ಮಾತು ಎನ್ನುವ ಒಂದೇ ಒಡವೆ

ಮಾತು ಎನ್ನುವ ಒಂದೇ ಒಡವೆ



ಹೊಳೆವ ಕಡಗಗಳು ಚಂದಿರನ ಹೊಳಪಿರುವ ಹಾರಗಳು
ಸ್ನಾನವು ಪೂಸಿರುವ ಲೇಪಗಳು ಮುಡಿದಿರುವ ಹೂವುಗಳು
ಇವು ಅಲ್ಲ ಒಡವೆಗಳು! ನಿನಗಿರಲು ನಲ್ನುಡಿಯ ನಾಲಿಗೆಯು
ಮಾತಿನೊಡವೆಯ ಮುಂದುಳಿದೊಡವೆಗಳು ಸೊರಗುವುವು

ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾಃ
ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ |
ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ
ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ ||

(ಕೊಸರು: ಮೂಲದಲ್ಲಿರುವ ಪ್ರಥಮ ಪುರುಷ -third person, ಕನ್ನಡಿಸುವಾಗ ಮಧ್ಯಮ ಪುರುಷ ವಾಗಿ ಮಾರ್ಪಡಿಸಿರುವೆ)

-ಹಂಸಾನಂದಿ

ಕೊಕೊ: ಮಾಯ್ಸರು ತೋರಿಸಿದಮೇಲೆ ಪ್ರಥಮ ಪುರುಷದ ತಪ್ಪನ್ನು ತಿದ್ದಿರುವೆ

Rating
No votes yet

Comments