ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಾಗರದ ಕವಿ ಲಿಂಗಣ್ಣಯ್ಯ [ಎಸ್.ಕೆ. ಲಿಂಗಣ್ಣಯ್ಯ] - 1879-1943

ಕೆಳದಿ ಕವಿ ಮನೆತನದ ಕವಿ ಕ್ಋಷ್ಣಪ್ಪ - ಸುಬ್ಬಮ್ಮನವರಿಗೆ ಮೂರು ಗಂಡು ಮಕ್ಕಳು - ರಾಮಣ್ಣ, ವೆಂಕಣ್ಣ ಮತ್ತು ಲಿಂಗಣ್ಣ; ಗಂಗಮ್ಮ ಮತ್ತು ತುಂಗಮ್ಮ ಇಬ್ಬರು ಹೆಣ್ಣು ಮಕ್ಕಳು. ಈ ಲಿಂಗಣ್ಣನವರೇ 1879 ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ಲಿಂಗಣ್ಣಯ್ಯನವರಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಅಪಾರ ಗೀಳು.

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ೧

ಕುರುಡು ಸಂಪ್ರದಾಯ:
ಆಲೂರಿನಲ್ಲಿ ತನ್ನ ಮಗಳ ಮದುವೆಯ ಸಂದರ್ಬದಲ್ಲಿ, ತಾಯಿಯು ಎಲ್ಲಾ ಮದುವೆಯ ವ್ಯವಸ್ತೆಯನ್ನು ತುಂಬ ಅಚ್ಚುಕಟ್ಟಾಗಿ ಮಾಡಿದ್ದಳು. ಮದುವೆಯು ನಡೆಯುವ ಸಂದರ್ಬದಲ್ಲಿ ಒಂದು ಬೆಕ್ಕು ಮದುವೆಯ ಮಂಟಪದ ಮಧ್ಯೆ ಅಕಸ್ಮಾತಾಗಿ ಓಡಿ ಬಂದಿತು.

ಏಕೆ ಓದಬೇಕು?

ತಮ್ಮದೇ ನುಡಿಗಳನು ಕೇಳಿ ನಲಿವರಿಗರೂ*
ಪರರ ಕವಿತೆಗಳನೂ ಓದಿ ಸಂತೋಷಿಪರು
ಹೂಗಳಲೆ ಜೇನು ತುಂಬಿರುವ ಮಾವಿನ ಮರವು
ಕೊಡತುಂಬ ನೀರುಣಿಸ ಬಯಸದೇನು?

ಸಂಸ್ಕೃತ ಮೂಲ:

ಸರಸ -ವಿರಸ

ನಿಮ್ಮ ಹಾಸ್ಯ ನಿಮಗೆ ಅರ್ಥವಾದರೆ ಸಾಕೆ ??
ಜೋಕು ಮಾಡುವ ಗೆಳೆಯ ಒಂದಿನಿತು ಜೋಕೆ ||
ಹಾಸ್ಯ ಶ್ರೋತೃಗಳಿಗರ್ಥವಾದರೆ ಕ್ಷೇಮ
ಅಪಾರ್ಥವಾದರೆ ಗತಿಯು ಕೋದಂಡರಾಮ ||

ದುರ್ಲಭ ಯೋಜಕ!

ಆಮಂತ್ರಮಕ್ಷರಂ ನಾಸ್ತಿ,
ನಾಸ್ತಿ ಮೂಲ ಮನೌಷಧಂ!
ಅಯೋಗ್ಯಃ ಪುರುಷೋ ನಾಸ್ತಿ,
ಯೋಜಕಸ್ತತ್ರ ದುರ್ಲಭಃ !!

ಮಂತ್ರವಾಗದ ಅಕ್ಷರವುಂಟೆ?
ಔಷಧ ವಾಗದ ಮೂಲಿಕೆಯುನ್ಟೇ?
ಯೋಗ್ಯನಲ್ಲದ ಪುರುಶನುನ್ಟೆ?
ಯೋಜಕನ ಕೊರತೆಯುನ್ಟಲ್ಲದೆ!

ಸಮಾಧಾನ ಅಥವಾ ಸಮಯ ಸಾಧಕತನ

ನಮಸ್ಕಾರ, ಇಂದಿನ ವಿಷಯ ನಾನು ಮತ್ತು ನನ್ನ ಹೆಂಡತಿಯ ನಡುವೆ ಯಾರಿಗೆ ಸಮಾಧಾನ ಹೆಚ್ಚಿಗೆ ಎನ್ನುವದು ಹೆಣ್ಣಿಗೆ ಸಹನೆ ಹೆಚ್ಚು; ಸಹಿಷ್ಣುತೆ ಹೆಚ್ಚು; ಆಕೆ ಭೂಮಿ ಥರಹ ಅನ್ನುವ ಎಲ್ಲ ಮಾತುಗಳನ್ನು ನೀವು ಕೇಳಿರುತ್ತೀರಿ; ಓದಿರುತ್ತೀರಿ , ನನ್ನ ಪ್ರಶ್ನೆ ಏನಂದ್ರೆ ನೀವು ಕೇಳಿರುವ; ಓದಿರುವ ಅಥವಾ ನೋಡಿರುವ ಪಾವ೯ತಿಗೂ, ಭಾಗೀರತಿಗೂ ನಮ್ಮ ಪಾವ೯ತಿಯರಿಗೂ ಎಲ್ಲಿಂದೆಲ್ಲಿಯ ಸಂಭಂಧ ಎಂಬ ಚಚೆ೯ಗೆ ಇಂಬುಗೊಡಲು. ಮೊನ್ನೆ ಸಂಕ್ರಾಂತಿ ದಿನ ನಾನು ಮತ್ತು ಮನೆಯವಳು ಅವಳ ಸ್ನೇಹಿತರ ಮನೆಗೆ ಹೋಗಿದ್ದೆವು, ನಾನು ಆಫೀಸ್ ಮತ್ತವಳು ರಜೆಯ ಮಜೆಯಲ್ಲಿ!

ಕಡ್ಡಿಹುಳುಗಳ ರಕ್ಷಣಾ ತಂತ್ರ

ಕಡ್ಡಿಹುಳುಗಳ ರಕ್ಷಣಾ ತಂತ್ರಗಳಲ್ಲೂ ಎಷ್ಟೊಂದು ಬಗೆ !

ನಮಗರಿಯದಂತೆ ಜೀವಜಗತ್ತಿನಲ್ಲಿ ಹಲವಾರು ವೈವಿಧ್ಯಮಯ ಕೀಟಗಳಿರುತ್ತವೆ. ನಮಗೆ ಅಥವಾ ಶತ್ರುಗಳಿಗೆ ಹೆಚ್ಚಾಗಿ ಇವು ಗಮನಕ್ಕೆ ಬರುವುದಿಲ್ಲವೇಕೆಂದರೆ, ಅವುಗಳ ರಕ್ಷಣಾ ತಂತ್ರ. ಆಯಾ ಪರಿಸರ, ಬಣ್ಣಕ್ಕೆ ತಕ್ಕಂತೆ ಅವುಗಳ ದೇಹದ ಆಕೃತಿ, ಬಣ್ಣ ಬದಲಾಗಿದೆ. ಇದೇ ತಂತ್ರವನ್ನೇ ನಮ್ಮ ರಕ್ಷಣಾ ಇಲಾಖೆಗಳೂ ಬಳಸುತ್ತವೆ.

ಇನಿದನಿ ರೂಪವಾದಾಗ

ಕುಹೂ ಕುಹೂ ಎಂದೆನಿಸುತಾ
ಕೂಗಳತೆಯ ದೂರದಲ್ಲಿದ್ದರೂ
ಕಾಣದ ಇನಿದನಿಯೇ
ಏನಾಯಿತು ನಿನಗೆ
ಕಾಣದಂತೆ ನೀನು ಕೇಳುಸುತಿರುವೆ ದನಿಯನು ?

ಕುಹೂ ಕುಹೂ ಎಂದೆನಿಸುತಾ
ಕಣ್ಣಳತೆಯ ಮೀರಿ ನೋಡಿತಾ
ನಿಂತಿರುವೆ ಇನಿದನಿಯೇ
ಏನಾಯಿತು ನಿನಗೆ
ಕೇಳಿಸಿದರೂ ನೀನು ಕಾಯಿಸುತಿರುವೆ ಯಾರನು ?

ಕುಹೂ ಕುಹೂ ಎಂದೆನಿಸುತಾ
ಮನದ ಎಲ್ಲೆ ಮೀರಿ ನಗುತಾ
ಕುಳಿತಿರವೆ ಇನಿದನಿಯೇ