ಕಡ್ಡಿಹುಳುಗಳ ರಕ್ಷಣಾ ತಂತ್ರ

ಕಡ್ಡಿಹುಳುಗಳ ರಕ್ಷಣಾ ತಂತ್ರ

ಬರಹ

ಕಡ್ಡಿಹುಳುಗಳ ರಕ್ಷಣಾ ತಂತ್ರಗಳಲ್ಲೂ ಎಷ್ಟೊಂದು ಬಗೆ !

ನಮಗರಿಯದಂತೆ ಜೀವಜಗತ್ತಿನಲ್ಲಿ ಹಲವಾರು ವೈವಿಧ್ಯಮಯ ಕೀಟಗಳಿರುತ್ತವೆ. ನಮಗೆ ಅಥವಾ ಶತ್ರುಗಳಿಗೆ ಹೆಚ್ಚಾಗಿ ಇವು ಗಮನಕ್ಕೆ ಬರುವುದಿಲ್ಲವೇಕೆಂದರೆ, ಅವುಗಳ ರಕ್ಷಣಾ ತಂತ್ರ. ಆಯಾ ಪರಿಸರ, ಬಣ್ಣಕ್ಕೆ ತಕ್ಕಂತೆ ಅವುಗಳ ದೇಹದ ಆಕೃತಿ, ಬಣ್ಣ ಬದಲಾಗಿದೆ. ಇದೇ ತಂತ್ರವನ್ನೇ ನಮ್ಮ ರಕ್ಷಣಾ ಇಲಾಖೆಗಳೂ ಬಳಸುತ್ತವೆ.
ವಾಕಿಂಗ್ ಸ್ಟಿಕ್ ಎಂದೇ ಕರೆಯಲಾಗುವ ಕಡ್ಡಿಹುಳುಗಳಲ್ಲಿ ೨,೫೦೦ ಪ್ರಬೇಧಗಳಿವೆ. ಫಾಸ್ಮಿಡಾ ಎಂಬ ಪ್ರಭೇದಕ್ಕೆ ಸೇರುವ ಕಡ್ಡಿಹುಳುಗಳಲ್ಲಿ ಕೆಲವು ತಮ್ಮನ್ನು ರಕ್ಷಿಸಿಕೊಳ್ಳಲು ಅಲರ್ಜಿಕಾರಕ ದ್ರವವನ್ನೂ ಸ್ರವಿಸುತ್ತವೆ. ಶತ್ರುಗಳ ಕೈಗೆ ಸಿಕ್ಕದಂತೆ ಕೆಲವೊಮ್ಮೆ ತಮ್ಮ ಕಾಲುಗಳನ್ನೇ ಕಳಚಿಕೊಂಡು ಪರಾರಿಯಾಗಬಲ್ಲವು. ಕಳಚಿಹೋದ ಕಾಲುಗಳು ಮತ್ತೊಮ್ಮೆ ಸೃಷ್ಟಿಯಾಗಬಲ್ಲವು ಎಂಬುದು ಇವುಗಳ ವಿಶೇಷ. ಹಸಿರಿನೊಂದಿಗೆ ಹಸಿರಾಗಿರುವ, ಒಣಹುಲ್ಲಿನೊಂದಿಗೆ ಒಣಹುಲ್ಲಾಗಿರುವ, ಎಲೆಗಳೊಂದಿಗೆ ಎಲೆಗಳಾಗಿರುವ ಕಡ್ಡಿಹುಳುಗಳ ರಕ್ಷಣಾ ತಂತ್ರ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ನೋಡುವ ಕಣ್ಣುಗಳಿರಬೇಕ ಷ್ಟೆ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ