ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ೧

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ೧

ಬರಹ

ಕುರುಡು ಸಂಪ್ರದಾಯ:
ಆಲೂರಿನಲ್ಲಿ ತನ್ನ ಮಗಳ ಮದುವೆಯ ಸಂದರ್ಬದಲ್ಲಿ, ತಾಯಿಯು ಎಲ್ಲಾ ಮದುವೆಯ ವ್ಯವಸ್ತೆಯನ್ನು ತುಂಬ ಅಚ್ಚುಕಟ್ಟಾಗಿ ಮಾಡಿದ್ದಳು. ಮದುವೆಯು ನಡೆಯುವ ಸಂದರ್ಬದಲ್ಲಿ ಒಂದು ಬೆಕ್ಕು ಮದುವೆಯ ಮಂಟಪದ ಮಧ್ಯೆ ಅಕಸ್ಮಾತಾಗಿ ಓಡಿ ಬಂದಿತು.

ಏನು ಮಾಡುವುದು ಎಂದು ತಾಯಿಯು ಆ ಬೆಕ್ಕನ್ನು ಹಿಡಿದು ಬುಟ್ಟಿಯೊಳಕ್ಕೆ ಹಾಕಿ, ಮದುವೆಯನ್ನು ಮಾಡಿ ಮುಗಿಸಿದಳು. ಕೆಲವು ವರ್ಷಗಳ ನಂತರ ಮಗಳು ತನ್ನ ಸಂಸಾರವನ್ನು ನಿರ್ವಹಿಸುತ್ತಾ ತನ್ನ ಬೆಳೆದು ದೊಡ್ಡವಳಾದ ಮಗಳ ಮದುವೆಯನ್ನು ಮಾಡಲು ಸಕಲ ಸಿದ್ದತೆಯನ್ನು ಮಾಡಿದಳು. ಮಗಳ ಮದುವೆಗೆ ಎಲ್ಲಾ ತಯಾರಿಯನ್ನು ಮಾಡಿದ ಮೇಲೆ ಅವಳಿಗೆ ಇನ್ನು ಏನೊ ಬಾಕಿ ಉಳಿದಿದೆ ಎಂದು ತನ್ನ ಮದುವೆಯನ್ನು ಙ್ಞಾಪಿಸಿಕೊಂಡಳು. ತನ್ನ ಮದುವೆಯಲ್ಲಿ ತಾಯಿಯು ಬೆಕ್ಕನ್ನು ಬುಟ್ಟಿಯಲ್ಲಿ ಹಾಕಿದ್ದನ್ನು ನೆನೆದು ಒಂದು ಬೆಕ್ಕನ್ನು ಹಿಡಿದು ತಂದು ಮದುವೆಯ ಮಂಟಪದ ಹತ್ತಿರ ಬುಟ್ಟಿಯಲ್ಲಿರಿಸಿ ಮದುವೆಯನ್ನು ಮಾಡಿ ಮುಗಿಸಿದಳು. ಈ ರೀತಿ ಆ ಸಂಸಾರದಲ್ಲಿ ಇದು ಒಂದು ಸಂಪ್ರದಾಯವಾಯಿತು.

ಯಾವುದನ್ನೂ ಕುರುಡಾಗಿ ಪಾಲಿಸಬಾರದು. ದೇವರು ತಲೆ ಮತ್ತು ಕಣ್ಣು ಕೊಟ್ಟಿರುವಾಗ ಅದನ್ನು ಸಮರ್ಪಕವಾಗಿ ಲೋಕದ ಏಳ್ಗೆಗೆ ಬಳಸಬೇಕು. ನಮ್ಮ ಈಗಿನ ಪರಿಸ್ಥಿಯೂ ಅಷ್ಟೆ, ನಾವು ಏಕೆ ಹಾಗೆ ಮಾಡುತ್ತೇವೆ ಎಂಬರಿವಿಲ್ಲದೆ ಸವಿರಾರು ಸಂಪ್ರದಾಯಗಳಿವೆ... ಆದರ ಒಳಗೆ ನೋರಾರು ಮುತ್ತುಗಳೂ ಅಡಗಿವೆ. ಇದು ಆ ಮುತ್ತುಗಳನ್ನು ಹೆಕ್ಕುವ ಒಂದು ಸಣ್ಣ ಯತ್ನ.

Albert Einstein ಹೇಳಿರುವ ಮಾತು " ವೈಙ್ಞಾನಿಕತೆ ಇರದ ಧರ್ಮ ಕುರುಡು" ಹಾಗಾದರೆ ನಮ್ಮ ಧರ್ಮದಲ್ಲಿ ವೈಙ್ಞಾನಿಕತೆ ಇರಲಿಲ್ಲವೆ??
ಮುತ್ತು 1: "The law of conservation of energy"

ಓಂ ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂಗಮಯ. ಓಂ ಶಾಂತಿ ಶಾಂತಿ ಶಾಂತಿ:

ನಸತೋ ವಿದ್ಯತೇ ಭಾವೋ, ನಾಭಾವೊ ವಿದ್ಯಥೆ ಸತ:
ಉಭಯೋರಪಿ ದ್ರಷ್ತೊಂತಸ್ಥ್ವನಯೊಸ್ತತ್ವ ದರ್ಶಿಭಿ: [ಭಗವದ್ ಗೀತೆ - ೨.೧೬]

ಆಸದ್ವಸ್ತುವಿಗೆ ಅಸ್ತಿತ್ವವಿಲ್ಲ, ಸದ್ವಸ್ತುವಿಗೆ ನಾಶವಿಲ್ಲ, ಇವೆರಡರ ನಿರ್ಣಯವನ್ನು ತತ್ವಙ್ಞರು ತಿಳಿದಿರುತ್ತಾರೆ.

Implied meaning: Energy can never be created nor destroyed.In whichever way you think ,Whatever is already there cannot be destroyed.Whatever is not there cannot be created ". Notes:(satha: = real=whatever is already there,asatha:=unreal=that which is not there)

ವಾಸಾಂಸಿ ಜೀರ್ಣಾನಿ ಯಥಾ ವಿಹಾಯನವಾನಿ ಗೃಹ್ಣಾತಿ ನರೋಪರಾಣಿ
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯ್ನಿ ಸಂಯಾತಿ ನವಾನಿ ದೇಹೀ [ಭಗವದ್ ಗೀತೆ - ೨.೨೨]

ಮನುಷ್ಯನು ಹಳೆಯ ಬಟ್ಟೆಗಳನ್ನು ಹೇಗೆ ಬಿಟ್ಟು ಬೇರೆ ಹೊಸ ವಸ್ತ್ರಗಳನ್ನು ತೆಗೆದುಕೊಳ್ಳುತ್ತನೋ, ಹಾಗೆ ಅತ್ಮನು ಜೀರ್ಣವಾದ ಶರೀರವನ್ನು ಬಿಟ್ಟು ಬೇರೆ ಹೊಸ ಶರೀರಗಳನ್ನು ಬಿಟ್ಟು ಬೇರೆ ಹೊಸ ಶರೀರಗಳನ್ನು ಹೊಂದುತ್ತಾನೆ.

Implied meaning: Matter only changes form.Solid may become a liquid or a gas or viceversa. Notes: "Matter= Energy=Atma"

ಈ ೨ ಶ್ಲೋಕ "ಯಾವುದೇ ಶಕ್ತಿಯನ್ನು ಸೃಷ್ಟಿಸಲೂ ಸಾಧ್ಯವಿಲ್ಲ ನಾಶಪಡಿಸಲೂ ಸಾಧ್ಯವಿಲ್ಲ. ಅದನ್ನು ಒಂದು ಸ್ವರೂಪದಿಂದ ಇನ್ನೊಂದು ಸ್ವರೂಪಕ್ಕೆ ಬದಲಾವಣೆಯನ್ನು
ಯಾವುದೇ ಲಾಭ ನಷ್ಟಗಳಿಲ್ಲದೆ ಮಾಡಬಹುದು ಎಂದು ನಿಮಗನ್ನಿಸುವುದಿಲ್ಲವೇ. ಇದು Einstein's relation E=mc^2,mass ಮತ್ತು energy ಸಮಾನ. ಶಕ್ತಿಯು ದ್ರವ್ಯದ ರೂಪದಲ್ಲಿ ಬ್ರಹ್ಮಾಂಡದಲ್ಲಿ ಅಸ್ತಿತ್ವದಲ್ಲಿದೆ. ಈ ೨ ಶ್ಲೋಕ "The law of conservation of energy" ಕೃಷ್ಣ ೩೧೦೦ B.C.ಯಲ್ಲಿಯೇ ಹೇಳಿದ್ದನು. (Archaelogical survey of India ಕುರುಕ್ಷೇತ್ರ ಯುದ್ದವು ೩೧೦೦ B.C.ಯಲ್ಲಿ ಎಂದು ಹೇಳಿದ್ದಾರೆ.)

ಮೂಲ: ಇ-ಮೇಯ್ಲ್