ಸಾಗರದ ಕವಿ ಲಿಂಗಣ್ಣಯ್ಯ [ಎಸ್.ಕೆ. ಲಿಂಗಣ್ಣಯ್ಯ] - 1879-1943

ಸಾಗರದ ಕವಿ ಲಿಂಗಣ್ಣಯ್ಯ [ಎಸ್.ಕೆ. ಲಿಂಗಣ್ಣಯ್ಯ] - 1879-1943

ಕೆಳದಿ ಕವಿ ಮನೆತನದ ಕವಿ ಕ್ಋಷ್ಣಪ್ಪ - ಸುಬ್ಬಮ್ಮನವರಿಗೆ ಮೂರು ಗಂಡು ಮಕ್ಕಳು - ರಾಮಣ್ಣ, ವೆಂಕಣ್ಣ ಮತ್ತು ಲಿಂಗಣ್ಣ; ಗಂಗಮ್ಮ ಮತ್ತು ತುಂಗಮ್ಮ ಇಬ್ಬರು ಹೆಣ್ಣು ಮಕ್ಕಳು. ಈ ಲಿಂಗಣ್ಣನವರೇ 1879 ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ಲಿಂಗಣ್ಣಯ್ಯನವರಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಅಪಾರ ಗೀಳು. ಇವರ ಬಾಲ್ಯವು ಇವರ ಭಾವ ಕೆಳದಿ ಕ್ಋಷ್ಣಜೊಯಿಸರ ಮನೆಯಲ್ಲಿಯೇ ಕಳೆಯಿತು. ಚಿಕ್ಕಂದಿನಲ್ಲಿ ಇವರು ರಚಿಸಿದ ವಿನಾಯಕ ವಣಱಚಿತ್ರವೊಂದು ಈಗಲೂ ಕೆಳದಿ ಮ್ಯೂಜಿಯಂನಲ್ಲಿ ಪ್ರದಶಿಱಸಲ್ಪಟ್ಟಿದೆ. ಬಹಳ ಕಷ್ಟಪಟ್ಟು ವ್ಯಾಸಂಗ ಮಾಡಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಉನ್ನತ ಶ್ರೇಣಿಯಲ್ಲಿ ಬಿ.ಎ. ಪದವಿ ಪಡೆದಿದ್ದರು. ಸಕಾಱರದ ಉನ್ನತ ಹುದ್ದೆಯಲ್ಲಿದ್ದ ಇವರು, ಲಿಥೋ ಪ್ರೆಸ್ ಕೂಡ ಹೊಂದಿದ್ದರು. ಸ್ವತ: ತಾವೇ ಅಲ್ಲಿ ವಿದ್ಯಾ ಇಲಾಖೆ ಸರಬರಾಜು ಮಾಡಲು ಭೂಗೋಳದ aನೇಕ ಮ್ಯಾಪ್ ಗಳನ್ನುಮತ್ತು ನಕ್ಷೆಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದ್ದರು. ತಮ್ಮ ಅನೇಕ ಕಲಾಕ್ಋತಿಗಳನ್ನೂ ಕೂಡ ಅವರು ಇದರಲ್ಲಿಯೇ ಅಚ್ಚು ಹಾಕಿದ್ದಾರೆ. ಸಂಪೂಣಱ ರಾಮಾಯಣವನ್ನು ಚಿತ್ರರೂಪದಲ್ಲಿ, ತಮ್ಮದೇ ಆದ ವಿಶಿಷ್ಟ ಶ್ಐಲಿಯಲ್ಲಿ, ಶ್ಲೋಕಗಳೊಂದಿಗೆ ಪ್ರಸ್ತುತ ಪಡಿಸಿರುವುದು ಇವರ ಸ್ಋಜನ ಶೀಲತೆಗೆ ಹಿಡಿದ ಕನ್ನಡಿ. ಬಹು ಜೀಣಱವಾಗಿರುವ ಈ ಪುಸ್ತಕಗಳನ್ನು ಕೆಳದಿಯಲ್ಲಿ ನೋಡಬಹುದು. ಅದೇ ರೀತಿ ಭಾಗವತದ ಅನೇಕ ಸನ್ನಿವೇಶಗಳನ್ನೂ ಕೂಡ ಇವರು ಸುಂದರವಾಗಿ ಚಿತ್ರಿಸಿದ್ದಾರೆ. The Guardian Angel of the British Empire ಎಂಬ ಶೀಷಿಱಕೆಯಡಿಯಲ್ಲಿ ಇವರು ಬರೆದ ಕಲಾಕ್ಋತಿ ಬಹು ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿದೆ; ಇವರ ಇತರ ಅನುಪಮ ಕಲಾಕ್ಋತಿಗಳೆಂದರೆ, ಶ್ರೀ ಚಾಮುಂಡೇಶ್ವರಿ, ಶ್ರೀ ರಾಮಪಟ್ಟಾಭಿಷೇಕ, ನರಸಿಂಹಾವತಾರ, ವೀರಭದ್ರಾವತಾರ, ಗೀತೋಪದೇಶ [ಇದು ಶಿವಮೊಗ್ಗೆಯ ಶಿವಪ್ಪನಾಯಕನ ಅರಮನೆಯಲ್ಲಿ ಪ್ರದಶಿಱಸಲ್ಪಟ್ಟಿದೆ], ವಿಶ್ವರೂಪದಶಱನ, ವಿಷ್ಣು ಮುಂತಾದವು. ಶ್ರೀ ವಾಯುಸ್ಥುತಿ ಮಾರುತಿ, ಶ್ರೀ ವಿಷ್ಣು ಮತ್ತು ಲಲಿತಾ ತ್ರಿಪುರ ಸುಂದರಿ ಚಿತ್ರಗಳ ಮೇಲೆ ಅತೀ ಸೂಕ್ಷ್ಮವಾಗಿ ದೇವರ ಸ್ತುತಿಗಳನ್ನು ಸಂಸ್ಕ್ಋತ ಮತ್ತು ಕನ್ನಡದಲ್ಲಿ ಅತೀ ಮುದ್ದಾಗಿ ಬರೆದಿರುವುದೂ ಕೂಡ ಇವರ ಕಲಾವಂತಿಕೆಗೆ ಮತ್ತು ತಾಳ್ಮೆಗೆ ಸಾಕ್ಷಿಯಾಗಿವೆ. ಚಿತ್ರಕಲೆ, ಫೋಟೋಗ್ರಫಿ, ವ್ಯಕ್ತಿಚಿತ್ರಗಳನ್ನು ಬರೆಯುವ ಕ್ರಮ, ವೀಣಾಭ್ಯಸ ಕ್ರಮ ಮುಂತಾದ ಅನೇಕ ಪುಸ್ತಕಗಳನ್ನೂ ಕೂಡ ಇವರು ಬರೆದಿರುತ್ತಾರೆ. ಇವರ ಮಕ್ಕಳಾದ ಶ್ರೀ ಎಸ್.ಕೆ.ಕ್ಋಷ್ಣಮೂತಿಱ ಮತ್ತು ಶ್ರೀ ಎಸ್.ಕೆ. ರಾಮರಾವ್ ರವರು ಮತ್ತು ಹೆಣ್ಣು ಮಕ್ಕಳಾದ ಶ್ರೀಮತಿ ಸುಬ್ಬಲಕ್ಷ್ಮಮ್ಮ, ಶ್ರೀಮತಿ ಪದ್ಮಾವತಮ್ಮ ಮತ್ತು ಶ್ರೀಮತಿ ಗಿರಿಜಮ್ಮನವರು ತಮ್ಮ ವಿಶ್ರಾಂತ ಜೀವನವನ್ನು ಈಗ ಬೆಂಗಳೂರಿನಲ್ಲಿ ಕಳೆಯುತ್ತಿದ್ದಾರೆ. ಇವರ ಇವರ ಸಂಪೂಣಱ ಜೀವನಚರಿತ್ರೆಯನ್ನು ಸಚಿತ್ರಗಳೊಂದಿಗೆ ಆಂಗ್ಲ ಭಾಷೆಯಲ್ಲಿ ಪ್ರಕಟಿಸಲಾಗಿದೆ: 1. Title: Karya Yogi-Kala Vallabha SK LINGANNAIYA Author: KAVI SURESH Year of Publication: 2007 - SHIMOGA 2. ಚಿತ್ರ ಕಲಾವಿದ ಕವಿ ಲಿಂಗಣ್ಣಯ್ಯ ಲೇ: ಕೆಳದಿ ಗುಂಡಾಜೋಯಿಸ್ ಪ್ರ: ಎಂ.ಎಸ್.ನಾಗೆಂದ್ರ, ಎಂ.ಎಸ್.ಎನ್.ಎಂಟರಪ್ರೈಸಸ್, ಬೆಂ. ಮತ್ತು ಶ್ರೀ ಸರಸ್ವತಿ ಸೇವಾ ಸಮಿತಿ, ಕೆಳದಿ.

Rating
No votes yet

Comments