ಪ್ರಧಾನಿ ಪ್ರಸಂಗ

ಪ್ರಧಾನಿ ಪ್ರಸಂಗ

ಬರಹ

(’ಎಷ್ಟೊಂದು ಪ್ರಧಾನಿಗಳು!’ ಎಂಬ ನನ್ನ ಲಘುಬರಹಕ್ಕೆ ಈ ಜಾಲತಾಣದಲ್ಲಿ ಸ್ನೇಹಿತ ಶ್ರೀವತ್ಸ ಜೋಶಿ ಮತ್ತು ಸೋದರಿ ಶಾಮಲ ವ್ಯಕ್ತಪಡಿಸಿರುವ ಪ್ರತಿಕ್ರಿಯೆಯಿಂದ ಸ್ಫೂರ್ತಿ ಹೊಂದಿ ನಾನು ಈ ಕೆಳಗಿನ ಮೂರು ಛಂದೋಬದ್ಧ ಚುಟುಕಗಳನ್ನು ದಿಢೀರನೆ ಹೊಸೆದೆ! ಮುಂದಿನ ಪ್ರಧಾನಿ ಯಾವ ಪಕ್ಷದ ಯಾವ ವ್ಯಕ್ತಿ ಆದರೆ ಹೇಗೆ ಎಂದು ಹೀಗೇ ಸುಮ್ಮನೆ.

ತಮ್ಮೆದುರು ಸಾದರಪಡಿಸುತ್ತಿದ್ದೇನೆ, ಆದರದಿಂದ ಬರಮಾಡಿಕೊಳ್ಳಿ ಭಾವಿ ಪ್ರಧಾನಿಯನ್ನು!)

ಪ್ರಧಾನಿ ಪ್ರಸಂಗ
-----------------

ರಾಹುಲ್ ಗಾಂಧಿಗೆ ಸಿಕ್ಕಿತು ಎಂದರೆ ಪೀಯೆಮ್ಮಿನ ಪಟ್ಟ
ರಾಹು-ಕೇತುಗಳು ಪಕ್ಕದಿ ಬರುವುವು ಆಗ ಅವನು ಕೆಟ್ಟ!
ಮತ್ತೇನಾದರು ಮನಮೋಹನನೇ ಆದರೆ ಪ್ರಧಾನಿಯು
ಕತ್ತೆಯಂತೇನೊ ದುಡಿವನು ಆದರೆ ಬಹಳೇ ನಿಧಾನಿಯು!

ಅದ್ವಾನಿಯು ಆದರು ಎಂದರೆ ಭಾರತದ ಪ್ರಧಾನ್ಮಂತ್ರಿ
ಅಧ್ವಾನವು ದೇಶವು ಭಾರತಕಾಗೆಂಥಾ ಗತಿ ಬಂತ್ರೀ!
ಕಾಂಗ್ರೆಸ್-ಕಮ್ಯುನಿಸ್ಟ್ ಹೀಗನ್ನುವುದು, ನಾನಂದದ್ದಲ್ರೀ
ಟಾಂಗ್ ಕೊಡುವುದೆ ಚಟ, ದೇಶದ ಯೋಚನೆ ಇವುಗಳಿಗೇನಿಲ್ರೀ!

ಮೂರನೆ ರಂಗವೊ ನಾಲ್ಕನೆ ಮಂಗವೊ ಆದರೆ ಪೀಯೆಮ್ಮು
ಮಾರನೆ ದಿನವೇ ಭರ್ಜರಿ ಸೀನು, ಫೈಟಿಂಗ್ ಏಕ್‌ದಮ್ಮು!
ಕರಟ್, ಮುಲಾಯಂ, ಪಾಸ್ವಾನ್, ಮಾಯಾ, ದೇವೇಗೌಡ, ಜಯಾ,
ಶರದ್, ಲಾಲುಗಳ ಶೀತಲ ಸಮರದಿ ದೇಶದ ಹಿತ ಮಾಯ!