ಸಮಾಧಾನ ಅಥವಾ ಸಮಯ ಸಾಧಕತನ

ಸಮಾಧಾನ ಅಥವಾ ಸಮಯ ಸಾಧಕತನ

ಬರಹ

ನಮಸ್ಕಾರ, ಇಂದಿನ ವಿಷಯ ನಾನು ಮತ್ತು ನನ್ನ ಹೆಂಡತಿಯ ನಡುವೆ ಯಾರಿಗೆ ಸಮಾಧಾನ ಹೆಚ್ಚಿಗೆ ಎನ್ನುವದು ಹೆಣ್ಣಿಗೆ ಸಹನೆ ಹೆಚ್ಚು; ಸಹಿಷ್ಣುತೆ ಹೆಚ್ಚು; ಆಕೆ ಭೂಮಿ ಥರಹ ಅನ್ನುವ ಎಲ್ಲ ಮಾತುಗಳನ್ನು ನೀವು ಕೇಳಿರುತ್ತೀರಿ; ಓದಿರುತ್ತೀರಿ , ನನ್ನ ಪ್ರಶ್ನೆ ಏನಂದ್ರೆ ನೀವು ಕೇಳಿರುವ; ಓದಿರುವ ಅಥವಾ ನೋಡಿರುವ ಪಾವ೯ತಿಗೂ, ಭಾಗೀರತಿಗೂ ನಮ್ಮ ಪಾವ೯ತಿಯರಿಗೂ ಎಲ್ಲಿಂದೆಲ್ಲಿಯ ಸಂಭಂಧ ಎಂಬ ಚಚೆ೯ಗೆ ಇಂಬುಗೊಡಲು. ಮೊನ್ನೆ ಸಂಕ್ರಾಂತಿ ದಿನ ನಾನು ಮತ್ತು ಮನೆಯವಳು ಅವಳ ಸ್ನೇಹಿತರ ಮನೆಗೆ ಹೋಗಿದ್ದೆವು, ನಾನು ಆಫೀಸ್ ಮತ್ತವಳು ರಜೆಯ ಮಜೆಯಲ್ಲಿ! ಆ ದಿನ ಕೆಲಸ ಮುಗಿಸಿ ಮನೆಗೆ ಹೋಗಿ..ಬಿಸಿ ಬಿಸಿ ಕಾಫಿಯ ನಂತರ ಇಬ್ಬರೂ ಕಾರನ್ನು ಏರಿ ಮನೆಯಿಂದ ಹೊರ ಬಿದ್ದೆವು, ಹೊರಡುವಾಗ ನಾನು ಮನೆಯವಳಿಗೆ "ಹಣ ಇದೆಯಾ?" ಎಂದು ಕೇಳಿದೆ "ಹೂಂ ಇದೆ" ಎಂದವಳೆ ಕಾರನ್ನು ಏರಿದಳು, "ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ! ಮೆತ್ತಗೆ ಮೆತ್ತಗೆ ಬಾ" ಎಂದು ನಾನು, "ಅಂಥಿಂಥ ಹೆಣ್ಣು ನಾನಲ್ಲ..ನನ್ನಂಥ ಹೆಣ್ಣು ಯಾರಿಲ್ಲ" ಎಂದು ಅವಳು ಹಾಡು ಹೇಳಿಕೋತಾ ಮುಂದೆ ಸಾಗಿದ್ದೆವು( ಏನು ಈಡು-ಜೋಡು ಅಲ್ಲಾ?) ನಮ್ಮ ಮನೆಯಿಂದ ಬಹುದೂರ ಸಾಗಿದ ಮೇಲೆ "ಮೊದಲ ಬಾರಿಗೆ ಅವರ ಮನೆಗೆ ಹೋಗ್ತಾ ಇದೀವಿ ಸ್ವಲ್ಪ ಸ್ವೀಟ್ಸ್ ತಗೋ" ಎಂದೆ "ಹಣ ಕೊಡಿ ಎನ್ನೋದೆ?" "ಚಿನ್ನ ಮನೆಯಲ್ಲಿ ಹೇಳಿದೆಯಲ್ಲ ಹಣ ಇದೆ ಅಂತ ಹೇಳಿದರೆ" "ನನ್ನ ಹತ್ತಿರ ಇದೆ ಆದರೆ ಅದು ಮನೆಯಲ್ಲಿದೆ ಎಂದಳು" ಟ್ಯಾಕ್ಸಾಸುರನಿಗೆ ಹೆದರಿ ವರ್ಷ ಪೂರ್ತಿ ಹಮ್ಮಿ ಕೊಂಡಿದ್ದ ಉಳಿತಾಯವನ್ನೆಲ್ಲ ಜನವರಿಯಲ್ಲೇ ಮಾಡಿದ ನನ್ನ ಉಳಿತಾಯ ಖಾತೆ ಮಡಿದು ಹೋಗಿತ್ತು, ಈ ಬೆಂಗಳೂರೆಂಬ ಮಹಾನಗರಿಯ ರಸ್ತೆಗಳ ಕೆಂಪು ದೀಪಗಳು ಮತ್ತೆ ಮನೆಗೆ ಹೋದರೆ ಹುಷಾರ್ ಎಂದು ಧಮಕಿ ಹಾಕುತ್ತಿದ್ದವು ನನ್ನ ಝೀರೋ ಬ್ಯಾಲೆನ್ಸ್ ಉಳಿತಾಯ ಖಾತೆಯ ಪೂಣ೯ ಪ್ರಯೋಜನ ಪಡೆದು ಸ್ವಲ್ಪ ಸ್ವೀಟ್ ಮತ್ತು ಖಾರ ತೆಗೆದುಕೋಂಡು ಅವರ ಮನೆಗೆ ಹೋದೆವು ಉಭಯ ಕುಶಲೋಪರಿಯ ನಂತರ ಊಟ ಮಾಡುತ್ತ ಮಾತನಾಡುತ್ತಾ ಕುಳಿತಾಗ ಕೇಳ್ತಾ ಕೇಳ್ತಾ ಸುಚಿ ಕೇಳಿದ್ದು "ನಿಮ್ಮಲ್ಲಿ ಯಾರಿಗೆ ಸಮಾಧಾನ ಹೆಚ್ಚು ?" ಮೊದಲಿನ ಅನುಭವಗಳಿಂದ ದಾಂಪತ್ಯದಲ್ಲಿ ಪಕ್ವವಾಗಿರುವ ನಾನು ಸಮಾಧಾನದಿಂದ ಸುಮ್ಮನಿದ್ದೆ. ನನಗೆ ಆ ಪ್ರಶ್ನೆಯ ಉತ್ತರ ಮತ್ತು ಉತ್ತರಿಸ್ಪಡುವ ಸಮಯ(ಎರಡೇ ಸೆಕೆಂಡ್‍ಗಳಲ್ಲಿ) ಎರಡೂ ಗೊತ್ತಿತ್ತು :-) "ನಿಜ ಹೇಳ್ಬೇಕು ಅಂದ್ರೆ ನನಗೆ ಹೆಚ್ಚು ಕಣೆ ಸುಚಿ" ಅಂದಾಗ, ಸುಮ್ಮನಿದ್ದ ನಾನು "ಗೊತ್ತಯ್ತಲ್ಲ? ಯಾರಿಗೆ ಅಂತಾ?" ಎಂದು ಅಂದು ಬಿಟ್ಟೆ, ಹೌದಲ್ವೇನ್ರ್‍ಇ? ನನಗೇನು ಹೇಳೋಕೆ ಬರ್ತಿದಿಲ್ವಾ? ನನಗೇ ಹೆಚ್ಚು ಸಮಾಧಾನ ಅನ್ನೊಕೆ? ಎಂದು ಹೇಳಿ ಎಲ್ಲರನ್ನೂ ಒಪ್ಪಿಸಿ ಎಲ್ಲರೂ ಸೇರಿ ಚೆನ್ನಾಗಿ ನಕ್ಕೆವು. ಆದರೆ ನನ್ನ ಮನೆಯವಳಲ್ಲಿ ಒಂದು ಬದಲಾವಣೆಯಾಯ್ತು ನಮ್ಮಿಬ್ಬರಲ್ಲಿ ನಿಮಗೆ ಹೆಚ್ಚು ಸಹನೆ ಎಂಬ ಮಾತನ್ನು ಅನುಮೋದಿಸ ಹತ್ತಿದಳು, ಮನೆಯವಳೇ ಹಾಗೆಂದಮೇಲೆ ಕೇಳಬೇಕೆ ನಾನು ಗಾಳಿಗಿಂತ ಹಗುರಾಗಿ ಹೋದೆ ಮತ್ತು ನನ್ನ ಆತ್ಮೀಯ ಸ್ನೆಹಿತರ ಬಳಿಯೆಲ್ಲ ಆ ಘಟನೆಯ ಪ್ರಸ್ತಾಪ ಮಾಡಹತ್ತಿದೆ....ಕೇಳಿದವರೆಲ್ಲಾ ಭೇಷ್ ಅನ್ನುವವರೆ ಓ ಹೋ ಹೋ ಎಂದವರೆ... ನನ್ನ ಖುಷಿ ಬಹಳ ದಿನ ಉಳಿಯಲಿಲ್ಲ, ಹೀಗೆ ಹೇಳ್ತಾ ಹೇಳ್ತಾ ನನ್ನ ಆತ್ಮೀಯ ಸ್ನೇಹಿತೆ "ಡಾಕ್ಟ್ರಮ್ಮ"ನಿಗೆ ಕೂಡ ಹೇಳಿದೆ, ಡಾಕ್ಟ್ರಮ್ಮ ತುಂಬಾ ಅನುಭವಸ್ತರು ಸಂಸಾರ ಜೀವನದಲ್ಲಿ ೧೦ ವಷ೯ಗಳನ್ನು ಮೊನ್ನೆ ತಾನೆ ಪೂರೈಸಿದ್ದಾರೆ ಜೊತೆಗೆ ಭಾಷಾ ಜ್ಙಾನ ಬೇರೆ ಅದರ ಜೊತೆಗೆ ಸ್ತ್ರೀ ವಾದಿಗಳು(ಅದು ಗೊತಾಗಿದ್ದೆ ಮೊನ್ನೆ :-() ಹೇಳಿ ೩ ಸೆಕೆಂಡ್ ಕೂಡ ಆಗಿಲ್ಲ ಅದು "ಸಮಾಧಾನ ಅಲ್ಲ ಸಮಯಸಾಧಕತನ" ಅಂದು ಬಿಡೋದೆ? "ಅದರಲ್ಲಿ ಕಾದ ಮೇಲೆ ಕಬ್ಬಿಣವನ್ನು ಬಡಿಯಬೇಕು ಎನ್ನುವ ವೃತ್ತಿಪರತೆ ಇದೆ; ಬೆಲೆ ಸಿಕ್ಕ ಮೇಲೆ ಸರಕನ್ನು ಮಾರಬೇಕೆನ್ನುವ ವ್ಯಾಪಾರಿ ಬುಧ್ಧಿ ಇದೆ ಎಂದು ಬಿಡೋದೆ?" ಕೊನೆಗೆ "ಕುರಿ ಕೊಬ್ಬಿದ ಮೇಲೆ ಕಡಿಯ ಬೇಕು ಎನ್ನುವ ಕಟುಕತನವಿದೆ!!?!?!?!?" "ಶಿವ! ಶಿವ!" ಎನ್ನುವ ನನ್ನ ಮನೆಯವಳ ಮಾತುಗಳು ನನ್ನ ಬಾಯಿಗೆ ಬಂದವು "ಅಕಟಕಟಾ! ಡಾಕ್ಟ್ರಮ್ಮ ಏನು ಹೊಗಳ್ತಿದಾರೋ ಉಗಿತಿದಾರೋ ಎನ್ನುವುದು ಗೊತ್ತಗದೆ ಕುಳಿತು ಬಿಟ್ಟೆ. ಇವೇ ಮಾತುಗಳು ನನ್ನ ಮಡದಿಯ ಬಾಯಿಗೂ ಹರಿದು ಬಂದು ಸಮಾಧಾನ ಎಂಬ ಪದವನ್ನು ನಾನು ಬಳಸುವುದನ್ನೆ ಬಿಟ್ಟು ಬಿಟ್ಟಿದ್ದೇನೆ.:-( :-( :-( ನರೇಂದ್ರ