ಕ್ಯಾತೆ ಪೆಸಿಫಿಕ್ಕಿನ ಹೆಡ್‍ಮಿಸ್ಸುಗಳು

ಕ್ಯಾತೆ ಪೆಸಿಫಿಕ್ಕಿನ ಹೆಡ್‍ಮಿಸ್ಸುಗಳು

ನಿಸಾರ್ ಅಹಮದ್‍ರವರ ಕ್ಷಮೆ ಕೋರಿ ನನ್ನ ಈ ಕವನವನ್ನು ಪ್ರಸ್ತುತಪಡಿಸುತ್ತಿದ್ದೇನೆ. ನನ್ನ ಈ ಹಾಡು ನಿಸಾರ್ ಅಹಮದ್‍ರವರ "ಬೆಣ್ಣೆ ಕದ್ದ" ಧಾಟಿಯಲ್ಲಿದೆ. ನನ್ನ ಶೀರ್ಷಿಕೆಯಲ್ಲಿನ ಹೆಡ್‍ಮಿಸ್ಸುಗಳು ಕ್ಯಾತೇ ಪೆಸಿಫಿಕ್‍ನ ಗಗನ ಸಖಿಯರು. ಇನ್ನು ಮುಂದೆ ನನ್ನ ಕವನ ...ಇಲ್ಲ ಹಾಡು.
ವಿಮಾನ ಏರಿದಳಮ್ಮ, ಲಾಸ್ಯ
ವಿಮಾನ ಏರಿದಳಮ್ಮ
ವಿಮಾನ ಏರಿ, ಕಿವಿ ನೋವಾಗಿ,
ಕಿರುಚಿ ಅತ್ತು ಕಕ್ಕಿದಳಮ್ಮ
ಕಕ್ಕಿದ ಮೇಲೆ ನೆಮ್ಮದಿಯಾಗಿ
ನಿದ್ದೆಯ ವಶವನು ಸೇರಿದಳಮ್ಮ ||ಪ||

ಹೆಡ್ಮಿಸ್ ಬಂದಳು ಓಡಿ
ಕಂದನ ಕಣ್ಣಿನಲ್ಲಿ ಕೋಡಿ,
ಕಣ್ಣಲಿ ಹೆಡ್ಮಿಸ್ ಸಿಟ್ಟನು ತಳೆದು
ಸೊಂಟಕೆ ಕೈಯಿಟ್ಟು,
ಆದಳು ಅರೆಕ್ಷಣ ಭೀಕರ ಕಾಳಿ
ದುರುದುರು ಕಣ್ಬಿಟ್ಟು ||೧||

ಮೈಮುಖ ಬಟ್ಟೆಗೆ ವಾಂತಿ ಮೆತ್ತಿದ
ನಮ್ಮಿಬ್ಬರ ನೋಡಿದಳು,
ಏರಿತು ಕೋಪ ಅರಳಿತು ಕಣ್ಣು
ಬುಸುಬುಸುಗುಟ್ಟಿದಳು
ಸಾವಿರ ಸಾವಿರ ಟಿಕೇಟಿಗೆ ಸುರಿದು
ಇಲ್ಲಿ ಬಂದ ನಾನು
ಬಿಳಿಚಿದೆ, ಹೆದರಿದೆ, ಗಡಗಡ ನಡುಗಿದೆ
ಮೂಲೆಗೆ ಸೇರಿದೆನು!
ನನಗಾಗಿ ನಾನೇ ಮರುಗಿದೆನು ||೨||

ಅವಳ ಆ ಸೇರಿದ ತಿರುಚು ಭ್ರುಕುಟಿಯದು
ಹೆದರಿಸಿತೆ ನನ್ನ - ನಡುಗಿದೆ
ಚಳಿ ಜ್ವರ ಭಯದಿಂದ. ||೩||

Rating
No votes yet

Comments