ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈ ಫೋಟೋದಲ್ಲಿ ನಿಮಗೇನು ಕಾಣುತ್ತದೆ

ಈ ಫೋಟೊ ಬೆಲಗೂರಿನ ಹನುಮಂತ ದೇವಸ್ಥಾನದ ಬಳಿಯಲ್ಲಿದ್ದ ಕಟೌಟ್ನಿಂದ ತೆಗೆದದ್ದು .
ಇದರಲ್ಲಿ ಒಂದು ಕೌತಕವಿದೆ ಏನು ಹೇಳಿ?
ನಿಮ್ಮಗಳ ಅನಿಸಿಕೆಯ ಬಳಿಕ ಸರಿಯಾದ ಉತ್ತರ ಹೇಳ್ತೀನಿ

ಡಿ.೧೨: ಹುಬ್ಬಳ್ಳಿಯಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಹುಬ್ಬಳ್ಳಿಯ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ ಆಂಡ್ ರಿಸರ್ಚ್ ಸಹಭಾಗಿತ್ವದಲ್ಲಿ ಬರುವ ಶುಕ್ರವಾರ, ೧೨ ರಂದು ಹುಬ್ಬಳ್ಳಿಯಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ ಹಮ್ಮಿಕೊಂಡಿದೆ.

ಯುವ ಕವಿಗೆ ಬರೆದ ಪತ್ರಗಳು....

ಕಳೆದ ವಾರ ಡಿಸೆಂಬರ್ ೫ರಂದು ಸಂಜೆ ಮಲ್ಲೇಶ್ವರಂ ಗಾಂಧಿ ಸಾಹಿತ್ಯ ಭವನದಲ್ಲಿ "ಜಿ ಪಿ ರಾಜರತ್ನಂ ಜನ್ಮ ಶತಮಾನೋತ್ಸವ" ಸಮಾರಂಭವಿತ್ತು. ಕವಿ ಜಿ.ಎಸ್.ಶಿವರುದ್ರಪ್ಪನವರ ಅಧ್ಯಕ್ಷತೆಯಲ್ಲಿ, ಪ್ರೊ.ಅ.ರಾ.ಮಿತ್ರ ಅವರಿಂದ 'ರಾಜರತ್ನಂ-ಒಂದು ಮರು ನೆನಪು' ಉಪನ್ಯಾಸ, ಅತಿಥಿ - ಹೊ.ಶ್ರೀನಿವಾಸಯ್ಯನವರು.

ಪ್ರೊ.ಅ.ರಾ.ಮಿತ್ರ, ಜಿ.ಎಸ್.ಶಿವರುದ್ರಪ್ಪನವರು ರಾಜರತ್ನಂ ಅವರ ಸಾಧನೆಗಳನ್ನ ನೆನಪಿಸಿಕೊಟ್ಟು ಅವರ ಅನುಭವಗಳನ್ನ ಹಂಚಿಕೊಂಡರು. ಗಾಂಧಿ ಸಾಹಿತ್ಯ ಭವನದ ಪೂರ್ತಿ ಎಪ್ಪತ್ತು ಎಂಬತ್ತು ದಾಟಿದ ಹಿರಿಯರೇ ಇದ್ದರು. ಅಬ್ಬಾ....ಇಷ್ಟು ಇಳಿ ವಯಸ್ಸಿನಲ್ಲಿ ನಡೆದಾಡಲು,ಕುಳಿತುಕೊಳ್ಳಲು ಕಷ್ಟವಾದರೂ ಸಹ ಅವರವರ ಜೀವನ,ಅನುಭವಗಳ ಜೊತೆ ಬೆಸೆದುಕೊಂಡಿರುವ ರಾಜರತ್ನಂ ಅವರ ನೆನಪುಗಳನ್ನ ಇನ್ನಷ್ಟು ಹಸಿ ಮಾಡಿಕೊಳ್ಳಲು ಬಂದವರನ್ನೆಲ್ಲಾ ಕಂಡು ಬಹು ಅಚ್ಚರಿಯೆನಿಸಿತು...

ಉಪನ್ಯಾಸದ ಜೊತೆಗೆ ಪ್ರೊ.ಓ.ಎಲ್.ಎನ್.ಸ್ವಾಮಿಯವರು ಅನುವಾದಿಸಿರುವ ರೈನರ್ ಮಾರಿಯಾ ರಿಲ್ಕ್ - ಯುವ ಕವಿಗೆ ಬರೆದ ಪತ್ರಗಳು, ಸಂಧ್ಯಾ ದೇವಿಯವರ ಅಗ್ನಿ ದಿವ್ಯ, ಲಕ್ಕೂರು ಆನಂದರ ಬಟವಾಡೆಯಾಗದ ರಸೀತಿ ಪುಸ್ತಕಗಳ ಅನಾವರಣ ಕಾರ್ಯಕ್ರಮವೂ ಇತ್ತು. 

ಸಾನುನಾಸಿಕ ಯ್, ರ್, ಲ್, ಳ್ ಮತ್ತು ೞ್

ಕನ್ನಡದಲ್ಲಿ ಯ್, ರ್, ಲ್, ಳ್, ೞ್ ಗಳು ಸಾನುನಾಸಿಕ ನಿರನುನಾಸಿಕ ಎಂದು ಎರಡು ತೆಱ. ಇದನ್ನು ನಾವು ಭೂತಕಾಲದ ಪ್ರತ್ಯಯಗಳಾದ ’ದ್’ ಅಥವಾ ’ತ್’ ಸೇರುವಾಗ ಗಮನಿಸಬಹುದು. ಉದಾಹರಣೆಗೆ ಬೇಯ್, ನೋಯ್, ಮೀಯ್, ಬರ್, ತರ್, ಕೊಲ್, ನಿಲ್, ಸಲ್, ಕೊಳ್, ಉಳ್ ಇವುಗಳೆಲ್ಲ ಸಾನುನಾಸಿಕ ಯ್, ರ್, ಲ್, ಳ್ ಗೆ ಉದಾಹರಣೆಗಳು.

ಇಡ್ಲಿ ಪುರಾಣ

ಇದರಲ್ಲಿ ಬರುವ ಬಹಳಷ್ಟು  ಸನ್ನಿವೇಶಗಳು ಕಾಲ್ಪನಿಕ, ಕೆಲವೊಂದು  ನಿಜವಿರಲೂ ಬಹುದು  :)

ನಾನು ಎಲ್ಲಾ ದಿನಗಳಲ್ಲಿ ಅಲ್ಲದಿದ್ದರೂ ಬಹುತೇಕ ದಿನಗಳಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ  ತಗೊಳ್ತಾ ಇದ್ದೆ. ನನ್ನ ಗೆಳೆಯ ಬೆಳಗ್ಗೆ  ಆಫೀಸ್ ಕ್ಯಾಂಟೀನ್ ನಲ್ಲಿ ಸಿಕ್ಕಿದಾಗ,
"ಮಗಾ ಇವತ್ತು ನೀನು ಏನು ತಿಂಡಿ ತಗೊಂಡೆ  ಹೇಳಲಾ?"
"ಹೇಳು"

ಗಾಂಧಿ ಜಯಂತಿ ಕಥಾಸ್ಪರ್ಧೆ ಫಲಿತಾಂಶ

ನಾನು "ವಿಕ್ರಾಂತ ಕರ್ನಾಟಕ"ದ ಮೂಲಕ ಪ್ರಾಯೋಜಿಸಿದ್ದ "ಗಾಂಧಿ ಜಯಂತಿ ಕಥಾಸ್ಪರ್ಧೆ"ಯ ಫಲಿತಾಂಶ ಪತ್ರಿಕೆಯ ಈ ವಾರದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಲೇಖಕ ಡಿ.ಎಸ್. ನಾಗಭೂಷಣ್, ಕಾದಂಬರಿಗಾರ್ತಿ ಡಾ. ಎಚ್.

ಪಬ್ಲಿಕ್ ಪಾರ್ಕ್ ನಲ್ಲಿ ಹತ್ತಿಗಿಡನೇ...ಏನ್ ನೀವ್ಹೇಳ್ತಿರೋದು ?

ಹೌದು ಸ್ವಾಮಿ, ನಾನೂ ಅದನ್ನೇ ಹೇಳ್ತಿರೋದು. ನಮ್ಮ ಮುಂಬೈ ನ ಘಾಟ್ಕೋಪರ್ಗೆ ಬನ್ರಿ. ನೀವೇ ನೋಡೋರಂತೆ ! ಅದಕ್ಕೇನ್ ಕಷ್ಟ ? ಯಾರು ಹತ್ತಿಬೀಜ, ಎಸ್ತ್ ಹೋಗಿದ್ರು. ಬೀಜದ ಮೊಳ್ಕೆ ಬಂತು. ಗಿಡ ಬೆಳೀತಾ ಹೋಯ್ತು. ಪ್ರತಿದಿನ ನೀರ್ ಹಾಕ್ತಾರೆ. ಹುಡುಗೃ ಯಾರೂ ಗಿಡನ ಮುಟ್ಟಲ್ಲ ; ಹೂವು-ಕಾಯ್ಗ್ಳನ್ನ ಕೀಳಲ್ಲ. ಆದ್ರೂ ಏನಾಯ್ತ್ ಗೊತ್ತಾ ?

ಇಂದು ಓದಿದ ವಚನ: ಸಿದ್ಧರಾಮ: ಅರ್ಥ ಎಲ್ಲಿದೆ?

 

ರೇಖೆ ರೇಖೆ ಕೂಡಿದಲ್ಲಿ ಅಕ್ಷರವಾದವು
ಅಕ್ಷರಾಕ್ಷರ ಕೂಡಿದಲ್ಲಿ ಶಬ್ದವಾಯಿತ್ತು
ಶಬ್ದ ಶಬ್ದ ಕೂಡಿದಲ್ಲಿ ಗ್ರಂಥಾನ್ವಯವಾಯಿತ್ತು
ಅಕ್ಷರದಲ್ಲಿಲ್ಲ
ಶಬ್ದದಲ್ಲಿಲ್ಲ
ಗ್ರಂಥಾನ್ವಯದಲ್ಲಿಲ್ಲ
ಏನೆಂಬುದಿಲ್ಲ
ಮೊದಲೆ ಇಲ್ಲ
ಇಲ್ಲವೆಂಬುವ ಅಹುದೆಂಬುವ ಉಭಯ ಶಬ್ದಕ್ಕೆಲೋಪವಿಲ್ಲ ನೋಡಾ
ಕಪಿಲಸಿದ್ಧ ಮಲ್ಲಿಕಾರ್ಜುನ ಮಹಾಮಹಿಮನು

 

ಸಿದ್ಧರಾಮನ ಈ ವಚನ ಅರ್ಥದ ಮೀಮಾಂಸೆಯ ಆರಂಭಬಿಂದುವಿನಂತಿದೆ.