ಪಬ್ಲಿಕ್ ಪಾರ್ಕ್ ನಲ್ಲಿ ಹತ್ತಿಗಿಡನೇ...ಏನ್ ನೀವ್ಹೇಳ್ತಿರೋದು ?

ಪಬ್ಲಿಕ್ ಪಾರ್ಕ್ ನಲ್ಲಿ ಹತ್ತಿಗಿಡನೇ...ಏನ್ ನೀವ್ಹೇಳ್ತಿರೋದು ?

ಬರಹ

ಹೌದು ಸ್ವಾಮಿ, ನಾನೂ ಅದನ್ನೇ ಹೇಳ್ತಿರೋದು. ನಮ್ಮ ಮುಂಬೈ ನ ಘಾಟ್ಕೋಪರ್ಗೆ ಬನ್ರಿ. ನೀವೇ ನೋಡೋರಂತೆ ! ಅದಕ್ಕೇನ್ ಕಷ್ಟ ? ಯಾರು ಹತ್ತಿಬೀಜ, ಎಸ್ತ್ ಹೋಗಿದ್ರು. ಬೀಜದ ಮೊಳ್ಕೆ ಬಂತು. ಗಿಡ ಬೆಳೀತಾ ಹೋಯ್ತು. ಪ್ರತಿದಿನ ನೀರ್ ಹಾಕ್ತಾರೆ. ಹುಡುಗೃ ಯಾರೂ ಗಿಡನ ಮುಟ್ಟಲ್ಲ ; ಹೂವು-ಕಾಯ್ಗ್ಳನ್ನ ಕೀಳಲ್ಲ. ಆದ್ರೂ ಏನಾಯ್ತ್ ಗೊತ್ತಾ ? ಗಿಡ ಹುಲುಸಾಗಿ ಬೆಳೀತಾ-ಬೆಳೀತಾ, ಎತ್ರಕ್ ಹೋಯ್ತ. ಮಧ್ಯದ್ ಕಾಂಡ ಲಟಕ್ ಅಂತ ಮುರ್ಕೊಂಡ್ ಕೆಳಿಗ್ ಬೀಳೋದೇ ? ಗಿಡದ್ ತುಂಬಾ, ಮೊಗ್ಗು, ಹೂವು, ಕಾಯಿ, ಹೀಚುಗಳನ್ನು ಅಲ್ಲಿಗೆ ಬರೋರೆಲ್ಲ ನೋಡ್ತಿರ್ದು. ಗಿಡದಲ್ಲಿ ಕಾಯಿಗಳು ಒಣಗಿದಮೇಲೆ, ಶುಭ್ರವಾದ ಹತ್ತಿ ಹೊರಗೆ ಕಾಣ್ಸ್ಕೊಳ್ತಿತ್ತು. ಎಲ್ರೂ ಹತ್ತಿ ಫೈಬರ್ ನ ಕೈನಲ್ಲಿ ಇಟ್ಕೊಂಡು, ಅದನ್ನು ಗಾಳಿನಲ್ಲಿ ಊಫ್, ಉಫ್, ಅಂತ ಊದಕ್ ಶುರುಮಾಡಿದ್ರು. ಹತ್ತಿ ನಿಧಾನವಾಗಿ ಗಾಳಿನಲ್ಲಿ ತೇಲೋದನ್ನ ಮಕ್ಕಳು ಆನಂದಿಸಿದರು. ಕೆಲವರು, ದೇವರಿಗೆ ಬತ್ತಿನೂ ಮಾಡಿದೃ. ನನ್ ತರಹದೋರು ! ಹತ್ತಿಗಿಡದ ಕಾಂಡಗಳು, ಟೊಳ್ಳು. ಅವಕ್ಕೆ ಶಕ್ತಿಯಿಲ್ಲ. ಅದರಿಂದ ಎತ್ತರಬೆಳೆದರೆ, ಅವುಗಳ ಭಾರದಿಂದಲೇ ಮುರಿದು ಬೀಳುತ್ತವೆ. ಇವೆಲ್ಲಾ ಮರಹತ್ತಿ ಅಂತ. ಹೊಲದಲ್ಲಿ ಬೆಳೆಯೊದು ಗಿಡಹತ್ತಿ. ಅದು ಕೇವಲ ಒಂದು ವರ್ಷದ ಬೆಳೆಮಾತ್ರ. ಪ್ರತಿವರ್ಷವೂ ಹೊಸಹೊಸ ಗಿಡಗಳನ್ನು ಬೆಳೆಯಬೇಕು.

ಹತ್ತಿ ವಿಷಯದ ಬಗ್ಗೆ ಈ ಮನುಷ್ಯ ಯಾಕೆ ಹಗ್ಲೆಲ್ಲಾ ಬರೀತಾರೇ ಅಂತೀರಾ. ಸರಿ ಅದ್ರಲ್ ತಪ್ಪೇನಿದೆ ? ನೋಡಿ. ನಮ್ಮದೇಶದ ನ್ಯಾಷನಲ್ ಫೈಬರ್ ಯಾವ್ದು ಗೊತ್ತಾ ? -ಹತ್ತಿ.
ನಮ್ಮಲ್ಲಿ * ನ್ಯಾಷನಲ್ ಲಾಂಗ್ಚೇಜ್, ಹಿಂದಿ ಹಾಗೂ ಪ್ರಾಂತೀಯ ಭಾಷೆಗಳಿಲ್ವೇ ? ಹಾಗೆ. ತೆಂಗಿನಮರನ ನಾವೆಲ್ಲಾ ಕಲ್ಪವ್ರುಕ್ಷ ಅಂತೀವಿ ಸರಿತಾನೇ ? ಹತ್ತಿಗಿಡ, ಅಥವಾ ಹತ್ತಿಮರನೂ ಕಲ್ಪವೃಕ್ಷವೇ ! ಯಾಕಂತೀರೋ ? ಅದರ ಪ್ರತಿಕಣಕಣವೂ ಉಪಯೋಗಕ್ಕೆ ಬರುತ್ತೆ. ಹತ್ತಿಯಿಂದ ಬಟ್ಟೆ ಮಾಡ್ಬೋದು. ಹೊಲಿಯೋದಾರ, ಬನೀನು, ಪಂಚೆ, ಸ್ಯಾನಿಟೆರಿ ವೇರ್ ಗಳು, ಬ್ಯಾಂಡೇಜ್ ಕ್ಲಾತ್, ಯಿಯರ್ ಬಡ್, ಸೀರೆಗಳು, ಬ್ಲೌಜ್ ಪೀಸ್ ಗಳು, ಹೆಣ್ಣುಮಕ್ಕಳ, ಗಂಡಸರ ಉಡುಪುಗಳು, ಬೆಡ್ಶೀಟ್, ಹಾಸಿಗೆಗೆ ಹೊದೆಸುವ ಬಟ್ಟೆ, ಕರ್ಟನ್ ಬಟ್ಟೆಗಳು, ಮತ್ತೆ ಏನೇನೋ ಇದೆ. ಇವಲ್ಲದೇ ಜಿಯೋಟೆಕ್ಶಟೈಲ್ಸ್ ನಲ್ಲೂ ಇದನ್ನು ಉಪಯೋಗಿಸಬಹುದು. ಹತ್ತಿಯ ಕಾಂಡ, ಮೆಳೆಗಳನ್ನು ಹಳ್ಳಿಯಲ್ಲಿ ಕಟ್ಟಿಗೆಯ ಬದಲಾಗಿ ಉಪಯೊಗಿಸುತ್ತಾರೆ. ಅದರಲ್ಲಿ ಕಾಗದ, ಪಾರ್ಟಿಕಲ್ ಬೋರ್ಡ್ಸ್ ಮಾಡಬಹುದು. ಬಯೋಗ್ಯಾಸ್, ಗೆ ಬಳಕೆಯಾಗುವ ಧೂಳಿನಂತಹ ಕಣಗಳು ಗಿರಣಿಗಳಲ್ಲಿ ಟನ್ ಗಟ್ಟಲೆ ದೊರೆಯುತ್ತವೆ. ಅಡುಗೆಗೆ ಬೇಕಾದ ಎಣ್ಣೆಯನ್ನು ನಾವು ಹತ್ತಿಬೀಜದಿಂದ ಪಡೆಯುತ್ತಿದ್ದೇವೆ. ಅದರ ತ್ಯಾಜ್ಯವಸ್ತುವನ್ನು ದನದ ಮೇವಾಗಿ ಬಳಸಬಹುದು. ಅದರ ಉಪಯೋಗ ಗಿಡದ ಪ್ರತಿ ಭಾಗದಿಂದಲೂ ಆಗುತ್ತದೆ.

ಇಂಥ ಕಲ್ಪವೃಕ್ಷವನ್ನು ಕಂಡು ಬೆರಗಾಗಿ ಯೂರೋಪಿಯನ್ನುರು ನಮ್ಮದೇಶಕ್ಕೆ ಬಂದರು. ಮೆಣಸು, ಸಾಂಬಾರ್ ಪದಾರ್ಥಗಳು, ಹತ್ತಿ, ಹಾಗೂ ರೇಷ್ಮೆಬಟ್ಟೆಗಳು, ಯೋರೋಪಿಯನ್ನರನ್ನು ಹೆಚ್ಚಾಗಿ ಆಕರ್ಷಿಸಿದ್ದವು. ಅದಕ್ಕಾಗಿ ಅವರು, ನಮ್ಮದೇಶಕ್ಕೆ ವಲಸೆಬಂದರು. ನಮ್ಮದೇಶದಲ್ಲಿ, ಗೃಹಕೈಗಾರಿಕೆಗಳ ಬಹು ಮುಖ್ಯವಾದ ಭಾಗ, ಹತ್ತಿ ಹಾಗೂ ರೇಷ್ಮೆ ಬಟ್ಟಗಳ ತಯಾರಿಕೆ ! ಪಾಪ, ಸ್ಪೇನ್ ದೇಶದವನಾದ ಕೊಲಂಬಸ್ ಇಂಡಿಯವನ್ನು ಅರಸುತ್ತಾ ಹಡಗಿನಲ್ಲಿ ಬಂದವನು, ವೆಸ್ಟ್ ಇಂಡೀಸ್ ನಲ್ಲಿ ಹೋಗಿಳಿದ. ಅವನು ನಿಜವಾಗಿಯೂ ಅಲ್ಲಿಗೆ ಬರಲು ಆಶಿಸಿರಲಿಲ್ಲ. ಅವನ ಧ್ಹೇಯವಿದ್ದದ್ದು, ಭಾರತವನ್ನು ಕಾಣಲು. ಆದರೆ ಅಮೆರಿಕವನ್ನು ಕಂಡುಹಿಡಿದು, ಒಂದು ಇತಿಹಾಸವನ್ನೇ ಸೃಷ್ಟಿಸಿದ !

ಇನ್ನೊಂದ್ ವಿಷ್ಯ ಗಮ್ನಿಸಿದೀರಾ ? ಹತ್ತಿಗಿಡದ ಪ್ರತಿಎಲೆಯನ್ನೂ ಸೂರ್ಯಕಿರಣಕ್ಕೆ ಒಡ್ಡಲು ಹವಣಿಸುತ್ತಿರುವ ತಾಯಿಗಿಡವನ್ನು ನಾವು ಶ್ಲಾಘಿಸಬೇಕು. ಇನ್ನೂ ಕೆಲವು ಗಿಡಗಳಲ್ಲಿ ಈ ವ್ಯವಸ್ಥೆಯಿದೆ.

ಹತ್ತಿಯಪುರಾಣ ಕೇಳೋರಿದ್ದರೆ, ಇನ್ನೂ ಚೆನ್ನ. ಎಂಕ್ಟೇಸಪ್ಪನಿಗೆ, ಅದರ ಬಗ್ಗೆ ಹೇಳಕ್ಕೆ ಎಲ್ಲಿಲ್ಲದ ಆಸೆ !

ಹಿಂದಿಯ ಬಗ್ಗೆ, ಕೆಲವು ಸಂಗತಿಗಳು :

*States : Haryana, Rajasthan, Uttar Pradesh, Bihar, Madhya Pradesh, Himachal Pradesh.

Family : Indo-Aryan : Hindi is the National Language, and the regional language ( Official Language) of six states.

Some Facts : Spoken by 437 million people in the world. The other dialects of Hindi are Brajbhasha, Bundeli, Awadhi, Marwari, Maithili, Bhojpuri, to name only a few.

ಚಿತ್ರ. ವೆಂ