ನಿಂತಳು ಭ್ಹವಾನಿ ತನ್ನ ಕೇಶರಾಶಿಯಲ್ಲಿ ಕೈ ಆಡಿಸುತ್ತ, ಯಾಕೋ ಸುಂದರ ಪ್ರಕ್ರುತಿಯನ್ನು ನೋಡುತ್ತಾ ನಿಲ್ಲಬೇಕೆನಿಸಿತು, ಒಮ್ಮೆ ದೂರದವರೆಗು ಕಣ್ನಾಡಿಸಿದಳು ಎಲ್ಲೆಲ್ಲು ಕಾಣುವ ಹಸಿರು ವನ ಸಿರಿ,ಕೆಲಸ ಮಾಡುವ ಆಳುಕಾಳುಗಳು ಪ್ರತಿಯೊಬ್ಬರ ಮುಖದಲ್ಲು ಸಂತೋಷ ಕಾಣುತಿತ್ತು, ಕಂಪು ಬೀರುವ ಹೂಗಳು, ಹಕ್ಕಿಗಳ ಕಲರವ ಮನಸ್ಸಿಗೆ ಹಾಯೆನಿಸಿತು.ಆದರು ಪ್ರತಿಯೊಂದು ಇದ್ದರು ತನ್ನಲ್ಲಿ ಎನೋ ಕೊರತೆ , ಎಷ್ಟೊ ಬಾರಿ ಈ ಪ್ರಶ್ನೆಯನ್ನು ತನಗೆ ತಾನೆ ಕೇಳಿಕೊಂಡಿದ್ದಳು ಉತ್ತರ ಸಿಗದೆ ಒದ್ದಾಡಿದ್ದಳೂ ಕೂಡ.

ದೂರದಲ್ಲಿ ರಾಯರು ಮ್ಯಾನೇಜರ್ ರಾಮಮೂರ್ತಿಯವರ ಜೊತೆ ಮಾತನಾಡುವುದು ಕಾಣಿಸಿತು, ಸಮಾನ ವಯಸ್ಕರು ತಕ್ಷಣ ಅವರ ಸಂಸಾರ ಕಣ್ಮುಂದೆ ಸುಳಿಯಿತು್ ಸಂಕಟವಾದಂತಾಯಿತು ಸಾವರಿಸಿಕೊಂಡಳು, ರಾಮಯ್ಯ ತಾಯೀ!!.......... ಟೀ ಎಂದಾಗಲೆ ಎಚ್ಚರ, ಪ್ರೀತಿಯಿಂದ ತಾಯೀ ಎಂದೆ ಕರಿಯುತಿದ್ದ, ರಾಮಯ್ಯನ ಕಣ್ಣೋಟ ಎದುರಿಸುವ ಎದುರಿಸುವ ಸಾಮರ್ಥ್ಯ ಅವಳಲ್ಲಿರಲಿಲ್ಲ. ಆದರು ಮನಸ್ಸು ತಡೆಯದೆ ಯಾಕ್ ತಾಯಿ?!! ಈ ಸಂಕಟ.. ಕೇಳಿಯೆ ಬಿಟ್ಟ, ಕಣ್ಣಾಲಿಗಳು ತುಂಬಿ ಬಂದವು, ಅದನ್ನು ತೋರ್ಪಡಿಸದೆ ಅತ್ತ ತಿರುಗಿದಳು.

ಸರ್ಕಾರಿ ಶಾಲೆಯ ಪಕ್ಕದ ಚೊಕ್ಕದಾದ ದಾರಿಯ ಬಲಬದಿಯ ಐದನೆಯ ಮನೆಯೆ ರಾಮಾಮೂರ್ತಿಯವರ ಮನೆ. ಮ್ಯಾನೇಜರ್ ರಾಮಮುರ್ತಿ ಎಂದೆ ಚಿರಪರಿಚಿತ ಸುಮಾರು ೫೦ರಿಂದ ೫೫ ವರ್ಷ ಸುಮಾರು ೫.೭ ಅಡಿ ಎತ್ತರ ನಸುಕೆಂಪು ಮೈ ಬಣ್ಣ. ಸ್ಪಟಿಕ ಎಸ್ಟೇಟಿನಲ್ಲಿ ಸುಮಾರು ೩೫ ವರ್ಷದಿಂದ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದೆನೋ ಸ್ಪಟಿಕ ಎಸ್ಟೇಟಿಗು ಇವರಿಗು ಬಿಡಲಾರದ ನಂಟು ಒಂದು ರೀತಿಯ ಅನುಭಂದ. ಚಿಕ್ಕದಾದ ಸಂಸಾರ ಹಿರಿಯರಿಂದ ಬಳುವಳಿಯಾಗಿ ಬಂದ ನೂರಾರು ವಸಂತಗಳನ್ನು ಕಂಡ ಮನೆ ಸುತ್ತಮುತ್ತ ಹೂದೋಟ ,ಗೇಟು ತೆಗೆದು ಒಳ ಬಂದರೆ ಕಣ್ಣಿಗೆ ಹಾಯೆನಿಸುವಷ್ಟು ಸುಂದರವಾದ ಹೂಗಳು, ಜಾಜಿ ಮಲ್ಲಿಗೆ, ಬಣ್ಣ ಬಣ್ಣದ ಗುಲಾಬಿ ಹೂಗಳು, ದುಂಡು ಮಲ್ಲಿಗೆ ಬಳ್ಳಿ, ಕನಕಾಂಬರ, ಸೇವಂತಿಗೆ ಒಂದು ಕಡೆ ಆದರೆ ಇನ್ನೋದು ಕಡೆ ಮೆಂತ್ಯೆ ಸೊಪ್ಪು, ಕರಿಬೇವಿನ ಮರ, ಕೊತ್ತಂಬರಿ ಸೊಪ್ಪು ಸ್ವಲ್ಪ ಮಟ್ಟಿನ ತರಕಾರಿ ಎಲ್ಲ ಶಾರದಮ್ಮನ ಆರೈಕೆಯಲ್ಲೆ ಬೆಳೆದಿರುವುದು ಜೊತೆಗೆ ಮಕ್ಕಳ ಕೈ ಕೂಡ ಸೇರಿತ್ತು ಮನೆಯ ಹಿಂದೆ ಹಲಸಿನ ಮರ, ಮಾವು ,ತೆಂಗು ಹಲವು ಮರಗಳಿದ್ದವು. ಸುಖ ದು:ಖದಲ್ಲಿ ಬಾಗಿಯಾಗಿ ೨೫ ವರ್ಷದಿಂದ ಗಂಡನಿಗೆ ತಕ್ಕ ಹೆಂಡತಿಯಾಗಿ ಪ್ರತಿಯೊಬ್ಬರ ಬೇಕು ಬೇಡಗಳನ್ನು ಗಮನಿಸುತ್ತಿರುವ ಸತಿ ಶಾರದಾ ಸುತ್ತ ಮುತ್ತಾ ಶಾರದಕ್ಕ ಎಂದೆ ಪರಿಚಯ ಸುಮಾರು ೪೫ ರ ವಯಸ್ಸು ಬಿಳುಪಾದ ಮೈ ಬಣ್ಣ ಸೊಂಟದವರೆಗಿನ ಜಡೆ ಎದ್ದು ಕಾಣುವಂತೆ ಇಡುವ ಕಾಸಗಲದ ಕುಂಕುಮ .ಯಾವಗಲು ಕೆಲಸದಲ್ಲಿ ಮಗ್ನವಾಗಿರುವ ಜೀವ ಗಂಡ ಮಕ್ಕಳ ಬೇಕು ಬೇಡಗಳನ್ನು ಗಮನಿಸುತ್ತಾ ಮಕ್ಕಳ ಓದಿಗೆ ಗಂಡನ ಕೆಲಸಕ್ಕೆ ತೊಂದರೆಯಾಗದಂತೆ ದುಡಿಯುವ ಜೀವ. ದೇವರು ಕರುಣಿಸಿದ ಎರಡು ಹೆಣ್ಣು ಮಕ್ಕಳು ದೊಡ್ಡವಳು ಸುಮನ ಎರಡನೆಯವಳೆ ಕವನ ಒಂದೊಂದು ವರುಷದ ಅಂತರ, ಯಾರದರು ಮೆಚ್ಚುವಂತ ಸುಂದರಿಯರು ದೊಡ್ದವಳಿಗಿಂತ ಚಿಕ್ಕವಳು ಸ್ವಲ್ಪ ಹೆಚ್ಚೆ ಎನ್ನಬಹುದಾದಂತ ಸೌಂದರ್ಯ ಕವನ ಹೆಸರಿಗೆ ತಕ್ಕಂತೆ ಕವಿಯೊಬ್ಬ ಕವಿತೆ ಬರೆಯಬಹುದಾದ ಸೌಂದರ್ಯ ದಟ್ಟವಾದ ಉದ್ದನೆ ಕೇಶರಾಶಿ,ಕೇದಿಗೆಯಂತ ಮೈ ಬಣ್ಣ, ತಂದೆಯಂತೆ ಎತ್ತರದ ನಿಲುವು ಒಟ್ಟಿನಲ್ಲಿ ತಿರುಗಿ ನೋಡುವಂತ ರೂಪಸಿ. ರಾಮಮೂರ್ತಿಯವರಿಗೆ ಮಕ್ಕಳಿಬ್ಬರನ್ನು ಅವರು ಓದುವಸ್ಟು ಓದಿಸುವಾಸೆಯಿತ್ತು ಆದರೆ ಸುಮನಳಿಗೆ ಓದಿನಲ್ಲಿ ಅಷ್ಟು ಆಸಕ್ತಿ ಇರಲಿಲ್ಲ ಡಿಗ್ರಿ ಮುಗಿಸಿ ಮುಂದಿನ ಓದಿಗೆ ಮಂಗಳಾರತಿ ಹೇಳಿ ಅಮ್ಮನ ಜೊತೆ ಮನೆಕೆಲಸದಲ್ಲಿ ಜೊತೆಯಾಗಿದ್ದಳು, ಕವನ ಓದಿನಲ್ಲಿ ಆಸಕ್ತಿ ಇತ್ತೊ ಇಲ್ವೊ ಗೊತ್ತಿಲ್ಲ ಆದರೆ ಸರಸ್ವತಿ ಅಂತು ಒಲಿದಿದ್ದಳು ಎಮ್.ಕಾಂ ಫೈನಲ್ ಓದುತ್ತಿದ್ದಳು.
( ಮುಂದುವರಿಯುವುದು)

Rating
No votes yet

Comments